Seetha Rama Serial: ಕರ್ಮದ ಸ್ಟೋರಿ, ಬರಿ ಕಿಡ್ನಾಪ್ ಕೊಲೆ ಇದೆ ಆಯ್ತು! ಸೀತಾ ರಾಮ ಸೀರಿಯಲ್ ವೀಕ್ಷಕರ ಗೋಳು
Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಕಿಡ್ನಾಪ್ ಪ್ರಹಸನ ಮತ್ತೆ ಮುಂದುವರಿದಿದೆ. ಈಗಾಗಲೇ ಎರಡು ಬಾರಿ ಕಿಡ್ನಾಪ್ ಆಗಿದ್ದ ಸಿಹಿ, ಇದೀಗ ಮತ್ತೆ ಅಪಹರಣಕ್ಕೆ ಒಳಗಾಗಿದ್ದಾಳೆ. ಇದೆಲ್ಲವನ್ನು ನೋಡಿದ ವೀಕ್ಷಕರು ಕೊಂಚ ಗರಂ ಆಗಿದ್ದಾರೆ. ಬರೀ ಕಿಡ್ನಾಪ್ ಮಾಡೋದೇ ಆಯ್ತಲ್ಲ ಎಂದು ಬೇಸರ ಹೊರಹಾಕಿದ್ದಾರೆ.
Seetha Rama Serial: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಸೀತಾ ರಾಮ ಧಾರಾವಾಹಿ ಹಲವು ರೋಚಕತೆಗಳ ಜತೆಗೆ ಸಾಗುತ್ತಿದೆ. ಈ ಸಲ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯ ಜತೆಗೆ ಸೀತಾ ರಾಮ ಧಾರಾವಾಹಿಯ ಮಹಾಸಂಗಮವೂ ವೀಕ್ಷಕರಿಗೆ ಡಬಲ್ ಧಮಾಕಾ ನೀಡಿದೆ. ಒಂದಿಡೀ ವಾರ ಈ ಎರಡೂ ಸೀರಿಯಲ್‌ಗಳು ಒಂದು ಗಂಟೆಯ ಮಹಾಸಂಗಮದ ಮನರಂಜನೆ ನೀಡುತ್ತಿವೆ. ಅದರಂತೆ, ಈಗಾಗಲೇ ಸೂರ್ಯಪ್ರಕಾಶ್ ದೇಸಾಯಿ ಮನೆಯಲ್ಲಿ ಗೆಟ್ ಟುಗೆದರ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನ ಮುಖ್ಯಪಾತ್ರಧಾರಿಗಳು ಪಾರ್ಟಿಯಲ್ಲಿ ಸೇರಿದ್ದಾರೆ.
ಇತ್ತ ಸೀತಾ ರಾಮ ಸೀರಿಯಲ್‌ನ ಭಾರ್ಗವಿ ಮತ್ತು ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯ ವಿಜಯಾಂಬಿಕಾ ಹೊಸ ರಣತಂತ್ರವನ್ನು ಹೆಣೆದಿದ್ದಾರೆ. ಈ ಕಲಿಯುಗದಲ್ಲಿ ರಾವಣ ಮತ್ತು ಕೌರವರು ಸೇರಿಕೊಂಡರೆ, ಹೊಸ ಕತೆ, ಹೊಸ ಅಧ್ಯಾಯ ಶುರುವಾಗುತ್ತೆ ಎಂದು ಭಾರ್ಗವಿ ಹೇಳಿದರೆ, ಇತ್ತ ಬೆಂಕಿ ಹಚ್ಚೇ ಬಿಡೋಣ ಎಂದು ವಿಜಯಾಂಬಿಕಾ ಹೇಳಿದ್ದಾಳೆ. ಹೂಡಿದ್ದು ಒಂದು ಬಾಣ, ಹೂಳ್ತಾಯಿರೋದು ಎರಡು ಕುಟುಂಬ ಎಂದೂ ಭಾರ್ಗವಿ ಹೇಳಿದ್ದಾಳೆ. ಅದರಂತೆಯೇ ಈ ಜೋಡಿ ಮತ್ತೆ ಕಿಡ್ನಾಪ್ ಮೊರೆ ಹೋಗಿದೆ.
ಸಿಹಿ -ಶ್ರಾವಣಿ ಕಿಡ್ನಾಪ್
ಇಲ್ಲಿಯವರೆಗೂ ಸಿಹಿ ಯಾರ ಪಾಲಾಗಲಿದ್ದಾಳೆ ಎಂಬ ಕುತೂಹಲ ಇತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಸಿಹಿ ಸೀತಾಳ ಜತೆಗೇ ಇರಬೇಕು ಎಂದು ಕೋರ್ಟ್ ಆದೇಶ ನೀಡಿದೆ. ಈ ಖುಷಿಯಲ್ಲಿಯೇ ನಡೆದ ಪಾರ್ಟಿಯಲ್ಲಿ ಎಲ್ಲರೂ ಹಾಡಿ ಕುಣಿದಿದ್ದಾರೆ. ವೇದಿಕೆ ಮೇಲೆ ಹಾಡುಗಳಿಗೆ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಇತ್ತ ವಿಜಯಾಂಬಿಕಾ ಮತ್ತು ಭಾರ್ಗವಿ ಮಾತ್ರ, ಹೇಗಾದರೂ ಮಾಡಿ ಈ ಸಂಭ್ರಮವನ್ನು ಮಣ್ಣುಪಾಲು ಮಾಡಬೇಕು ಎಂದು ನಿರ್ಧರಿಸಿ, ಲಾಯರ್ ರುದ್ರಪ್ರತಾಪ್‌ಗೆ ಕಿಡ್ನಾಪ್ ಸುಪಾರಿ ಒಪ್ಪಿಸಿದ್ದರು.
ಸುಖಾಂತ್ಯ ಕಂಡ ಮಹಾಸಂಗಮ
ಅದರಂತೆ, ಸಿಹಿಯನ್ನಷ್ಟೇ ಕಿಡ್ನಾಪ್ ಮಾಡಬೇಕಿದ್ದ ರುದ್ರಪ್ರತಾಪ್, ಸಿಹಿ ಜತೆಯಲ್ಲಿದ್ದ ಶ್ರಾವಣಿಯನ್ನೂ ಕಿಡ್ನಾಪ್ ಮಾಡಿದ್ರು. ಈ ವಿಚಾರ ಎರಡೂ ಕುಟುಂಬಗಳಿಗೆ ದಿಗಿಲು ಬಡಿದಂತಾಗಿತ್ತು. ಆತಂಕಗೊಂಡ ರಾಮ್ ಮತ್ತು ಸುಬ್ಬು ಇದರ ಹಿಂದಿನ ಅಸಲಿಯತ್ತು ಏನೆಂದು ಪತ್ತೆ ಹಚ್ಚಿ, ಆಗಂತುಕರು ಇದ್ದ ಸ್ಥಳಕ್ಕೆ ಹೋಗಿದ್ದಾರೆ. ಸುಬ್ಬು ದುಬೈ ಶೇಖ್ ವೇಷದಲ್ಲಿ, ಸೂಟ್‌ಕೇಸ್ ಹಿಡಿದು ಅಪಹರಣಕಾರರ ಬಳಿ ನಿಂತಿದ್ದಾನೆ. ಇದೇ ವೇಳೆ ರಾಮ್ ಸಹ ಆಗಮಿಸಿ, ದುಷ್ಟರ ಹೆಡೆಮುರಿಕಟ್ಟಿದ್ದಾರೆ. ಬಳಿಕ ಇಬ್ಬರನ್ನೂ ಬಿಡಿಸಿ ಸುರಕ್ಷಿತವಾಗಿ ಕರೆತಂದಿದ್ದಾರೆ. ಅಲ್ಲಿಗೆ ವಾರವಿಡೀ ಪ್ರಸಾರವಾದ ಮಹಾಸಂಗಮ ಸುಖಾಂತ್ಯ ಕಂಡಿದೆ.
ಕಿಡ್ನಾಪ್ ಪ್ರಹಸನಕ್ಕೆ ವೀಕ್ಷಕ ಬೇಸರ
- ಕರ್ಮದ ಸ್ಟೋರಿ ,ಬರಿ ಕಿಡ್ನಾಪ್ ಕೊಲೆ ಇದೆ ಆಯ್ತು
- ಮನೆಹಾಳರು ಇಬ್ಬರು ಸೇರಿ ಇನ್ನೂ ಏನೇನು ನಾಶ ಮಾಡ್ತಾವೋ ಥೂ
- ಈಗ ಕಥೆ ಸೂಪರ್. ಈಗ ಭಾರ್ಗವಿ ಕಾವೇರಿ ಇದ್ದಲ್ಲಿ ಹೋಗುತ್ತಾಳೆ ಮೂರು ಧಾರವಾಹಿಗಳ ಮಹಾಸಂಗಮ. ಲಕ್ಷ್ಮೀ ಬಾರಮ್ಮ ಶ್ರಾವಣಿ ಸುಬ್ರಮಣ್ಯ ಸೀತಾರಾಮ
- ಕರ್ಮ ಬರೀ ಇದೆ ಅಗೋಯ್ತು
- ಇದರಿಂದ ಸಮಾಜಕ್ಕೆ ಏನು ಸಂದೇಶ ಕೊಡ್ತಿದ್ದೀರಾ? ಇದನ್ನು ನೋಡಿಕೊಂಡು ಹೊರಗಡೆ ಅದೇ ನಡೆಯುತ್ತೆ, ತೋರಿಸೋದು ತೋರುಸ್ತೀರ ಏನಾದ್ರೂ ಉತ್ತಮವಾದ ಸಂದೇಶ ಕೊಡಿ atlist ನಿಮ್ಮಿಂದ ಆದರೂ ಒಳ್ಳೆಯ ಬದಲಾವಣೆಗಳಾಗಲಿ.
- ಹೆಣ್ಣು ಸಂಸಾರದ ಕಣ್ಣು ,ಇಲ್ಲಿ ಹೆಣ್ಣ್ ಮಕ್ಕಳೇ ಮನೆ ಹಾಳಿಗಳಾಗಿದ್ದಾರೆ
- ವಿಜಯಾಂಬಿಕಾ ಭಾರ್ಗವಿನಾ ಒಂದೇ ಸೆಲ್‌ನಲಿ ಹಾಕ್ಬೇಕು. ಜೈಲಲ್ಲಿ ಒಂದೇ ಆಲೂಮಿನಿಯಂ ತಟ್ಟೆ.
- ಮಾಡ್ರಿ ಮಾಡ್ರಿ ಬರೀ ಕಿಡ್ನಾಪ್ ಇಲ್ಲ ಮರ್ಡರ್ ಅಷ್ಟೇ ಮಾಡ್ರಿ ಬೇರೆ ಏನು ಬೇಡ ಅಲ್ವಾ ಫ್ರೆಂಡ್ಸ್
- ಅಯ್ಯೋ ದೇವರೆ ಇಬ್ಬರು ವಿಲನ್ ಸೇರಿ ಇನ್ನೇನ್ ಮಾಡ್ತಾರೋ
ಸೀತಾ ರಾಮ ಸೀರಿಯಲ್ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)