ಹಾಲಿಗೆ ನಿದ್ದೆ ಮಾತ್ರೆ ಹಾಕಿ ಸೀತಾ ರಾಮ ಜೋಡಿಯ ಫಸ್ಟ್‌ ನೈಟ್‌ ಹಾಳು ಮಾಡಿದ ಭಾರ್ಗವಿ! ಒಡಲಲ್ಲಿಯೇ ಉಳಿದ ‘ಸಿಹಿ’ ಸತ್ಯ
ಕನ್ನಡ ಸುದ್ದಿ  /  ಮನರಂಜನೆ  /  ಹಾಲಿಗೆ ನಿದ್ದೆ ಮಾತ್ರೆ ಹಾಕಿ ಸೀತಾ ರಾಮ ಜೋಡಿಯ ಫಸ್ಟ್‌ ನೈಟ್‌ ಹಾಳು ಮಾಡಿದ ಭಾರ್ಗವಿ! ಒಡಲಲ್ಲಿಯೇ ಉಳಿದ ‘ಸಿಹಿ’ ಸತ್ಯ

ಹಾಲಿಗೆ ನಿದ್ದೆ ಮಾತ್ರೆ ಹಾಕಿ ಸೀತಾ ರಾಮ ಜೋಡಿಯ ಫಸ್ಟ್‌ ನೈಟ್‌ ಹಾಳು ಮಾಡಿದ ಭಾರ್ಗವಿ! ಒಡಲಲ್ಲಿಯೇ ಉಳಿದ ‘ಸಿಹಿ’ ಸತ್ಯ

Seetha Rama Serial October 16th Episode: ಒಡಲ ಸತ್ಯವನ್ನು ರಾಮನ ಮುಂದೆ ಹೇಳಿಕೊಂಡಿದ್ದಾಳೆ ಸೀತಾ. ಆದರೆ, ಈ ಇಬ್ಬರ ಪ್ರಸ್ತಕ್ಕೆ ಭಾರ್ಗವಿ ಅಡ್ಡಗಾಲಾಗಿದ್ದಾಳೆ. ಹಾಲಿನಲ್ಲಿ ನಿದ್ದೆ ಮಾತ್ರೆ ಹಾಕಿ ಮೊದಲ ರಾತ್ರಿಯನ್ನು ಹಾಳು ಮಾಡಿದ್ದಾಳೆ. ಸೀತಾ ಇರೋ ಸತ್ಯ ಹೇಳಿದರೂ, ರಾಮ್‌ ಕಿವಿಗೆ ಅದ್ಯಾವುದು ಕೇಳಿಸಿಲ್ಲ!

ಹಾಲಿಗೆ ನಿದ್ದೆ ಮಾತ್ರೆ ಹಾಕಿ ಸೀತಾ ರಾಮ ಜೋಡಿಯ ಫಸ್ಟ್‌ ನೈಟ್‌ ಹಾಳು ಮಾಡಿದ ಭಾರ್ಗವಿ!
ಹಾಲಿಗೆ ನಿದ್ದೆ ಮಾತ್ರೆ ಹಾಕಿ ಸೀತಾ ರಾಮ ಜೋಡಿಯ ಫಸ್ಟ್‌ ನೈಟ್‌ ಹಾಳು ಮಾಡಿದ ಭಾರ್ಗವಿ!

Seetha Rama Serial: ಈ ಶಾಸ್ತ್ರಕ್ಕೆ ನಿಜವಾದ ಅರ್ಥ ಬರೋದೆ. ಇರೋ ವಿಷಯವನ್ನೆಲ್ಲ ರಾಮ್‌ ಮುಂದೆ ಹೇಳಿಕೊಂಡಾಗ ಮಾತ್ರ. ಸತ್ಯಕ್ಕೆ ನಿಂತವಳು ನೀನು, ಸತ್ಯವನ್ನೇ ಮಾತನಾಡಿದವಳು ನೀನು. ಇಷ್ಟು ದೊಡ್ಡ ಸತ್ಯವನ್ನು ಮುಚ್ಚಿಟ್ಟು ಹೇಗೆ ಬದುಕ್ತಿಯಾ ಸೀತಾ ಎಂದು ಆಕೆಯ ಒಳಗಿನ ಸುಪ್ತ ಮನಸ್ಸು ಸೀತಾಳನ್ನು ಎಚ್ಚರಿಸಿದೆ. ಆದಷ್ಟು ಬೇಗ ಎಲ್ಲ ವಿಷಯವನ್ನು ಆತನ ಮುಂದೆ ಹೇಳಿಕೋ ಸೀತಾ ಎಂದಿದೆ. ಹೌದು ಎಲ್ಲ ವಿಷಯವನ್ನು ನಾನು ರಾಮ್‌ ಮುಂದೆ ಹೇಳಿಕೊಳ್ಳಬೇಕು. ಬೇರೆಯವರಿಂದ ಈ ವಿಷಯ ಗೊತ್ತಾಗುವುದಕ್ಕೂ ಮೊದಲು ನಾನೇ ಹೇಳಿಬಿಡಬೇಕು ಎಂದು ನಿರ್ಧರಿಸಿದ್ದಾಳೆ. ಅದರಂತೆ ರಾಮನ ಮುಂದೆ ಇರೋ ಸತ್ಯವನ್ನು ಹೇಳಿದ್ದಾಳೆ.

ಆದರೆ, ಅಚ್ಚರಿಯ ಪ್ರಸಂಗದಲ್ಲಿ ಸೀತಾ ರಾಮರ ಫಸ್ಟ್‌ ನೈಟ್‌ಗೆ ಹೇಗಾದರೂ ಮಾಡಿ ಭಂಗ ತರಬೇಕು ಎಂಬ ನಿಟ್ಟಿನಲ್ಲಿ ತಂತ್ರ ಹೂಡಿದ್ದಾಳೆ ಭಾರ್ಗವಿ. ಬೇಕು ಅಂತಲೇ ಸಾಧನಾಳನ್ನು ಬಳಸಿಕೊಂಡಿದ್ದಾಳೆ. ಫೈಲ್‌ಗೆ ಸಹಿ ಮಾಡಿಸಿಕೊಂಡು ಬರುವಂತೆ ಹೇಳಿದ್ದಾಳೆ. ಸಾಧನಾ ಕೋಣೆಗೆ ಹೋಗಿ ರಾಮನನ್ನು ಎಬ್ಬಿಸಿ, ಫೈಲ್‌ಗೆ ಸಹಿ ಮಾಡುವಂತೆ ಭಾರ್ಗವಿ ಅಕ್ಕ ಹೇಳಿದ್ದಾರೆ ಎಂದಿದ್ದಾಳೆ. ಅಷ್ಟೊತ್ತಿಗೆ, ಕೈಯಲ್ಲಿ ಹಾಲು ಹಿಡಿದು ಭಾರ್ಗವಿ ಆಗಮಿಸಿದ್ದಾಳೆ. ಅಯ್ಯೋ ಈ ಫೈಲ್‌ಗೆ ಸಹಿ ಮಾಡಿಸುವುದು ಇವತ್ತೇ ಏನು ಅವಸರ ಇಲ್ಲ ಎಂದು ಹೇಳಿ ಸಾಧನಾಳನ್ನು ಅಲ್ಲಿಂದ ಕಳಿಸಿದ್ದಾಳೆ. ಸೀತಾಳನ್ನು ಕರೆದು ಹಾಲೂ ಕೊಟ್ಟಿದ್ದಾಳೆ.

ಇತ್ತ ಮತ್ತೆ ಕೋಣೆ ಬಳಿಕ, ಏನೋ ಹೇಳಬೇಕು ಅಂದ್ರಿ ಹೇಳಿ ಎಂದು ಕೇಳಿದ್ದಾನೆ ರಾಮ್.‌ ಆಗ ಯಾವ ವಿಷಯ ತನ್ನೊಳಗೇ ಇರಬೇಕು ಎಂದುಕೊಂಡಿದ್ದ ಸೀತಾ, ಇದೀಗ ಆ ಗುಟ್ಟನ್ನು ರಾಮನ ಮುಂದೆ ಹೇಳಿದ್ದಾಳೆ. ಅಪ್ಪನ ಅನಾರೋಗ್ಯದ ಹಿನ್ನೆಲೆಯಲ್ಲಿ ಹಣಕಾಸಿನ ಸಮಸ್ಯೆ ಎದುರಾಯ್ತು. ಹಾಗಾಗಿ ನನಗೆ ಬೇರೆ ದಾರಿ ಇರಲಿಲ್ಲ. ಆಗ ನಾನು ಆಯ್ಕೆ ಮಾಡಿಕೊಂಡಿದ್ದು ಬಾಡಿಗೆ ತಾಯ್ತನವನ್ನ. ಹಾಗಂತ ಆ ಮಗುವನ್ನ ನಾನೇ ತೆಗೆದುಕೊಂಡು ಹೋಗಿಲ್ಲ. ಆಸ್ಪತ್ರೆಯಿಂದ ಎಷ್ಟೋ ಸಲ ಕಾಲ್‌ ಮಾಡಿದ್ರೂ, ಅವರೇ ಮಗು ಒಯ್ಯಲು ಬರಲಿಲ್ಲ. ನಾನು ಎಷ್ಟು ದಿನ ಅಂತ ಆಸ್ಪತ್ರೆಯಲ್ಲಿರಲಿ. ನಾನು ಯಾರಿಗೂ ಮೋಸ ಮಾಡಿಲ್ಲ ಎಂದು ಹಾಗೆ ಮಾಡಿದೆ ಎಂದಿದ್ದಾಳೆ.

ಹಾಲಿಗೆ ನಿದ್ದೆ ಮಾತ್ರೆ ಹಾಕಿದ ಭಾರ್ಗವಿ

ಇತ್ತ ಇರೋ ಸತ್ಯವನ್ನು ರಾಮನ ಮುಂದೆ ಸೀತಾ ಹೇಳುತ್ತಿದ್ದರೆ, ಮತ್ತೊಂದು ಕಡೆ ರಾಮ ನಿದ್ದೆಗೆ ಜಾರಿದ್ದಾನೆ. ಹಾಲು ಕೊಡುವ ನೆಪದಲ್ಲಿ ಬಂದಿದ್ದ ಭಾರ್ಗವಿ ಆ ಹಾಲಿನಲ್ಲಿ ನಿದ್ದೆ ಮಾತ್ರೆ ಹಾಕಿ ಕೊಟ್ಟಿದ್ದಾಳೆ. ಅದನ್ನು ಕುಡಿದ ರಾಮ್‌ ಮಲಗಿದ್ದಾನೆ. ಇತ್ತ ಅದ್ಯಾಗೆ ನೀನು ಪ್ರಸ್ತ ಮಾಡಿಕೊಳ್ತಿಯಾ ನಾನೂ ನೋಡ್ತಿನಿ ಎಂದು ಹಲ್ಲು ಮಸಿದಿದ್ದಾಳೆ. ನಿಮ್ಮ ರೊಮ್ಯಾಂಟಿಕ್‌ ಲೈಫ್‌ನ ಹೇಗೆ ಹಾಳು ಮಾಡ್ತಿನಿ ನೋಡ್ತಿರು ಎಂದಿದ್ದಾಳೆ. ಅದರಂತೆ ಹಾಲಿಗೆ ನಿದ್ದೆ ಮಾತ್ರೆ ಹಾಕಿದ್ದಾಳೆ.‌

ನಿದ್ದೆಗೆ ಜಾರಿದ ರಾಮ್

ನಾನು ಮಾತನಾಡಿದ ಎಲ್ಲವನ್ನೂ ರಾಮ್‌ ಕೇಳಿಸಿಕೊಂಡಿದ್ದಾನೆ ಅನ್ನೋ ಮನಸ್ಥಿತಿಯಲ್ಲಿದ್ದಾಳೆ ಸೀತಾ. ಆದರೆ, ರಾಮ್‌ಗೆ ನಿದ್ದೆ ಮಂಪರಲ್ಲಿ ಸೀತಾ ಮಾತನಾಡಿದ್ದು ಏನೂ ಕೇಳಿಸಿಲ್ಲ. ಕೊನೆಗೆ ಮಾತನಾಡಿ ಎಂದು ಫೋರ್ಸ್‌ ಮಾಡಿದ ಬಳಿಕವಷ್ಟೇ, ನಿನ್ನದೇನು ತಪ್ಪಿಲ್ಲ ಸೀತಾ, ನಿನ್ನ ನಿರ್ಧಾರ ಸರಿಯಾಗಿದೆ ಎಂದಿದ್ದಾನೆ. ಇತ್ತ ಬೆಳಗಾಗಿದೆ, ಬೆಳ್‌ಬೆಳಗ್ಗೆ ರಾಮನ ಮನೆಗೆ ಬಂದ ಶ್ಯಾಮ್‌, ಲೀಗಲ್‌ ಆಕ್ಷನ್‌ ಬಗ್ಗೆ ಮಾತನಾಡೋಣ ಎಂದಿದ್ದ ಹಾಗಾಗಿ ಬಂದಿದ್ದೇನೆ ಎಂದಿದ್ದಾನೆ. ಇತ್ತ ಶ್ಯಾಮ್‌ನ ಭೇಟಿಯಾಗಲು ಬೇಗ ಬೇಗ ರೆಡಿಯಾಗಿದ್ದಾನೆ ರಾಮ್.

ಡಾಕ್ಟರ್‌ ಅನಂತಲಕ್ಷ್ಮೀ ಆ ಬಾಡಿಗೆ ತಾಯಿ ಬಗ್ಗೆ ಮಾತನಾಡೋಕೆ ಅವಕಾಶವನ್ನೇ ಕೊಡ್ತಿಲ್ಲ. ಹಾಗಾಗಿ ಲೀಗಲ್‌ ಆಕ್ಷನ್‌ ತಗೊಳೋ ಪ್ಲಾನ್‌ ಇದೆ ಎಂದು ಸೀತಾ ಮುಂದೆ ಹೇಳಿದ್ದಾಳೆ. ಅಲ್ಲಿಗೆ ಸೀತಾಗೆ ದಿಗಿಲು ಬಡಿದಂತಾಗಿದೆ. ನಾನು ರಾತ್ರಿ ಹೇಳಿದ್ದೆಲ್ಲವೂ ಏನಾಯ್ತು? ರಾಮ್‌ ಏನೂ ಕೇಳಿಸಿಕೊಂಡಿಲ್ವ? ಎಂದು ಮರು ಪ್ರಶ್ನೆ ಮಾಡಿಕೊಂಡಿದ್ದಾಳೆ. ಅಲ್ಲಿಗೆ ಒಡಲಲ್ಲಿಯೇ ಉಳಿದಿದೆ ‘ಸಿಹಿ’ ಸತ್ಯ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಮೇಘಶ್ಯಾಮ- ನಾಗಾರ್ಜುನ್‌ ಬಿ.ಆರ್‌

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

Whats_app_banner