ಚಂದನ್ ಶೆಟ್ಟಿ ಜತೆ ನಿಶ್ಚಿತಾರ್ಥ ಮಾಡಿಕೊಂಡ ಸೀತಾ ವಲ್ಲಭ ಸೀರಿಯಲ್ ನಟಿ; ನನ್ನ ಎದೆಯಾಳೋ ಧಣಿ ನೀನೆ ಎಂದ ಸುಪ್ರೀತಾ ಸತ್ಯನಾರಾಯಣ್
Supreeetha Satyanarayan Engagement: ಕನ್ನಡದ ಸೀತಾ ವಲ್ಲಭ ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದ ನಟಿ ಸುಪ್ರೀತಾ ಸತ್ಯನಾರಾಯಣ್ ಇದೀಗ ತನ್ನ ಎಂಗೇಂಜ್‌ಮೆಂಟ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಮತ್ತು ಮಾಹಿತಿ ಹಂಚಿಕೊಂಡಿದ್ದಾರೆ.

Supreeetha Satyanarayan Engagement: ಕನ್ನಡದ ಸೀತಾ ವಲ್ಲಭ ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದ ನಟಿ ಸುಪ್ರೀತಾ ಸತ್ಯನಾರಾಯಣ್ ಇದೀಗ ತನ್ನ ಎಂಗೇಂಜ್‌ಮೆಂಟ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಮತ್ತು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ತಾಯಿ ತಂದೆ ಎಲ್ಲ ನೀನೆ ಯಾಕೆ ಬೇರೆ ನಂಟು, ಸಾಕು ಎಲ್ಲ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು, ಜಗವೆಲ್ಲ ಮಾದರಿ ಈ ಪ್ರೇಮಕೆ ನನ್ನ ಎದೆಯಾಳೋ ಧಣಿ ನೀನೆ, ನಿನ್ನ ಸಹಚಾರಿಣಿ ನಾನೇ ಎಂಬ ಹಾಡಿನ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಈಕೆ ಎಂಗೇಜ್‌ಮೆಂಟ್ ಆಗಿರುವುದು ಚಂದನ್ ಶೆಟ್ಟಿ. ಅಂದಹಾಗೆ ಇವರು ರಾಪರ್ ಚಂದನ್ ಶೆಟ್ಟಿ ಅಲ್ಲ. ನಿವೇದಿತಾ ಗೌಡ ಮಾಜಿ ಪತಿಯಲ್ಲ. ಇವರು ಕೊಡಗು ಜಿಲ್ಲೆಯವರು. ಉದ್ಯಮಿ, ಡಿಜಿಟಲ್ ಕ್ರಿಯೆಟರ್ ಆಗಿ ಗುರುತಿಸಿಕೊಂಡಿದ್ದಾರೆ.
ಯಾವಾಗ ನಿಶ್ವಿತಾರ್ಥ?
ನಟಿ ಸುಪ್ರೀತಾ ಸತ್ಯನಾರಾಯಣ್‌ಗೂ ಉದ್ಯಮಿ ಚಂದನ್ ಶೆಟ್ಟಿಗೂ ಇದೇ ಮಾರ್ಚ್ 12ರಂದು ನಿಶ್ಚಿತಾರ್ಥ ನಡೆದಿದೆ. ನಿಶ್ಚಿತಾರ್ಥದ ಫೋಟೋಗಳನ್ನು ನಿನ್ನೆಯಷ್ಟೇ ಹಂಚಿಕೊಂಡಿದ್ದಾರೆ. ಚಂದನ್‌ಕಿಸುಪ್ಪಿ ಎಂದು ಹ್ಯಾಷ್‌ಟ್ಯಾಗ್‌ನಡಿ ಎಂಗೇಜ್‌ಮೆಂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸುಮಾರು ಒಂದು ತಿಂಗಳ ಬಳಿಕ ತನ್ನ ಎಂಗೇಜ್‌ಮೆಂಟ್ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರೆ.
ಕನ್ನಡದ ಜನಪ್ರಿಯ ಧಾರಾವಾಹಿ ಸೀತಾ ವಲ್ಲಭದಲ್ಲಿ ಈಕೆ ಮೈಥಲಿ ಪಾತ್ರದಲ್ಲಿ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದರು. ರಹದಾರಿ ಎಂಬ ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದರು. ಈ ಸಿನಿಮಾಕ್ಕೆ ಗಿರೀಶ್ ವೈರಮುಡಿ ಆಕ್ಷನ್ ಕಟ್ ಹೇಳಿದ್ದರು.
ಸುಪ್ರೀತಾ ಸತ್ಯನಾರಾಯಣ್ ಸೋಷಿಯಲ್ ಮೀಡಿಯಾ ಪೋಸ್ಟ್
ಒಂದು ತಿಂಗಳ ಹಿಂದೆ ಎಂಗೇಜ್‌ಮೆಂಟ್ ಆಗಿರುವ ತನ್ನ ಫೋಟೋ ಹಂಚಿಕೊಂಡಿರುವ ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಪ್ರೀತಿತುಂಬಿದ ಸುದೀರ್ಘ ಕ್ಯಾಪ್ಷನ್ ಬರೆದಿದ್ದಾರೆ. "ಇಲ್ಲಿಂದ ಹೊಸ ಅಧ್ಯಾಯವೊಂದು ಆರಂಭವಾಗುತ್ತಿದೆ. ನೀನು ಮೊದಲ ಬಾರಿಗೆ ಹಲೋ ಎಂದು ಹೇಳಿ ಧ್ವನಿಯನ್ನು ನೆನಪಿಸಿಕೊಡು ಪ್ರೀತಿಗೆ ಬೀಳಲಾ? ಅಥವಾ ಪ್ರತಿಬಾರಿ ನಿನ್ನ ನಗು ನೋಡಿದಾಗ ನನ್ನ ಹೊಟ್ಟೆಯಲ್ಲಿ ಚಿಟ್ಟೆ ಹಾರಿದಂತೆ ಆಗುವ ಖುಷಿಗೆ ಪ್ರೀತಿಸಲಾ. ನಿನ್ನ ಪ್ರೀತಿಗಾಗಿ ನಾನು ಏನು ಬೇಕಾದರೂ ಮಾಡಲು ರೆಡಿ. ನಾನು ದೇವರಲ್ಲಿ ಸಂತೋಷ ನೀಡು ಎಂದೆ. ಆ ದೇವರು ನನಗೆ ನಿನ್ನನ್ನು ನೀಡಿದ. ನನ್ನ ಜೀವನಕ್ಕೆ ಬಂದಿರುವುದಕ್ಕೆ ಧನ್ಯವಾದಗಳು. ನನಗೆ ನಿಜವಾದ ಪ್ರೀತಿ ಏನೆಂದು ತೋರಿಸಿಕೊಟ್ಟಿರುವುದಕ್ಕೆ ಧನ್ಯವಾದಗಳು. ಮನೆಯಲ್ಲಿ ನಿನಗೆ ಶಾಂತಿ, ನಗು, ನೆಮ್ಮದಿ ನೀಡುವೆ ಎಂಬ ಭರವಸೆ ನೀಡುವೆ. ಜೀವನದ ಯಾವುದೇ ರೀತಿಯ ಸಂದರ್ಭಗಳಲ್ಲಿಯೂ ನಿನ್ನ ಜತೆ ನಿಲ್ಲುವ ಭರವಸೆ ನೀಡುವೆ. ನಿನ್ನೊಂದಿಗೆ ಪ್ರತಿಕ್ಷಣ ಆನಂದಿಸುವೆ. ಲವ್ ಯು ಕಂದ. ನನಗೆ ನಿನ್ನ ತೋಳುಗಳಲ್ಲಿ ನನ್ನ ಮನೆ ಕಾಣಿಸಿದೆ" ಎಂದು ಸುಪ್ರೀತಾ ಸತ್ಯನಾರಾಯಣ್ ಬರೆದಿದ್ದಾರೆ.
ಇದರೊಂದಿಗೆ ಚಂದದ ಕವಿತೆಯೊಂದನ್ನೂ ಬರೆದಿದ್ದಾರೆ.
ತಾಯಿ ತಂದೆ ಎಲ್ಲ ನೀನೆ
ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೋ
ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮಕೆ
ನನ್ನ ಎದೆಯಾಳೋ ಧಣಿ ನೀನೆ
ನಿನ್ನ ಸಹಚಾರಿಣಿ ನಾನೇ
ಮೂಲತಃ ಕೊಡಗಿನವರಾದ ಚಂದನ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ತನ್ನ ಸೋಷಿಯಲ್ ಮೀಡಿಯಾದಲ್ಲಿ ವಿವಿಧ ದೇಶಗಳಿಗೆ ಭೇಟಿ ನೀಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಂದನ್ ಶೆಟ್ಟಿ ಕುರಿತು ಹೆಚ್ಚಿನ ವಿವರ ಲಭ್ಯವಿಲ್ಲ.
