Shamita Shetty: ವಯಸ್ಸು 50, ಗಂಡು ಸಿಕ್ಕಿಲ್ಲ ಎಂದವಳಿಗೆ ಶಮಿತಾ ಶೆಟ್ಟಿ ಖಡಕ್‌ ಉತ್ತರ; ಹೇಳಲು ಒಳ್ಳೆಯ ವಿಷಯ ಇಲ್ಲದೆ ಇದ್ದರೆ ಮೌನವಾಗಿರಿ-shamita shetty slams troll shaming her for being unmarried never try to pull another woman down again pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Shamita Shetty: ವಯಸ್ಸು 50, ಗಂಡು ಸಿಕ್ಕಿಲ್ಲ ಎಂದವಳಿಗೆ ಶಮಿತಾ ಶೆಟ್ಟಿ ಖಡಕ್‌ ಉತ್ತರ; ಹೇಳಲು ಒಳ್ಳೆಯ ವಿಷಯ ಇಲ್ಲದೆ ಇದ್ದರೆ ಮೌನವಾಗಿರಿ

Shamita Shetty: ವಯಸ್ಸು 50, ಗಂಡು ಸಿಕ್ಕಿಲ್ಲ ಎಂದವಳಿಗೆ ಶಮಿತಾ ಶೆಟ್ಟಿ ಖಡಕ್‌ ಉತ್ತರ; ಹೇಳಲು ಒಳ್ಳೆಯ ವಿಷಯ ಇಲ್ಲದೆ ಇದ್ದರೆ ಮೌನವಾಗಿರಿ

ಟ್ರೋಲಿಗರಿಗೆ ಖಡಕ್‌ ಉತ್ತರ ನೀಡುವ ಮೂಲಕ ಶಮಿತಾ ಶೆಟ್ಟಿ ಸುದ್ದಿಯಲ್ಲಿದ್ದಾರೆ. 45 ವಯಸ್ಸಿನ ಇವರು ಅವಿವಾಹಿತರಾಗಿರುವ ಕಾರಣಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡಲಾಗಿತ್ತು. "50ನೇ ವಯಸ್ಸಿನ ಅವಿವಾಹಿತೆ, ಗಂಡು ಸಿಕ್ಕಿಲ್ಲ" ಎಂದವರಿಗೆ ಉತ್ತರ ನೀಡಿದ್ದಾರೆ.

Shamita Shetty: ವಯಸ್ಸು 50, ಗಂಡು ಸಿಕ್ಕಿಲ್ಲ ಎಂದವಳಿಗೆ ಖಡಕ್‌ ಉತ್ತರ ನೀಡಿದ ಶಮಿತಾ  ಶೆಟ್ಟಿ
Shamita Shetty: ವಯಸ್ಸು 50, ಗಂಡು ಸಿಕ್ಕಿಲ್ಲ ಎಂದವಳಿಗೆ ಖಡಕ್‌ ಉತ್ತರ ನೀಡಿದ ಶಮಿತಾ ಶೆಟ್ಟಿ

ಬಾಲಿವುಡ್‌ ನಟಿ ಮತ್ತು ಇಂಟೀರಿಯರ್‌ ಡಿಸೈನರ್‌ ಆಗಿರುವ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ "ಟ್ರೋಲಿಗರಿಗೆ ಖಡಕ್‌ ಉತ್ತರ" ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. 45 ವಯಸ್ಸಿನ ಇವರು ಅವಿವಾಹಿತರಾಗಿರುವ ಕಾರಣಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡಲಾಗಿತ್ತು. "50ನೇ ವಯಸ್ಸಿನ ಅವಿವಾಹಿತೆ, ಗಂಡು ಸಿಕ್ಕಿಲ್ಲ" ಎಂಬ ಕ್ಯಾಪ್ಷನ್‌ನಡಿ ಟ್ರೋಲ್‌ ಮಾಡಲಾಗಿತ್ತು. ಇದಕ್ಕೆ "ಮದುವೆಯೊಂದೇ ನನ್ನ ಜೀವನದ ಉದ್ದೇಶವಲ್ಲ" ಎಂದು ಶಮಿತಾ ಶೆಟ್ಟಿ ಹೇಳಿದ್ದಾರೆ.

"ಬಡಿ ಶೆಟ್ಟಿಗೆ 50 ವರ್ಷ ಕಳೆಯಿತು, ಇಲ್ಲಿ ಯಾವುದೇ ಗಂಡಿಲ್ಲ" ಎಂದು ಟ್ರೋಲ್‌ ಕಾಮೆಂಟ್‌ ಮಾಡಲಾಗಿತ್ತು. ಇದನ್ನು ನೋಡಿದ ಶಮಿತಾ ಅದಕ್ಕೆ ಮಾರುತ್ತರ ನೀಡಿದ್ದಾರೆ. "ಮದುವೆಯಾಗದೆ ಇರುವ ಕಾರಣಕ್ಕಾಗಿ ಇನ್ನೊಬ್ಬ ಮಹಿಳೆಯನ್ನು ಹೀಯಾಳಿಸಲು ಪ್ರಯತ್ನಿಸುವ ಈ ಮಹಿಳೆಗೆ ಪ್ರತಿಕ್ರಿಯೆ ನೀಡಲು ಸಮಯ ನೀಡುತ್ತಿದ್ದೇನೆ. ನಿಮಗೆ ವಂದನೆಗಳು, ನಿಮ್ಮ ಉದ್ದೇಶ ವಿಫಲವಾಗಿದೆ. ನಿಮಗಿದು ತಿಳಿದಿರಲಿ, ಮದುವೆಯಾಗುವುದು ನನ್ನ ಜೀವನದ ಏಕೈಕ ಉದ್ದೇಶವಲ್ಲ. ಜೀವನದಲ್ಲಿ ಸಂತೋಷ ಮತ್ತು ತೃಪ್ತಿಯೊಂದಿಗೆ ಇರಲು ಬಯಸುತ್ತೇನೆ" ಎಂದಿದ್ದಾರೆ. "ನಿಮ್ಮ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ವಿಷಯಗಳು ಬರಲಿ. ಇನ್ನೊಬ್ಬ ಮಹಿಳೆಯನ್ನು ಈ ರೀತಿ ಕೆಳಕ್ಕೆ ಇಳಿಸಲು ಇನ್ನೊಮ್ಮೆ ಪ್ರಯತ್ನಿಸಬೇಡಿ. ಇತರರಿಗೆ ಒಳ್ಳೆಯದನ್ನು ಹೇಳಲು ನಿಮ್ಮಲ್ಲಿ ಏನೂ ಇಲ್ಲದೆ ಇದ್ದರೆ ಮೌನವಾಗಿರಿ" ಎಂದು ಶಮಿತಾ ಶೆಟ್ಟಿ ದಿಟ್ಟವಾಗಿ ಉತ್ತರಿಸಿದ್ದಾರೆ.

ಶಮಿತಾ ಶೆಟ್ಟಿ ಈ ರೀತಿ ದಿಟ್ಟವಾಗಿ ಉತ್ತರಿಸುವುದು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಸಾಕಷ್ಟು ಜನರು ಈಕೆಯ ಈ ಉತ್ತರಕ್ಕಾಗಿ ಅಭಿನಂದಿಸಿದ್ದಾರೆ. ಇಂತಹ ಟ್ರೋಲ್‌ಗೆ ಈ ರೀತಿ ಉತ್ತರ ನೀಡುವುದೇ ಸರಿ ಎಂದು ಹೇಳಿದ್ದಾರೆ.

ಶಮಿತಾ ಶೆಟ್ಟಿ ಬ್ರೇಕಪ್‌

2022ರ ಜುಲೈ ತಿಂಗಳಿನಲ್ಲಿ ಶಮಿತಾ ಶೆಟ್ಟಿ ಮತ್ತು ರಾಕೆಶ್‌ ಬಾಪಟ್‌ ಬ್ರೇಕಪ್‌ ಆಗಿದ್ದರು. ಇವರಿಬ್ಬರು ಡೇಟಿಂಗ್‌ನಲ್ಲಿದ್ದರು. ಬಾಪಟ್‌ ಜತೆಗಿನ ಸಂಬಂಧ ಇನ್ನು ಮುಂದೆ ಮುಂದುವರೆಸುವುದಿಲ್ಲ ಎಂದು ಶಮಿತಾ ಶೆಟ್ಟಿ ಘೋಷಿಸಿದ್ದರು. ಇವರಿಬ್ಬರು ಹಿಂದಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ದೊಡ್ಮನೆಯಲ್ಲಿ ತುಂಬಾ ಅನ್ಯೋನ್ಯವಾಗಿದ್ದರು.

"ಎಲ್ಲರ ಮಾಹಿತಿಗೆ. ರಾಕೇಶ್‌ ಮತ್ತು ನಾನು ಈಗ ಜತೆಯಾಗಿಲ್ಲ. ನಮ್ಮಿಬ್ಬರ ಮ್ಯೂಸಿಕ್‌ ಆಲ್ಬಂಗೆ ನೀವು ನೀಡಿದ ಬೆಂಬಲಕ್ಕೆ ಧನ್ಯವಾದ" ಎಂದು ಅವರು ಹೇಳಿದ್ದಾರೆ. ಇದಕ್ಕೂ ಕೆಲವು ತಿಂಗಳ ಮೊದಲೇ ಶಮಿತಾ ಶೆಟ್ಟಿ ಮತ್ತು ರಾಕೆಶ್‌ ಬಾಪಟ್‌ ನಡುವಿನ ಸಂಬಂಧ ಹಾಳಾಗಿದೆ ಎಂದು ವದಂತಿಗಳಿದ್ದವು. ಅಂತಿಮವಾಗಿ ಶಮಿತಾ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಿದ್ದರು.