ಕನ್ನಡ ಸುದ್ದಿ  /  Entertainment  /  Shiva Rajkumar And Tamil Actor Dhanush Watched Rcb Vs Csk Match At Chinnaswamy Stadium Rsm

RCB vs CSK Match 2023: ಒಟ್ಟಿಗೆ ಕುಳಿತು ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ನೋಡಿದ ಶಿವರಾಜ್‌ಕುಮಾರ್‌-ಧನುಷ್‌; ಫೋಟೋ ವೈರಲ್‌

ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್‌ ಪ್ರೇಮಿಗಳೊಂದಿಗೆ ಶಿವರಾಜ್‌ಕುಮಾರ್‌ ಹಾಗೂ ಧನುಷ್‌ ಕುಳಿತು ಮ್ಯಾಚ್‌ ನೋಡಿದರು. ತಮ್ಮ ಮೆಚ್ಚಿನ ತಂಡದ ಆಟಗಾರರು ಫೋರ್‌, ಸಿಕ್ಸ್‌ ಬಾರಿಸಿದಾಗ ಸಂಭ್ರಮಿಸಿದರು. ಔಟ್‌ ಆದಾಗ ಬೇಸರ ವ್ಯಕ್ತಪಡಿಸಿದರು.

ಒಟ್ಟಿಗೆ ಕುಳಿತು ಐಪಿಲ್‌ ಮ್ಯಾಚ್‌ ನೋಡಿದ ಶಿವರಾಜ್‌ಕುಮಾರ್‌ ಹಾಗೂ ಧನುಷ್
ಒಟ್ಟಿಗೆ ಕುಳಿತು ಐಪಿಲ್‌ ಮ್ಯಾಚ್‌ ನೋಡಿದ ಶಿವರಾಜ್‌ಕುಮಾರ್‌ ಹಾಗೂ ಧನುಷ್ (‌PC: Shivaraj Kumar Fans page FB)

ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಹಾಗೂ ತಮಿಳು ನಟ ಧನುಷ್‌ 'ಕ್ಯಾಪ್ಟನ್‌ ಮಿಲ್ಲರ್‌' ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಸಿನಿಮಾದಲ್ಲಿ ಇಬ್ಬರೂ ಅಣ್ಣ-ತಮ್ಮನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶೂಟಿಂಗ್‌ ಬ್ಯುಸಿ ಕೆಲಸಗಳ ನಡುವೆ ಈ ರೀಲ್‌ ಲೈಫ್‌ ಅಣ್ಣ-ತಮ್ಮ ಒಟ್ಟಿಗೆ ಕುಳಿತು ಐಪಿಎಲ್‌ ಮ್ಯಾಚ್‌ ನೋಡಿದ್ದಾರೆ.

ಸೋಮವಾರ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವೆ ಮ್ಯಾಚ್‌ ಇತ್ತು. ಶಿವಣ್ಣ ಹಾಗೂ ಧನುಷ್‌ ಇಬ್ಬರೂ ಒಟ್ಟಿಗೆ ಕುಳಿತು ಈ ಪಂದ್ಯಾವಳಿ ಎಂಜಾಯ್‌ ಮಾಡಿದ್ದಾರೆ. ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್‌ ಪ್ರೇಮಿಗಳೊಂದಿಗೆ ಶಿವರಾಜ್‌ಕುಮಾರ್‌ ಹಾಗೂ ಧನುಷ್‌ ಕುಳಿತು ಮ್ಯಾಚ್‌ ನೋಡಿದರು. ತಮ್ಮ ಮೆಚ್ಚಿನ ತಂಡದ ಆಟಗಾರರು ಫೋರ್‌, ಸಿಕ್ಸ್‌ ಬಾರಿಸಿದಾಗ ಸಂಭ್ರಮಿಸಿದರು. ಔಟ್‌ ಆದಾಗ ಬೇಸರ ವ್ಯಕ್ತಪಡಿಸಿದರು. ಈ ವೇಳೆ ಶಿವರಾಜ್‌ಕುಮಾರ್‌ ಆರ್‌ಸಿಬಿ ಜೆರ್ಸಿ ಧರಿಸಿದ್ದರು. ಶಿವರಾಜ್‌ಕುಮಾರ್‌ ಹಾಗೂ ಧನುಷ್‌ ಒಟ್ಟಿಗೆ ಕುಳಿದು ಕ್ರಿಕೆಟ್‌ ಮ್ಯಾಚ್‌ ನೋಡುತ್ತಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾವನ್ನು ಜಯಜ್ಯೋತಿ ಫಿಲ್ಮ್ಸ್‌ ಬ್ಯಾನರ್‌ ಅಡಿ ಸೆಂದಿಲ್‌ ತ್ಯಾಗರಾಜನ್‌ ಹಾಗೂ ಅರ್ಜುನ್‌ ತ್ಯಾಗರಾಜನ್‌ ಜೊತೆ ಸೇರಿ ನಿರ್ಮಿಸುತ್ತಿದ್ದು ಅರುಣ್‌ ಮತೇಶ್ವರನ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶಿವರಾಜ್‌ಕುಮಾರ್‌, ಧನುಷ್‌, ಪ್ರಿಯಾಂಕ ಅರುಳ್‌ ಮೋಹನ್‌, ಸಂದೀಪ್‌ ಕಿಶನ್‌, ಜಾನ್‌ ಕೊಕ್ಕೆನ್‌, ನಿವೇದಿತಾ ಸತೀಶ್‌ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಜಿ.ವಿ. ಪ್ರಕಾಶ್‌ ಕುಮಾರ್‌ ಸಂಗೀತ ನೀಡುತ್ತಿದ್ದಾರೆ. ಇದು ಶಿವಣ್ಣ ಅಭಿನಯದ ಎರಡನೇ ತಮಿಳು ಸಿನಿಮಾ. ರಜನಿಕಾಂತ್‌ ಜೊತೆ ಅವರು 'ಜೈಲರ್‌' ಸಿನಿಮಾದಲ್ಲಿ ಕೂಡಾ ನಟಿಸುತ್ತಿದ್ದಾರೆ. ಈಚಿತ್ರವನ್ನು ಸನ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿ ಕಲಾನಿಧಿ ಮಾರನ್‌ ನಿರ್ಮಿಸುತ್ತಿದ್ದು ನೆಲ್ಸನ್‌ ನಿರ್ದೇಶಿಸುತ್ತಿದ್ದಾರೆ.

'ಉತ್ತರಕಾಂಡ' ಚಿತ್ರದಲ್ಲಿ ಶಿವರಾಜ್‌ಕುಮಾರ್‌

'ಉತ್ತರಕಾಂಡ' ಚಿತ್ರದಲ್ಲಿ ಧನಂಜಯ್‌ ನಾಯಕನಾಗಿ ನಟಿಸುತ್ತಿದ್ದಾರೆ. ಶಿವರಾಜ್‌ಕುಮಾರ್‌ ಕೂಡಾ ಈ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕಾರ್ತಿಕ್‌ ಗೌಡ ಅವರ ಕೆಆರ್‌ಜಿ ಸ್ಟುಡಿಯೋಸ್‌ ಬ್ಯಾನರ್‌ ಅಡಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಚಿತ್ರದಲ್ಲಿ ಶಿವರಾಜ್‌ಕುಮಾರ್‌ ನಟಿಸುತ್ತಿರುವ ವಿಚಾರವನ್ನು ಚಿತ್ರದ ನಿರ್ದೇಶಕ ರೋಹಿತ್‌ ಪದಕಿ ಅಧಿಕೃತವಾಗಿ ಅನೌನ್ಸ್‌ ಮಾಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳಿಗೆ ರಮ್ಯಾ ಜೋಡಿ ಆಗ್ತಿರೋದು ಯಾರಿಗೆ ಎಂಬ ಅನುಮಾನ ಶುರುವಾಗಿದೆ.

ರಮ್ಯಾ ಹಾಗೂ ಶಿವರಾಜ್‌ಕುಮಾರ್‌ 'ಆರ್ಯನ್‌' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ 2014ರಲ್ಲಿ ತೆರೆ ಕಂಡಿತ್ತು. ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಆರ್ಯನ್‌ ಆಗಿ, ಅವರ ಪ್ರೇಮಿ ಶ್ವೇತಾ ಆಗಿ ರಮ್ಯ ನಟಿಸಿದ್ದರು. ಡ್ರೀಮ್‌ ವೀವರ್‌ ಬ್ಯಾನರ್‌ ಅಡಿಯಲ್ಲಿ ರಾಜೇಂದ್ರ ಬಾಬು ಹಾಗೂ ಚಿ ಗುರುದತ್‌ ಜೊತೆ ಸೇರಿ ಈ ಚಿತ್ರವನ್ನು ನಿರ್ದೇಶಿಸಿದ್ದರು. ಈ ಸಿನಿಮಾ ನಂತರ ಮತ್ತೆ ಶಿವಣ್ಣ ಹಾಗೂ ರಮ್ಯಾ ಜೊತೆಯಾಗಿ ನಟಿಸಿರಲಿಲ್ಲ. ಇದೀಗ 'ಉತ್ತರಕಾಂಡ' ಚಿತ್ರದಲ್ಲಿ ಶಿವರಾಜ್‌ಕುಮಾರ್‌ ನಟಿಸಲಿದ್ದಾರೆ ಎಂಬ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ರಮ್ಯಾ, ಶಿವಣ್ಣಗೆ ಜೋಡಿಯಾಗಲಿದ್ದಾರಾ ಎಂಬ ಕುತೂಹಲ ವ್ಯಕ್ತಪಡಿಸಿದ್ದಾರೆ. ರಮ್ಯಾ ಜೋಡಿ ಆಗ್ತಿರೋದು ಧನಂಜಯ್‌ ಅಥವಾ ಶಿವರಾಜ್‌ ಕುಮಾರ್‌ ಅವರಿಗಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

IPL_Entry_Point