Shivarajkumar in Raymo event: ಆ ನಟನಿಗಾಗಿ ಪ್ರಾಣ ಕೊಡಲೂ ರೆಡಿ...ಸೆಂಚುರಿ ಸ್ಟಾರ್ ಹೀಗೆ ಹೇಳಿದ್ದು ಯಾರ ಬಗ್ಗೆ..?
ತಮ್ಮ ಮೆಚ್ಚಿನ ನಟನ ಬಗ್ಗೆ ಮಾತನಾಡಿದ ಶಿವರಾಜ್‌ಕುಮಾರ್, ''ಎಲ್ಲರಿಗೂ ನನ್ನ ತಂದೆ ಡಾ. ರಾಜ್‌ಕುಮಾರ್ ಬಹಳ ಸ್ಪೂರ್ತಿ. ನನಗೂ ಕೂಡಾ ಅಪ್ಪಾಜಿ ಸ್ಪೂರ್ತಿ. ಜೊತೆಗೆ ನನಗೆ ಕಮಲ್ ಹಾಸನ್ ಎಂದರೆ ಬಹಳ ಇಷ್ಟ. ಅವರು ನನಗೆ ಬಹಳ ಸ್ಪೂರ್ತಿ. ಈಗಲೂ ಅಷ್ಟೇ ಕಮಲ್ ಹಾಸನ್ ಎಂದರೆ ನಾನು ಪ್ರಾಣ ಕೂಡಾ ಕೊಡಲು ಸಿದ್ಧನಾಗಿದ್ದೇನೆ.'' ಎಂದರು.
ಪವನ್ ಒಡೆಯರ್ ನಿರ್ದೇಶನದಲ್ಲಿ ಆಶಿಕಾ ರಂಗನಾಥ್ ಹಾಗೂ ಇಶಾನ್ ನಟಿಸಿರುವ 'ರೇಮೊ' ಸಿನಿಮಾ ನವೆಂಬರ್ 25 ರಂದು ತೆರೆ ಕಾಣುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮಕ್ಕೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅತಿಥಿಯಾಗಿ ಆಗಮಿಸಿ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
'ರೇಮೊ' ಚಿತ್ರವನ್ನು ಸಿ. ಮನೋಹರ್ ನಿರ್ಮಿಸಿದ್ದಾರೆ. ಶಿವರಾಜ್‌ಕುಮಾರ್ ಹಾಗೂ ಮನೋಹರ್ ಬಹಳ ಆತ್ಮೀಯರು. ಶಿವರಾಜ್‌ಕುಮಾರ್ ಅಭಿನಯದ 'ವಜ್ರಕಾಯ' ಹಾಗೂ 'ದಿ ವಿಲನ್' ನಿರ್ಮಿಸಿದ್ದು ಮನೋಹರ್. ಈ ಆತ್ಮೀಯತೆಯಿಂದಲೇ ಶಿವರಾಜ್‌ಕುಮಾರ್, 'ರೇಮೊ' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ, ಮನೋಹರ್ ನನ್ನ ಫ್ಯಾಮಿಲಿ ಇದ್ದಂತೆ. ಇನ್ನು ಈ ಚಿತ್ರದ ನಾಯಕ ಇಶಾನ್‌ನನ್ನು ವಿಲನ್ ಸಮಯದಲ್ಲೇ ನೋಡಿದ್ದೆ, ಆಗಲೇ, ಈತ ಹೀರೋ ಮೆಟೀರಿಯಲ್ ಎಂದುಕೊಂಡಿದ್ದೆ ಎಂದರು.
ತಮ್ಮ ಮೆಚ್ಚಿನ ನಟನ ಬಗ್ಗೆ ಮಾತನಾಡಿದ ಶಿವರಾಜ್‌ಕುಮಾರ್, ''ಎಲ್ಲರಿಗೂ ನನ್ನ ತಂದೆ ಡಾ. ರಾಜ್‌ಕುಮಾರ್ ಬಹಳ ಸ್ಪೂರ್ತಿ. ನನಗೂ ಕೂಡಾ ಅಪ್ಪಾಜಿ ಸ್ಪೂರ್ತಿ. ಜೊತೆಗೆ ನನಗೆ ಕಮಲ್ ಹಾಸನ್ ಎಂದರೆ ಬಹಳ ಇಷ್ಟ. ಅವರು ನನಗೆ ಬಹಳ ಸ್ಪೂರ್ತಿ. ಈಗಲೂ ಅಷ್ಟೇ ಕಮಲ್ ಹಾಸನ್ ಎಂದರೆ ನಾನು ಪ್ರಾಣ ಕೂಡಾ ಕೊಡಲು ಸಿದ್ಧನಾಗಿದ್ದೇನೆ. ಅವರೆಂದರೆ ಅಷ್ಟು ಇಷ್ಟ. ಕಮಲ್ ಹಾಸನ್‌ನಂತೆ ಕಣ್ಣು, ಪರ್ಸನಾಲಿಟಿ ನೋಡಿದರೆ ಹೀರೋ ಎಂದರೆ ಹಾಗೆ ಇರಬೇಕು ಎಂದು ಬಹಳ ಸಾರಿ ಅನ್ನಿಸುದ್ದು ಉಂಟು'' ಎಂದು ತಮ್ಮ ಇಷ್ಟದ ನಟ ಕಮಲ್ ಹಾಸನ್ ಬಗ್ಗೆ ಮಾತನಾಡಿದರು. ಜೊತೆಗೆ ರೇಮೊ ನಿರ್ದೇಶಕ ಪವನ್ ಒಡೆಯರ್ ಅವರನ್ನೂ ಶಿವಣ್ಣ ಹೊಗಳಿದರು.
'ರೇಮೊ' ಚಿತ್ರದಲ್ಲಿ ಪರಿಶುದ್ಧ ಪ್ರೇಮಕಥೆಯೊಂದಿಗೆ ಭಾವನಾತ್ಮಕ ಸನ್ನಿವೇಶಗಳು ನೋಡುಗರ ಮನಸ್ಸಿಗೆ ಹತ್ತಿರವಾಗಲಿದೆ. ನವೆಂಬರ್ 25 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ತೆರೆಯ ಮೇಲೆ ನೋಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ. ನೀವೆಲ್ಲರೂ ನೋಡಿ ಹರಸಿ ಎಂದು ನಿರ್ದೇಶಕ ಪವನ್ ಒಡೆಯರ್ ಮನವಿ ಮಾಡಿದ್ದಾರೆ.
ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿರುವ ಆರು ಹಾಡುಗಳು ಈ ಚಿತ್ರದಲ್ಲಿದೆ. ಇಶಾನ್ - ಆಶಿಕಾ ರಂಗನಾಥ್ ಮೊದಲ ಬಾರಿ ಈ ಚಿತ್ರದ ಮೂಲಕ ಜೊತೆಯಾಗಿ ನಟಿಸಿದ್ದಾರೆ. ಈಗಾಗಲೇ ಈ ಜೋಡಿಯ ಪೋಸ್ಟರ್‌ಗಳಿಗೆ ಸಿನಿಪ್ರಿಯರಿಂದ ಮೆಚ್ಚುಗೆ ದೊರೆತಿದೆ. ವೈದಿ ಅವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ 'ರೇಮೊ' ಚಿತ್ರಕ್ಕಿದೆ.