Bhairathi Ranagal OTT: ಶೀಘ್ರದಲ್ಲೇ ಒಟಿಟಿಗೆ ಬರಲಿದೆ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ ‘ಭೈರತಿ ರಣಗಲ್’
ಶಿವರಾಜ್ ಕುಮಾರ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ ‘ಭೈರತಿ ರಣಗಲ್' ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸಲು ಕಾದವರಿಗೆ ಇಲ್ಲಿದೆ ಗುಡ್ ನ್ಯೂಸ್. ಇದೇ ತಿಂಗಳು ನೀವು ನಿಮ್ಮ ಮನೆಯಲ್ಲೇ ಕೂತು ಈ ಸಿನಿಮಾ ನೋಡಬಹುದು.
ಶಿವರಾಜ್ ಕುಮಾರ್ ಅಭಿನಯದ ಹಾಗೂ ನರ್ತನ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಭೈರತಿ ರಣಗಲ್’ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಬಾಕ್ಸ್ ಆಫೀಸ್‌ನಲ್ಲಿ 25 ದಿನಗಳನ್ನು ಪೂರೈಸಿದ ಈ ಸಿನಿಮಾವನ್ನು ನೀವು ನಿಮ್ಮ ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ನವೆಂಬರ್ 15ರಂದು ಈ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ಸಾಕಷ್ಟು ಜನ ಈ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ತಿಳಿಸಿದ್ದರು. ಶ್ರೀಘ್ರದಲ್ಲಿ ಈ ಸಿನಿಮಾವನ್ನು ಒಟಿಟಿಯಲ್ಲೂ ನೋಡಬಹುದು. ಸೆಂಚುರಿ ಸ್ಟಾರ್ ಎಂದೇ ಕರೆಯಲ್ಪಡುವ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಮತ್ತೊಮ್ಮೆ ಈ ಸಿನಿಮಾವನ್ನು ನೋಡಲು ಕಾಯುತ್ತಿದ್ದಾರೆ.
ಚಿತ್ರದ ಪ್ರಚಾರದ ಸಮಯದಲ್ಲಿ, ಭೈರತಿ ರಣಗಲ್ ಚಿತ್ರದ ನಂತರದ ಹಕ್ಕುಗಳನ್ನು ಪಡೆಯಲು ಜೀ ನೆಟ್‌ವರ್ಕ್‌ನ ಆಸಕ್ತಿ ತೋರಿದೆ ಎಂದು ಈ ಹಿಂದೆ ಶಿವರಾಜ್ ಕುಮಾರ್ ಹೇಳಿದ್ದರು. ಏಕೆಂದರೆ ಮಫ್ತಿ ಈಗಾಗಲೇ ಜಿ5 ಒಟಿಟಿಯಲ್ಲಿದೆ. ಮಫ್ತಿ ಸಿನಿಮಾ ಭೈರತಿ ರಣಗಲ್‌ನ ಫ್ರೀಕ್ವೆಲ್ ಆಗಿದೆ. ಇಷ್ಟೇ ಅಲ್ಲದೇ ಶಿವರಾಜ ಕುಮಾರ್ ಅವರ ಮೊದಲ ಹೋಮ್ ಪ್ರೊಡಕ್ಷನ್ ವೇದ ಜೀದಲ್ಲೇ ಆಗಿತ್ತು. ಜೀ ಕನ್ನಡದ ಜನಪ್ರಿಯ ನೃತ್ಯ ಸ್ಪರ್ಧೆಯಲ್ಲಿ ಇವರು ನಿರ್ಣಾಯಕರೂ ಆಗಿದ್ದಾರೆ.
ಯಾವ ಒಟಿಟಿಯಲ್ಲಿ ನೋಡಬಹುದು?
ಭೈರತಿ ರಣಗಲ್ ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳೆರಡೂ ಜೀ ಪಾಲಾಗಿವೆ ಎಂದು ಭಾವಿಸಲಾಗಿತ್ತು. ಆದರೆ ಮೂಲಗಳ ಪ್ರಕಾರ ಜೀ ಕೇವಲ ಟಿವಿ ಹಕ್ಕುಗಳನ್ನು ಮಾತ್ರ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಭೈರತಿ ರಣಗಲ್ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳು ಅಮೆಜಾನ್ ಪ್ರೈಮ್ ವೀಡಿಯೊಗೆ ಹೋಗಿವೆ ಎಂದು ಒಟಿಟಿ ಪ್ಲೇ ವರದಿ ಮಾಡಿದೆ. ಡಿಸೆಂಬರ್ 25 ರಂದು ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ತಾರಾಗಣ
ವರ್ಷದ ಕೊನೆಯ ತಿಂಗಳಲ್ಲಿ ಸಿನಿಪ್ರಿಯರು ಒಟಿಟಿ ಮೂಲಕ ಈ ಸಿನಿಮಾ ನೋಡಿ ಆನಂದಿಸಬಹುದು. ಶಿವರಾಜ್ ಕುಮಾರ್, ರುಕ್ಮಿಣಿ ವಸಂತ್, ರಾಹುಲ್ ಬೋಸ್, ಛಾಯಾ ಸಿಂಗ್, ಶಬೀರ್ ಕಲ್ಲರಕ್ಕಲ್ ಮತ್ತು ಮಧು ಗುರುಸ್ವಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ ಭೈರತಿ ರಣಗಲ್ ಆಗಿದೆ.
ನಟ ಶಿವರಾಜ್ ಕುಮಾರ್ ಮುಂದಿನ ವಾರ US ಗೆ ತೆರಳಲಿದ್ದಾರೆ. ಡಿಸೆಂಬರ್ 24 ಕ್ಕೆ ಶಸ್ತ್ರಚಿಕಿತ್ಸೆಯನ್ನು ನಿಗದಿಪಡಿಸಲಾಗಿದೆ. ಅವರ ಆರೋಗ್ಯಕ್ಕಾಗಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಶಿವಣ್ಣ ನೀವು ಬೇಗ ಆರಾಮಾಗಿ ಬನ್ನಿ ಎಂದು ಕೆಲ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ.
ಸಿನಿಮಾದ ಕಲೆಕ್ಷನ್ ಹೀಗಿತ್ತು.
ಚಿತ್ರದ ಕಥೆಯು ಗ್ಯಾಂಗ್‌ಸ್ಟರ್‌ನ ಸುತ್ತ ಹೆಣೆದುಕೊಂಡಿದೆ. ನವೆಂಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರ, 14 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 17.4 ಕೋಟಿ ರೂ ಕಲೆಕ್ಷನ್ ಮಾಡಿದೆ.