Sikandar First Look: 'ಸಿಕಂದರ್' ಸಿನಿಮಾ ಫಸ್ಟ್‌ ಲುಕ್ ಔಟ್‌; ಸಲ್ಮಾನ್‌ ಖಾನ್‌ ಜನ್ಮದಿನದಂದೇ ಟೀಸರ್ ಬಿಡುಗಡೆ
ಕನ್ನಡ ಸುದ್ದಿ  /  ಮನರಂಜನೆ  /  Sikandar First Look: 'ಸಿಕಂದರ್' ಸಿನಿಮಾ ಫಸ್ಟ್‌ ಲುಕ್ ಔಟ್‌; ಸಲ್ಮಾನ್‌ ಖಾನ್‌ ಜನ್ಮದಿನದಂದೇ ಟೀಸರ್ ಬಿಡುಗಡೆ

Sikandar First Look: 'ಸಿಕಂದರ್' ಸಿನಿಮಾ ಫಸ್ಟ್‌ ಲುಕ್ ಔಟ್‌; ಸಲ್ಮಾನ್‌ ಖಾನ್‌ ಜನ್ಮದಿನದಂದೇ ಟೀಸರ್ ಬಿಡುಗಡೆ

ಸಲ್ಮಾನ್ ಖಾನ್ ಅಭಿನಯದ ಸಿಕಂದರ್‌ ಸಿನಿಮಾ ಪೋಸ್ಟರ್‌ ರಿಲೀಸ್‌ ಆಗಿದೆ. ಇಂದು (ಡಿಸೆಂಬರ್ 27) ಸಲ್ಮಾನ್ ಖಾನ್‌ ಜನ್ಮದಿನದಂದು ಟೀಸರ್‌ ಕೂಡ ರಿಲೀಸ್‌ ಆಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಿಕಂದರ್ ಪೋಸ್ಟರ್ ರಿಲೀಸ್‌
ಸಿಕಂದರ್ ಪೋಸ್ಟರ್ ರಿಲೀಸ್‌

ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಸಿಕಂದರ್‌ನ ಟೀಸರ್ ಅನ್ನು ಅವರ ಜನ್ಮ ದಿನದಂದು ಅನಾವರಣಗೊಳಿಸಲಿದ್ದಾರೆ. ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿದೆ. ಸಲ್ಮಾನ್ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಸಿಕಂದರ್ ಪೋಸ್ಟರ್‌ಅನ್ನು ಶೇರ್ ಮಾಡಿದ್ದಾರೆ. ಡಿಸೆಂಬರ್ 27ರಂದೇ ಟೀಸರ್ ಬಿಡುಗಡೆಯಾಗಲಿದೆ.

ಸಲ್ಮಾನ್‌ ಖಾನ್‌ ಇನ್‌ಸ್ಟಾಗ್ರಾಂ ಹಾಗೂ ಎಕ್ಸ್‌ ಖಾತೆಗಳಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಅವರ ಜನ್ಮದಿನವೂ ಇರುವ ಕಾರಣ ಇಂದೇ ಅಂದರೆ ಡಿಸೆಂಬರ್ 27ರಂದೇ ಟೀಸರ್ ಕೂಡ ರಿಲೀಸ್ ಆಗಲಿದೆ. ಸಲ್ಮಾನ್ ಅವರ ಮುಂಬರುವ ಚಿತ್ರದ ಹೊಸದಾಗಿ ಬಿಡುಗಡೆಯಾದ ಪೋಸ್ಟರ್‌ನಲ್ಲಿ ಸಲ್ಮಾನ್‌ ಖಾನ್ ಕೈಯ್ಯಲ್ಲಿ ಒಂದು ಆಯುಧ ಹಿಡಿದು ಎತ್ತಲೋ ಸಾಗುತ್ತಿರುವಂತಿದೆ. ಕಪ್ಪು ಬಣ್ಣದ ಬಟ್ಟೆ ತೊಟ್ಟಿದ್ದಾರೆ. ಮುಖವು ನೇರವಾಗಿ ಗೋಚರಿಸದಿದ್ದರೂ, ಪೋಸ್ಟರ್‌ನಲ್ಲಿ ಇವರೇ ಇದ್ದಾರೆ ಎಂದು ಬಿಂಬಿಸುವಂತ ಚಿತ್ರವಾಗಿದೆ.

ಪೋಸ್ಟರ್ ಅನ್ನು ಹಂಚಿಕೊಂಡ ಸಲ್ಮಾನ್ ನಿಮ್ಮನ್ನು ಮತ್ತೆ ನಾಳೆ 11:7 ನಿಮಿಷಕ್ಕೆ ಮತ್ತೆ ಭೇಟಿಯಾಗುತ್ತೇನೆ ಎಂಬ ಟ್ಯಾಗ್‌ ಲೈನ್ ಬರೆದುಕೊಂಡಿದ್ದಾರೆ. ಟೀಸರ್‌ ರಿಲೀಸ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ಸಲ್ಮಾನ್ ಖಾನ್ ಜನ್ಮದಿನವೂ ಇರುವ ಕಾರಣ ಅಭಿಮಾನಿಗಳೆಲ್ಲರೂ ವಿಶ್‌ ಮಾಡಿದ್ದಾರೆ. ಸಿನಿಮಾಕ್ಕಾಗಿ ಆಲ್‌ ದ ಬೆಸ್ಟ್‌ ನಾವು ಕಾಯುತ್ತಿದ್ದೇವೆ ಎಂದು ಕಾಮೆಂಟ್ ಮಾಡಿದ್ಧಾರೆ. ಅವರ ಜನ್ಮದಿನಕ್ಕೆ ಶುಭಾಶಯ ಕೋರಿದವರೂ ಸಾಕಷ್ಟು ಜನರಿದ್ದಾರೆ.

ಪೋಸ್ಟರ್‌ನ ಫಸ್ಟ್ ಲುಕ್ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಿನಿಮಾದ ಕಥನ ಹೇಗಿರಬಹುದು? ಏನಿರಬಹುದು ಎಂದು ಊಹಿಸಿಕೊಳ್ಳಲು ಆರಂಭಿಸಿದ್ದಾರೆ. "ಓ ಮೈ ಗಾಡ್... ಮೇರಿ ಜಾನ್ ಸಲ್ಮಾನ್ ಭಾಯ್.. ವಾಟ್ ಎ ಲುಕ್" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಕಾಯುವಿಕೆ ಅಂತ್ಯವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನಾಳೆಗಾಗಿ ಕಾಯುತ್ತಿದ್ದೇನೆ ಎಂದವರೂ ಇದ್ದಾರೆ. ಹೀಗೆ ಸಾಕಷ್ಟು ಜನರು ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಬಾಸ್ ಈಸ್ ಬ್ಯಾಕ್” ಎನ್ನುತ್ತಾ ಇಂದು ರಿಲೀಸ್‌ ಆಗಲಿರುವ ಟೀಸರ್‌ ಬಗ್ಗೆ ಕುತೂಹಲ ಹೊಂದಿರುವುದಾಗಿ ತಿಳಿಸಿದ್ದಾರೆ.

"ಶೇರ್ ಆನ್ ದಿ ವೇ," “ಪೋಸ್ಟರ್ ತುಂಬಾ ಚೆನ್ನಾಗಿದೆ”"ಭಾಯಿಜಾನ್ ಈಸ್ ಬ್ಯಾಕ್" ಹೀಗೆ ಸಾಕಷ್ಟು ಕಾಮೆಂಟ್ಸ್‌ ಬಂದಿದೆ. ದೊಡ್ಡ ವ್ಯಕ್ತಿತ್ವ ಮತ್ತು ಮರೆಯಲಾಗದ ಅಭಿನಯಕ್ಕಾಗಿ ಹೆಸರುವಾಸಿಯಾದ ಸಲ್ಮಾನ್ ಖಾನ್ ಈ ಬಾರಿ ಆಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅವರನ್ನು ಸ್ಕ್ರೀನ್ ಮೇಲೆ ನೋಡುವುದೇ ಒಂದು ಖುಷಿ ಎಂದು ಇನ್ನೊಬ್ಬ ಬಳಕೆದಾದರು ಹೇಳಿದ್ದಾರೆ.

ಹೀಗೆ ಸಾಕಷ್ಟು ಕುತೂಹಲ ಹಾಗೂ ಕಾಯುವಿಕೆ ಅಭಿಮಾನಿಗಳಲ್ಲಿದೆ. ಇಂದು ಮಧ್ಹಾನ್ನ ಇನ್ನಷ್ಟು ಅಪ್‌ಡೇಟ್ ಲಭ್ಯವಾಗಲಿದೆ.

Whats_app_banner