ಕನ್ನಡ ಸುದ್ದಿ  /  Entertainment  /  Simhapriya Visited Kukke Subrahmanya Temple

Simhapriya Temple Visit: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಿಂಹಪ್ರಿಯಾ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಸಿಂಹಪ್ರಿಯಾ ಸುಬ್ರಹ್ಮಣ್ಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ತುಲಾಭಾರ ಸೇವೆ ಸಲ್ಲಿಸುವ ಮೂಲಕ ವಸಿಷ್ಠ ಸಿಂಹ, ತಮ್ಮ ಅಕ್ಕ ಮಾಡಿದ್ದ ಹರಕೆಯನ್ನು ತೀರಿಸಿದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಸಿಂಹಪ್ರಿಯಾ
ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಸಿಂಹಪ್ರಿಯಾ

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸ್ಯಾಂಡಲ್‌ವುಡ್‌ ಕ್ಯೂಟ್‌ ಜೋಡಿ ಸಿಂಹಪ್ರಿಯ ಭಾನುವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಕಳೆದ ಜನವರಿ 26, ಗಣರಾಜ್ಯೋತ್ಸವದಂದು ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಸಿಂಹಪ್ರಿಯಾ ಸುಬ್ರಹ್ಮಣ್ಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ತುಲಾಭಾರ ಸೇವೆ ಸಲ್ಲಿಸುವ ಮೂಲಕ ವಸಿಷ್ಠ ಸಿಂಹ, ತಮ್ಮ ಅಕ್ಕ ಮಾಡಿದ್ದ ಹರಕೆಯನ್ನು ತೀರಿಸಿದರು. ಸಿಂಹಪ್ರಿಯಾ ದೇವಸ್ಥಾನಕ್ಕೆ ಆಗಮಿಸಿದ್ದ ವಿಚಾರ ತಿಳಿದು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ತಮ್ಮ ಮೆಚ್ಚಿನ ಜೋಡಿಯನ್ನು ನೋಡಲು ದೇವಸ್ಥಾನದತ್ತ ತೆರಳಿದರು. ಫೋಟೋ ಕ್ಲಿಕ್ಕಿಸಿ, ವಿಡಿಯೋ ಸೆರೆ ಹಿಡಿದರು. ಈ ಸಮಯದಲ್ಲಿ ದೇವಸ್ಥಾನದ ವತಿಯಿಂದ ಸಿಂಹಪ್ರಿಯಾ ಜೋಡಿಯನ್ನು ಸನ್ಮಾನಿಸಲಾಯ್ತು.

ಪ್ರೀತಿ ವಿಚಾರವನ್ನು ಬಚ್ಚಿಟ್ಟಿದ್ದ ಸಿಂಹಪ್ರಿಯಾ

ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರೂ ಇಬ್ಬರಲ್ಲಿ ಒಬ್ಬರೂ ಕೂಡಾ ತಮ್ಮ ಪ್ರೀತಿ ವಿಚಾರವನ್ನು ಎಲ್ಲಿಯೂ ರಿವೀಲ್‌ ಮಾಡಿರಲಿಲ್ಲ. ಆದರೆ ಒಮ್ಮೆ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋ ವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಈ ವಿಡಿಯೋದಲ್ಲಿ ವಸಿಷ್ಠಸಿಂಹ ಕೂಡಾ ಇರುವುದನ್ನು ಹಲವರು ಗಮನಿಸಿದ್ದರು. ಇದಾದ ಕೆಲವು ದಿನಗಳ ನಂತರ ಇಬ್ಬರೂ ಕೈ ಕೈ ಹಿಡಿದು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಆಗಲೇ, ಈ ಜೋಡಿ ಪ್ರೀತಿಯಲ್ಲಿದ್ದು ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ.

ತುಲಾಭಾರ ಹರಕೆ ತೀರಿಸುತ್ತಿರುವ ಸಿಂಹಪ್ರಿಯಾ ಜೋಡಿ
ತುಲಾಭಾರ ಹರಕೆ ತೀರಿಸುತ್ತಿರುವ ಸಿಂಹಪ್ರಿಯಾ ಜೋಡಿ

ನಾನು ಹರಿಪ್ರಿಯಾ ಅಭಿಮಾನಿ ಎಂದಿದ್ದ ವಸಿಷ್ಠ ಸಿಂಹ

ಸುದ್ದಿಗೋಷ್ಠಿ ವೇಳೆ ವಸಿಷ್ಠ ತಮ್ಮಿಬ್ಬರ ಪರಿಚಯ, ಸ್ನೇಹ, ಪ್ರೀತಿ ಬಗ್ಗೆ ಹೇಳಿಕೊಂಡಿದ್ದರು. ನಮ್ಮಿಬ್ಬರಿಗೂ 2016ರಿಂದ ಪರಿಚಯ. ಅದಕ್ಕೂ ಮುನ್ನ ನಾನು ಅವರ ಅಭಿಮಾನಿಯಾಗಿದ್ದೆ. ನನ್ನ 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಸಿನಿಮಾ ನೋಡಿ ಹರಿಪ್ರಿಯಾ ನನ್ನನ್ನು ಮಾತನಾಡಿಸಿ ಆಕ್ಟಿಂಗ್‌ ಬಗ್ಗೆ ಕಾಂಪ್ಲಿಮೆಂಟ್ಸ್‌ ಕೊಟ್ಟಿದ್ದರು. ಆಗಿನಿಂದ ಇಬ್ಬರೂ ಮಾತಾಡುತ್ತಿದ್ದೆವು. ಚಿತ್ರರಂಗದಲ್ಲಿ ಆಕೆ ನನಗಿಂತ ಸೀನಿಯರ್‌ ಆಗಿದ್ರೂ ನನಗೆ ವಿಶ್‌ ಮಾಡಿದ್ದು ಬಹಳ ಖುಷಿಯಾಯ್ತು. ನಮ್ಮಿಬ್ಬರ ಪರಿಚಯ, ಸ್ನೇಹಕ್ಕೆ ತಿರುಗಿ, ನಂತರ ಲವ್‌ ಆಯ್ತು. ಹರಿಪ್ರಿಯಾಗೆ ಶ್ವಾನಗಳು ಎಂದರೆ ಬಹಳ ಇಷ್ಟ. ಅವರ ಮನೆಯಲ್ಲಿ ಲಕ್ಕಿ ಎಂಬ ನಾಯಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿತ್ತು. ಅದರಿಂದ ಆಕೆಗೆ ಬಹಳ ನೋವಾಗಿತ್ತು. ಬೇರೆ ನಾಯಿ ಕೊಟ್ಟರೆ ಆಕೆಯ ದು:ಖ ಕಡಿಮೆಯಾಗಬಹುದು ಎಂದುಕೊಂಡು ನಾನು ಒಂದು ನಾಯಿಮರಿ ಗಿಫ್ಟ್‌ ಮಾಡಿದ್ದೆ, ಆದರೆ ಅದಕ್ಕೂ ಮುನ್ನವೇ ಇಬ್ಬರಿಗೂ ಲವ್‌ ಆಗಿತ್ತು.'' ಎಂದು ವಸಿಷ್ಠ ತಮ್ಮಿಬ್ಬರ ಪ್ರೀತಿ ವಿಚಾರವನ್ನು ಹೇಳಿಕೊಂಡಿದ್ದರು.

ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ ಹರಿಪ್ರಿಯಾ

ಮದುವೆ ನಂತರ ಕೆಲವು ದಿನಗಳ ಕಾಲ ಸಿನಿಮಾಗಳಿಂದ ದೂರ ಇರಲು ನಿರ್ಧರಿಸಿರುವ ಹರಿಪ್ರಿಯಾ ಈಗ ತಮ್ಮದೇ ಯೂಟ್ಯೂಬ್‌ ಆರಂಭಿಸಿದ್ಧಾರೆ. ಈಗಾಗಲೇ ಕೆಲವೊಂದು ವಿಡಿಯೋಗಳನ್ನು ಕೂಡಾ ಅವರು ಅಪ್‌ಲೋಡ್‌ ಮಾಡಿದ್ದಾರೆ.

IPL_Entry_Point