ಕನ್ನಡ ಸುದ್ದಿ  /  Entertainment  /  Singer Lucky Ali Apologise For Controversial Post About Brahman Mnk

Lucky Ali: ‘ಬ್ರಾಹ್ಮಣರು ಇಬ್ರಾಹಿಂ ವಂಶಸ್ಥರು’ ಎಂದ ಬಾಲಿವುಡ್‌ ಗಾಯಕ ಲಕ್ಕಿ ಅಲಿ!; ವಿವಾದ ಭುಗಿಲೆದ್ದ ಬಳಿಕ ಮುಂದೇನಾಯ್ತು?

"ಬ್ರಾಹ್ಮಣ' ಪದವು 'ಅಬ್ರಹಾಂ' ಅಥವಾ ‘ಇಬ್ರಾಹಿಂ’ನಿಂದ ಬಂದಿದೆ ಎಂಬ ಪೋಸ್ಟ್‌ ಹಾಕಿದ ಗಾಯಕ ಲಕ್ಕಿ ಅಲಿ, ಬಳಿಕ ಅದನ್ನು ಡಿಲಿಟ್‌ ಮಾಡಿ ಕ್ಷಮೆಯಾಚಿಸಿದ್ದಾರೆ.

‘ಬ್ರಾಹ್ಮಣರು ಇಬ್ರಾಹಿಂ ವಂಶಸ್ಥರು’ ಎಂದ ಬಾಲಿವುಡ್‌ ಗಾಯಕ ಲಕ್ಕಿ ಅಲಿ!; ವಿವಾದ ಭುಗಿಲೆದ್ದ ಬಳಿಕ ಮುಂದೇನಾಯ್ತು?
‘ಬ್ರಾಹ್ಮಣರು ಇಬ್ರಾಹಿಂ ವಂಶಸ್ಥರು’ ಎಂದ ಬಾಲಿವುಡ್‌ ಗಾಯಕ ಲಕ್ಕಿ ಅಲಿ!; ವಿವಾದ ಭುಗಿಲೆದ್ದ ಬಳಿಕ ಮುಂದೇನಾಯ್ತು?

Lucky Ali: ಬಾಲಿವುಡ್ ಗಾಯಕ ಲಕ್ಕಿ ಅಲಿ (Lucky ali) ಹೆಚ್ಚು ಹಾಡುಗಳನ್ನು ಹಾಡದಿದ್ದರೂ, ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಒಂದಿಲ್ಲೊಂದು ಪೋಸ್ಟ್‌ ಹಂಚಿಕೊಂಡು ಸುದ್ದಿಯಲ್ಲಿರುತ್ತಾರೆ. ಹಾಗೆಯೇ ಇತ್ತೀಚೆಗೆ ಅವರ ಫೇಸ್‌ಬುಕ್‌ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿತ್ತಲ್ಲದೆ, ವಿವಾದಕ್ಕೂ ತುಪ್ಪ ಸುರಿದಿತ್ತು. ಬಳಿಕ ಟ್ರೋಲ್‌ ಆಗುತ್ತಿದ್ದಂತೆ ಕ್ಷಮೆಯನ್ನೂ ಕೇಳಿದ್ದಾರವರು.

ಅಷ್ಟಕ್ಕೂ ಲಕ್ಕಿ ಅಲಿ ಪೋಸ್ಟ್‌ ಏನಾಗಿತ್ತು?

ಲಕ್ಕಿ ಅಲಿ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, "ಬ್ರಾಹ್ಮಣ' ಪದವು 'ಅಬ್ರಹಾಂ' ಅಥವಾ 'ಇಬ್ರಾಹಿಂ' ನಿಂದ ಬಂದಿದೆ. ಬ್ರಾಹ್ಮಣ ಪದವು ಎಲ್ಲಾ ರಾಷ್ಟ್ರಗಳ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಇಬ್ರಾಹಿಂ ಅವರಿಂದ ಬಂದಿದೆ. ಹಾಗಾಗಿ ಬ್ರಾಹ್ಮಣರು ಇಬ್ರಾಹಿಂನ ವಂಶಸ್ಥರು. ಇಷ್ಟಿದ್ದರೂ ಎಲ್ಲರೂ ವಿನಾಕಾರಣ ಜಗಳವಾಡುತ್ತಾರೆ" ಎಂದು ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ, ಸಾಕಷ್ಟು ಮಂದಿ ನೆಟ್ಟಿಗರು ಇವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತೀವ್ರವಾಗಿ ಟ್ರೋಲ್ ಸಹ ಮಾಡಲಾಗಿದೆ. ಬಳಿಕ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ ಲಕ್ಕಿ ಅಲಿ.

ಲಕ್ಕಿ ಅಲಿ ಮೊದಲ ಪೋಸ್ಟ್‌,
ಲಕ್ಕಿ ಅಲಿ ಮೊದಲ ಪೋಸ್ಟ್‌,

ನನ್ನ ಪೋಸ್ಟ್‌ನ ಉದ್ದೇಶ ಅದಲ್ಲ..

ಸಮಾಜದ ವಿವಿಧ ವರ್ಗಗಳ ಜನರನ್ನು ಒಗ್ಗೂಡಿಸುವುದು ಮಾತ್ರ ನನ್ನ ಗುರಿಯಾಗಿದೆ ವಿನಃ ದ್ವೇಷವನ್ನು ಹರಡುವುದಿಲ್ಲ ಎಂದು ಸ್ಪಷ್ಟಪಡಿಸಿ ಕ್ಷಮೆಯಾಚಿಸಿದ್ದಾರೆ ಅಲಿ. 'ನನ್ನ ಹಿಂದಿನ ಪೋಸ್ಟ್‌ನ ವಿವಾದದ ಬಗ್ಗೆ ನನಗೆ ತಿಳಿದಿದೆ. ಯಾರಿಗೂ ದುಃಖ ಅಥವಾ ಕೋಪವನ್ನು ಉಂಟುಮಾಡುವುದು ನನ್ನ ಉದ್ದೇಶವಲ್ಲ. ಅದಕ್ಕಾಗಿ ನಾನು ವಿಷಾದಿಸುತ್ತೇನೆ"

"ಸಮಾಜದ ವಿವಿಧ ವರ್ಗಗಳ ಜನರನ್ನು ಒಗ್ಗೂಡಿಸುವುದು ನನ್ನ ಉದ್ದೇಶವಾಗಿತ್ತು. ಆದರೆ ಇದು ಸರಿಯಲ್ಲ ಎಂದು ನಾನು ಅರಿತುಕೊಂಡೆ. ನಾನು ಹೇಳಲು ಉದ್ದೇಶಿಸಿದ್ದನ್ನು ತಪ್ಪಾಗಿ ನಿರೂಪಿಸಲಾಗಿದೆ. ನನ್ನ ಮಾತುಗಳಿಂದ ನನ್ನ ಅನೇಕ ಹಿಂದೂ ಸ್ನೇಹಿತರಿಗೆ ತೊಂದರೆಯಾಗಿದೆ. ಇದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ" ಎಂದಿದ್ದಾರೆ.

ಸಿನಿಮಾ ಸಂಬಂಧಿ ಈ ಸುದ್ದಿಯನ್ನೂ ಓದಿ

Celina Jaitly: ‘ಅವಕಾಶಕ್ಕಾಗಿ ನಿರ್ದೇಶಕನ ಮುಂದೆ ಬೆತ್ತಲಾದವಳು ನೀನು!’; ವಿಮರ್ಶಕ ಮತ್ತು ನಟಿ ಸೆಲೀನಾ ಜೇಟ್ಲಿ ಟ್ವಿಟ್‌ ಸಮರ..

ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ಬಾಲಿವುಡ್‌ನಲ್ಲಿ ನಿಷ್ಠುರತೆಗೆ ಹೆಸರುವಾಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಾಗಲಿ ಅಥವಾ ಸಾರ್ವಜನಿಕ ಸ್ಥಳವಾಗಲಿ ಪ್ರತಿ ವಿಚಾರದಲ್ಲೂ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಾರೆ. ಈಗಾಗಲೇ ಅದು ಸಾಕಷ್ಟು ಬಾರಿ ಸಾಬೀತಾಗಿದೆ. ಇದೀಗ ಟ್ವಿಟರ್‌ನಲ್ಲಿನ ಪೋಸ್ಟ್‌ವೊಂದು ಸೆಲಿನಾ ಅವರನ್ನು ನಿಗಿ ನಿಗಿ ಕೆಂಡದಂತೆ ಮಾಡಿದೆ. ಆ ಪೋಸ್ಟ್‌ಗೆ ತಕ್ಕ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ ಸೆಲಿನಾ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ