Sky Force Twitter Review: ಸ್ಕೈ ಫೋರ್ಸ್ ಸಿನಿಮಾ ವಿಮರ್ಶೆ; ಅಕ್ಷಯ್ ಕುಮಾರ್ ಅಭಿನಯ ಮೆಚ್ಚಿಕೊಂಡ ಪ್ರೇಕ್ಷಕರು, ಸಿನಿಮಾದ ಕಥೆಯೂ ಸೂಪರ್
ಕನ್ನಡ ಸುದ್ದಿ  /  ಮನರಂಜನೆ  /  Sky Force Twitter Review: ಸ್ಕೈ ಫೋರ್ಸ್ ಸಿನಿಮಾ ವಿಮರ್ಶೆ; ಅಕ್ಷಯ್ ಕುಮಾರ್ ಅಭಿನಯ ಮೆಚ್ಚಿಕೊಂಡ ಪ್ರೇಕ್ಷಕರು, ಸಿನಿಮಾದ ಕಥೆಯೂ ಸೂಪರ್

Sky Force Twitter Review: ಸ್ಕೈ ಫೋರ್ಸ್ ಸಿನಿಮಾ ವಿಮರ್ಶೆ; ಅಕ್ಷಯ್ ಕುಮಾರ್ ಅಭಿನಯ ಮೆಚ್ಚಿಕೊಂಡ ಪ್ರೇಕ್ಷಕರು, ಸಿನಿಮಾದ ಕಥೆಯೂ ಸೂಪರ್

Sky Force Film Twitter Review: ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಸ್ಕೈ ಫೋರ್ಸ್’ ಬಿಡುಗಡೆಯಾಗಿದೆ. ಅಭಿಮಾನಿಗಳ ನಿರೀಕ್ಷೆ ಹುಸಿಯಾಗದಂತೆ ಸಿನಿಮಾ ಮೂಡಿಬಂದಿದೆ.

ಸ್ಕೈ ಫೋರ್ಸ್ ಸಿನಿಮಾ ವಿಮರ್ಶೆ
ಸ್ಕೈ ಫೋರ್ಸ್ ಸಿನಿಮಾ ವಿಮರ್ಶೆ

Sky Force Twitter Review: ಬಾಲಿವುಡ್‌ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರ ವರ್ಷದ ಮೊದಲ ಚಿತ್ರ ಸ್ಕೈ ಫೋರ್ಸ್ ಇಂದು (ಜನವರಿ 24) ಬಿಡುಗಡೆಯಾಗಿದೆ. ಇದು 1965 ರ ಇಂಡೋ-ಪಾಕಿಸ್ತಾನದ ವಾಯು ಯುದ್ಧವನ್ನು ಆಧರಿಸಿದ ಕಥೆ ಹೊಂದಿರುವ ಸಿನಿಮಾ ಆಗಿದೆ. ವೀರ್ ಪಹಾರಿಯಾ, ಸಾರಾ ಅಲಿ ಖಾನ್ ಮತ್ತು ನಿಮ್ರತ್ ಕೌರ್ ಕೂಡ ಅಕ್ಷಯ್ ಕುಮಾರ್ ಜತೆ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಅಕ್ಷಯ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ಸಕಾರಾತ್ಮಕ ವಿಮರ್ಶೆಗಳನ್ನೂ ಸಹ ಪಡೆದುಕೊಂಡಿದೆ. ಸಿನಿಮಾದ ಬಗ್ಗೆ ಪಾಸಿಟಿವ್ ಟಾಕ್ ಇದೆ. ಸಿನಿಮಾ ವೀಕ್ಷಿಸಿದವರು ಎಕ್ಸ್‌ನಲ್ಲಿ ಸಿನಿಮಾ ಹೇಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶ್ಲೇಷಕ ತರಣ್ ಆದರ್ಶ್ ಚಿತ್ರಕ್ಕೆ 4 ಸ್ಟಾರ್ ರೇಟಿಂಗ್ ನೀಡಿದ್ದಾರೆ. ಈ ಸಿನಿಮಾ ಚೆನ್ನಾಗಿದೆ ಎಂದು ಬರೆದುಕೊಂಡಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಅವರು. ನಿಜ ಜೀವನದ ಕಥೆ ಹಾಗೂ ಭಾವನೆಗಳ ಸಂಯೋಜನೆ ಉತ್ತಮವಾಗಿದೆ. ದೇಶಭಕ್ತಿ ಮತ್ತು ವೈಮಾನಿಕ ದೃಶ್ಯಗಳಿರುವ ಸನ್ನಿವೇಶವನ್ನು ನೋಡುತ್ತಿದ್ದರೆ ರೋಮಾಂಚನವಾಗುತ್ತದೆ ಎಂದಿದ್ದಾರೆ. ಅಕ್ಷಯ್ ಕುಮಾರ್ ಅವರ ಅಭಿನಯ, ವೀರ್ ಪಹಾರಿಯಾ ಪಾತ್ರ, ಕಡಿಮೆ ಸಮಯ ತೆರೆಮೇಲಿದ್ದರೂ ಸಾರಾ ಅಲಿ ಖಾನ್ ಅಭಿನಯ ಬೀರುವ ಪ್ರಭಾವ ಮತ್ತು ಸಿನಿಮಾ ನಿರೂಪಣೆಯ ಶೈಲಿ ಇದೆಲ್ಲವೂ ಚೆನ್ನಾಗಿದೆ ಎಂದು ಅಭಿಪ್ರಾಯಪಟ್ಟಿದ್ಧಾರೆ. ಆದರೆ ಬಾಕ್ಸ್‌ಆಫೀಸ್‌ನಲ್ಲಿ ಅಷ್ಟು ಬೇಗ ಹಿಟ್‌ ಆಗದೇ ಇರಬಹುದು ಆದರೆ ಸಿನಿಮಾ ಉತ್ತಮವಾಗಿದೆ ಎಂದಿದ್ದಾರೆ.

ಭಾರತೀಯ ವಾಯುಪಡೆಯ ತಾಕತ್ತು ಹಾಗೂ ದೇಶಭಕ್ತಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾ ಉತ್ತಮವಾಗಿದೆ ಎಂದಿದ್ದಾರೆ. ಎಲ್ಲ ನಟರ ಅಭಿನಯವೂ ಚೆನ್ನಾಗಿದೆ ಎಂದು ಬರೆದುಕೊಂಡಿದ್ದಾರೆ. ಸಿನಿಮಾದಲ್ಲಿ ಮಹಿಳೆಯರ ಶಕ್ತಿ ಮತ್ತು ಸಮರ್ಪಣೆಯನ್ನು ಎತ್ತಿತೋರಿಸಲಾಗಿದೆ ಎಂದಿದ್ದಾರೆ. ವೈಮಾನಿಕ ಯುದ್ಧದ ದೃಶ್ಯಗಳನ್ನು ಚೆನ್ನಾಗಿ ನಿರ್ದೇಶಿಸಿದ್ದಾರೆ. ತಾಂತ್ರಿಕವಾಗಿ, ಚಿತ್ರೀಕರಣದಲ್ಲಿ ಎಲ್ಲದರಲ್ಲೂ ಈ ಸಿನಿಮಾ ಗೆದ್ದಿದೆ. ವೈಮಾನಿಕ ಶಾಟ್‌ಗಳಂತೂ ಬೆರೆಗುಗೊಳ್ಳುವ ಹಾಗಿದೆ. ಸಂಗೀತವೂ ಚೆನ್ನಾಗಿದೆ. ವೈಮಾನಿಕ ಸೀಕ್ವೆನ್ಸ್‌ಗಳಿಗಾಗಿ VFX ಬಳಕೆ ಮಾಡಲಾಗಿದ್ದು ತುಂಬಾ ನೈಜವಾಗಿ ಮೂಡಿಬಂದಿದೆ. ಕ್ಲೈಮ್ಯಾಕ್ಸ್ ಕಟುವಾಗಿದೆ ಎಂದು 5 ಸ್ಟಾರ್ ರೇಟಿಂಗ್ ನೀಡಿ ಸ್ನೇಹಾಲ್ ಪ್ರಶಂಸೆ ನೀಡಿದ್ದಾರೆ.

ಇನ್ನೊಬ್ಬ ಬಳಕೆದಾರರು ಸಿನಿಮಾ ಚೆನ್ನಾಗಿದೆ. ನಿಶವಾದ ದೇಶಭಕ್ತಿ ಇದು. ಅಕ್ಷಯ್ ಕುಮಾರ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಎಲ್ಲರೂ ನೋಡಬೇಕಾದ ಸಿನಿಮಾ ಇದು ಎಂದು ಬರೆದುಕೊಂಡಿದ್ದಾರೆ. 4.5 ರೇಟಿಂಗ್ ನೀಡಿದ್ಧಾರೆ.

ಇನ್ನೊಬ್ಬ ಬಳಕೆದಾರ ಈ ಸಿನಿಮಾ ಚೆನ್ನಾಗಿಲ್ಲ, ಬೋರಿಂಗ್‌ ಆಗಿದೆ. ಇದೊಂದು ಪ್ಲಾಪ್ ಸಿನಿಮಾ. ಈ ರೀತಿ ಸಿನಿಮಾಗಳು ಸೋಲುತ್ತವೆ. ಜನರ ನಿರೀಕ್ಷೆ ಬೇರೆ ಇರುತ್ತದೆ. ಸಾರಿ ಅಕ್ಕಿ ಸರ್ ಎಂದು ಬರೆದುಕೊಂಡು 2 ರೇಟಿಂಗ್ ನೀಡಿದ್ದಾರೆ.

Whats_app_banner