Kannada News  /  Entertainment  /  Small Screen Actress Vaishnavi Gowda Mother Became Advocate
ಅಮ್ಮನ ಸಾಧನೆಯನ್ನು ಹಂಚಿಕೊಂಡ ವೈಷ್ಣವಿ ಗೌಡ
ಅಮ್ಮನ ಸಾಧನೆಯನ್ನು ಹಂಚಿಕೊಂಡ ವೈಷ್ಣವಿ ಗೌಡ

Vaishnavi Gowda Mother: ವೈಷ್ಣವಿ ಗೌಡ ತಾಯಿ ಈಗ ಅಡ್ವೊಕೇಟ್‌... ಅಮ್ಮನ ಸಾಧನೆಯನ್ನು ಕೊಂಡಾಡಿದ ಮಗಳು!

17 March 2023, 20:19 ISTHT Kannada Desk
17 March 2023, 20:19 IST

ಈ ವಯಸ್ಸಿನಲ್ಲಿ ನೀವು ಮಾಡಿದ ಈ ಸಾಧನೆ ನೋಡಿ ನನಗೆ ಹೆಮ್ಮೆ ಆಗುತ್ತಿದೆ. ನಮ್ಮೆಲ್ಲರಿಗೆ ಸ್ಪೂರ್ತಿಯಾಗಿರುವುದಕ್ಕೆ ನಿಮಗೆ ಧನ್ಯವಾದಗಳು  ಎಂದು ವೈಷ್ಣವಿ ಗೌಡ ಬರೆದುಕೊಂಡಿದ್ದಾರೆ. ವೈಷ್ಣವಿ ಪೋಸ್ಟ್‌ಗೆ ಅವರ ಫಾಲೋವರ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರ ತಾಯಿಗೆ ಕಂಗ್ರಾಜುಲೇಷನ್ಸ್‌ ಹೇಳುತ್ತಿದ್ದಾರೆ.

'ಅಗ್ನಿಸಾಕ್ಷಿ' ಖ್ಯಾತಿಯ ವೈಷ್ಣವಿ ಗೌಡ ಕೆಲವು ದಿನಗಳ ಹಿಂದೆ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದರು. ಇದೀಗ ಆ ಬೇಸರದಿಂದ ಹೊರ ಬರುತ್ತಿರುವ ವೈಷ್ಣವಿ ಮೊದಲಿನಂತೆ ತಮ್ಮ ಯೂಟ್ಯೂಬ್‌, ಧಾರಾವಾಹಿ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ವೈಷ್ಣವಿ ತಾಯಿ ವಕೀಲೆಯಾಗಿ ಪ್ರಮೋಷನ್‌ ಪಡೆದಿದ್ದು ಈ ಸಂತೋಷದ ವಿಚಾರವನ್ನು ಸ್ವತ: ವೈಷ್ಣವಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವೈಷ್ಣವಿ ಗೌಡ , ಕಪ್ಪು ಕೋಟ್‌ ಧರಿಸಿರುವ ತಾಯಿ ಭಾನು ರವಿಕುಮಾರ್ ಅವರೊಂದಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಅಮ್ಮನಿಗೆ ಶುಭಾಶಯ ಹೇಳಿದ್ದಾರೆ. ''ಮನೆಯಲ್ಲಿ ಈಗ ಅಡ್ವೊಕೇಟ್‌ ಇದ್ದಾರೆ. ವಯಸ್ಸು ಅನ್ನೋದು ಒಂದು ಸಂಖ್ಯೆ ಅಷ್ಟೇ ಅಂತ ನೀವು ನನಗೆ ಯಾವಾಗಲೂ ಹೇಳುತ್ತಿದ್ದೀರಿ. ಈ ವಯಸ್ಸಿನಲ್ಲಿ ನೀವು ಮಾಡಿದ ಈ ಸಾಧನೆ ನೋಡಿ ನನಗೆ ಹೆಮ್ಮೆ ಆಗುತ್ತಿದೆ. ನಮ್ಮೆಲ್ಲರಿಗೆ ಸ್ಪೂರ್ತಿಯಾಗಿರುವುದಕ್ಕೆ ನಿಮಗೆ ಧನ್ಯವಾದಗಳು'' ಎಂದು ವೈಷ್ಣವಿ ಗೌಡ ಬರೆದುಕೊಂಡಿದ್ದಾರೆ. ವೈಷ್ಣವಿ ಪೋಸ್ಟ್‌ಗೆ ಅವರ ಫಾಲೋವರ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರ ತಾಯಿಗೆ ಕಂಗ್ರಾಜುಲೇಷನ್ಸ್‌ ಹೇಳುತ್ತಿದ್ದಾರೆ.

'ಅಗ್ನಿಸಾಕ್ಷಿ'ಯ ಸನ್ನಿಧಿ ಎಂದೇ ಫೇಮಸ್‌

'ಅಗ್ನಿಸಾಕ್ಷಿ' ಧಾರಾವಾಹಿ ವೀಕ್ಷಕರಿಗೆ ವೈಷ್ಣವಿ ಗೌಡ ಬಹಳ ಚೆನ್ನಾಗಿ ಪರಿಚಯ. 2011 ರಲ್ಲಿ ಅವರು 'ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಬಂದರು. ವೈಷ್ಣವಿ, ಹೆಚ್ಚು ಧಾರಾವಾಹಿಗಳಲ್ಲಿ ನಟಿಸದೆ ಇದ್ದರೂ, ಅವರು 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಮನೆ ಮಾತಾಗಿದ್ದಾರೆ. ಇಂದಿಗೂ ಅವರನ್ನು ಬಹಳಷ್ಟು ಜನರು ಸನ್ನಿಧಿ ಎಂದೇ ಗುರುತಿಸುತ್ತಾರೆ. 'ಪುನರ್ ವಿವಾಹ' ಧಾರಾವಾಹಿಯಲ್ಲಿ ಕೂಡಾ ನಟಿಸಿದ್ದಾರೆ. ಡ್ರೆಸ್ ಕೋಡ್, ಗಿರಿಗಿಟ್ಲೆ ಸಿನಿಮಾಗಲ್ಲಿ ಕೂಡಾ ವೈಷ್ಣವಿ ಅಭಿನಯಿಸಿದ್ದಾರೆ. ಬಿಗ್‌ ಬಾಸ್‌ ನಂತರ ನಟನೆಯಿಂದ ದೂರ ಉಳಿದಿದ್ದ ವೈಷ್ಣವಿ ಗೌಡ, ತಮ್ಮದೇ ಯೂಟ್ಯೂಬ್‌ ಚಾನೆಲ್‌ ಮೂಲಕ ವಿವಿಧ ವಿಡಿಯೋಗಳನ್ನು ಮಾಡಿದ್ದಾರೆ. ಈಗ ಸ್ವಪ್ನಕೃಷ್ಣ ನಿರ್ದೇಶನದ 'ಸೀತಾರಾಮ' ಧಾರಾವಾಹಿ, ಮಂಗಳಗೌರಿ ಮದುವೆ ಖ್ಯಾತಿಯ ಗಗನ್‌ ಜೊತೆ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಲಕ್ಷಣ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ವೈಷ್ಣವಿ ಗೌಡ

'ಅಗ್ನಿಸಾಕ್ಷಿ' ಧಾರಾವಾಹಿ ನಂತರ ವೈಷ್ಣವಿ ಗೌಡ ಮತ್ತೆ ಹೊಸ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಧಾರಾವಾಹಿ ನಂತರ ಅವರು ಬಿಗ್‌ ಬಾಸ್‌ ಸೀಸನ್‌ 8 ರಲ್ಲಿ ಸ್ಪರ್ಧಿಯಾಗಿದ್ದರು. ಕೆಲವು ದಿನಗಳ ಹಿಂದೆ ಅವರು ಮತ್ತೆ 'ಲಕ್ಷಣ' ಧಾರಾವಾಹಿ ಮೂಲಕ ನಟನೆಗೆ ರೀ ಎಂಟ್ರಿ ಕೊಟ್ಟಿದ್ದರು. ವೈಷ್ಣವಿ ನಟಿಸಿದ್ದ ಎಪಿಸೋಡ್‌ ಈಗಾಗಲೇ ಪ್ರಸಾರವಾಗಿವೆ.

ಹುಡುಗರಿಗೂ ಪಿರಿಯಡ್ಸ್‌ ಬಗ್ಗೆ ಪಾಠ ಮಾಡಿದ್ದ ಚೆಲುವೆ

ತಮ್ಮದೇ ಹೆಸರಿನ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿರುವ ವೈಷ್ಣವಿ ಅನೇಕ ವಿಚಾರಗಳನ್ನು ಅದರಲ್ಲಿ ಹಂಚಿಕೊಳ್ಳುತ್ತಾರೆ. ಪಿರಿಯಡ್ಸ್ ವಿಚಾರವಾಗಿ ಹುಡುಗರಿಗೆ ಪಾಠ ಮಾಡಿದ್ದರು. ಪಿರಿಯಡ್ಸ್‌ ಬಗ್ಗೆ ಹುಡುಗರಾಗಲೀ, ಹುಡುಗಿಯರಾಗಲೀ ನಿರ್ಲಕ್ಷ್ಯ ಮಾಡುವಂತಿಲ್ಲ. ಇದರ ಬಗ್ಗೆ ಹುಡುಗರು ಕೂಡಾ ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ನಿಮ್ಮ ಜೀವನದಲ್ಲಿ ಕೂಡಾ ತಾಯಿ, ಅಕ್ಕ, ತಂಗಿ, ಹೆಂಡತಿ, ಸ್ನೇಹಿತೆ ಎಂದು ಅನೇಕ ಮಹಿಳೆಯರಿರುತ್ತಾರೆ. ನಿಮ್ಮ ಪ್ರೀತಿಪಾತ್ರರು ಏನೆಲ್ಲಾ ಸಮಸ್ಯೆ ಅನುಭವಿಸುತ್ತಾರೆ ಎಂಬುದನ್ನು ನೀವು ತಿಳಿದಿರಬೇಕು. 2022ರ ಅವಧಿಯಲ್ಲೂ ಪಿರಿಯಡ್ಸ್ ವಿಚಾರವಾಗಿ ಯಾವ ಹೆಣ್ಣು ಮಕ್ಕಳೂ ಬಹಿರಂಗವಾಗಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಆದ್ದರಿಂದ ಇದರ ಬಗ್ಗೆ ಎಲ್ಲರಿಗೂ ಪಾಠ ಅವಶ್ಯಕತೆ ಇದೆ ಎಂದು ವೈಷ್ಣವಿ ಹೇಳಿದ್ದರು.