Hayavadana Debut Movie: ಬೆಳ್ಳಿತೆರೆಯಲ್ಲಿ ಅದೃಷ್ಟಪರೀಕ್ಷೆಗೆ ಇಳಿದ ಕಿರುತೆರೆ ನಿರ್ದೇಶಕ ಹಯವದನ...ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಮನರಂಜನೆ  /  Hayavadana Debut Movie: ಬೆಳ್ಳಿತೆರೆಯಲ್ಲಿ ಅದೃಷ್ಟಪರೀಕ್ಷೆಗೆ ಇಳಿದ ಕಿರುತೆರೆ ನಿರ್ದೇಶಕ ಹಯವದನ...ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ

Hayavadana Debut Movie: ಬೆಳ್ಳಿತೆರೆಯಲ್ಲಿ ಅದೃಷ್ಟಪರೀಕ್ಷೆಗೆ ಇಳಿದ ಕಿರುತೆರೆ ನಿರ್ದೇಶಕ ಹಯವದನ...ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ

ಹಯವದನ ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟು ನಿಂತಿದ್ದಾರೆ. ತಮ್ಮ ಮೊದಲ ಸಿನಿಮಾಗೆ ಹಯವದನ ಸ್ಟ್ರಿಪ್ಟ್‌ ಪೂಜೆ ಮುಗಿಸಿದ್ದಾರೆ. ಈ ಚಿತ್ರದಲ್ಲಿ 'ಕಂಬ್ಳಿಹುಳ' ಸಿನಿಮಾ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸುತ್ತಿದ್ದಾರೆ.

ಮೊದಲ ಬಾರಿ ಸಿನಿಮಾ ನಿರ್ದೇಶನಕ್ಕೆ ಹೊರಟ ಕಿರುತೆರೆ ನಿರ್ದೇಶಕ ಹಯವದನ
ಮೊದಲ ಬಾರಿ ಸಿನಿಮಾ ನಿರ್ದೇಶನಕ್ಕೆ ಹೊರಟ ಕಿರುತೆರೆ ನಿರ್ದೇಶಕ ಹಯವದನ

ಸಿನಿಮಾಗಳಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲಿ ಕೂಡಾ ಅನೇಕ ನಿರ್ದೇಶಕರು ಹೆಸರು ಮಾಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳನ್ನು ನಿರ್ದೇಶಿಸಿರುವ ನಿರ್ದೇಶಕರು ನಂತರ ಸಿನಿಮಾಗಳತ್ತ ಕೂಡಾ ಮುಖ ಮಾಡಿದ್ದಾರೆ. ಇದೀಗ ಆ ಸಾಲಿಗೆ ಕಿರುತೆರೆ ನಿರ್ದೇಶಕ ಹಯವದನ ಕೂಡಾ ಸೇರಿಸಿದ್ದಾರೆ.

ಇದೀಗ ಹಯವದನ ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟು ನಿಂತಿದ್ದಾರೆ. ತಮ್ಮ ಮೊದಲ ಸಿನಿಮಾಗೆ ಹಯವದನ ಸ್ಟ್ರಿಪ್ಟ್‌ ಪೂಜೆ ಮುಗಿಸಿದ್ದಾರೆ. ಈ ಚಿತ್ರದಲ್ಲಿ 'ಕಂಬ್ಳಿಹುಳ' ಸಿನಿಮಾ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸುತ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಮಾತನಾಡಿದ ನಿರ್ದೇಶಕ ಹಯವದನ, ''ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಸಕ್ರಿಯನಾಗಿದ್ದೇನೆ. ಹಲವು ಸೂಪರ್ ಹಿಟ್ ಸೀರಿಯಲ್‌ಗಳನ್ನು ನಿರ್ದೇಶನ ಮಾಡಿದ್ದೇನೆ. ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ. ಇದೊಂದು ಸೋಷಿಯಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಸಿನಿಮಾ. ಅಪ್ಪ ಮಗನ ಸೆಂಟಿಮೆಂಟ್ ಚಿತ್ರದ ಮೈನ್ ಹೈಲೈಟ್.

ಸಾಮಾಜಿಕ ಜಾಲತಾಣಕ್ಕೆ ಅಡಿಕ್ಟ್ ಆಗಿರುವ ಮಕ್ಕಳು ಮತ್ತು ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಂಡಿರುವ ಪೋಷಕರ ನಡುವಿನ ಜನರೇಷನ್ ಗ್ಯಾಪನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ ಪ್ರೇಮಕಥೆ ಕೂಡಾ ಇದ್ದು, ಯುವಕರಿಗೆ ಸ್ಪಂದಿಸುವ, ಸ್ಪೂರ್ತಿಯಾಗುವ ಕಥೆ ಕೂಡಾ ಇದೆ. ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದಿದ್ದು ಜನವರಿ 15ಕ್ಕೆ ಸಿನಿಮಾ ಸೆಟ್ಟೇರಲಿದೆ. ಅಂಜನ್ ನಾಗೇಂದ್ರ, ನಮ್ಮ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಲಿದ್ದೇವೆ'' ಎಂದು ತಮ್ಮ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ಸ್‌ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ಅಡಿ ಪವನ್ ಸಿಮಿಕೇರಿ ಮತ್ತು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವ ಪ್ರಸಾದ್ ಸಂಗೀತ ಸಂಯೋಜನೆ, ನಟರಾಜ್ ಮದ್ದಾಲ ಕ್ಯಾಮೆರಾ ವರ್ಕ್, ರವಿಚಂದ್ರನ್ ಸಂಕಲನ ಈ ಚಿತ್ರಕ್ಕೆ ಇದೆ ನಾಯಕಿ, ಹಾಗೂ ಇತರ ಕಲಾವಿದರ ಆಯ್ಕೆ ಶೀಘ್ರದಲ್ಲೇ ನಡೆಯಲಿದ್ದು ಇದರ ಬಗ್ಗೆ ಮಾಹಿತಿ ಹಂಚಿಕೊಳುತ್ತೇನೆ ಎಂದು ಹಯವದನ ಹೇಳಿದ್ದಾರೆ. ಹಯವದನ, ಕಿರುತೆರೆಗಾಗಿ ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿ ಸಾಕ್ಷಿ, ಮಧುಬಾಲ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ಕನ್ನಡದಲ್ಲಿ ಹಿಟ್‌, ತೆಲುಗಿನಲ್ಲಿ ಫ್ಲಾಪ್‌...ಹಾಕಿದ ಬಂಡವಾಳವನ್ನೂ ಗಳಿಸುವಲ್ಲಿ ವಿಫಲವಾಯ್ತಾ ಸಿನಿಮಾ?

ಕನ್ನಡದ ಲವ್ ಮಾಕ್ಟೇಲ್‌, ತೆಲುಗಿನಲ್ಲಿ 'ಗುರ್ತುಂದಾ ಶೀತಕಾಲಂ' ಹೆಸರಿನಲ್ಲಿ ತಯಾರಾಗಿತ್ತು. ಈ ಚಿತ್ರವನ್ನು ನಾಗಶೇಖರ್‌ ಮೂವೀಸ್‌, ಮಣಿಕಂಠ ಎಂಟರ್‌ಟೈನ್ಮೆಂಟ್‌, ಶ್ರೀ ವೇದಾಕ್ಷರ ಮೂವೀಸ್‌ ಬ್ಯಾನರ್‌ ಅಡಿಯಲ್ಲಿ ಭಾವನಾ ರವಿ, ನಾಗಶೇಖರ್‌, ರಾಮಾರಾವ್‌ ಚಿಂತಪಲ್ಲಿ ಜೊತೆ ಸೇರಿ ನಿರ್ಮಿಸಿದ್ದರು. ಪೂರ್ತಿ ಸ್ಟೋರಿಗೆ ಇಲ್ಲಿ ಕ್ಲಿಕ್‌ ಮಾಡಿ

ಯಾರು ಏನಂದ್ರೂ ರಶ್ಮಿಕಾ ಜೊತೆ ಡೇಟ್‌ ಮಾಡುವ ಆಸೆ ಎಂದ ತಮಿಳು ಸ್ಟಾರ್‌ ನಟ!

ಈ ಟ್ರೋಲ್‌, ವಿವಾದಗಳ ನಡುವೆ ಸ್ಟಾರ್‌ ನಟರೊಬ್ಬರು, ನಾನು ರಶ್ಮಿಕಾ ಜೊತೆ ಡೇಟಿಂಗ್‌ ಮಾಡಬೇಕು ಎಂದು ಹೇಳಿಕೊಂಡಿದ್ದಾರೆ. ರಶ್ಮಿಕಾ, ನ್ಯಾಷನಲ್‌ ಕ್ರಷ್‌ ಎಂದೇ ಹೆಸರಾದವರು. ಸೌತ್‌ನಿಂದ ಬಾಲಿವುಡ್‌ಗೆ ಹೋಗಿ, ಅಲ್ಲಿ ಕೂಡಾ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದವರು. ಇದೀಗ ತಮಿಳು ನಟನಿಗೆ ರಶ್ಮಿಕಾ ಜೊತೆ ಡೇಟ್‌ ಹೋಗೋ ಆಸೆಯಂತೆ. ಇಲ್ಲಿದೆ ಸಂಪೂರ್ಣ ಮಾಹಿತಿ.

Whats_app_banner