ಕನ್ನಡ ಸುದ್ದಿ  /  ಮನರಂಜನೆ  /  Akka Anu: ಅವಾಚ್ಯ ಟ್ರೋಲ್‌ ನೆನೆದು ಕಣ್ಣೀರಿಟ್ಟ ಕೆಚ್ಚೆದೆಯ ಕನ್ನಡತಿ ಅಕ್ಕ ಅನು; ಅಳಬ್ಯಾಡಕ್ಕ ಎಂದು ಧೈರ್ಯ ತುಂಬಿದ್ರು ಫ್ಯಾನ್ಸ್‌

Akka Anu: ಅವಾಚ್ಯ ಟ್ರೋಲ್‌ ನೆನೆದು ಕಣ್ಣೀರಿಟ್ಟ ಕೆಚ್ಚೆದೆಯ ಕನ್ನಡತಿ ಅಕ್ಕ ಅನು; ಅಳಬ್ಯಾಡಕ್ಕ ಎಂದು ಧೈರ್ಯ ತುಂಬಿದ್ರು ಫ್ಯಾನ್ಸ್‌

ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಸೋಷಿಯಲ್‌ ವರ್ಕ್‌ನಿಂದಾಗಿ ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ಫೇಮಸ್‌. ಇದೀಗ ಅಕ್ಕ ಅನು ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಕಣ್ಣಿರಿಟ್ಟಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ನಡೆಯುವ ಟ್ರೋಲ್‌ಗಳ ಕುರಿತು ಧ್ವನಿ ಎತ್ತಿದ್ದಾರೆ.

Akka Anu: ಅವಾಚ್ಯ ಟ್ರೋಲ್‌ ನೆನೆದು ಕಣ್ಣೀರಿಟ್ಟ ಕೆಚ್ಚೆದೆಯ ಕನ್ನಡತಿ ಅಕ್ಕ ಅನು
Akka Anu: ಅವಾಚ್ಯ ಟ್ರೋಲ್‌ ನೆನೆದು ಕಣ್ಣೀರಿಟ್ಟ ಕೆಚ್ಚೆದೆಯ ಕನ್ನಡತಿ ಅಕ್ಕ ಅನು

ಬೆಂಗಳೂರು: ಕರ್ನಾಟದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ಕುರಿತು ನಡೆಯುವಂತ ಅವಾಚ್ಯ ಟ್ರೋಲ್ ಗಳು ಹಾಗೂ ಪೇಡ್ ಪ್ರಮೋಷನ್ ಟ್ರೋಲ್‌ಗಳು ಬ್ಯಾನ್ ಆಗಬೇಕು ಎಂದು ಸಾಮಾಜಿಕ ಕೆಲಸಗಳಿಂದ ಜನಪ್ರಿಯತೆ ಪಡೆದಿರುವ ಅಕ್ಕ ಅನು ಆಗ್ರಹಿಸಿದ್ದಾರೆ. ಆನ್‌ಲೈನ್‌ ಟ್ರೋಲ್‌ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಕಣ್ಣಿರಿಟ್ಟಿದ್ದಾರೆ. ಇವರಿಗೆ ಅವರ ಅಭಿಮಾನಿಗಳು ಧೈರ್ಯ ತುಂಬಿದ್ದು, "ಅಳಬ್ಯಾಡಕ್ಕ ನಾವಿದ್ದೇವೆ" ಎಂದಿದ್ದಾರೆ.

ಟ್ರೋಲ್‌ ವಿರುದ್ಧ ಅಕ್ಕ ಅನು ಆಕ್ರೋಶ

"ಕರ್ನಾಟದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ಕುರಿತು ನಡೆಯುವಂತ ಅವಾಚ್ಯ ಟ್ರೋಲ್‌ಗಳು ಹಾಗೂ ಪೇಡ್ ಪ್ರಮೋಷನ್ ಟ್ರೋಲ್ ಗಳು ಬ್ಯಾನ್ ಆಗಬೇಕು ಏಕಾಏಕಿಯಾಗಿ ಯಾರ್ ಬೇಕ್ ಅವರ ಬಗ್ಗೆ ತುಚ್ಛವಾಗಿ ಬಿಂಬಿಸಿ ಮರ್ಯಾದೆ ಹತ್ಯೆಯಾಗುವಂತ ಪ್ರಕರಣಗಳು ನಿಲ್ಲಬೇಕು. ಇದೆ ಮುಂದುವರೆದರೆ ನಿಜ ಸ್ವಹತ್ಯೆಗಳು ಆಗುವುದು ಖಂಡಿತ.ಅಪರಿತ ವ್ಯಕ್ತಿಗಳು ಯಾರೊಬ್ಬರ ಬಗ್ಗೆ ತಿಳಿಯದೆ ಅವರ ಬಗ್ಗೆ ತುಚ್ಛವಾಗಿ ಮಾತಾಡುವಂತ ಹಾಗೂ ಬಿಂಬಿಸುವಂತ ಪ್ರಕರಣಗಳು ಶೀಘ್ರದಲ್ಲೇ ಬ್ಯಾನ್ ಆಗಬೇಕು" ಎಂದು ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಆಗ್ರಹಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಡಿಯೋದಲ್ಲಿ ಕಣ್ಣೀರಿಟ್ಟ ಅಕ್ಕ ಅನು

ನಾವು ಹುಡುಗಿಯರಾಗಿ ಹುಟ್ಟಿದ್ದೇವೆ. ಹುಡುಗರ ಹಾಗೆ ಸಮಾಜದಲ್ಲಿ ಬದುಕುವುದನ್ನು ಸಹಿಸಲು ಕೆಲವರಿಗೆ ಆಗುತ್ತಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟದಾಗಿ ಯಾಕೆ ಕಾಮೆಂಟ್‌ ಮಾಡುತ್ತಾರೆ. ನಮಗೆ ಕಷ್ಟನಷ್ಟ ಸಾವಿರ ಇರುತ್ತದೆ. ನೀವು ಬಂದು ಕೆಟ್ಟದಾಗಿ ಕಾಮೆಂಟ್‌ ಹಾಕುವುದರಿಂದ, ಟ್ರೋಲ್‌ ಮಾಡುವುದರಿಂದ ನಿಮಗೆ ಏನೂ ಸಿಗುವುದಿಲ್ಲ. ಮನುಷ್ಯ ಜೀವ ಯಾವಾಗ ಹೋಗುತ್ತದೆ ಎಂದು ಗೊತ್ತಿಲ್ಲ. ಯಾಕೆ ಇನ್ನೊಬ್ಬರಿಗೆ ಹೀಗೆ ಕಷ್ಟ ಗೊತ್ತಿಲ್ಲ. ಸಮಾಜದಲ್ಲಿ ಹೆಸರು ಮಾಡಬೇಕೆಂದು ಎಂಬ ಆಸೆಯೂ ಇಲ್ಲ. ಚೆನ್ನಾಗಿ ಬದುಕಬೇಕು, ಈ ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯ ಪ್ರಜೆಯಾಗಿ ಬದುಕಬೇಕು ಎನ್ನುವ ಬಯಕೆ ಅಷ್ಟೇ. ನಮ್ಮಿಂದ ತಪ್ಪು ಮಾಡಿದ್ರೆ ದೂರು ನೀಡಿ. ಅದನ್ನು ಬಿಟ್ಟು ಸೋಷಿಯಲ್‌ ಮೀಡಿಯಾ ಬಿಟ್ಟುಬಿಡಿ ಎಂದೆಲ್ಲ ಕಾಮೆಂಟ್‌ ಮಾಡಬೇಡಿ ಎಂದು ಅಕ್ಕ ಅನು ಟ್ರೋಲಿಗರಿಗೆ ಹೇಳಿದ್ದಾರೆ. ಈ ವಿಡಿಯೋದಲ್ಲಿ ಟ್ರೋಲಿಗರಿಂದ ಆಗುವ ತೊಂದರೆಗಳು, ಸೋಷಿಯಲ್‌ ವರ್ಕ್‌ನ ಅನುಭವಗಳನ್ನು ಅಕ್ಕ ಅನು ಬಿಚ್ಚಿಟ್ಟಿದ್ದಾರೆ.

"ನನ್ನ ಬಗ್ಗೆ ಮಾತ್ರವಲ್ಲ. ಸುಮಾರಷ್ಟು ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ನೀವು ಮಾತನಾಡ್ತಿರಿ. ನನಗೆ ಚಿಕ್ಕಪುಟ್ಟ ಕಾಮೆಂಟ್‌ ಸಹಿಸಲು ಆಗ್ತಿಲ್ಲ. ಅದೆಷ್ಟೋ ಜನರಿಗೆ ಎಷ್ಟು ಕೆಟ್ಟದಾಗಿ ಕಾಮೆಂಟ್‌ ಮಾತನಾಡ್ತಿರಿ. ಇದು ಒಳ್ಳೆಯ ಬೆಳವಣಿಗೆ ಅಲ್ಲ" ಎಂದು ಅಕ್ಕ ಅನು ಹೇಳಿದ್ದಾರೆ.

ಅಳಬ್ಯಾಡಕ್ಕ ಎಂದು ಧೈರ್ಯ ತುಂಬಿದ್ರು ಫ್ಯಾನ್ಸ್‌

ಅಕ್ಕ ಅನು ವಿಡಿಯೋಗೆ ಸಾಕಷ್ಟು ಅಭಿಮಾನಿಗಳು ಕಾಮೆಂಟ್‌ ಮಾಡಿ ಧೈರ್ಯ ತುಂಬಿದ್ದಾರೆ. "ಅಕ್ಕ ಯಾರು ಏನಂದ್ರು ಹೇಳು, ನಾವಿದ್ದೀವಿ. ಅಕ್ಕ ನೀವು ಯಾವುದ ತಪ್ಪು ಮಾಡಿಲ್ಲ. ಯಾರೋ ಏನೋ ಅಂದ್ರು ಅಂತ ತಲೆ ಕೆಡಿಸ್ಕೋಬೇಡಿ. ನಾವಿದ್ದೀವಿ ನೀವು ಭಯಪಡಬೇಡಿ. ಜೈ ಅನು ಅಕ್ಕ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಅನು ಮಾ ಯಾಕಮ್ಮ ಏನಾಯ್ತು? ಯಾರವ್ರು ಟ್ರೋಲ್ ಮಾಡಿದ ಕೆಟ್ಟ ಕಾಮೆಂಟ್ ಹಾಕಿದವರು. ಅವರಮ್ಮನು ಒಂದು ಹೆಣ್ಣು ಅವರಕ್ಕ ತಂಗಿ ಹೆಣ್ಣು ಅನ್ನೋದು ಮರೆತಿದಾರೊ ಹೆಂಗೆ? ಜಿ ಕನ್ನಡದಲ್ಲಿ ನೋಡಿ ಖುಷಿಯಾಗಿ ಹೆಮ್ಮೆ ಪಟ್ಟಿದ್ದೆ, ಎಷ್ಟೊ ಹೆಣ್ಮನಸ್ಸುಗಳಿಗೆ ಸ್ಫೂರ್ತಿ ತುಂಬಿದ ಹೆಣ್ಮಗಳ ಕಣ್ಣಲ್ಲಿ ನೀರು ತರಿಸಿದ್ರಾ? ಅಂಥವ್ರು ಜೀವನದಲ್ಲಿ ಉದ್ಧಾರವಾಗಲ್ಲ ಬಿಡು ಮಾ,, ರಾಯರು ಎಲ್ಲ ನೋಡ್ತಿದಾರೆ, ದಯವಿಟ್ಟು ಅಳಬೇಡ ಮಾ,, ಧೈರ್ಯವಾಗಿರು" ಎಂದು ಇನ್ನೊಬ್ಬರು ಧೈರ್ಯ ತುಂಬಿದ್ದಾರೆ.

"ಅಳೋದು ಬಿಡ್ರಿ ಈ ಜನ ಒಳ್ಳೇದಕ್ಕೂ ಹೆಸರ ಇಡ್ತಾರೆ ಕೆಟ್ಟದಕ್ಕೂ ಹೆಸರ ಇಡತಾರೆ. ನಮ್ಮ ಜೊತೆ ಯಾರ ಇದ್ದಾರೆ ನೋಡ್ಕೊಂಡು ಆರಾಮಾಗಿ ಇರಬೇಕು. ಸಾವಿರ ಜನರಲ್ಲಿ ನೂರ್ ಜನ ಕೆಟ್ಟದ ಬಯಸೋರೆ ಇರ್ತಾರೆ ಅವರನ್ನ ಬಿಟ್ಟ ಬಿಡಿ 900 ಜನ ನಿಮ್ಮ ಬೆನ್ನ ಹಿಂದ ನಿಂತಿದ್ದಾರೆ ಅವರ ಬಗ್ಗೆ ಯೋಚನೆ ಮಾಡಿ .. ದಯವಿಟ್ಟು ಅಳಬೇಡಿ" ಎಂದು ಇನ್ನೊಬ್ಬರು ಧೈರ್ಯ ತುಂಬಿದ್ದಾರೆ. "ಕರ್ನಾಟಕದ ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ನೀವು ಒಬ್ಬರು ಅಕ್ಕಾ. ಅದೆಷ್ಟೋ ಹೆಣ್ಣುಮಕ್ಕಳಿಗೆ ಮಾರ್ಗದರ್ಶಕರಾಗಿದ್ದೀರ. ಅಳಬೇಡಿ ಅಕ್ಕಾ..." ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. "ರೀ ಮೇಡಂ ಏನಾಯ್ತು ಅ ನೀವು ಯಾವತ್ತು ಕಣ್ಣಲ್ಲಿ ನೀರು ಹಾಕಬೇಡಿ ನಾವು ನಿಮ್ಮ ಜೋತೆ ಯಾವಾಗಲು ಇರ್ತಿವಿ....ಒಳ್ಳೆಯವರಿಗೆ ಯಾವತಿದ್ರು ಕೆಟ್ಟುದೆ ಹಾಗೋದು ಸಮಯ ಅನ್ನೊಂದು ಬಂದೆ ಬರುತ್ತೆ ನಂಬಿಕೆಗೆ ಯಾವತ್ತು ಮೊಸ ಹಾಗೋಲ್ಲ ನೀವು ಧೈರ್ಯವಾಗಿರಿ" ಹೀಗೆ ಸಾಕಷ್ಟು ಅಭಿಮಾನಿಗಳು ಅಕ್ಕ ಅನು ಬೆಂಬಲಕ್ಕೆ ನಿಂತಿದ್ದಾರೆ.

ಇತ್ತೀಚೆಗೆ ಕರಟಕ ದಮನಕ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್‌ ಕುಮಾರ್‌ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್‌ ಮಾಡುವವರು ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಬುಲ್ಲಿಂಗ್‌, ನಿಂದನೆ ಇತ್ಯಾದಿಗಳು ಹೆಚ್ಚಾಗುತ್ತಿರುವ ಕುರಿತು ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.