Viral Song: ಎಲ್ಲೆಡೆ ವೈರಲ್ ಆಗ್ತಿದೆ ದೋಸಾ ಇಡ್ಲಿ ಸಾಂಬಾರ್.. ಚಟ್ನಿ ಚಟ್ನಿ ಹಾಡು; ಸೋಷಿಯಲ್ ಮೀಡಿಯಾದಲ್ಲಿ ಚಟ್ನಿ ಸಾಂಬಾರ್‌ನದ್ದೇ ಹವಾ
Dosa Idli Sambar Chutney Chutney Song: ಸೋಷಿಯಲ್ ಮೀಡಿಯಾದಲ್ಲಿ ದೋಸಾ ಇಡ್ಲಿ ಸಾಂಬಾರ್ ಚಟ್ನಿ ಚಟ್ನಿ... ಎಂಬ ಹಾಡೊಂದು ವೈರಲ್ ಆಗಿದೆ. ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು, ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ.

Dosa Idli Sambar Chutney Chutney Song: ಸೋಷಿಯಲ್ ಮೀಡಿಯಾದಲ್ಲಿ ದೋಸಾ ಇಡ್ಲಿ ಸಾಂಬಾರ್ ಚಟ್ನಿ ಚಟ್ನಿ... ಎಂಬ ಹಾಡೊಂದು ವೈರಲ್ ಆಗಿದೆ. ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು, ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಹಿಂದೊಮ್ಮೆ ಕರ್ನಾಟಕದಲ್ಲಿ ನಾನೂ ನಂದಿನಿ ಬೆಂಗಳೂರಿಗೆ ಬಂದಿನಿ ಎಂಬ ಹಾಡು ವೈರಲ್ ಆದಂತೆ , ಬೆಳ್ಳುಳ್ಳಿ ಕಬಾಬ್ ವೈರಲ್ ಆದಂತೆ ಈ "ದೋಸಾ ಇಡ್ಲಿ ಸಾಂಬಾರ್.. ಚಟ್ನಿ ಚಟ್ನಿ" ಹಾಡು ವೈರಲ್ ಆಗುತ್ತಿದೆ.
ದಕ್ಷಿಣ ಭಾರತದಲ್ಲಿ ದೋಸೆ, ಇಡ್ಲಿ, ಸಾಂಬಾರ್, ಚಟ್ನಿ ಸಖತ್ ಫೇಮಸ್. ದೋಸೆಯನ್ನು ಸಾಂಬಾರ್‌ನಲ್ಲಿ ತಿಂದರೆ ಮಸ್ತ್ ಇರುತ್ತದೆ. ಅದೇ ರೀತಿ ಚಟ್ನಿಯಲ್ಲಿ ತಿಂದರೂ ಸೂಪರ್ ಇರುತ್ತದೆ. ದೋಸೆಯ ಜತೆಗೆ ಸಾಂಬಾರ್ ಮತ್ತು ಚಟ್ನಿ ಎರಡೂ ದೊರಕಿದರೆ ಪರಮಾನಂದ. ಅದೇ ರೀತಿ, ಇಡ್ಲಿಗೂ ಚಟ್ನಿ ಅಥವಾ ಸಾಂಬಾರ್ ಸೂಪರ್ ಕಾಂಬಿನೇಷನ್. ಚಟ್ನಿ ಮತ್ತು ಸಾಂಬಾರ್ ಎರಡೂ ಇದ್ದಾಗ ಇಡ್ಲಿ ಸವಿಯುವ ಸೊಗಸೇ ಬೇರೆ. ಇದೀಗ ದೋಸಾ ಇಡ್ಲಿ ಸಾಂಬಾರ್.. ಚಟ್ನಿ ಚಟ್ನಿ ಹಾಡು ವೈರಲ್ ಆಗುತ್ತಿದೆ.
ಮೊದಲಿಗೆ ದೋಸಾ ಇಡ್ಲಿ ಸಾಂಬಾರ್.. ಚಟ್ನಿ ಚಟ್ನಿ ಒರಿಜಿನಲ್ ಹಾಡಿನ ಬಗ್ಗೆ ತಿಳಿದುಕೊಳ್ಳೋಣ. ಯೂಟ್ಯೂಬ್‌ನಲ್ಲಿ ಹುಡುಕಿದಾಗ ಈ ಹಾಡಿನ ಒರಿಜಿನಲ್ "ಗಗನ್‌ದೀಪ್ ಸಿಂಗ್ ಮ್ಯೂಸಿಕ್" ಯೂಟ್ಯೂಬ್ ಚಾನೆಲ್‌ನಲ್ಲಿ ದೊರಕಿದೆ. ಮೈಕಲ್ ಮತ್ತು ಗಾನಾ ಟೋನಿ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದೆ. ಇದೇ ಮೂಲ ವಿಡಿಯೋ ಎಂದು ಹಿಂದೂಸ್ತಾನ್ ಟೈಮ್ಸ್‌ಗೆ ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಈ ಹಾಡಿನ ಲಿರಿಕ್ಸ್ ಕೂಡ ಈ ಚಾನೆಲ್‌ನಲ್ಲಿ ದೊರಕಿದೆ.
ದೋಸಾ ಇಡ್ಲಿ ಸಾಂಬಾರ್.. ಚಟ್ನಿ ಚಟ್ನಿ ಹಾಡಿನ ಲಿರಿಕ್ಸ್
ದೋಸಾ ಇಡ್ಲಿ ಸಾಂಬಾರ್.. ಚಟ್ನಿ ಚಟ್ನಿ
ದೋಸಾ ಇಡ್ಲಿ ಸಾಂಬಾರ್.. ಚಟ್ನಿ ಚಟ್ನಿ
ಥೇಡಿ ಪುಡಿಚ್ಚಾ ಹೋಟೆಲ್ಲು (ನನಗೆ ಇಷ್ಟವಾದ ಹೋಟೆಲು)
ವಂಗಿನು ವಂದೆನು ಪಾರ್ಸೆಲ್ (ಮನೆಗೆ ಪಾರ್ಸೆಲ್ ತಂದೆ)
ನಲ್ಲಾ ಹೋಟೆಲ್ ತೆರಿಯಿಲ್ಲಾ (ಒಳ್ಳೆಯ ಹೋಟೆಲ್ ಎಂದು ಗೊತ್ತಿಲ್ಲ)
ವನಿಗು ವಂದಾಧು ತೆರಿಯಲಾ (ನನಗೆ ಅದೆಲ್ಲ ಗೊತ್ತಾಗದು)
ದೋಸಾ ಇಡ್ಲಿ ಸಾಂಬಾರ್.. ಚಟ್ನಿ ಚಟ್ನಿ
ದೋಸಾ ಇಡ್ಲಿ ಸಾಂಬಾರ್.. ಚಟ್ನಿ ಚಟ್ನಿ (ಮೂರು ಬಾರಿ ಇದೇ ಸಾಲುಗಳ ಪುನಾರವರ್ತನೆ
ದೋಸ ಇಡ್ಲಿ ಸಾಂಬಾರ್
ದೋಸಾ ಇಡ್ಲಿ ಸಾಂಬಾರ್.. ಚಟ್ನಿ ಚಟ್ನಿ
ಹೀಗೆ ಇದೇ ಸಾಲುಗಳಲ್ಲಿ ಚಂದದ ಹಾಡು ಸೃಷ್ಟಿಸಲಾಗಿದೆ. ನಟಿ ಶಿಲ್ಪಾ ಶೆಟ್ಟಿಸೇರಿದಂತೆ ಹಲವು ಜನರು ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆಲ್ಲೂ ದೋಸಾ ಹಾಡು ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
ಈ ಹಾಡಿಗೆ ವಿಶೇಷವಾಗಿ ಕನ್ನಡಿಗರು ಕಾಮೆಂಟ್ ಮಾಡುತ್ತಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡಿನ ಜನರು ಕೂಡ ದೋಸ ಇಡ್ಲಿ ಸಾಂಬಾರ್ ಎನ್ನುತ್ತಿದ್ದಾರೆ. ಬೇರೆ ರಾಜ್ಯದವರೂ ಕೂಡ ಈ ಹಾಡಿನೊಂದಿಗೆ ಇಡ್ಲಿ ದೋಸೆ ಹಿಡಿದುಕೊಂಡು ರೀಲ್ಸ್ ಮಾಡುತ್ತಿದ್ದಾರೆ.
ಇಡ್ಲಿ ಪ್ರಿಯರು ಈ ಲೇಖನ ಓದಿ: ಮನೆಯಲ್ಲಿ ಮಾಡಿದ ಇಡ್ಲಿ ಗಟ್ಟಿಯಾಗುತ್ತಾ; ಮೃದುವಾದ, ಸ್ಪಂಜಿನಂತಿರುವ ಇಡ್ಲಿ ತಯಾರಿಸಲು ಇಲ್ಲಿದೆ 5 ಟಿಪ್ಸ್
