Akka Anu: ನನ್ನ ಮೇಲೆ ಯಾಕಿಷ್ಟು ಸೇಡು! ದಯವಿಟ್ಟು ನಮ್ಮ ಪಾಡಿಗೆ ಇರಲು ಬಿಡಿ; ಕೈ ಮುಗಿದು ಬೇಡಿದ ಅಕ್ಕ ಅನು, ಅಷ್ಟಕ್ಕೂ ಆಗಿದ್ದೇನು?
Akka Anu about Fake Accounts: ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಮಾಜ ಸೇವೆಯಿಂದಲೇ ಸದಾ ಸುದ್ದಿಯಲ್ಲಿರುವ ಅಕ್ಕ ಅನುಗೆ ಅದೇ ಸಾಮಾಜಿಕ ಮಾಧ್ಯಮ ಮುಳುವಾಗಿದೆ. ಅಕ್ಕ ಅನು ಹೆಸರಲ್ಲಿ ನೂರಾರು ನಕಲಿ ಖಾತೆಗಳನ್ನು ತೆರೆದು, ನಿಂದಿಸುವ ಕೆಲಸ ವಾಗುತ್ತಿದೆ. ಈ ಬಗ್ಗೆ ಬೇಸರದ ಪೋಸ್ಟ್ ಹಂಚಿಕೊಂಡಿದ್ದಾರವರು.
Akka Anu: ಸಾಮಾಜಿಕ ಮಾಧ್ಯಮದ ಬಳಕೆ ಹೆಚ್ಚಾದಂತೆ, ಅದರಿಂದ ಸಮಸ್ಯೆಗಳೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ದಿಢೀರ್ ಹೆಸರು ಮಾಡಬೇಕು ಅನ್ನುವ ಕಾರಣಕ್ಕೋ, ಅಥವಾ ಅಲ್ಲಿ ಏನೇ ಮಾಡಿದರೂ ಹೇಳುವವರಿಲ್ಲ ಎಂಬ ಕಾರಣಕ್ಕೂ ಅದರ ದುರ್ಬಳಕೆಯೇ ಹೆಚ್ಚಾಗುತ್ತಿದೆ. ಅಸಲಿ ಮುಖವನ್ನು ಮುಚ್ಚಿಟ್ಟು, ಇಲ್ಲದ ಹೆಸರಿನ ಸೋಷಿಯಲ್ ಮೀಡಿಯಾ ಖಾತೆ ತೆರೆದು ಕೆಟ್ಟ ಕಾಮೆಂಟ್ ಹಾಕುವ ಮನಸ್ಥಿತಿಗಳು ಹೆಚ್ಚಾಗಿವೆ. ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆಯಾಗಿದ್ದೂ ಇದೇ ಕಾರಣಕ್ಕೆ ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತಿರುವ ಸಂಗತಿ. ಈಗ ಸಮಾಜ ಸೇವಕಿ ಅಕ್ಕ ಅನೂಗೂ ಇಂಥದ್ದೆ ಸಮಸ್ಯೆ ಎದುರಾಗಿದೆ. ಅವರ ಹೆಸರಿನಲ್ಲಿ ನೂರಾರು ನಕಲಿ ಖಾತೆಗಳನ್ನು ತೆರೆದು, ದುರ್ಬಳಕೆ ಜತೆಗೆ ಸಾಮಾಜಿಕ ನಿಂದನೆ ಮಾಡುತ್ತಿದ್ದಾರೆ. ಅವರ ಹೆಸರಿಗೆ ಮಸಿ ಬಳಿಯುವ ಕೆಲಸಗಳಾಗುತ್ತಿವೆ. ಈ ಸಂಬಂಧ ಮನನೊಂದಿದ್ದಾರೆ ಅನು.
ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್, ಮತ್ತು ಪೋಸ್ಟ್‌ಗಳನ್ನು ಮಾಡುವ ವರ್ಗ ಒಂದೆಡೆಯಾದರೆ, ಇನ್ನೊಂದು ಕಡೆ ಪ್ರಭಾವಿಗಳ ಹೆಸರಿನ ಸಾಮಾಜಿಕ ಮಾಧ್ಯಮಗಳ ನಕಲಿ ಖಾತೆ ತೆರೆದು, ಅಲ್ಲಿಯೂ ಸಾರ್ವಜನಿಕವಾಗಿ ಮಾನಹಾನಿ ಮಾಡುವ ಘಟನೆಗಳು ನಡೆದ ಉದಾಹರಣೆಗಳು ಸಾಕಷ್ಟಿವೆ. ಕಳೆದ ಕೆಲ ದಿನಗಳ ಹಿಂದಷ್ಟೇ ಕಟು ಕಾಮೆಂಟ್‌ನಿಂದಲೇ ಅಕ್ಕ ಅನು ಅವರಿಗೆ ಮಾನಸಿಕ ಚಿತ್ರಹಿಂಸೆ ನೀಡಿದ್ದ ವ್ಯಕ್ತಿ ವಿರುದ್ಧ ಅವರು ದೂರು ನೀಡಿದ್ದರು. ದೂರಿನ ಬಳಿಕ ಆ ವ್ಯಕ್ತಿ ವಿಡಿಯೋ ಮೂಲಕ ಕ್ಷಮೆ ಕೇಳಿದ್ದ. ಇದೀಗ ಇದೇ ಅಕ್ಕ ಅನು ಅವರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ಕ ಅನು ಪೋಸ್ಟ್‌ನಲ್ಲಿ ಏನಿದೆ?
"ಪದೇಪದೆ ಈ ವಿಚಾರವನ್ನು ಹಂಚಿಕೊಳ್ಳಲು ವಿಷಾದ ವ್ಯಕ್ತಪಡಿಸುತ್ತೇನೆ. ಯಾವುದೇ ಹಿನ್ನೆಲೆ ಇಲ್ಲದೆ ಏನೋ ಮನಶಾಂತಿ ಹಾಗೂ ಸಮಾಜದಲ್ಲಿ ಒಂದು ಚಿಕ್ಕ ಬದಲಾವಣೆ ನನ್ನಿಂದ ಆಗ್ಲಿ ಅಂತ ಒಂದಿಷ್ಟು ಚಿಕ್ಕ ಕೆಲಸಗಳನ್ನು ಮಾಡಿದೆ. ಈಗ ಅದುವೇ ನನಗೆ ಮುಳ್ಳು ಆಗಿದೆ. ಈ ಸೋಷಿಯಲ್ ಮೀಡಿಯಾದಲ್ಲಿ ಜನ ಮರುಳೋ, ಜಾತ್ರೆ ಮರುಳೋ ಅಂತ ಸ್ವಲ್ಪ ಹೆಸರುವಾಸಿ ಆಗಿದ್ದೇ ತಡ, ಕೆಲವ್ರು ನಮ್ಮ ಮೇಲೆ ಇರುವ ಸೇಡಿಗಾಗಿ ಅಭಿಮಾನಿ ಅನ್ನುವ ಪಟ್ಟವನ್ನು ಕಟ್ಟಿಕೊಂಡು, ಸುಳ್ಳು ಖಾತೆಗಳನ್ನು ಮಾಡಿ, ನಮ್ಮ ಹೆಸರಿನಲ್ಲಿ ಪ್ರತಿದಿನವೂ ಕೆಟ್ಟ ಕೆಲಸ ಮಾಡ್ತಾ ನಮ್ಮ ನೆಮ್ಮದಿಯನ್ನು ಹದಗೆಡಿಸಿ ಬಿಟ್ಟಿದ್ದಾರೆ."
ನಮ್ಮ ಪಾಡಿಗೆ ನಮ್ಮನ್ನು ಬಿಡಿ..
"ಸುಳ್ಳು ಖಾತೆಗಳಿಗೆ ಎಷ್ಟು ಕೇಳಿದ್ರು, ಹೆಸರು ಬದಲಾವಣೆ ಆಗಲಿ ಮಾಡ್ತಾ ಇಲ್ಲ. ದಿನದಿಂದ ದಿನಕ್ಕೆ ಫಾಲೋವರ್ಸ್ ಲೈಕ್ಸ್‌ಗಾಗಿ ನಮ್ಮ ಹೆಸರನ್ನು ಬಳಸಿಕೊಂಡು ನಮ್ಮನ್ನು ಗೊಂದಲಕ್ಕೆ ಈಡು ಮಾಡುತ್ತಿದ್ದೀರಿ. ಸಹೋದದರೇ ಬಹಳ ಭಕ್ತಿಯಿಂದ ಕೇಳಿಕೊಳ್ಳುವೆ. ನನ್ನ ಹೆಸರಿನ ಖಾತೆಗಳನ್ನು ನೀವು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಿ. ಒಂಚೂರು ನನ್ನ ಉತ್ತಮ ಭವಿಷ್ಯ ಹಾಗೂ ಒಳ್ಳೆಯ ದಿನಗಳಿಗೆ ನಿಮ್ಮ ಅಳಿಲು ಸೇವೆ ಅಂತ ತಿಳಿದು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ" ಎಂದು ಕಳಕಳಿಯಿಂದ ಅನ್ನು ಬೇಡಿಕೊಂಡಿದ್ದಾರೆ.
ಅಕ್ಕನ ಮಾತಿಗೆ ನೆಟ್ಟಿಗರ ಪ್ರತಿಕ್ರಿಯೆ ಹೀಗಿದ್ದವು..
ಸೋಷಿಯಲ್ ಮೀಡಿಯಾದಲ್ಲಿ ಈ ಬೇಸರದ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ, ಅವರ ಆ ಪೋಸ್ಟ್‌ಗೆ ನೂರಾರು ಮಂದಿ ಕಾಮೆಂಟ್ ಹಾಕಿದ್ದಾರೆ. ನಾವು ನಿಮ್ಮ ಜತೆಗಿದ್ದೇವೆ. ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ ಎಂದೂ ಹೇಳಿಕೊಂಡಿದ್ದಾರೆ. ಹೀಗಿವೆ ಆಯ್ದ ಕೆಲವು ಕಾಮೆಂಟ್‌ಗಳು.
- ಅದು ಕೆಲವರಿಗೆ ಅಂಟಿಕೊಂಡಿರುವ ಮಾನಸಿಕ ರೋಗವಿದ್ದಂತೆ ಅದು ಅಷ್ಟೋಂದು ಸರಳವಾಗಿ ಗುಣವಾಗುವುದಿಲ್ಲ. ಹಾಗೆ ಬಿಟ್ಟರೆ ಉಲ್ಬಣಿಸುತ್ತದೆ, ಕಡಿಮೆಯಾಗಲು ಸಮಯ ತೆಗೆದುಕೊಳ್ಳುತ್ತದೆ.
- ಈ ಮೋಸದ ಜಗತ್ತಿನಲ್ಲಿ ಅಂಥವರು ತುಂಬಾ ಜನ ಇದ್ದಾರೆ. ಅವ್ರ ಬಗ್ಗೆ ತಲೆ ಕೆಡ್ಸಕೊಂಡು ಕುಂತರೆ ನಿನ್ನ ಕನಸು ನನಸು ಆಗುವುದಿಲ್ಲ. ನಿನ್ನ ಕನಸು ನನಸು ಆಗಬೇಕೆಂದ್ರೆ ನೀನು ಅವ್ರ ಬಗ್ಗೆ ಚಿಂತೆ ಮಾಡೋದನ್ನ ಬಿಟ್ಟು, ನಿನ್ನ ಕನಸಿನ ಬಗ್ಗೆ ಚಿಂತೆ ಮಾಡು ಅಕ್ಕ. ಅವಾಗ ನಿನಗೆ ತಕ್ಕ ಪ್ರತಿ ಫಲ ಸಿಗುತ್ತೆ.
- ನಿಮ್ಮ ಜೊತೆ ಕರ್ನಾಟಕದ ಜನತೆ ಇದ್ದಾರೆ. ಯಾವ್ದಕ್ಕೂ ತಲೆಕೇಡಿಸಿಕೊಳಬೇಡಿ. ನಿಮ್ಮ ಕೆಲಸ ನೀವು ಮುಂದುವರೆಸಿ.
- ಅಕ್ಕ ಇಲ್ಲಿ ಕೇಳಿ , ನೀ ಚಿಗುರುತ್ತಿ ಎಂದು ತಿಳಿದಾಗ ಜನರು ನಿನ್ನನ್ನು ಚಿವುಟಲು ಪ್ರಯತ್ನಿಸುತ್ತಾರೆ. ಅವರನ್ನು ಎದುರಿಸಿ ನೀ ಮರವಾಗಿ ಬೆಳೆದು ನಿಲ್ಲು ಅವರೇ ನಿನ್ನ ನೆರಳ ಬಯಿಸಿ ಬರುತ್ತಾರೆ.
- ನಾಯಿಗಳು ಬೋಗಳಿದ್ರೆ ದೇವಲೋಕ ಹಾಳು ಆಗುವುದಿಲ್ಲ ಅಕ್ಕ
- ಬೊಗಳೋ ನಾಯಿಗಳು ಬೊಗಳತಾನೇ ಇರ್ತವೆ ಬಿಡಿ ಅಕ್ಕ. ನಾವ್ ನಿಮ್ ಜೊತೆ ಇರ್ತೇವೆ
- ಸಮಾಜದಲ್ಲಿ ಒಳ್ಳೇದು ಮಾಡೋಕೆ ಹೋದ್ರೆ,, ಕಷ್ಟ್ಟಗಳು ತಪ್ಪಿದಲ್ಲ,, ಧೈರ್ಯವಾಗಿ ಇರಿ
- ಕೆಲವ್ರು ಮಾಡೋ ತಪ್ಪುಗಳಿಂದ ಎಲ್ಲಾ ಫ್ಯಾನ್ ಪೇಜ್ ಗಳಿಗೆ ಕೆಟ್ಟ ಹೆಸರು
- ಯಾರು ಸಮಾಜ ಸೇವೆ ಮಾಡೋಕೆ ಆಗೋದಿಲ್ಲ ಅಂತ ಹೇಡಿಗಳು ಹಂಗೆಲ್ಲಾ ಮಾಡೋದು ಇದಕ್ಕೆಲ್ಲ ತಲೆ ಕೆಡಿಸ್ಕೋಬೇಡಿ ಅಕ್ಕ ನಿಮ್ಮ ನಿಮ್ಮ ಕೆಲಸ ಒಬ್ಬರಿಗೆ ಇಷ್ಟ ಆಗ್ಲಿಲ್ಲ ಅಂದ್ರೆ ಏನಂತೆ ಸಾವಿರ ಜನಕ್ಕೆ ಇಷ್ಟ ಆದ್ರೆ ಸಾಕು