69th Filmfare Awards South 2024: ಡೇರ್‌ಡೆವಿಲ್‌ ಮುಸ್ತಫಾ ಅತ್ಯುತ್ತಮ ಚಿತ್ರ, ರಕ್ಷಿತ್‌ ಶೆಟ್ಟಿ, ಸಿರಿ ರವಿಕುಮಾರ್‌ ಅತ್ಯುತ್ತಮ ನಟ, ನಟ-south film industry news 69th filmfare awards south 2024 filmfare awards 2024 kannada winners list mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  69th Filmfare Awards South 2024: ಡೇರ್‌ಡೆವಿಲ್‌ ಮುಸ್ತಫಾ ಅತ್ಯುತ್ತಮ ಚಿತ್ರ, ರಕ್ಷಿತ್‌ ಶೆಟ್ಟಿ, ಸಿರಿ ರವಿಕುಮಾರ್‌ ಅತ್ಯುತ್ತಮ ನಟ, ನಟ

69th Filmfare Awards South 2024: ಡೇರ್‌ಡೆವಿಲ್‌ ಮುಸ್ತಫಾ ಅತ್ಯುತ್ತಮ ಚಿತ್ರ, ರಕ್ಷಿತ್‌ ಶೆಟ್ಟಿ, ಸಿರಿ ರವಿಕುಮಾರ್‌ ಅತ್ಯುತ್ತಮ ನಟ, ನಟ

ಕಳೆದ ವರ್ಷದ ತೆರೆಕಂಡ ಸಿನಿಮಾಗಳಿಗೆ ನೀಡುವ 69ನೇ ಫಿಲಂ ಫೇರ್‌ ಪ್ರಶಸ್ತಿ ಪ್ರದಾನ ಸಮಾರಂಭ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕನ್ನಡ ವಿಭಾಗದಲ್ಲಿ ಯಾವೆಲ್ಲ ಚಿತ್ರಗಳಿಗೆ ಪ್ರಶಸ್ತಿ ಸಿಕ್ತು ಎಂಬ ಮಾಹಿತಿ ಇಲ್ಲಿದೆ.

69th Filmfare Awards South 2024: ಡೇರ್‌ಡೆವಿಲ್‌ ಮುಸ್ತಫಾ ಅತ್ಯುತ್ತಮ ಚಿತ್ರ, ರಕ್ಷಿತ್‌ ಶೆಟ್ಟಿ, ಸಿರಿ ರವಿಕುಮಾರ್‌ ಅತ್ಯುತ್ತಮ ನಟ, ನಟ
69th Filmfare Awards South 2024: ಡೇರ್‌ಡೆವಿಲ್‌ ಮುಸ್ತಫಾ ಅತ್ಯುತ್ತಮ ಚಿತ್ರ, ರಕ್ಷಿತ್‌ ಶೆಟ್ಟಿ, ಸಿರಿ ರವಿಕುಮಾರ್‌ ಅತ್ಯುತ್ತಮ ನಟ, ನಟ

69th Filmfare Awards South: 2024ರ 69ನೇ ಫಿಲಂ ಫೇರ್ ಸೌತ್ ಪ್ರಶಸ್ತಿ ವಿಜೇತರ ಪಟ್ಟಿ ಹೊರಬಿದ್ದಿದೆ. ಈ ಸಲದ ಪ್ರಶಸ್ತಿ ವಿಜೇತರು ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಹೈದರಾಬಾದ್‌ನ JRC ಕನ್ವೆಂನ್ಷನ್‌ ಸೆಂಟರ್‌ನಲ್ಲಿ ಆಗಸ್ಟ್‌ 3ರಂದು ನಡೆದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕನ್ನಡದ ಜತೆಗೆ ತಮಿಳು, ತೆಲುಗು ಮತ್ತು ಮಲಯಾಳಂನ ಸ್ಟಾರ್‌ ನಟರು ಕಲರ್‌ಫುಲ್‌ ಇವೆಂಟ್‌ನ ಭಾಗವಾದರು. ಆ ಪೈಕಿ ಕನ್ನಡದ ಯಾವೆಲ್ಲ ಸಿನಿಮಾಗಳಿಗೆ ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ಸಿಕ್ಕಿತು ಎಂಬ ಮಾಹಿತಿ ಇಲ್ಲಿದೆ.

ಫಿಲ್ಮ್‌ಫೇರ್‌ ವಿಜೇತರ ಪಟ್ಟಿ

ಅತ್ಯುತ್ತಮ ಸಿನಿಮಾ: ಡೇರ್​ಡೆವಿಲ್ ಮುಸ್ತಫಾ

ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (ಚಿತ್ರ: ಸಪ್ತ ಸಾಗರದಾಚೆ ಎಲ್ಲೋ)

ಅತ್ಯುತ್ತಮ ನಟಿ: ಸಿರಿ ರವಿಕುಮಾರ್ (ಚಿತ್ರ: ಸ್ವಾತಿ ಮುತ್ತಿನ ಮಳೆ ಹನಿಯೇ)

ಅತ್ಯುತ್ತಮ ನಿರ್ದೇಶಕ: ಹೇಮಂತ್ ರಾವ್ (ಚಿತ್ರ: ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ: ಪಿಂಕಿ ಎಲ್ಲಿ?

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಮೈಸೂರು ಪೂರ್ಣ (ಚಿತ್ರ: ಆರ್ಕೆಸ್ಟ್ರಾ ಮೈಸೂರು)

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ರುಕ್ಮಿಣಿ ವಸಂತ್ (ಚಿತ್ರ: ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಪೋಷಕ ನಟಿ: ಸುಧಾ ಬೆಳವಾಡಿ (ಚಿತ್ರ: ಕೌಸಲ್ಯ ಸುಪ್ರಜಾ ರಾಮ)

ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು (ಚಿತ್ರ: ಟಗರು ಪಲ್ಯ)

ಅತ್ಯುತ್ತಮ ಹೊಸ ನಟ: ಶಿಶಿರ್ ಬೈಕಾಡಿ (ಚಿತ್ರ: ಡೇರ್​ಡೆವಿಲ್ ಮುಸ್ತಫ)

ಅತ್ಯುತ್ತಮ ಹೊಸ ನಟಿ: ಅಮೃತಾ ಪ್ರೇಮ್ (ಚಿತ್ರ: ಟಗರು ಪಲ್ಯ)

ಅತ್ಯುತ್ತಮ ಹಾಡುಗಳು: ಚರಣ್ ರಾಜ್ (ಚಿತ್ರ: ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಸಾಹಿತ್ಯ: ಬಿಆರ್​ ಲಕ್ಷ್ಮಣರಾವ್ (ಯಾವ ಚುಂಬಕ, ಚೌಕಬಾರ)

ಅತ್ಯುತ್ತಮ ಗಾಯಕ: ಕಪಿಲ್ ಕಪಿಲನ್ (ನದಿಯೇ: ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಗಾಯಕಿ: ಶ್ರೀಲಕ್ಷ್ಮಿ ಬೆಲಮಣ್ಣು (ಕಡಲನು ಕಾಣ ಹೊರಟ: ಸಪ್ತ ಸಾಗರದಾಚೆ ಎಲ್ಲೊ)

ಜೀವಮಾನ ಸಾಧನೆ: ಹಿರಿಯ ನಟ ಶ್ರೀನಾಥ್