Seetha Rama Serial: ಹತ್ತಿರ ಬಂತು ಪುಟಾಣಿಯ ಸಾವಿನ ದಿನ! ಪ್ಲಾನ್‌ ಪ್ರಕಾರ ಸಾಯಬೇಕಾಗಿದ್ದು ಸೀತಾ, ಪ್ರಾಣ ಬಿಟ್ಟಿದ್ದು ಮಾತ್ರ ಸಿಹಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಹತ್ತಿರ ಬಂತು ಪುಟಾಣಿಯ ಸಾವಿನ ದಿನ! ಪ್ಲಾನ್‌ ಪ್ರಕಾರ ಸಾಯಬೇಕಾಗಿದ್ದು ಸೀತಾ, ಪ್ರಾಣ ಬಿಟ್ಟಿದ್ದು ಮಾತ್ರ ಸಿಹಿ

Seetha Rama Serial: ಹತ್ತಿರ ಬಂತು ಪುಟಾಣಿಯ ಸಾವಿನ ದಿನ! ಪ್ಲಾನ್‌ ಪ್ರಕಾರ ಸಾಯಬೇಕಾಗಿದ್ದು ಸೀತಾ, ಪ್ರಾಣ ಬಿಟ್ಟಿದ್ದು ಮಾತ್ರ ಸಿಹಿ

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿಯ ಸಾವಿನ ದಿನ ಹತ್ತಿರ ಬರುತ್ತಿದೆ. ಆಸ್ತಿ ವಿಚಾರವಾಗಿ, ಸೀತಾಳನ್ನು ಹತ್ಯೆ ಮಾಡುವ ಪ್ಲಾನ್‌ ಭಾರ್ಗವಿಯದ್ದು. ಆದರೆ, ಈ ದುರಂತದಲ್ಲಿ ಸೀತಾ ಬದಲು ಸಿಹಿ ಸಾವನ್ನಪ್ಪುತ್ತಾಳೆ. ಈಗ ಆ ಪುಟಾಣಿ ಸಾವಿನ ಸಂಚಿಕೆ ಸಮೀಪಿಸುತ್ತಿದೆ.

Seetha Rama Serial: ಹತ್ತಿರ ಬಂತು ಪುಟಾಣಿಯ ಸಾವಿನ ದಿನ!
Seetha Rama Serial: ಹತ್ತಿರ ಬಂತು ಪುಟಾಣಿಯ ಸಾವಿನ ದಿನ!

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಮುಂದಿನ ಏಪಿಸೋಡ್‌ಗಳು ಹೇಗಿರಬಹುದು ಎಂಬ ಕುತೂಹಲಕ್ಕೆ ಪ್ರೋಮೋಗಳ ಮೂಲಕ ಸೀರಿಯಲ್‌ ತಂಡ ಉತ್ತರ ನೀಡಿದೆ. ಸಿಹಿಯ ಸಾವು, ಸುಬ್ಬಿಯ ಆಗಮನದ ಪ್ರೋಮೋಗಳು ಈಗಾಗಲೇ ವೀಕ್ಷಕರ ಕಣ್ಣರಳಿಸಿವೆ. ಜತೆಗೆ ಸಿಹಿಯನ್ನೇ ಹೋಲುವ ಸುಬ್ಬಿಯ ಆಗಮನವೂ ಆಗಿದೆ. ವೀಕ್ಷಕರ ಕೌತುಕಕ್ಕೂ ಒಂದೊಂದೆ ಉತ್ತರ ಸಿಗುತ್ತ ಕಥೆ ಸಾಗುತ್ತಿದೆ. ಅಚ್ಚರಿಯ ಮತ್ತು ಬೇಸರದ ಸಂಗತಿ ಎಂದರೆ, ದಿನಗಳೆದಂತೆ, ಸಿಹಿ ಸಾವಿಗೆ ಹತ್ತಿರವಾಗುತ್ತಿದ್ದಾಳೆ!

ಪತ್ನಿಯಾದ ಬಳಿಕ ಸೀತಾಳ ಬರ್ತ್‌ಡೇಯನ್ನು ಗ್ರ್ಯಾಂಡ್‌ ಆಗಿಯೇ ಸೆಲೆಬ್ರೇಟ್‌ ಮಾಡುವ ನಿಟ್ಟಿನಲ್ಲಿ ರಾಮ್‌ ಪ್ಲಾನ್‌ ಮಾಡಿದ್ದಾನೆ. ಸೀತಾ ಬರ್ತ್‌ಡೇ ಸಂಭ್ರಮವನ್ನು ದ್ವಿಗುಣಗೊಳಿಸಬೇಕು ಎಂಬ ನಿಟ್ಟಿನಲ್ಲಿ ರಾಮ್‌ ವಿಶೇಷ ಸರ್ಪ್ರೈಸ್‌ಗಳನ್ನು ನೀಡುತ್ತಿದ್ದಾನೆ. ಸೀತಾ ಮತ್ತು ಸಿಹಿಯನ್ನು ಶಾಪಿಂಗ್‌ ಕರೆದುಕೊಂಡು ಹೋಗಿದ್ದಾನೆ. ಬೇಕಾಗಿದ್ದನ್ನೆಲ್ಲ ಕೊಡಿಸಿದ್ದಾನೆ. ಹೀಗೆ ಶಾಪಿಂಗ್‌ ಟೈಮ್‌ನಲ್ಲಿಯೇ ಸಿಹಿ ಇಷ್ಟಪಟ್ಟ ಬಿಳಿ ಬಣ್ಣದ ಡ್ರೆಸ್‌ ಸಹ ರಾಮ್‌ ಖರೀದಿಸಿದ್ದಾನೆ. ಜತೆಗೆ ಸತ್ಯ ಚಿಕ್ಕಪ್ಪ‌ ಬರೆದ ಪತ್ರದ ಜಾಡು ಹಿಡಿದು ಆಸ್ತಿ ವಿಚಾರದ ಬಗ್ಗೆ ಮಾತನಾಡುವ ಸಲುವಾಗಿ, ಲಾಯರ್‌ ಆಫೀಸ್‌ಗೂ ಭೇಟಿ ನೀಡಿದ್ದಾರೆ ಸೀತಾ ಮತ್ತು ರಾಮ್‌.

ವಾಣಿ ಬರೆದ ವಿಲ್‌ನಲ್ಲೇನಿದೆ?

ಶಾಪಿಂಗ್‌ಗೂ ಮುನ್ನ ಆಸ್ತಿ ವಿಚಾರವಾಗಿ ಲಾಯರ್‌ನ ಭೇಟಿಯಾಗಿದ್ದಾರೆ ಸೀತಾ ಮತ್ತು ರಾಮ. ಮನೆಯಲ್ಲಿ ಆಸ್ತಿ ವಿಚಾರ ಚರ್ಚೆ ಮಾಡದೆ, ಆಫೀಸ್‌ಗೆ ಬಂದಿದ್ದು ಒಳ್ಳೆಯದಾಯ್ತು ಎಂದು ಲಾಯರ್‌ ಹೇಳಿದ್ದಾರೆ. ಈ ವೇಳೆ ಒಂದಷ್ಟು ಕಟು ವಾಸ್ತವಗಳನ್ನೂ ವಿವರಿಸಿದ್ದಾರೆ. ನಿಮ್ಮ ಮನೆಯ ಯಾರಿಗೂ, ನೀವು ಆಸ್ತಿಯನ್ನು ಕೊಡುವ ಹಾಗಿಲ್ಲ. ಈ ಆಸ್ತಿ ಮೇಲೆ ನಿಮ್ಮ ಸಂಸಾರಕ್ಕೆ ಮಾತ್ರ ಹಕ್ಕಿದೆ ಎಂದಿದ್ದಾರೆ ಲಾಯರ್.‌ ವಾಣಿ ಅವರು ವಿಲ್‌ನಲ್ಲಿ ಬರೆದ ಪ್ರಕಾರ ಆಸ್ತಿ ನಿಮ್ಮ ಸಂಸಾರ ಬಿಟ್ಟು ಬೇರೆ ಯಾರಿಗೂ ಹೋಗಬಾರದು. ಈ ಆಸ್ತಿ ಬೇರೆ ಯಾರಿಗೂ ಸೇರಬಾರದು ಎಂಬುದು ವಾಣಿ ಆಸೆ ಎಂದಿದ್ದಾರೆ.

ಸಿಹಿಯನ್ನು ಮಗಳೆಂದು ನೀವು ದತ್ತು ಪಡೆದಿರುವುದರಿಂದ, ಅವಳೂ ಸಹ ಈ ಆಸ್ತಿಯಲ್ಲಿ ಹಕ್ಕುದಾರಳು. ಲಾಯರ್‌ ಅವರ ಈ ಮಾತಿಗೆ, ಪ್ರತಿಕ್ರಿಯೆ ನೀಡಿದ ಸೀತಾಮ ವಾಣಿ ಅತ್ತಿಗೆ ಈ ಥರ ಇದೆಲ್ಲವನ್ನು ಬರೆದಿಟ್ಟು ಹೋಗಿದ್ದಾರೆ ಎಂದರೆ, ಅದಕ್ಕೊಂದು ಬಲವಾದ ಕಾರಣ ಇದ್ದೇ ಇರುತ್ತೆ. ನಾವು ಅದನ್ನು ಪ್ರೊಟೆಕ್ಟ್‌ ಮಾಡ್ತಿವಿ ಎಂದಿದ್ದಾಳೆ ಸೀತಾ. ಲಾಯರ್‌ ಮನೆಯಿಂದ ಹೊರಗಡೆ ಕಾಲಿಡುತ್ತಿದ್ದಂತೆ, ಚಿಕ್ಕಿ ಫೋನ್‌ ಬಂದಿದೆ. ಚಿಕ್ಕಿಯ ಫೋನ್‌ ಬಂದಿದ್ದೇ ತಡ, ಸೀತಾಗೂ ಅನುಮಾನ ಬಂದಿದೆ.

ನಾವು ಲಾಯರ್‌ ಅವರ ಆಫೀಸ್‌ಗೆ ಬಂದ ವಿಚಾರ ಚಿಕ್ಕಿಗೆ ಗೊತ್ತಾಗಿರಬಹುದಾ? ಎಂದು ರಾಮ್‌ ಕೈಯಿಂದ ಫೋನ್‌ ಪಡೆದು, ನೆಟ್‌ವರ್ಕ್‌ ಇಲ್ಲ ಎಂಬ ನೆಪ ಹೇಳಿ ಭಾರ್ಗವಿಯ ಫೋನ್‌ ಕಟ್‌ ಮಾಡಿದ್ದಾಳೆ. ಶಾಪಿಂಗ್‌ ಮುಗಿದ ಬಳಿಕ ಕಾರ್‌ನಲ್ಲಿ ನಮ್ಮನ್ನು ಯಾರೋ ಫಾಲೋ ಮಾಡುತ್ತಿದ್ದಾರೆ ಎಂಬ ಭಯ ಸೀತಾಗೆ ಶುರುವಾಗಿದೆ. ಈ ವಿಚಾರವನ್ನು ರಾಮನಿಗೂ ಹೇಳಿದ್ದಾಳೆ. ಆದರೆ, ರಾಮ್‌ ಮಾತ್ರ, ಭಯ ಪಡಬೇಡಿ, ನಾನಿದ್ದೀನಿ ಎಂದಿದ್ದಾನೆ.

ಆಸ್ತಿ ವಿಚಾರವಾಗಿ ಸೀತಾ ಹತ್ಯೆಗೆ ಸಂಚು

ರಾಮನ ಪಾಲಿಗೆ ಹೋಗಬೇಕಿದ್ದ ಆಸ್ತಿಯನ್ನು ತಾನೇ ಹೊಡೆಯಬೇಕು ಎಂಬ ನಿಟ್ಟಿನಲ್ಲಿ ಭಾರ್ಗವಿ ಷಡ್ಯಂತ್ರ ರೂಪಿಸಿದ್ದಾಳೆ. ಅದರಂತೆ, ಈಗ ಈ ಆಸ್ತಿಯಲ್ಲಿ ರಾಮನ ಸಂಸಾರ ಹೊರತುಪಡಿಸಿ ಬೇರೆಯವರಿಗೆ ಹಕ್ಕಿಲ್ಲ ಎಂಬುದನ್ನು ಲಾಯರ್‌ ಹೇಳಿದ್ದಾರೆ. ಹೀಗಿರುವಾಗಲೇ ಆ ಸೀತಾನೇ ಇಲ್ಲವಾಗಿಸಿದರೆ ಆಸ್ತಿಯನ್ನು ಸಲೀಸಾಗಿ ಪಡೆಯಬಹುದಲ್ಲ ಎಂಬುದು ಭಾರ್ಗವಿ ಪ್ಲಾನ್‌. ಅದರಂತೆ, ಸೀತಾಳ ಬರ್ತ್‌ಡೇಯನ್ನೇ ಟಾರ್ಗೆಟ್‌ ಮಾಡಿ, ಸೀತಾ ಹತ್ಯೆಗೂ ಸಂಚು ರೂಪಿಸಿದ್ದಾಳೆ. ಆದರೆ, ಆ ದುರಂತದಲ್ಲಿ ಸೀತಾ ಬದಲಿಗೆ ಸಿಹಿ ಸಾವನ್ನಪ್ಪುತ್ತಾಳೆ. ಬಳಿಕ ಪ್ರೇತವಾದ ಸಿಹಿ, ತನ್ನ ತದ್ರೂಪಿ ಸುಬ್ಬಿಯನ್ನೂ ಭೇಟಿ ಮಾಡುತ್ತಾಳೆ. ಆ ಸುಬ್ಬಿಯನ್ನೇ ಅಸ್ತ್ರವಾಗಿಟ್ಟುಕೊಂಡು, ಭಾರ್ಗವಿಯ ಮುಖವಾಡವನ್ನು ಹೊರಗೆಡುತ್ತಾಳಾ ಸಿಹಿ ಎಂಬುದೇ ಕಥೆ.

ಸೀತಾ ರಾಮ ಸೀರಿಯಲ್‌ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

Whats_app_banner