ಕನ್ನಡ ಸುದ್ದಿ  /  Entertainment  /  Sridevi Had Played As Rajinikanth Step Mother In Her 13th Age

Sridevi as Rajinikanth Mother:13ನೇ ವಯಸ್ಸಿಗೆ ರಜನಿಕಾಂತ್‌ ತಾಯಿ ಪಾತ್ರದಲ್ಲಿ ನಟಿಸಿದ್ದ ಶ್ರೀದೇವಿ..ಆ ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ

80-90ರ ದಶಕದ ಬಹುತೇಕ ಎಲ್ಲಾ ನಟರೊಂದಿಗೆ ಕೂಡಾ ಈ ಚೆಲುವೆ ನಟಿಸಿದ್ದಾರೆ. ಅವರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡಾ ಒಬ್ಬರು. ರಜನಿಕಾಂತ್‌ ಹಾಗೂ ಶ್ರೀದೇವಿ, ರಾಮ್ ರಾಬರ್ಟ್​ ರಹೀಂ, ಪ್ರಿಯಾ, ಗಾಯತ್ರಿ, ಚಾಲ್​​​ಬಾಜ್, ಮಹಾಗುರು, ಪೋಕಿರಿ ರಾಜ, ಜಾನಿ ಸೇರಿದಂತೆ ಇವರಿಬ್ಬರೂ ಅನೇಕ ಸಿನಿಮಾಗಳಲ್ಲಿ ನಾಯಕ-ನಾಯಕಿಯಾಗಿ ಆದರೆ ಒಂದು ಸಿನಿಮಾದಲ್ಲಿ ಮಾತ್ರ ಶ್ರೀದೇವಿ, ರಜನಿಕಾಂತ್ ತಾಯಿ ಪಾತ್ರದಲ್ಲಿ ನಟಿಸಿದ್ದರು.

ರಜನಿಕಾಂತ್‌ ತಾಯಿ ಪಾತ್ರದಲ್ಲಿ ನಟಿಸಿದ್ದ ಶ್ರೀದೇವಿ
ರಜನಿಕಾಂತ್‌ ತಾಯಿ ಪಾತ್ರದಲ್ಲಿ ನಟಿಸಿದ್ದ ಶ್ರೀದೇವಿ (PC: Sridevi fans page)

ಬಹುಭಾಷಾ ನಟಿ, ಅಭಿಮಾನಿಗಳಿಂದ ಅತಿಲೋಕ ಸುಂದರಿ ಎಂದೇ ಕರೆಸಿಕೊಳ್ಳುತ್ತಿದ್ದ ಶ್ರೀದೇವಿ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರ ಸಿನಿಮಾಗಳು, ಅವರ ನೆನಪುಗಳು ಮಾತ್ರ ಅಭಿಮಾನಿಗಳನ್ನು ಸದಾ ಕಾಡುತ್ತದೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಈ ಚೆಲುವೆ ಅಭಿನಯಿಸದ ಪಾತ್ರಗಳಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಶ್ರೀದೇವಿ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದರು.

ಶ್ರೀದೇವಿ ಚಿತ್ರರಂಗಕ್ಕೆ ಬಂದಿದ್ದು 'ಕಂದನ್‌ ಕರುಣೈ' ಎಂಬ ತಮಿಳು ಚಿತ್ರದ ಮೂಲಕ. ಆಗ ಅವರಿಗೆ 4 ವರ್ಷ ವಯಸ್ಸು. 'ಭಕ್ತ ಕುಂಬಾರ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಬಂದ ಶ್ರೀದೇವಿ, ಹೆಣ್ಣು ಸಂಸಾರದ ಕಣ್ಣು, ಬಾಲ ಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಹಾಗೂ ಪ್ರಿಯಾ ಸಿನಿಮಾಗಳಲ್ಲಿ ನಟಿಸಿದ್ದಾರೆ. 80-90ರ ದಶಕದ ಬಹುತೇಕ ಎಲ್ಲಾ ನಟರೊಂದಿಗೆ ಕೂಡಾ ಈ ಚೆಲುವೆ ನಟಿಸಿದ್ದಾರೆ. ಅವರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡಾ ಒಬ್ಬರು. ರಜನಿಕಾಂತ್‌ ಹಾಗೂ ಶ್ರೀದೇವಿ, ರಾಮ್ ರಾಬರ್ಟ್​ ರಹೀಂ, ಪ್ರಿಯಾ, ಗಾಯತ್ರಿ, ಚಾಲ್​​​ಬಾಜ್, ಮಹಾಗುರು, ಪೋಕಿರಿ ರಾಜ, ಜಾನಿ ಸೇರಿದಂತೆ ಇವರಿಬ್ಬರೂ ಅನೇಕ ಸಿನಿಮಾಗಳಲ್ಲಿ ನಾಯಕ-ನಾಯಕಿಯಾಗಿ ಆದರೆ ಒಂದು ಸಿನಿಮಾದಲ್ಲಿ ಮಾತ್ರ ಶ್ರೀದೇವಿ, ರಜನಿಕಾಂತ್ ತಾಯಿ ಪಾತ್ರದಲ್ಲಿ ನಟಿಸಿದ್ದರು. ಈ ವಿಚಾರ ಬಹಳಷ್ಟು ಜನರಿಗೆ ಗೊತ್ತಿಲ್ಲ. ರಜನಿಕಾಂತ್‌ ಮಲತಾಯಿ ಪಾತ್ರದಲ್ಲಿ ನಟಿಸಿದಾಗ ಶ್ರೀದೇವಿಗೆ ಕೇವಲ 13 ವರ್ಷ ವಯಸ್ಸು.

ತಮಿಳಿನ 'ಮೂಂಡ್ರು ಮುಡಿಚ್ಚು' ಎಂಬ ಚಿತ್ರದಲ್ಲಿ ಶ್ರೀದೇವಿ, ರಜನಿಕಾಂತ್‌ ಮಲತಾಯಿ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ನಿರ್ದೇಶಿಸಿದ್ದರು. ತೆಲುಗಿನ 'ಓ ಸಿತಾ ಕಥಾ' ಸಿನಿಮಾವನ್ನು ತಮಿಳಿನಲ್ಲಿ 'ಮೂಂಡ್ರು ಮುಡಿಚ್ಚು' ಹೆಸರಿನಲ್ಲಿ ರೀಮೇಕ್ ಮಾಡಲಾಗಿತ್ತು. ಈ ಚಿತ್ರದಲ್ಲಿ ನಾಯಕಿ ಸೆಲ್ವಿ (ಶ್ರೀದೇವಿ) ಯನ್ನು ಪ್ರಶಾಂತ್ (ರಜನಿಕಾಂತ್​) ಹಾಗೂ ಬಾಲಾಜಿ ( ಕಮಲ್​​ಹಾಸನ್​) ಇಬ್ಬರೂ ಪ್ರೀತಿಸುತ್ತಾರೆ. ಬಾಲಾಜಿಯದ್ದು ನಿಷ್ಕಲ್ಮಷ ಪ್ರೀತಿ ಆದರೆ, ಪ್ರಶಾಂತ್​​ನದ್ದು ಆಕರ್ಷಣೆ. ಆದರೆ ಸೆಲ್ವಿ ಮಾತ್ರ ಬಾಲಾಜಿಯನ್ನು ಇಷ್ಟಪಡುತ್ತಾಳೆ. ಸೆಲ್ವಿ ನನಗೆ ದಕ್ಕಲಿಲ್ಲ ಎಂಬ ದ್ವೇಷದಿಂದ ಪ್ರಶಾಂತ್‌ ಆಕೆಯ ಪ್ರೀತಿ ಪಾತ್ರರನ್ನೆಲ್ಲಾ ದೂರ ಮಾಡುತ್ತಾನೆ. ಇದೇ ನೋವಿನಲ್ಲಿ, ಪ್ರಶಾಂತ್‌ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ಧೇಶದಿಂದ ಸೆಲ್ವಿ, ಪ್ರಶಾಂತ್ ತಂದೆಯನ್ನು ಮದುವೆಯಾಗಿ ಪ್ರಶಾಂತ್‌ಗೆ ಮಲತಾಯಿ ಆಗಿ ಅವನ ಮನೆಗೆ ಬರುತ್ತಾಳೆ.

ಶ್ರೀದೇವಿ ತಮ್ಮ ಅಷ್ಟು ವರ್ಷಗಳ ವೃತ್ತಿ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸಿದ್ದಾರೆ. 'ಮೂಂಡ್ರು ಮುಡಿಚ್ಚು' ಚಿತ್ರದಲ್ಲಿ ಆಕೆಯದ್ದು ವಯಸ್ಸಿಗೆ ಮೀರಿದ ಪಾತ್ರ. ಅಷ್ಟು ಚಿಕ್ಕ ವಯಸ್ಸಿನಲ್ಲೇ ರಜನಿಕಾಂತ್‌ ತಾಯಿ ಪಾತ್ರದಲ್ಲಿ ಆಕೆಯ ಅಭಿನಯ ನೋಡಿದರೆ ಆಕೆ ನಿಜಕ್ಕೂ ಎಂತ ಅದ್ಭುತ ಕಲಾವಿದೆ ಎಂಬುದು ತಿಳಿಯುತ್ತದೆ. ಈ ಸಿನಿಮಾ ಇಂದಿಗೂ ಶ್ರೀದೇವಿ ಅಭಿಮಾನಿಗಳ ಫೇವರೆಟ್‌ ಸಿನಿಮಾ ಲಿಸ್ಟ್‌ಗಳಲ್ಲಿ ಒಂದು.

IPL_Entry_Point