Rajamouli Birthday: 50ನೇ ವಸಂತಕ್ಕೆ ಕಾಲಿಟ್ಟ ಎಸ್‌ಎಸ್‌ ರಾಜಮೌಳಿ; ಹ್ಯಾಟ್ರಿಕ್‌ ನಿರ್ದೇಶಕನ 5 ಬ್ಲಾಕ್‌ ಬಸ್ಟರ್‌ ಸಿನಿಮಾಗಳಿವು
ಕನ್ನಡ ಸುದ್ದಿ  /  ಮನರಂಜನೆ  /  Rajamouli Birthday: 50ನೇ ವಸಂತಕ್ಕೆ ಕಾಲಿಟ್ಟ ಎಸ್‌ಎಸ್‌ ರಾಜಮೌಳಿ; ಹ್ಯಾಟ್ರಿಕ್‌ ನಿರ್ದೇಶಕನ 5 ಬ್ಲಾಕ್‌ ಬಸ್ಟರ್‌ ಸಿನಿಮಾಗಳಿವು

Rajamouli Birthday: 50ನೇ ವಸಂತಕ್ಕೆ ಕಾಲಿಟ್ಟ ಎಸ್‌ಎಸ್‌ ರಾಜಮೌಳಿ; ಹ್ಯಾಟ್ರಿಕ್‌ ನಿರ್ದೇಶಕನ 5 ಬ್ಲಾಕ್‌ ಬಸ್ಟರ್‌ ಸಿನಿಮಾಗಳಿವು

SS Rajamouli Birthday: ಅಭಿಮಾನಿಗಳು ಪ್ರೀತಿಯಿಂದ ಜಕ್ಕಣ್ಣ ಎಂದೇ ಕರೆಯಲ್ಪಡುವ ತೆಲುಗು ಚಿತ್ರರರಂಗದ ಸ್ಟಾರ್‌ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 50ನೇ ವಸಂತಕ್ಕೆ ಕಾಲಿಟ್ಟಿರುವ ಜಕ್ಕಣ್ಣನಿಗೆ ಅಭಿಮಾನಿಗಳು, ಸ್ನೇಹಿತರು ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ.

50ನೇ ವಸಂತಕ್ಕೆ ಕಾಲಿಟ್ಟ ಎಸ್‌ಎಸ್‌ ರಾಜಮೌಳಿ
50ನೇ ವಸಂತಕ್ಕೆ ಕಾಲಿಟ್ಟ ಎಸ್‌ಎಸ್‌ ರಾಜಮೌಳಿ

SS Rajamouli Birthday: ರಾಜಮೌಳಿ ಹುಟ್ಟಿ , ಬೆಳೆದದ್ದು ಕರ್ನಾಟಕದ ರಾಯಚೂರಿನಲ್ಲಿ. ನಂತರ ಇವರ ಕುಟುಂಬ ಆಂಧ್ರಪ್ರದೇಶಕ್ಕೆ ಶಿಫ್ಟ್‌ ಆಯ್ತು. ತೆಲುಗಿನ ಕೋಟಗಿರಿ ವೆಂಕಟೇಶ್ವರ ರಾವ್‌, ಕ್ರಾಂತಿಕುಮಾರ್‌, ಗುಣಂ ವೆಂಕಟರಾಜು, ಕೆ ರಾಘವೇಂದ್ರ ರಾವ್‌ ಸೇರಿದಂತೆ ಅನೇಕ ಗಣ್ಯರ ನಿದರ್ಶನದಲ್ಲಿ ಕೆಲಸ ಮಾಡಿದ ರಾಜಮೌಳಿ 2000ರಲ್ಲಿ 'ಶಾಂತಿ ನಿವಾಸ' ಎಂಬ ಧಾರಾವಾಹಿ ಮೂಲಕ ಸ್ವತಂತ್ರ್ಯವಾಗಿ ನಿರ್ದೇಶನ ಆರಂಭಿಸಿದರು. ಈ ಧಾರಾವಾಹಿ ಈ ಟಿವಿಯಲ್ಲಿ ಪ್ರಸಾರವಾಗಿತ್ತು. ನಂತರ ಮರುವರ್ಷ ಜ್ಯೂನಿಯರ್‌ ಎನ್‌ಟಿಆರ್‌ ಜೊತೆ 'ಸ್ಟೂಡೆಂಟ್‌ ನಂಬರ್‌ 1' ಸಿನಿಮಾ ನಿರ್ದೇಶನ ಮಾಡಿದರು. ಆ ಸಿನಿಮಾಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು.

ಸ್ಟೂಡೆಂಟ್‌ ನಂಬರ್‌ 1 ಸಿನಿಮಾದಿಂದ ಆರ್‌ಆರ್‌ಆರ್‌ ಸಿನಿಮಾದವರೆಗೂ ರಾಜಮೌಳಿ ನಿರ್ದೇಶನ ಮಾಡಿರುವ ಎಲ್ಲವೂ ಹಿಟ್‌ ಸಿನಿಮಾಗಳೇ. ಅದರಲ್ಲಿಈ 5 ಸಿನಿಮಾಗಳು ಬ್ಲಾಕ್‌ ಬಸ್ಟರ್‌ ಲಿಸ್ಟ್‌ಗೆ ಸೇರಿದೆ.

ಛತ್ರಪತಿ: ಪ್ರಭಾಸ್‌ ಶ್ರಿಯಾ ಸರನ್‌ ನಾಯಕ, ನಾಯಕಿಯಾಗಿ ನಟಿಸಿದ್ದ ಛತ್ರಪತಿ ಸಿನಿಮಾ 2005ರಲ್ಲಿ ತೆರೆ ಕಂಡಿತ್ತು. ಶ್ರೀ ವೆಂಕಟೇಶ್ವರ ಸಿನಿಚಿತ್ರ ಬ್ಯಾನರ್‌ ಅಡಿ ಈ ಸಿನಿಮಾವನ್ನು ಬಿವಿಎಸ್‌ಎನ್‌ ಪ್ರಸಾದ್‌ ನಿರ್ಮಸಿದ್ದರು. ಚಿತ್ರದ ಹಾಡುಗಳಿಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. 12 ಕೋಟಿ ರೂಪಾಯಿ ಬಜೆಟ್‌ನ ಸಿನಿಮಾ 22 ಕೋಟಿ ರೂ. ಲಾಭ ಮಾಡಿತ್ತು.

ಮಗಧೀರ: 2009ರಲ್ಲಿ ತೆರೆ ಕಂಡಿದ್ದ 'ಮಗಧೀರ' ಚಿತ್ರದಲ್ಲಿ ರಾಮ್‌ ಚರಣ್‌ ಹಾಗೂ ಕಾಜಲ್‌ ಅಗರ್‌ವಾಲ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಿತ್ರವನ್ನು ಗೀತಾ ಆರ್ಟ್ಸ್‌ ಬ್ಯಾನರ್‌ನಲ್ಲಿ ಅಲ್ಲು ಅರವಿಂದ್‌, ಬಿವಿಎಸ್‌ಎನ್‌ ಪ್ರಸಾದ್‌ ನಿರ್ಮಿಸಿದ್ದರು. ಚಿತ್ರದ ಹಾಡುಗಳಿಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. 35 ಕೋಟಿ ರೂಪಾಯಿ ಖರ್ಚು ಮಾಡಿ ತೆಗೆಯಲಾದ ಸಿನಿಮಾ 150 ಕೋಟಿ ರೂಪಾಯಿ ಲಾಭ ಮಾಡಿತ್ತು.

ಈಗಾ: ತನ್ನನ್ನು ಕೊಲೆ ಮಾಡಿದ ವಿಲನ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ನಾಯಕ ನೊಣವಾಗಿ ಹುಟ್ಟಿಬರುವ ಕಥೆ ಹೊಂದಿರುವ ಈಗ ಸಿನಿಮಾ 2012ರಲ್ಲಿ ತೆರೆ ಕಂಡಿತ್ತು. ವಾರಾಹಿ ಚಲನಚಿತ್ರಂ ಬ್ಯಾನರ್‌ ಅಡಿಯಲ್ಲಿ ಸಾಯಿ ಕೊರ್ರಪತಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದು ಚಿತ್ರದಲ್ಲಿ ಸಮಂತಾ, ನಾನಿ, ಸುದೀಪ್‌ ಹಾಗೂ ಇನ್ನಿತರರು ನಟಿಸಿದ್ದಾರೆ. 40 ಕೋಟಿ ಬಜೆಟ್‌ನ ಸಿನಿಮಾ 130 ಕೋಟಿ ರೂ. ಲಾಭ ಮಾಡಿದೆ.

ಬಾಹುಬಲಿ: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ 'ಬಾಹುಬಲಿ' ಸಿನಿಮಾ ದಾಖಲೆ ಬರೆದಿದೆ. ಈ ಸಿನಿಮಾ ಕಥೆ, ಪಾತ್ರಧಾರಿಗಳು, ಹಾಡುಗಳು, ಡೈಲಾಗ್‌ ಎಲ್ಲವೂ ಸಿನಿಪ್ರಿಯರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಸಿನಿಮಾ 2 ಭಾಗಗಳಾಗಿ ತಯಾರಾಗಿತ್ತು. ಚಿತ್ರವನ್ನು ಆರ್ಕಾ ಮೀಡಿಯಾ ವರ್ಕ್ಸ್‌ ಬ್ಯಾನರ್‌ ಅಡಿಯಲ್ಲಿ ಶೋಭು ಯರ್ಲಗಡ್ಡ, ಪ್ರಸಾದ್‌ ದೇವಿನೇನಿ ನಿರ್ಮಿಸಿದ್ದಾರೆ. ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿರುವ ಚಿತ್ರದಲ್ಲಿ ಪ್ರಭಾಸ್‌, ಅನುಷ್ಕಾ, ತಮನ್ನಾ, ರಾಣಾ ದಗ್ಗುಬಾಟಿ, ರಮ್ಯಕೃಷ್ಣನ್‌, ಸತ್ಯರಾಜ್‌, ನಾಸರ್‌ ಹಾಗೂ ಇನ್ನಿತರರು ನಟಿಸಿದ್ದಾರೆ. ಮೊದಲ ಭಾಗ 650 ಕೋಟಿ, ಎರಡನೇ ಭಾಗ 1810 ಕೋಟಿ ರೂ. ಲಾಭ ಮಾಡಿದೆ.

ಆರ್‌ಆರ್‌ಆರ್‌: ಒಂದಕ್ಕಿಂತ ಒಂದು ಚೆಂದ ಎನ್ನುವಂತೆ ರಾಜಮೌಳಿ ನಿರ್ದೇಶನದ ಸಿನಿಮಾಗಳು ಕೂಡಾ ಒಂದಕ್ಕಿಂದ ಒಂದು ಸುಂದರ. 2022ರಲ್ಲಿ ತೆರೆ ಕಂಡ 'ಆರ್‌ಆರ್‌ಆರ್‌' ಸಿನಿಮಾ ಮಾಡಿರುವ ದಾಖಲೆ ಎಲ್ಲಾ ಸಿನಿಪ್ರಿಯರಿಗೂ ಗೊತ್ತು. ಡಿವಿವಿ ಎಂಟರ್‌ಟೇನ್ಮೆಂಟ್‌ ಬ್ಯಾನರ್‌ನಲ್ಲಿ ಡಿವಿವಿ ದಾನಯ್ಯ ಈ ಚಿತ್ರವನ್ನು ನಿರ್ಮಿಸಿದ್ದು ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಈ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್‌ ಪ್ರಶಸ್ತಿ ಕೂಡಾ ದೊರೆತಿದೆ. ರಾಮ್‌ ಚರಣ್‌, ಜ್ಯೂನಿಯರ್‌ ಎನ್‌ಟಿಆರ್‌, ಅಜಯ್‌ ದೇವ್ಗನ್‌, ಅಲಿಯಾ ಭಟ್‌, ಶ್ರಿಯಾ ಸರನ್‌ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. 550 ಕೋಟಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ 1,316 ಕೋಟಿ ರೂ. ಲಾಭ ಮಾಡಿದೆ.

Whats_app_banner