ಮೈಸೂರು ಅಂಚೆ ವಿಭಾಗ ಅಧಿಕಾರಿಗಳಿಂದ ಧನಂಜಯ್‌ಗೆ ಸ್ಟ್ಯಾಂಪ್ ಉಡುಗೊರೆ; ಇನ್ ಲ್ಯಾಂಡ್ ಲೆಟರ್‍‌ಗೆ ಹೆಚ್ಚಿದ ಬೇಡಿಕೆ
ಕನ್ನಡ ಸುದ್ದಿ  /  ಮನರಂಜನೆ  /  ಮೈಸೂರು ಅಂಚೆ ವಿಭಾಗ ಅಧಿಕಾರಿಗಳಿಂದ ಧನಂಜಯ್‌ಗೆ ಸ್ಟ್ಯಾಂಪ್ ಉಡುಗೊರೆ; ಇನ್ ಲ್ಯಾಂಡ್ ಲೆಟರ್‍‌ಗೆ ಹೆಚ್ಚಿದ ಬೇಡಿಕೆ

ಮೈಸೂರು ಅಂಚೆ ವಿಭಾಗ ಅಧಿಕಾರಿಗಳಿಂದ ಧನಂಜಯ್‌ಗೆ ಸ್ಟ್ಯಾಂಪ್ ಉಡುಗೊರೆ; ಇನ್ ಲ್ಯಾಂಡ್ ಲೆಟರ್‍‌ಗೆ ಹೆಚ್ಚಿದ ಬೇಡಿಕೆ

Dali Danjay Wedding: ಡಾಲಿ ಧನಂಜಯ್ ಹಾಗೂ ಧನ್ಯತಾ ಮದುವೆಗೆ ಸ್ಟ್ಯಾಂಪ್ ನೀಡಿ ಅಂಚೆ ಇಲಾಖೆ ಶುಭಾಶಯ ತಿಳಿಸಿದೆ. ಇನ್ ಲ್ಯಾಂಡ್ ಲೆಟರ್ ಮಾದರಿಯ ಮದುವೆ ಆಮಂತ್ರಣವನ್ನು ಭಾರತೀಯ ಅಂಚೆ ಇಲಾಖೆ ಮೆಚ್ಚಿದೆ.

ಮೈಸೂರು ಅಂಚೆ ವಿಭಾಗ ಅಧಿಕಾರಿಗಳಿಂದ ಧನಂಜಯಗೆ ಸ್ಟ್ಯಾಂಪ್ ಉಡುಗೊರೆ
ಮೈಸೂರು ಅಂಚೆ ವಿಭಾಗ ಅಧಿಕಾರಿಗಳಿಂದ ಧನಂಜಯಗೆ ಸ್ಟ್ಯಾಂಪ್ ಉಡುಗೊರೆ

Dali Danjay Wedding: ಡಾಲಿ ಧನಂಜಯ್ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿದೆ. ಧನಂಜಯ್ ಅವರ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಸಂಪ್ರದಾಯದಂತೆ ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದ ಡಾಲಿ ಧನಂಜಯ್ ನಂತರ ಮನೆಯಲ್ಲಿ ಮನೆದೇವರ ಪೂಜೆ ನೆರವೇರಿಸಿದ್ದಾರೆ. ಇದೇ ಶನಿವಾರ ಭಾನುವಾರ (ಫೆ 15, 16) ಮೈಸೂರಿನಲ್ಲಿ ನಡೆಯಲಿರುವ ಡಾಲಿ ಧನ್ಯತಾ ವಿವಾಹಕ್ಕೆ ಡಾಲಿ ಅಭಿಮಾನಿಗಳಿಗೂ ಆಮಂತ್ರಣ ನೀಡಿದ್ದಾರೆ. ಧನಂಜಯ ಧನ್ಯತಾ ಮದುವೆಗೆ ಸ್ಟ್ಯಾಂಪ್ ನೀಡಿ ಅಂಚೆ ಇಲಾಖೆ ಶುಭಾಶಯ ತಿಳಿಸಿದೆ. ಇನ್ ಲ್ಯಾಂಡ್ ಲೆಟರ್ ಮಾದರಿ ಮದುವೆ ಆಮಂತ್ರಣವನ್ನು ಭಾರತೀಯ ಅಂಚೆ ಇಲಾಖೆ ಮೆಚ್ಚಿ ಸ್ಟಾಂಪ್ ಉಡುಗೊರೆ ನೀಡಿದೆ.

ಧನು-ಧನ್ಯ ವಿವಾಹಕ್ಕೆ 12 ವಿಶೇಷ ಸ್ಟ್ಯಾಂಪ್ ಉಡುಗೊರೆ

ಧನಂಜಯ ಧನ್ಯತಾ ಮದುವೆಗೆ ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಿದ ಅಂಚೆ ಇಲಾಖೆಯು ಧನು-ಧನ್ಯ ವಿವಾಹಕ್ಕೆ ವಿಶೇಷ 12 ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಿದೆ. ವೆಡ್ಡಿಂಗ್ ವಿಷ್ ಹಾಗೂ ಶುಭ ವಿವಾಹ ಎಂಬ ಮುದ್ರಣದೊಂದಿಗೆ ವಿಶೇಷ ಸ್ಟ್ಯಾಂಪ್ ಉಡುಗೊರೆಯಾಗಿ ಬಂದಿದೆ. ಮೈಸೂರು ಅಂಚೆ ವಿಭಾಗ ಅಧಿಕಾರಿಗಳಿಂದ ಧನಂಜಯಗೆ ಸ್ಟ್ಯಾಂಪ್ ಉಡುಗೊರೆ ಸಿಕ್ಕಿದೆ. ಅಂಚೆ ಇಲಾಖೆ ಅಧಿಕಾರಿಗಳು ಮದುಮಗ ಧನಂಜಯ್ ಅವರನ್ನು ಭೇಟಿ ಮಾಡಿ, ವಿಶೇಷ ಸ್ಟ್ಯಾಂಪ್ ನೀಡಿದ್ದಾರೆ.

ಅಂಚೆ ಇಲಾಖೆ ಉಡುಗೊರೆ ಕಂಡು ಡಾಲಿ ಖುಷ್

ವಿಶೇಷ ಸ್ಟ್ಯಾಂಪ್‌ನಲ್ಲಿ ಧನಂಜಯ-ಧನ್ಯತಾ ಪೋಟೋ ಬಳಸಿ ಶುಭಾಶಯ ಕೋರಲಾಗಿದೆ. ಇನ್ ಲ್ಯಾಂಡ್ ಲೇಟರ್ ಮಾದರಿ ಆಮಂತ್ರಣ ನೀಡುವ ಮೂಲಕ ಜನರಿಗೆ ಮಾದರಿಯಾಗಿದ್ದೀರಿ. “ನಿಮ್ಮ ನಡೆಯಿಂದ ಮತ್ತೆ ಇನ್ ಲ್ಯಾಂಡ್ ಲೆಟರ್‌ಗಳಿಗೆ ಬೇಡಿಕೆ ಬಂದಿದೆ. ಜನರು ಮತ್ತೆ ಅಂಚೆ ಕಚೇರಿಯಲ್ಲಿ ಇನ್ ಲ್ಯಾಂಡ್ ಲೆಟರ್ ಕೇಳಿ ಪಡೆಯುತ್ತಿದ್ದಾರೆ‌. ಮದುವೆಯ ಮೂಲಕ ಮಾದರಿಯಾದ ನಿಮಗೆ ಅಭಿನಂದನೆಗಳು” ಎಂದು ಅಂಚೆ ಇಲಾಖೆ ಅಧಿಕಾರಿಗಳು ಶುಭಾಶಯ ತಿಳಿಸಿದ್ದಾರೆ. ಅಂಚೆ ಇಲಾಖೆ ಉಡುಗೊರೆಗೆ ಕಂಡು ಧನಂಜಯ್ ಹಾಗೂ ಧನ್ಯತಾ ಖುಷಿಪಟ್ಟಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟ ಡಾಲಿ ಧನಂಜಯ, ತಮ್ಮ ವಿವಾಹದ ಲಗ್ನಪತ್ರಿಕೆಯನ್ನು ಇನ್ ಲ್ಯಾಂಡ್ ಲೆಟರರ್‍‌ನಲ್ಲಿ ಕೈ ಬರಹದ ಮೂಲಕ ಬರೆದು ಸ್ಟಾರ್ ನಟರು ಹಾಗೂ ಮಾಧ್ಯಮದವರನ್ನು ಆಹ್ವಾನಿಸಿದ್ದರು. ಅವರು ಕೈ ಬರಹದ ಮೂಲಕ ಬರೆದ ಲಗ್ನ ಪತ್ರಿಕೆಯು ವೈರಲ್ ಆಗಿತ್ತು. ಅದೇ ಕಾರಣಕ್ಕಾಗಿ ಅಂಚೆ ಇಲಾಖೆಯು ಸ್ಟಾಂಪ್ ಉಡುಗೊರೆ ನೀಡುವ ಮೂಲಕ ಶುಭಾಶಯ ಕೋರಿದೆ.

Suma Gaonkar

eMail
Whats_app_banner