ಕನ್ನಡ ಸುದ್ದಿ  /  Entertainment  /  Sudeep Daughter Sanvi About Nepotism

Sanvi Sudeep about Nepotism: ನಮ್ಮನ್ನು ದ್ವೇಷಿಸುವುದನ್ನು ಬಿಡಿ..ನೆಪೋಟಿಸಂ ಬಗ್ಗೆ ಸುದೀಪ್‌ ಪುತ್ರಿ ಮನದಾಳದ ಮಾತು

ಸೆಲಬ್ರಿಟಿಗಳ ಮಕ್ಕಳನ್ನು ಬಹಳ ಜನರು ದ್ವೇಷಿಸುತ್ತಾರೆ. ಸೆಲೆಬ್ರಿಟಿಗಳ ಮಕ್ಕಳಾಗಿ ಹುಟ್ಟಿದ್ದು ಅವರ ತಪ್ಪಲ್ಲ, ಆದ್ದರಿಂದ ಅವರನ್ನು ದ್ವೇಷಿಸುವುದನ್ನು ನಿಲ್ಲಿಸಿ ಎಂದು ಸಾನ್ವಿ ಉತ್ತರಿಸಿದ್ದಾರೆ.

ಪುತ್ರಿ ಸಾನ್ವಿ ಜೊತೆ ಸುದೀಪ್
ಪುತ್ರಿ ಸಾನ್ವಿ ಜೊತೆ ಸುದೀಪ್ (PC: sanvisudeepofficial Instagram)

ಚಿತ್ರರಂಗದಲ್ಲಿ ನೆಪೋಟಿಸಂ ಬಹಳ ಹಿಂದಿನಿಂದಲೂ ಸದ್ದು ಮಾಡುತ್ತಿದೆ. ಆದರೆ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಮಾಡಿಕೊಂಡ ನಂತರವಂತೂ ದೇಶಾದ್ಯಂತ ನೆಪೋಟಿಸಂ ವಿಚಾರ ಭಾರೀ ಸದ್ದು ಮಾಡಿತ್ತು. ಸ್ಟಾರ್‌ ಕಿಡ್‌ಗಳ ಮಕ್ಕಳ ಸಿನಿಮಾಗಳನ್ನು ಬಹಿಷ್ಕರಿಸುವಂತೆ ಅಭಿಯಾನ ಕೂಡಾ ನಡೆದಿತ್ತು.

ಬಾಲಿವುಡ್‌ ನಟಿ ಕಂಗನಾ ರಣಾವತ್‌ ಕೂಡಾ ನೆಪೋಟಿಸಂ ವಿರುದ್ಧ ಯುದ್ಧವನ್ನೇ ಸಾರಿದ್ದರು. ಸ್ಟಾರ್‌ ಕಿಡ್‌ಗಳ ಬಗ್ಗೆ ಬಹಿರಂಗವಾಗೇ ಪ್ರತಿಕ್ರಿಯಿಸಿದ್ದರು. ಸ್ಟಾರ್‌ ಕಿಡ್‌ಗಳಿಂದಲೇ ಸುಶಾಂತ್‌ರಂತ ಪ್ರತಿಭಾವಂತ ನಟರಿಗೆ ಮೋಸವಾಗುತ್ತಿದೆ. ಪ್ರತಿಭೆ ಇದ್ದರೂ ಅವಕಾಶ ದೊರೆಯದಿರುವ ಕಾರಣಕ್ಕೆ, ಅವಕಾಶ ದೊರೆತರೂ ಸ್ಟಾರ್‌ ಕಿಡ್‌ಗಳಿಗಾಗಿ ಆ ಅವಕಾಶವನ್ನು ಕಿತ್ತುಕೊಳ್ಳುವುದಕ್ಕೆ ನೊಂದ ಕೆಲವರು ಖಿನ್ನತೆಗೆ ಒಳಗಾಗಿದ್ದಾರೆ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಂಗನಾ ಆರೋಪಿಸಿದ್ದರು. ಸದ್ಯಕ್ಕೆ ಈ ನೆಪೋಟಿಸಂ ವಿಚಾರ ತಣ್ಣಗಾಗಿದ್ದರೂ, ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುತ್ತಿದೆ. ಇದೀಗ ಸ್ಯಾಂಡಲ್‌ವುಡ್‌ ನಟ ಸುದೀಪ್‌ ಪುತ್ರಿಗೂ ನೆಪೋಟಿಸಂ ಬಗ್ಗೆ ಪ್ರಶ್ನೆ ಎದುರಾಗಿದೆ.

ಕಿಚ್ಚ ಸುದೀಪ್‌ ಪುತ್ರಿ ಸಾನ್ವಿ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ಅವರು ಫಾಲೋವರ್ಸ್‌ ಜೊತೆ ಸಂವಾದ ಮಾಡುತ್ತಿರುತ್ತಾರೆ. ಇತ್ತೀಚೆಗೆ ಸಾನ್ವಿಗೆ ಇನ್ಸ್‌ಟಾಗ್ರಾಮ್‌ನಲ್ಲಿ ಕೆಲವೊಂದು ಪ್ರಶ್ನೆಗಳು ಎದುರಾಗಿದೆ. ಇದಕ್ಕೆ ಸಾನ್ವಿ ಕೂಡಾ ಉತ್ತರ ನೀಡಿದ್ದಾರೆ. ನಿಮ್ಮ ಫೇವರೆಟ್‌ ಸಿನಿಮಾ ಯಾವುದು? ನಿಮ್ಮ ವಯಸ್ಸು ಎಷ್ಟು? ನೀವು ಬಿಗ್‌ ಬಾಸ್‌ಗೆ ಏಕೆ ಹೋಗಲಿಲ್ಲ? ನಿಮ್ಮ ಪೇಂಟಿಂಗ್‌ ಬಹಳ ಚೆನ್ನಾಗಿದೆ, ನಿಮ್ಮ ಹವ್ಯಾಸಗಳೇನು? ನೀವು ಏನು ಓದುತ್ತಿದ್ದೀರಿ? ಎಂಬೆಲ್ಲಾ ಪ್ರಶ್ನೆಗಳು ಎದುರಾಗಿದೆ. ಒಬ್ಬರು ನೆಪೋಟಿಸಂ ಬಗ್ಗೆ ಪ್ರಶ್ನಿಸಿದ್ದಾರೆ.

<p>ಸಾನ್ವಿ ಸುದೀಪ್‌ ಇನ್ಸ್ಟಾಗ್ರಾಮ್‌ ಸ್ಟೇಟಸ್</p>
ಸಾನ್ವಿ ಸುದೀಪ್‌ ಇನ್ಸ್ಟಾಗ್ರಾಮ್‌ ಸ್ಟೇಟಸ್ (PC: sanvisudeepofficial Instagram)

ನೆಪೋಟಿಸಂ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಂಬ ಪ್ರಶ್ನೆಗೆ ಸಾನ್ವಿ ಉತ್ತರಿಸಿದ್ದಾರೆ. ಸೆಲಬ್ರಿಟಿಗಳ ಮಕ್ಕಳನ್ನು ಬಹಳ ಜನರು ದ್ವೇಷಿಸುತ್ತಾರೆ. ಸೆಲೆಬ್ರಿಟಿಗಳ ಮಕ್ಕಳಾಗಿ ಹುಟ್ಟಿದ್ದು ಅವರ ತಪ್ಪಲ್ಲ, ಆದ್ದರಿಂದ ಅವರನ್ನು ದ್ವೇಷಿಸುವುದನ್ನು ನಿಲ್ಲಿಸಿ ಎಂದು ಸಾನ್ವಿ ಉತ್ತರಿಸಿದ್ದಾರೆ. ಸಾನ್ವಿ ಸದ್ಯಕ್ಕೆ ಹೈದರಾಬಾದ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದ್ದರಿಂದ ಸುದೀಪ್‌ ಹೈದರಾಬಾದ್‌ಗೆ ಹೋದಾಗಲೆಲ್ಲಾ ಅಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಸಾನ್ವಿ ತಾವು ಮಾಡಿದ ಸುಂದರ ಪೇಂಟಿಂಗ್‌ಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹಾಡುಗಳನ್ನು ಹಾಡಿ ಆ ವಿಡಿಯೋವನ್ನು ಆಗ್ಗಾಗ್ಗೆ ಪೋಸ್ಟ್‌ ಮಾಡುತ್ತಾರೆ.

IPL_Entry_Point