ಅವಳನ್ನು ಭೇಟಿಯಾದಾಗ ತಾಜಾ ಗಾಳಿಯಂತೆ ಹಿತವಾಗುತ್ತಿತ್ತು ಎಂದ ನಾರಾಯಣ ಮೂರ್ತಿ, ನನ್ನ ತಂದೆಯವರನ್ನು ಮೆಚ್ಚಿಸಲು ವಿಫಲರಾದ್ರು ಅಂದ ಸುಧಾ ಮೂರ್ತಿ
ಕನ್ನಡ ಸುದ್ದಿ  /  ಮನರಂಜನೆ  /  ಅವಳನ್ನು ಭೇಟಿಯಾದಾಗ ತಾಜಾ ಗಾಳಿಯಂತೆ ಹಿತವಾಗುತ್ತಿತ್ತು ಎಂದ ನಾರಾಯಣ ಮೂರ್ತಿ, ನನ್ನ ತಂದೆಯವರನ್ನು ಮೆಚ್ಚಿಸಲು ವಿಫಲರಾದ್ರು ಅಂದ ಸುಧಾ ಮೂರ್ತಿ

ಅವಳನ್ನು ಭೇಟಿಯಾದಾಗ ತಾಜಾ ಗಾಳಿಯಂತೆ ಹಿತವಾಗುತ್ತಿತ್ತು ಎಂದ ನಾರಾಯಣ ಮೂರ್ತಿ, ನನ್ನ ತಂದೆಯವರನ್ನು ಮೆಚ್ಚಿಸಲು ವಿಫಲರಾದ್ರು ಅಂದ ಸುಧಾ ಮೂರ್ತಿ

Sudha Murthy Narayana Murthy love story: ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋನ ಶನಿವಾರದ ಸಂಚಿಕೆಯಲ್ಲಿ ಸುಧಾ ಮೂರ್ತಿ ಮತ್ತು ಇನ್ಫೋಸಿಸ್‌ನ ಸಹ ಸ್ಥಾಪಕರಾದ ನಾರಾಯಣ ಮೂರ್ತಿ ಭಾಗವಹಿಸಿದ್ದಾರೆ. ಈ ಸಮಯದಲ್ಲಿ ಸಾಕಷ್ಟು ಆಸಕ್ತಿದಾಯಕ ವಿಚಾರಗಳನ್ನು ಸುಧಾ ಮೂರ್ತಿ ಬಹಿರಂಗಪಡಿಸಿದ್ದಾರೆ.

ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋನಲ್ಲಿ ಇನ್ಪೋಸಿಸ್‌ ಸಹ ಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾಮೂರ್ತಿ ಭಾಗವಹಿಸಿದ್ದಾರೆ.
ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋನಲ್ಲಿ ಇನ್ಪೋಸಿಸ್‌ ಸಹ ಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾಮೂರ್ತಿ ಭಾಗವಹಿಸಿದ್ದಾರೆ.

Sudha Murthy Narayana Murthy love story: ಹಿಂದಿ ಟೆಲಿವಿಷನ್‌ ಶೋ "ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋ"ದ ಶನಿವಾರದ ಎಪಿಸೋಡ್‌ನಲ್ಲಿ ಲೇಖಕಿ ಸುಧಾ ಮೂರ್ತಿ ಮತ್ತು ಇನ್ಫೋಸಿಸ್‌ನ ಸಹ ಸ್ಥಾಪಕರಾದ ನಾರಾಯಣ ಮೂರ್ತಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಆ ದಿನಗಳನ್ನು ನೆನಪಿಸಿಕೊಂಡರು. ತಮ್ಮ ಪ್ರೇಮಕಥೆಯನ್ನು ತಿಳಿಸಿ ಪ್ರೇಕ್ಷಕರನ್ನು ಪುಳಕಗೊಳಿಸಿದರು. ನಿರೂಪಕ ಕಪಿಲ್‌ ಶರ್ಮಾರ ಜತೆಗೆ ಹಲವು ಮಾಹಿತಿ ಹಂಚಿಕೊಂಡರು. ವಿಶೇಷವಾಗಿ ಸುಧಾಮೂರ್ತಿಯವರು "ನಾರಾಯಣ ಮೂರ್ತಿಯವರು ಮೊದಲ ಬಾರಿಗೆ ತನ್ನ ತಂದೆಯನ್ನು ಭೇಟಿ ಮಾಡಿದ ಸಂದರ್ಭ"ವನ್ನು ನೆನಪಿಸಿದರು.

ಸುಧಾ ಮೂರ್ತಿ- ನಾರಾಯಣ ಮೂರ್ತಿ ಪ್ರೇಮಕಥೆ

ಮೊದಲ ಬಾರಿಗೆ ತನ್ನ ತಂದೆಯನ್ನು ನಾರಾಯಣ ಮೂರ್ತಿ ಭೇಟಿಯಾಗಲು ಬಂದ ಸಂದರ್ಭವನ್ನು ತಿಳಿಸಿದ್ದಾರೆ. “ಅವರ ಟ್ಯಾಕ್ಸಿ ಕೆಟ್ಟುಹೋದ ಕಾರಣ ಮೊದಲ ಬಾರಿಗೆ ನನ್ನ ತಂದೆಯನ್ನು ಭೇಟಿಯಾಗಲು ಎರಡು ಗಂಟೆ ತಡವಾಗಿ ಬಂದ್ರು. ಈ ಸಂದರ್ಭದಲ್ಲಿ ನೀವು ಏನು ಮಾಡುತ್ತಿದ್ದೀರಿ, ಮುಂದೆ ಏನಾಗಲು ಬಯಸಿದ್ದೀರಿ ಎಂದೆಲ್ಲ ನನ್ನ ತಂದೆ ಪ್ರಶ್ನೆಗಳನ್ನು ಕೇಳತ್ತಿದ್ದರು. ಈ ಸಂದರ್ಭದಲ್ಲಿ ನಾರಾಯಣ ಮೂರ್ತಿಯವರು ನಾನು ರಾಜಕೀಯ ಸೇರಲು ಬಯಸುವೆ, ಅನಾಥಾಶ್ರಮ ತೆರೆಯಲು ಬಯಸುವೆ ಎಂದೆಲ್ಲ ಉತ್ತರಿಸುತ್ತಿದ್ದರು. ನನ್ನನ್ನು ನನ್ನ ತಂದೆ ಗಿಫ್ಟ್‌ ಎಂದುಕೊಂಡಿದ್ದರು, ಏಕೆಂದರೆ ಆಗ ಹೆಚ್ಚಿನ ಮಹಿಳೆಯರು ಎಂಜಿನಿಯರಿಂಗ್‌ ಆಯ್ಕೆ ಮಾಡಿಕೊಂಡಿರಲಿಲ್ಲ. ತಡವಾಗಿ ಬಂದರೂ ನನ್ನ ತಂದೆಯನ್ನು ಮೆಚ್ಚಿಸಿದಂತೆ ಕಾಣಲಿಲ್ಲ" ಎಂದು ಸುಧಾಮೂರ್ತಿ ಹೇಳಿದ್ದಾರೆ. ನನ್ನ ತಂದೆ ಆ ಸಮಯದಲ್ಲಿ ಸಾಕಷ್ಟು ಸಮಯಪ್ರಜ್ಞೆ ಹೊಂದಿದ್ದರು ಎಂದು ಸುಧಾಮೂರ್ತಿ ಹೇಳಿದ್ದಾರೆ.

ಈ ಸಂವಾದದಲ್ಲಿ ನಾರಾಯಣ್‌ ಮೂರ್ತಿ ಕೂಡ ಮಾತನಾಡಿದ್ದಾರೆ. “ಆ ಸಮಯದಲ್ಲಿ ನನ್ನಲ್ಲಿ ಸ್ವಲ್ಪ ಲವಲವಿಕೆಯಿತ್ತು. ಅವರಿಗೆ ಕೋಪ ಬರಲಿ ಎಂದುಕೊಂಡಿದ್ದೆ. ನನ್ನಲ್ಲಿ ಆಗ ಕೊಂಚ ಸಾಹಸಮಯ ವ್ಯಕ್ತಿತ್ವ ಇತ್ತು" ಎಂದು ನಾರಾಯಣಮೂರ್ತಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮೊದಲ ಬಾರಿಗೆ ಸುಧಾಮೂರ್ತಿಯನ್ನು ಭೇಟಿಯಾದ ಸಂದರ್ಭವನ್ನೂ ಅವರು ನೆನಪಿಸಿಕೊಂಡಿದ್ದಾರೆ."ಈಕೆಯ್ನು ಭೇಟಿಯಾಗುವುದು ಖುಷಿ ನೀಡುವ ವಿಚಾರ. ಅವಳನ್ನು ಭೇಟಿಯಾಗುವುದು ತಾಜಾ ಗಾಳಿ ಸೇವಿಸಿದಂತೆ. ಅವಳು ಯಾವಾಗಲೂ ಸಕಾರಾತ್ಮಕವಾಗಿರುತ್ತಿದ್ದಳು. ತುಂಬಾ ದಯೆ ಹೊಂದಿದ್ದಳು. ಎಲ್ಲಕ್ಕಿಂತ ಹೆಚ್ಚು ಅವಳು ತುಂಬಾ ಮಾತನಾಡುತ್ತಿದ್ದಳು" ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಬಗ್ಗೆ

ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ತಂತ್ರಜ್ಞಾನ, ವ್ಯಾಪಾರ ಮತ್ತು ಲೋಕೋಪಕಾರಕ್ಕೆ ನೀಡಿದ ಕೊಡುಗೆಗಳಿಂದ ಜನಪ್ರಿಯತೆ ಪಡೆದಿದ್ದಾರೆ. ಜಗತ್ತಿನ ಪ್ರಮುಖ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್‌ನ ಸಹ ಸ್ಥಾಪಕರಲ್ಲಿ ನಾರಾಯಣಮೂರ್ತಿ ಒಬ್ಬರು. ಇದು ಭಾರತದ ಟೆಕ್‌ ಜಗತ್ತನ್ನು ಶ್ರೀಮಂತಗೊಳಿಸಿತು. ಇದೇ ಸಂದರ್ಭದಲ್ಲಿ ಸುಧಾಮೂರ್ತಿ ತನ್ನ ಸಮಾಜಸೇವೆ, ಬರಹ, ಇನ್ಫೋಸಿಸ್‌ ಫೌಂಡೇಶನ್‌ ಕಾರ್ಯಗಳಿಂದ ಜನಪ್ರಿಯತೆ ಪಡೆದಿದ್ದಾರೆ. ಇವು ಭಾರತದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಸುಧಾಮೂರ್ತಿ ಪುಸ್ತಕಗಳು ನಿಜ ಜೀವನದ ಕಥೆಗಳಿಂದ ಸ್ಪೂರ್ತಿ ಪಡೆದಿವೆ. ಸುಧಾಮೂರ್ತಿಯವರು ಅಗರ್ಭ ಶ್ರಿಮಂತರಾಗಿದ್ದರೂ ತಮ್ಮ ಸರಳ, ಸಜ್ಜನಿಕೆ, ನಡೆ, ನುಡಿಯಿಂದ ಹೆಸರುವಾಸಿಯಾಗಿದ್ದಾರೆ.  ಶಿಕ್ಷಣತಜ್ಞೆ, ಲೇಖಕಿ ಮತ್ತು ಸಮಾಜ ಸೇವಕಿ ಸುಧಾಮೂರ್ತಿ ಅವರು ಅನೇಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

Whats_app_banner