ಶೀಘ್ರದಲ್ಲೇ ಟಿವಿಯಲ್ಲಿ ಪ್ರಸಾರವಾಗಲಿದೆ ರಜನಿಕಾಂತ್ ಅಭಿನಯದ ಸಿನಿಮಾ ‘ಲಾಲ್ ಸಲಾಮ್’
ರಜನಿಕಾಂತ್ ಅಭಿನಯದ ಸಿನಿಮಾ ‘ಲಾಲ್ ಸಲಾಮ್’ ಶೀಘ್ರದಲ್ಲೇ ಟಿವಿಯಲ್ಲಿ ಪ್ರಸಾರವಾಗಲಿದೆ. ತೆಲುಗು ಮತ್ತು ತಮಿಳು ಆವೃತ್ತಿಗಳು ಪ್ರಸಾರವಾಗಲಿದೆ. ಅಂದುಕೊಂಡಷ್ಟು ಸದ್ದು ಮಾಡದ ಸಿನಿಮಾ ಒಟಿಟಿಯಲ್ಲೂ ತುಂಬಾ ತಡವಾಗಿ ಸ್ಟ್ರೀಮ್ ಆಗಿತ್ತು.
ರಜನಿಕಾಂತ್ ಅಭಿನಯದ ಲಾಲ್ ಸಲಾಮ್‌ನ ತೆಲುಗು ಮತ್ತು ತಮಿಳು ಆವೃತ್ತಿಗಳು ಶೀಘ್ರದಲ್ಲೇ ಟಿವಿಯಲ್ಲಿ ಪ್ರಸಾರವಾಗಲಿದೆ. ಸನ್ ನೆಟ್‌ವರ್ಕ್‌ನಲ್ಲಿ ಈ ಸಿನಿಮಾವನ್ನು ನೀವು ವೀಕ್ಷಿಸಬಹುದು. ಹೊಸ ವರ್ಷಕ್ಕೆ ಅಥವಾ ಸಂಕ್ರಾತಿಯಂದು ಈ ಸಿನಿಮಾ ಟಿವಿಯಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ. ರಜನಿಕಾಂತ್ ಅಭಿನಯದ ಲಾಲ್ ಸಲಾಮ್ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಹತ್ತು ತಿಂಗಳಾಗಿದೆ. ಈಗ ಟಿವಿಯಲ್ಲೂ ಪ್ರಸಾರವಾಗಲಿದೆ. ಆಕ್ಷನ್ ಡ್ರಾಮಾ ಚಿತ್ರದ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ ಎಂಬ ವದಂತಿ ಇದೆ.
ಲಾಲ್ ಸಲಾಮ್ 2024ರ ತಮಿಳು ಚಿತ್ರವಾಗಿದ್ದು ರಜನಿಕಾಂತ್, ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಫೆಬ್ರವರಿಯಲ್ಲಿ ಬಿಡುಗಡೆಯಾದ ಚಿತ್ರ ಇದಾಗಿದ್ದು ಇನ್ನೂ ಅಷ್ಟಾಗಿ ಜನರ ಕೈಗೆ ಈ ಸಿನಿಮಾ ತಲುಪಿರಲಿಲ್ಲ. ಯಾರು ಥಿಯೇಟರ್‌ನಲ್ಲಿ ನೋಡಿದ್ದಾರೋ ಅವರಿಗಷ್ಟೇ ಈ ಸಿನಿಮಾ ಲಭ್ಯವಾಗಿತ್ತು.
ಲಾಲ್ ಸಲಾಮ್ ಹಿಂದಿ ಆವೃತ್ತಿಯು ಒಟಿಟಿಯಲ್ಲಿ ಇತ್ತೀಚೆಗಷ್ಟೇ ಪ್ರೀಮಿಯರ್ ಆಗಿದ್ದು, ಲಾಲ್ ಸಲಾಮ್ ಹಿಂದಿ ಆವೃತ್ತಿಯು ಡಿಸೆಂಬರ್ 14 ರಂದು ಜೀ ಸಿನಿಮಾ ಚಾನೆಲ್‌ನಲ್ಲಿ ಮತ್ತು ಡಿಸೆಂಬರ್ 15 ರಂದು ಜೀ ಟಿವಿಯಲ್ಲಿ ಪ್ರಸಾರವಾಯಿತು. ಈ ಸಿನಿಮಾ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ತೆರೆಗೆ ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಸನ್ ನೆಟ್‌ವರ್ಕ್ ಪಡೆದುಕೊಂಡಿದೆ. ಹಿಂದಿ ಪ್ರೀಮಿಯರ್ ಹಿನ್ನಲೆಯಲ್ಲಿ ಲಾಲ್ ಸಲಾಂ ಸಿನಿಮಾವನ್ನು ತೆಲುಗು ಮತ್ತು ತಮಿಳಿನಲ್ಲಿ ಪ್ರಸಾರ ಮಾಡಲು ಸನ್ ನೆಟ್ ವರ್ಕ್ ನಿರ್ಧರಿಸಿದೆ ಎಂಬ ಮಾತು ಕೇಳಿಬರುತ್ತಿದೆ.
ಲಾಲ್ ಸಲಾಂ ತೆಲುಗು ಪ್ರೀಮಿಯರ್ ಬಗ್ಗೆ ಶೀಘ್ರದಲ್ಲೇ ಸ್ಪಷ್ಟತೆ ಸಿಗಲಿದೆ ಎಂದು ವರದಿಯಾಗಿದೆ. ಈ ಚಿತ್ರ ಜೆಮಿನಿ ಟಿವಿಯಲ್ಲಿ ಪ್ರಸಾರವಾಗಲಿದೆ ಎಂದು ವರದಿಯಾಗಿದೆ. ಲಾಲ್ ಸಲಾಂ ಸಿನಿಮಾವನ್ನು ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ನಾಯಕರಾಗಿ ನಟಿಸಿದ್ದಾರೆ. ಸುಮಾರು 100 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 17 ಕೋಟಿಗಿಂತ ಕಡಿಮೆ ಕಲೆಕ್ಷನ್ ಮಾಡಿದೆ.
ಪಾತ್ರವರ್ಗ ಹೀಗಿದೆ
ಲಾಲ್ ಸಲಾಂ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಕ್ರಿಕೆಟ್ ಹಿನ್ನೆಲೆಯ ಈ ಸಿನಿಮಾದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಾಯಕಿಯರಾದ ಜೀವಿತಾ ಮತ್ತು ನಿರೋಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.