ಕನ್ನಡ ಸುದ್ದಿ  /  Entertainment  /  Sushma Rao Come Back To Acting As Bhavana

Small Screen: ಭಾವನಾ ಹೆಸರಿನಲ್ಲಿ ಮತ್ತೆ ಧಾರಾವಾಹಿಗೆ ಕಮ್ ಬ್ಯಾಕ್ ಮಾಡಿದ ಸುಷ್ಮಾ ರಾವ್

ಕಳೆದ ವಾರ ವಾಹಿನಿಯು ಸುಷ್ಮಾ ರಾವ್ ಕಾಣಿಸಿಕೊಂಡಿರುವ ಪ್ರೋಮೋ ಹಂಚಿಕೊಂಡಾಗ ಕಿರುತೆರೆಪ್ರಿಯರು ಸುಷ್ಮಾ ರಾವ್ ಅವರನ್ನು ಮತ್ತೆ ಧಾರಾವಾಹಿಯಲ್ಲಿ ನಟಿಯಾಗಿ ನೋಡಲು ಕಾಯುತ್ತಿದ್ದರು. ಸುಷ್ಮಾ ರಾವ್ ಅಭಿನಯದ ಎಪಿಸೋಡ್​​​​​​ಗಳು ಈಗಾಗಲೇ ಪ್ರಸಾರವಾಗುತ್ತಿದೆ.

ಸುಷ್ಮಾ ರಾವ್
ಸುಷ್ಮಾ ರಾವ್

2005 ರಲ್ಲಿ ಪ್ರಸಾರವಾಗುತ್ತಿದ್ದ ಗುಪ್ತಗಾಮಿನಿ ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ. ಆ ಸಮಯದಲ್ಲಿ ಕಿರುತೆರೆಪ್ರಿಯರ ಮೆಚ್ಚಿನ ಧಾರಾವಾಹಿಗಳಲ್ಲಿ ಇದೂ ಕೂಡಾ ಒಂದಾಗಿತ್ತು. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳೂ ಕಿರುತೆರೆಪ್ರಿಯರಿಗೆ ಬಹಳ ಇಷ್ಟವಾಗಿತ್ತು. ಧಾರಾವಾಹಿ ಮುಗಿದ ನಂತರವೂ ಅದರ ಪಾತ್ರಗಳು, ಕಥೆ ಎಲ್ಲರನ್ನೂ ಮತ್ತೆ ಮತ್ತೆ ಕಾಡುತ್ತಿತ್ತು. ಇನ್ನು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸುಷ್ಮಾ ರಾವ್ ಎಲ್ಲರಿಗೂ ಗೊತ್ತು.

ಗುಪ್ತಗಾಮಿನಿ ಧಾರಾವಾಹಿಯಲ್ಲಿ ಸುಷ್ಮಾ ರಾವ್ ಭಾವನಾ ಪಾತ್ರದಲ್ಲಿ ನಟಿಸದ್ದರು. ಈ ಧಾರಾವಾಹಿಯಲ್ಲಿನ ಪಾತ್ರಕ್ಕಾಗಿ ಸುಷ್ಮಾಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಉತ್ತಮ ನಟಿ ಪ್ರಶಸ್ತಿ ಕೂಡಾ ದೊರೆಯಿತು. ಇದಾದ ನಂತರ ಅವರು ಕೆಲವು ಧಾರಾವಾಹಿಗಳಲ್ಲಿ ನಟಿಸಿದರೂ ಅವರ ಭಾವನಾ ಪಾತ್ರ ಇಂದಿಗೂ ಬಹಳ ಫೇಮಸ್. ಈ ಕಾರಣದಿಂದಲೋ ಏನೋ, ಸುಷ್ಮಾ ರಾವ್ ಮತ್ತೆ ಭಾವನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಷ್ಮಾ ರಾವ್ ಮತ್ತೆ ನಟನೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಧಾರಾವಾಹಿಯಲ್ಲಿ ಅವರು ಭಾವನಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಸುಷ್ಮಾ ರಾವ್ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಈಗಾಗಲೇ 100 ಎಪಿಸೋಡ್​​​​ಗಳನ್ನು ಪೂರೈಸಿರುವ ಬೆಟ್ಟದ ಹೂ ಎಂಬ ಧಾರಾವಾಹಿಯಲ್ಲಿ ಸುಷ್ಮಾ ರಾವ್ ಭಾವನಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಈ ಧಾರಾವಾಹಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಕಷ್ಟದಲ್ಲಿರುವ ನಾಯಕಿ ಹೂವಿ ಸಹಾಯಕ್ಕೆ ಬರುವ ಭಾವನಾ ಪಾತ್ರ ಇದಾಗಿದೆ. ಕಳೆದ ವಾರ ವಾಹಿನಿಯು ಸುಷ್ಮಾ ರಾವ್ ಕಾಣಿಸಿಕೊಂಡಿರುವ ಪ್ರೋಮೋ ಹಂಚಿಕೊಂಡಾಗ ಕಿರುತೆರೆಪ್ರಿಯರು ಸುಷ್ಮಾ ರಾವ್ ಅವರನ್ನು ಮತ್ತೆ ಧಾರಾವಾಹಿಯಲ್ಲಿ ನಟಿಯಾಗಿ ನೋಡಲು ಕಾಯುತ್ತಿದ್ದರು. ಸುಷ್ಮಾ ರಾವ್ ಅಭಿನಯದ ಎಪಿಸೋಡ್​​​​​​ಗಳು ಈಗಾಗಲೇ ಪ್ರಸಾರವಾಗುತ್ತಿದ್ದು ಆದಷ್ಟು ಬೇಗ ನೀವು ನಾಯಕಿಯಾಗಿ ಹೊಸ ಧಾರಾವಾಹಿಯಲ್ಲಿ ನಟಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಬೇಡಿಕೆ ಇಟ್ಟಿದ್ದಾರೆ.

ಚಿಕ್ಕಮಗಳೂರಿನ ಹುಡುಗಿ ಸುಷ್ಮಾ ರಾವ್, ಕಂಪ್ಯೂಟರ್ ಸೈನ್ಸ್ ಪದವಿಧರೆ. ಆಕೆ ಭರತನಾಟ್ಯ ಕಲಾವಿದೆ ಕೂಡಾ ಆಗಿದ್ದು ಅನೇಕ ಸ್ಟೇಜ್ ಶೋ ನೀಡಿದ್ದಾರೆ. ವಿಜಯಕಾಶಿ ಅವರ ಪತ್ನಿ ವೈಜಯಂತಿ ಕಾಶಿ ಅವರ ಬಳಿ ಸುಷ್ಮಾ ಕೂಚುಪುಡಿ ಕೂಡಾ ಕಲಿತಿದ್ದಾರೆ. ಎಸ್. ನಾರಾಯಣ್ ಅವರ ಭಾಗೀರಥಿ ಧಾರಾವಾಹಿಯಲ್ಲಿ ವೀಣಾ ಎಂಬ ಪಾತ್ರದಲ್ಲಿ ನಟಿಸಿದ್ದ ಸುಷ್ಮಾ ರಾವ್ ನಂತರ ಸ್ವಾತಿಮುತ್ತು, ಬಿದಿಗೆ ಚಂದ್ರಮ, ಸೊಸೆ ತಂದ ಸೌಭಾಗ್ಯ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಇವರ ವೃತ್ತಿ ಜೀವನದಲ್ಲಿ ಒಳ್ಳೆ ಹೆಸರು ತಂದುಕೊಟ್ಟದ್ದು ಗುಪ್ತಗಾಮಿನಿ ಹಾಗೂ ಯಾವ ಜನ್ಮದ ಮೈತ್ರಿಯೋ ಧಾರಾವಾಹಿಗಳು. ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಬಾಲಕಿ ಗೌರಿಯ ಶಿಕ್ಷಕಿ ಪಾತ್ರದಲ್ಲಿ ಕೂಡಾ ಸುಷ್ಮಾ ರಾವ್ ಕಾಣಿಸಿಕೊಂಡಿದ್ದರು.

ಸುಷ್ಮಾ ರಾವ್ ಕಿರುತೆರೆಯಲ್ಲಿ ನಟಿಯಾಗಿ ಮಾತ್ರವಲ್ಲದೆ ನಿರೂಪಕಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ತರ್ಲೆ ನನ್ಮಕ್ಳು, ಜೀನ್ಸ್, ಮನೆ ಮನೆ ಮಹಾಲಕ್ಷ್ಮಿ ಸೇರಿ ಅನೇಕ ಕಾರ್ಯಕ್ರಮಗಳಿಗೆ ಸುಷ್ಮಾ ರಾವ್ ನಿರೂಪಣೆ ಮಾಡಿದ್ದಾರೆ. ನಿರ್ದೇಶಕ ಪ್ರೀತಿಂ ಗುಬ್ಬಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಸುಷ್ಮಾರಾವ್ ಕೆಲವು ವರ್ಷಗಳ ನಂತರ ಅವರಿಂದ ವಿಚ್ಛೇದನ ಪಡೆದಿದ್ದರು. ಡೈವೋರ್ಸ್ ನಂತರ ಕೆಲವು ದಿನಗಳ ಕಾಲ ನಟನೆ, ನಿರೂಪಣೆಯಿಂದ ದೂರ ಉಳಿದಿದ್ದ ಅವರು ಈಗ ಮತ್ತೆ ಕಿರುತೆರೆಯಲ್ಲಿ ಆ್ಯಕ್ಟಿವ್ ಆಗಿದ್ದಾರೆ.

IPL_Entry_Point

ವಿಭಾಗ