ಕನ್ನಡ ಸುದ್ದಿ  /  Entertainment  /  Swara Bhasker Should Have Seen The Fridge Once Says Sadhvi Prachi

Sadhvi Prachi on Swara Bhaskar: ಮುಸ್ಲಿಂ ಯುವಕನ ಜತೆ ನಟಿ ಸ್ವರಾ ವಿವಾಹ; ‘ನಿಮಗೂ ಫ್ರಿಡ್ಜ್‌ ಗತಿ ಬರಬಹುದು’ ಎಂದ ಸಾಧ್ವಿ ಪ್ರಾಚಿ!

ಸ್ವರಾ ಭಾಸ್ಕರ್‌ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್‌ನ ನಾಯಕಿ ಸಾಧ್ವಿ ಪ್ರಾಚಿ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿಯಲ್ಲಿ ನಡೆದ ಕೊಲೆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಮುಸ್ಲಿಂ ಯುವಕನ ಜತೆ ನಟಿ ಸ್ವರಾ ವಿವಾಹ; ‘ನಿಮಗೂ ಫ್ರಿಡ್ಜ್‌ ಗತಿ ಬರಬಹುದು’ ಎಂದ ಸಾದ್ವಿ ಪ್ರಾಚಿ!
ಮುಸ್ಲಿಂ ಯುವಕನ ಜತೆ ನಟಿ ಸ್ವರಾ ವಿವಾಹ; ‘ನಿಮಗೂ ಫ್ರಿಡ್ಜ್‌ ಗತಿ ಬರಬಹುದು’ ಎಂದ ಸಾದ್ವಿ ಪ್ರಾಚಿ!

Sadhvi Prachi on Swara Bhaskar: ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌, ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದರು. ಸಮಾಜವಾದಿ ಪಕ್ಷದ ಮುಸ್ಲಿಂ ಯುವ ರಾಜಕಾರಣಿಯನ್ನು ವಿವಾಹ ಆಗಿದ್ದಕ್ಕೆ ಪರ ವಿರೋಧ ಚರ್ಚೆಗೆ ಆಹ್ವಾನ ನೀಡಿದ್ದರು. ಕೆಲವರು ಈ ಮದುವೆಯನ್ನು ಟೀಕಿಸಿದರೆ, ಇನ್ನು ಕೆಲವರು ಸ್ವಾಗತಿಸಿ ಬೆಂಬಲಕ್ಕೆ ನಿಂತಿದ್ದರು. ಇದೀಗ ಸ್ವರಾ ಮದುವೆ ನಿರ್ಧಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್‌ನ ನಾಯಕಿ ಸಾಧ್ವಿ ಪ್ರಾಚಿ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡ ಸಾದ್ವಿ, ನೇರವಾಗಿ ಸ್ವರಾಗೆ ಟಾಂಗ್‌ ಕೊಟ್ಟಿದ್ದಾರೆ. ಪ್ರಿಯಕರ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು 32 ತುಂಡುಗಳನ್ನಾಗಿಸಿ ಆ ದೇಹದ ತುಂಡುಗಳನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆ ಘಟನೆಯನ್ನೇ ಉದಾಹರಣೆಯನ್ನಾಗಿಸಿದ ಸಾಧ್ವಿ, ನಿಮಗೂ ಫ್ರಿಡ್ಜ್‌ ಗತಿ ಬರಬಹುದು! ಎಂದಿದ್ದಾರೆ.

"ನನಗನಿಸಿದ ಮಟ್ಟಿಗೆ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ಸ್ವರಾ ಗಮನವಹಿಸಿಲ್ಲ ಎಂದು ಕಾಣಿಸುತ್ತದೆ. ಶ್ರದ್ಧಾ ವಾಲ್ಕರ್ ದೇಹವನ್ನು 32 ತುಂಡುಗಳನ್ನಾಗಿಸಿದ ಫ್ರಿಡ್ಜ್‌ನಲ್ಲಿಟ್ಟಿದ್ದ ಪ್ರಕರಣದ ಬಗ್ಗೆ ಗಂಭೀರತೆ ಅವರಿಗಿಲ್ಲ. ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸ್ವರಾ ಫ್ರಿಡ್ಜ್‌ ಕೇಸ್‌ ಬಗ್ಗೆ ತಿಳಿಯಬೇಕಿತ್ತು. ಇದು ಆಕೆಯ ವೈಯಕ್ತಿಕ ನಿರ್ಧಾರ ಇರಬಹುದು. ಆ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ. ಆದರೆ, ಶ್ರದ್ಧಾಗೆ ಆದ ಸ್ಥಿತಿ ಸ್ವರಾಗೂ ಬರಬಹುದು" ಎಂದಿದ್ದಾರೆ.

ಮುಂದುವರಿದು ಮಾತನಾಡಿರುವ ಸಾಧ್ವಿ,"ಸ್ವರಾ ಅವರು ಮೊದಲಿಂದಲೂ ಹಿಂದುತ್ವ ವಿರೋಧಿ. ಹಿಂದೂ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗುತ್ತಾರೆ ಎಂದು ನನಗೆ ಮೊದಲೇ ಅನಿಸಿತ್ತು. ಇದೀಗ ಅದು ನಿಜವಾಗಿದೆ. ಸ್ವರಾ ಮುಸ್ಲಿಂ ಯುವಕನನ್ನು ಮದುವೆ ಆಗಿದ್ದಾರೆ" ಎಂದಿದ್ದಾರೆ ಸಾದ್ವಿ.

ಫೆ. 16ರಂದು ನಡೆದ ಮದುವೆ..

ಸಾಮಾಜಿಕ ಕಾರ್ಯಕರ್ತ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್ ಜಿರಾರ್ ಅಹ್ಮದ್ ಅವರನ್ನು ಕುಟುಂಬದವರ ಸಮ್ಮುಖದಲ್ಲಿ ಸ್ವರಾ ಗುರುವಾರ (ಫೆ. 16) ವಿವಾಹವಾಗಿದ್ದಾರೆ. ಕೆಂಪು ಸೀರೆಯಲ್ಲಿ ಸ್ವರಾ ಕಾಣಿಸಿದರೆ, ಕೆಂಪು ಮತ್ತು ಬಂಗಾರ ವರ್ಣದ ಕುರ್ತಾದಲ್ಲಿ ಫಹಾದ್‌ ಮಿಂಚಿದ್ದಾರೆ. ಇಬ್ಬರೂ ಕೊರಳಿಗೆ ಹಾರ ಧರಿಸಿ, ಕೈ ಕೈ ಹಿಡಿದುಕೊಂಡು ಕೋರ್ಟ್‌ ಅಂಗಳದಿಂದ ಹೊರ ಬರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಬಳಿಕ ಈ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿಯೂ ಸ್ವರಾ ಶೇರ್‌ ಮಾಡಿದ್ದರು. ಮದುವೆಯಾಗುವ ಬಗ್ಗೆ ಜ. 6ರಂದೇ ಈ ಜೋಡಿ ಕೋರ್ಟ್‌ಗೆ ಸೂಕ್ತ ದಾಖಲೆ ನೀಡಿತ್ತು.

ಯಾರು ಈ ಫಹಾದ್?

ಫಹಾದ್ ಅಹ್ಮದ್ ಬರೇಲಿಯ ಬಹೇದಿ ಪಟ್ಟಣದ ನಿವಾಸಿ. ಸದ್ಯ ಸಮಾಜವಾದಿ ಯುವಜನ ಸಭಾದ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷರಾಗಿದ್ದಾರೆ. ಫಹಾದ್‌ 1992ರಲ್ಲಿ ಜನಿಸಿದರೆ, ಸ್ವರಾ 1988ರಲ್ಲಿ ದೆಹಲಿಯಲ್ಲಿ ಹುಟ್ಟಿದ್ದಾರೆ. ತನಗಿಂತ 6 ವರ್ಷ ಕಿರಿಯನನ್ನು ಸ್ವರಾ ಮದುವೆಯಾಗಿದ್ದಾರೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಫಹಾದ್‌, ಹಲವು ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಪ್ರತಿಭಟನೆ ವೇಳೆ ಇಬ್ಬರ ಮುಖಾಮುಖಿ..

ಸ್ವರಾ ಮತ್ತು ಫಹಾದ್‌ ಇಬ್ಬರ ಮುಖಾಮುಖಿಯಾಗಿದ್ದು 2019ರಲ್ಲಿನ ಪ್ರತಿಭಟನೆಯೊಂದರಲ್ಲಿ. ಅದಾದ ಬಳಿಕ ಇಬ್ಬರ ಸ್ನೇಹ ಮುಂದುವರಿದಿತ್ತು. ಹೀಗಿರುವಾಗಲೇ ಫಹಾದ್ ತನ್ನ ಸಹೋದರಿಯ ಮದುವೆಗೆ ಸ್ವರಾ ಅವರನ್ನು ಆಹ್ವಾನಿಸಿದ್ದರು. ಆದರೆ ಶೂಟಿಂಗ್‌ನಲ್ಲಿ ನಿರತರಾಗಿದ್ದರಿಂದ ಸ್ವರಾ ಈ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. "ನಿಮ್ಮ ಮದುವೆಗೆ ಖಂಡಿತವಾಗಿ ಬರುತ್ತೇನೆ" ಎಂದು ಫಹಾದ್‌ಗೆ ಭರವಸೆ ನೀಡಿದ್ದರು. ಇದೀಗ ಅದೇ ಫಹಾದ್‌ ಜತೆಗೆ ಸ್ವರಾ ಮದುವೆ ನೆರವೇರಿದೆ.

IPL_Entry_Point