Amaran: ಅಮರನ್ ಸಿನಿಮಾದಲ್ಲಿ ಮೊಬೈಲ್ ನಂಬರ್ ಯಡವಟ್ಟು; ವಿದ್ಯಾರ್ಥಿ ಬಳಿ ಕ್ಷಮೆಯಾಚಿಸಿದ ನಿರ್ಮಾಪಕ
ಕನ್ನಡ ಸುದ್ದಿ  /  ಮನರಂಜನೆ  /  Amaran: ಅಮರನ್ ಸಿನಿಮಾದಲ್ಲಿ ಮೊಬೈಲ್ ನಂಬರ್ ಯಡವಟ್ಟು; ವಿದ್ಯಾರ್ಥಿ ಬಳಿ ಕ್ಷಮೆಯಾಚಿಸಿದ ನಿರ್ಮಾಪಕ

Amaran: ಅಮರನ್ ಸಿನಿಮಾದಲ್ಲಿ ಮೊಬೈಲ್ ನಂಬರ್ ಯಡವಟ್ಟು; ವಿದ್ಯಾರ್ಥಿ ಬಳಿ ಕ್ಷಮೆಯಾಚಿಸಿದ ನಿರ್ಮಾಪಕ

ಶಿವಕಾರ್ತಿಕೇಯ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಇತ್ತೀಚಿಗೆ ಬಿಡುಗಡೆಯಾದ ತಮಿಳು ಚಲನಚಿತ್ರ ಅಮರನ್ ನಿರ್ಮಾಪಕರು ವಿದ್ಯಾರ್ಥಿಯ ನಂಬರ್ ಪ್ರದರ್ಶನವಾದ ಕುರಿತು ಕ್ಷಮೆಯಾಚಿಸಿದ್ದಾರೆ.

ವಿದ್ಯಾರ್ಥಿ ಬಳಿ ಕ್ಷಮೆಯಾಚಿಸಿ ಅಮರನ್ ನಿರ್ಮಾಪಕರು
ವಿದ್ಯಾರ್ಥಿ ಬಳಿ ಕ್ಷಮೆಯಾಚಿಸಿ ಅಮರನ್ ನಿರ್ಮಾಪಕರು

ಅಮರನ್‌ ಸಿನಿಮಾದಲ್ಲಿ ಒಂದು ನಂಬರ್ ವಿಷಯ ಎಲ್ಲೆಡೆ ವೈರಲ್ ಆಗಿದೆ. ಒಂದು ದೃಶ್ಯದಲ್ಲಿ ಸಾಯಿ ಪಲ್ಲವಿಯ ನಾಯಕ ನಟಿಯಾಗಿ ಅಭಿನಯಿಸುವಾಗ ನಟನಿಗೆ ಮುದ್ದೆ ಮಾಡಿದ ಕಾಗದದ ಚೂರನ್ನು ಎಸೆಯುತ್ತಾಳೆ. ಆಗ ಅದರಲ್ಲಿ ಒಂದು ನಂಬರ್ ಇರುತ್ತದೆ. ಆ ನಂಬರ್ ಚಿತ್ರದಲ್ಲಿ ತೋರಿಸಿರುವ ಮೊಬೈಲ್ ಸಂಖ್ಯೆಯು ಚೆನ್ನೈನ ವಿದ್ಯಾರ್ಥಿ ವಿವಿ ವಾಗೀಸನ್‌ಗೆ ಸೇರಿದ ನಂಬರ್ ಆಗಿರುತ್ತದೆ. ಆ ನಂಬರ್ ಸಿನಿಮಾದಲ್ಲಿ ತೋರಿಸಿರುವ ಕಾರಣ ವಿದ್ಯಾರ್ಥಿಗೆ ಪದೇ ಪದೇ ಕಾಲ್ ಬಂದು ಸಮಸ್ಯೆಯಾಗಿರುತ್ತದೆ. ಈ ವಿಷಯ ಬಹಿರಂಗವಾಗುತ್ತದೆ. ಅದಾದ ನಂತರದಲ್ಲಿ ಅದಕ್ಕೆ ಪರಿಹಾರವನ್ನೂ ಸಹ ಕೇಳಲಾಗುತ್ತದೆ.

ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಇತ್ತೀಚಿಗೆ ಬಿಡುಗಡೆಯಾದ ತಮಿಳು ಚಲನಚಿತ್ರ ಅಮರನ್ ನಿರ್ಮಾಪಕರು ಚಿತ್ರದ ದೃಶ್ಯವೊಂದರಲ್ಲಿ ಬೇರೊಬ್ಬರ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಅಜಾಗರೂಕತೆಯಿಂದ ಪ್ರದರ್ಶಿಸಿದ್ದಕ್ಕಾಗಿ ಕ್ಷಮೆ ಕೇಳಿದ್ದಾರೆ. ಎಂಜಿನಿಯರಿಂಗ್ ವಿದ್ಯಾರ್ಥಿ ವಿವಿ ವಾಗೀಸನ್ ಅವರಿಗೆ ಕ್ಷಮೆಯಾಚಿಸಿದ್ದಾರೆ.

ಅಚಾತುರ್ಯದ ಬಗ್ಗೆ ಕ್ಷಮೆ ಯಾಚನೆ

ದೃಶ್ಯದಿಂದ ಉಂಟಾದ "ಹೇಳಲಾಗದ ಕಷ್ಟಗಳು ಮತ್ತು ಮಾನಸಿಕ ಸಂಕಟ" ಕ್ಕಾಗಿ 1.1 ಕೋಟಿ ಪರಿಹಾರವನ್ನು ನೀಡಬೇಕೆಂದು ವಿದ್ಯಾರ್ಥಿಯು ನಿರ್ಮಾಪಕರಿಗೆ ಕಾನೂನು ನೋಟಿಸ್ ಕಳುಹಿಸಿದ ನಂತರ ಪ್ರತಿಕ್ರಿಯೆ ಬಂದಿದೆ . ಪ್ರತಿಕ್ರಿಯೆಯಾಗಿ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ (RKFI) ತಮ್ಮಿಂದಾದ ಅಚಾತುರ್ಯದ ಬಗ್ಗೆ ಕ್ಷಮೆ ಯಾಚಿಸಿದೆ.

ಅಮರನ್‌ ಸಿನಿಮಾವನ್ನು ಮನೆಯಲ್ಲೇ ನೋಡಿ

2024ರಲ್ಲಿ ತಮಿಳು ಚಿತ್ರರಂಗದಲ್ಲಿ ಬಿಗ್‌ ಸ್ಟಾರ್‌ಗಳ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್‌ ಕಂಡಿಲ್ಲ. ಈ ಸಂದರ್ಭದಲ್ಲಿ ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ಅಮರನ್ ಥಿಯೇಟರ್ ಮಾಲೀಕರಿಗೆ ಖುಷಿ ನೀಡಿದ್ದು ಸುಳ್ಳಲ್ಲ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಯಶಸ್ಸು ಪಡೆದ ಮತ್ತು ಅನೇಕರ ಹೃದಯವನ್ನು ಗೆದ್ದ ಅಮರನ್ ಸಿನಿಮಾವು ಡಿಸೆಂಬರ್ 5 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನ ಮಾಡಲಿದೆ.

ಶಿವ ಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ಅಮರನ್ ಸಿನಿಮಾ ದೀಪಾವಳಿ ಉಡುಗೊರೆಯಾಗಿ ಅಕ್ಟೋಬರ್ 31ರಂದು ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ರಿಲೀಸ್‌ ಆಗಿತ್ತು. ಬಾಕ್ಸ್‌ ಆಫೀಸ್‌ನಲ್ಲೂ ಚಿತ್ರದ ಗಳಿಕೆ ಉತ್ತಮವಾಗಿತ್ತು. ಜನರ ಬಾಯ್ಮಾತಿನ ಪ್ರಚಾರ, ಮಾಧ್ಯಮಗಳ ಪ್ರಚಾರದ ನೆರವಿನಿಂದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಈವರೆಗೂ 300 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ಸೇನಾ ಮೇಜರ್ ಮುಕುಂದ್ ವರದರಾಜನ್ ಅವರ ಜೀವನ

ಅಮರನ್ ಸೇನಾ ಮೇಜರ್ ಮುಕುಂದ್ ವರದರಾಜನ್ ಅವರ ಜೀವನವನ್ನು ಆಧರಿಸಿದ ಸಿನಿಮಾ. ಶಿವಕಾರ್ತಿಕೇಯನ್ ಈ ಚಿತ್ರದಲ್ಲಿ ಮುಕುಂದ್ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾಯಿ ಪಲ್ಲವಿ ಅವರ ಪತ್ನಿ ರೆಬೆಕಾ ಪಾತ್ರದಲ್ಲಿದ್ದಾರೆ. ರಾಜ್ ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರವನ್ನು ಕಮಲ್ ಹಾಸನ್ ನಿರ್ಮಿಸಿದ್ದಾರೆ. ಡಿಸೆಂಬರ್‌ 5ರಂದು ಚಿತ್ರಮಂದಿರಗಳಲ್ಲಿ ಪುಷ್ಪ 2 ಬಿಡುಗಡೆಯಾಗುವ ಸಮಯದಲ್ಲಿ ಒಟಿಟಿಯಲ್ಲಿ ಅಮರನ್‌ ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

Whats_app_banner