ರೆಟ್ರೋ ಒಟಿಟಿ ಬಿಡುಗಡೆ ದಿನಾಂಕ: ಸೂರ್ಯ ನಟನೆಯ ಗ್ಯಾಂಗ್‌ಸ್ಟರ್ ಸಿನಿಮಾ ಎಲ್ಲಿ, ಯಾವಾಗ ನೋಡಬಹುದು?
ರೆಟ್ರೋ ಒಟಿಟಿ ಬಿಡುಗಡೆ ದಿನಾಂಕ: ತಮಿಳು ನಟ ಸೂರ್ಯ ಮತ್ತು ಪೂಜಾ ಹೆಗ್ಡೆ ನಟನೆ ರೆಟ್ರೋ ಸಿನಿಮಾವು ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗಲಿದೆ? ಯಾವ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ವಿವರ ಇಲ್ಲಿದೆ.

ರೆಟ್ರೋ ಎಂಬ ತಮಿಳು ಸಿನಿಮಾದಲ್ಲಿ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದು ಪಿಜ್ಜಾ ಸಿನಿಮಾದ ಖ್ಯಾತಿಯ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಸಿನಿಮಾವಾಗಿದೆ. ಈ ರೋಮ್ಯಾಂಟಿಕ್ ಆಕ್ಷನ್ ಡ್ರಾಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಗ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದು ತಿಂಗಳ ಬಳಿಕ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ರೆಟ್ರೋ ಸಿನಿಮಾ ಬಿಡುಗಡೆಯಾಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ರೆಟ್ರೋ ಒಟಿಟಿ ಬಿಡುಗಡೆ ದಿನಾಂಕ
ಸೂರ್ಯ ನಟನೆಯ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಖಚಿತವಾಗಿತ್ತು. ನೆಟ್‌ಫ್ಲಿಕ್ಸ್ ಈ ಸಿನಿಮಾದ ಒಟಿಟಿ ಹಕ್ಕುಗಳನ್ನು ತನ್ನದಾಗಿಸಿಕೊಂಡಿತ್ತು. ರೆಟ್ರೋ ಸಿನಿಮಾವು ಮೇ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈಗಲೂ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕೆಲವು ವರದಿಗಳ ಪ್ರಕಾರ ಜೂನ್ 5ರಂದು ನೆಟ್‌ಫ್ಲಿಕ್ಸ್‌ನಲ್ಲಿ ರೆಟ್ರೋ ಸಿನಿಮಾ ಸ್ಟ್ರೀಮಿಂಗ್ ಆಗಲಿದೆಯಂತೆ. ಈ ಕುರಿತು ನೆಟ್‌ಫ್ಲಿಕ್ಸ್ ಅಧಿಕೃತವಾಗಿ ಪ್ರಕಟಣೆ ನೀಡಿಲ್ಲ. ಸಿನಿಮಾ ಬಿಡುಗಡೆಯಾಗುವ ವಾರದಲ್ಲಿಯೇ ಸೋಷಿಯಲ್ ಮೀಡಿಯಾದಲ್ಲಿ ನೆಟ್‌ಫ್ಲಿಕ್ಸ್ ಅಪ್‌ಡೇಟ್ ನೀಡುವುದು ವಾಡಿಕೆ.
ರೆಟ್ರೋ ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಲಾ ವೈಕುಂಠಪುರಂಲೂ ಖ್ಯಾತಿಯ ಪೂಜಾ ಹೆಗ್ಡೆ, ಜೋಜು ಜಾರ್ಜ್, ಜಯರಾಮ್, ಕರುಣಾಸ್, ನಾಸರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರೆಟ್ರೋ ಚಿತ್ರವು ಪರಿ ಕಣ್ಣನ್ ಎಂಬ ವ್ಯಕ್ತಿಯ ಕಥೆಯನ್ನ ಹೊದಿದೆ. ಅವನು ತನ್ನನ್ನು ದ್ವೇಷಿಸುವ ದರೋಡೆಕೋರನ ದತ್ತುಪುತ್ರ. ತನ್ನ ಪ್ರೇಮಿಯನ್ನು ಮದುವೆಯಾಗಲು ಹಿಂದಿನ ಹಿಂಸಾತ್ಮಕ ಮಾರ್ಗಗಳನ್ನು ತ್ಯಜಿಸುತ್ತಾನೆ. ಆದರೆ, ಆತ ಮತ್ತೆ ಹಳೆಯ ಮಾರ್ಗಕ್ಕೆ ಹಿಂತುರುಗಬೇಕಾಗುತ್ತದೆ. ಸರ್ವಾಧಿಕಾರಿಯಿಂದ ಪೀಡಿಸಲ್ಪಟ್ಟ ದ್ವೀಪದಲ್ಲಿ ವಾಸಿಸುವ ತನ್ನ ಪೂರ್ವಜರನ್ನು ರಕ್ಷಿಸಲು ಹೋರಾಡುತ್ತಾನೆ. ಈ ಚಿತ್ರವನ್ನು 2ಡಿ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಸೂರ್ಯ ಮತ್ತು ಜ್ಯೋತಿಕಾ ನಿರ್ಮಿಸಿದ್ದಾರೆ ಮತ್ತು ಸಂತೋಷ್ ನಾರಾಯಣನ್ ಅವರ ಸಂಗೀತವಿದೆ.
ಆಚಾರ್ಯ, ಕಿಸಿ ಕಿ ಭಾಯ್ ಕಿಸಿ ಕಿ ಜಾನ್, ಮತ್ತು ದೇವಾ ಮುಂತಾದ ಸಿನಿಮಾಗಳ ನಂತರ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಈ ಸಿನಿಮಾದಲ್ಲಿ ತನ್ನ ಪಾತ್ರಗಳಿಗೆ ಸೂರ್ಯ ಮತ್ತು ಪೂಜಾ ಹೆಗ್ಡೆ ನ್ಯಾಯ ಒದಗಿಸಿದ್ದಾರೆ. ಆದರೆ, ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.
70 ಮತ್ತು 80 ರ ದಶಕದ ನಡುವೆ ನಡೆಯುವ ಕಥೆಯನ್ನು ರೆಟ್ರೋ ಹೊಂದಿದೆ. ಗ್ಯಾಂಗ್‌ಸ್ಟರ್ ಮತ್ತು ಪ್ರೇಮ ನಾಟಕವಾಗಿರುವ ರೆಟ್ರೋ ಹಲವು ಪದರಗಳನ್ನು ಹೊಂದಿದೆ. ಮೊದಲ ನೋಟದಲ್ಲಿ, ಇದು ಪ್ರೀತಿಗಾಗಿ ಹೋರಾಡುವ ಪರಿ ಕಣ್ಣನ್ ಸರಳ ಕಥೆ ಎನ್ನುವಂತೆ ಇದೆ. ಆದರೆ, ಪರಿ ಕಣ್ಣನ್ ಜನನ ಮತ್ತು ಅದರ ನಿಗೂಢತೆಯಂತಹ ಅನೇಕ ಆಸಕ್ತಿದಾಯಕ ಅಂಶಗಳಿವೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಚೆನ್ನಾಗಿದೆ. ರೆಟ್ರೊದಲ್ಲಿ ಸರಳ ಪ್ರೇಮಕಥೆಯಂತೆ ಕಾಣುವ ಹಲವು ಅಂಶಗಳಿವೆ. ಸೂರ್ಯ ಮತ್ತು ಪೂಜಾ ಹೆಗ್ಡೆ ಅವರ ನಟನೆ, ಸಾಹಸ ದೃಶ್ಯಗಳು ಮತ್ತು ವಿಭಿನ್ನ ಪ್ರಪಂಚ ನಿರ್ಮಾಣವನ್ನು ರೆಟ್ರೋ ಚಿತ್ರದಲ್ಲಿ ಕಾಣಬಹುದು. ಚಿತ್ರದಲ್ಲಿ ಸೂರ್ಯ ಬೆಳಗಿದ್ದಾರೆ, ಆದರೆ, ಚಿತ್ರಕಥೆ ಪೇಲವವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ತನ್ನ ವಿಮರ್ಶೆಯಲ್ಲಿ ತಿಳಿಸಿದೆ.