ಚಿತ್ರಮಂದಿರದೊಳಗೆ ಈ ಸಮಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ; ತೆಲಂಗಾಣ ಹೈಕೋರ್ಟ್ ಹೊಸ ಆದೇಶ
ಪುಷ್ಪ 2 ಸಿನಿಮಾ ಬಿಡುಗಡೆ ಕಾಲ್ತುಳಿತ ಪ್ರಕರಣದ ನಂತರ ಥಿಯೇಟರ್‌ಗೆ ಮಕ್ಕಳ ಪ್ರವೇಶಕ್ಕೆ ಸಂಬಂಧಪಟ್ಟಂತೆ ತೆಲಂಗಾಣ ಹೈಕೋರ್ಟ್ ಹೊಸ ಆದೇಶ ನೀಡಿದೆ. 16 ವರ್ಷದೊಳಗಿನ ಮಕ್ಕಳನ್ನು ಬೆಳಿಗ್ಗೆ 11 ಗಂಟೆಯ ಮೊದಲು ಮತ್ತು ರಾತ್ರಿ 11ರ ನಂತರ ಚಿತ್ರಮಂದಿರದೊಳಕ್ಕೆ ಬಿಡುವಂತಿಲ್ಲ ಎಂದು ಆದೇಶಿಸಿದೆ.

ಪುಷ್ಪ 2 ಸಿನಿಮಾ ಬಿಡುಗಡೆಯ ದಿನ ಚಿತ್ರಮಂದಿರದಲ್ಲಿ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ತಮ್ಮ ಜೀವ ಕಳೆದುಕೊಂಡಿದ್ದರು. ಆ ಕಾಲ್ತುಳಿತ ಪ್ರಕರಣದ ನಂತರ ತೆಲಂಗಾಣ ಹೈಕೋರ್ಟ್ ಹೊಸ ಆದೇಶ ನೀಡಿದೆ. ತೆಲಂಗಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ ವಿಜಯಸೇನ್ ರೆಡ್ಡಿ, ಚಿತ್ರಮಂದಿರದೊಳಗಡೆ 16 ವರ್ಷದೊಳಗಿನ ಮಕ್ಕಳನ್ನು ಬೆಳಿಗ್ಗೆ 11ಗಂಟೆಯ ಮೊದಲು ಮತ್ತು ರಾತ್ರಿ 11ರ ನಂತರ ಚಿತ್ರಮಂದಿರದೊಳಗೆ ಬಿಡುವಂತಿಲ್ಲ ಎಂದು ತಿಳಿಸಿದ್ದಾರೆ. ಮಕ್ಕಳು ಈ ಸಮಯದಲ್ಲಿ ಚಿತ್ರಮಂದಿರದೊಳಗಡೆ ಇರಲು ಅನುಮತಿ ನೀಡಬಾರದು ಎಂದು ತಿಳಿಸಿದ್ದಾರೆ.
ಈ ಸಮಯದಲ್ಲಿ 16 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶವಿಲ್ಲ
ಬೆಳಿಗ್ಗೆ 11 ಗಂಟೆಯ ಮೊದಲು ಮತ್ತು ರಾತ್ರಿ 11ರ ನಂತರದ ಸಮಯದಲ್ಲಿ ಮಕ್ಕಳು ಸಿನಿಮಾ ನೋಡುವುದು ಸೂಕ್ತವಲ್ಲ. ಈ ಸಮಯದಲ್ಲಿ ಚಲನಚಿತ್ರಗಳನ್ನು ನೋಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.
ಪುಷ್ಪ 2: ದಿ ರೂಲ್ ಮತ್ತು ಗೇಮ್ ಚೇಂಜರ್ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಸಮಯದಲ್ಲಿ ಬದಲಾವಣೆ ಮಾಡಿರುವುದು ಮತ್ತು ಟಿಕೆಟ್ ಹೆಚ್ಚಳ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿ ಬಿ ವಿಜಯಸೇನ್ ರೆಡ್ಡಿ ಈ ಆದೇಶ ನೀಡಿದ್ದಾರೆ. 1970ರ ಎಪಿ ಸಿನಿಮಾ (ನಿಯಂತ್ರಣಗಳು) ಪ್ರದರ್ಶನ ನಿಯಮಗಳಡಿಯಲ್ಲಿ ನಮೂನೆ ಬಿಯ ಪರವಾನಿಗೆ ನಿಯಮಗಳು 12 (43)ರಲ್ಲಿ ಬೆಳಗ್ಗೆ 8.40ರವರೆಗೆ ಮತ್ತು ರಾತ್ರಿ 1.30ರ ಬಳಿಕ ಯಾವುದೇ ಸಿನಿಮಾ ಪ್ರದರ್ಶನ ಮಾಡಬಾರದು ಎಂದು ಥಿಯೇಟರ್ ಆಡಳಿತಕ್ಕೆ ಲೈಸನ್ಸ್‌ನಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಬೆಳಗ್ಗೆ ಮತ್ತು ತಡ ರಾತ್ರಿ ಮಕ್ಕಳಿಗೆ ಸಿನಿಮಾ ನೋಡಲು ಅವಕಾಶ ನೀಡಬಾರದು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ" ಎಂದು ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ನಿಯಮಗಳನ್ನು ತರುವಂತೆ ಗೃಹ ಸಚಿವಾಲಯಕ್ಕೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 22ಕ್ಕೆ ಮುಂದೂಡಲಾಗಿದೆ.
ಅಂದು ಏನಾಗಿತ್ತು?
ಪುಷ್ಪ 2; ದಿ ರೂಲ್ ಚಿತ್ರ ಡಿ 5ರ ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಅದಕ್ಕೂ ಮುನ್ನ ನಡೆದ ಪ್ರೀಮಿಯರ್ ಶೋ ನೋಡಲು ಹೈದರಾಬಾದ್‌ನ ಕುಟುಂಬ ಚಿತ್ರಮಂದಿರಕ್ಕೆ ಭೇಟಿ ನೀಡಿತ್ತು. ಅದೇ ಸಂದರ್ಭದಲ್ಲಿ ಕಾಲ್ತುಳಿತ ಕೂಡ ಉಂಟಾಗಿತ್ತು. ಮೃತ ಮಹಿಳೆಯನ್ನು 39 ವರ್ಷದ ರೇವತಿ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಅವರ 9 ವರ್ಷದ ಮಗ ಶ್ರೀತೇಜಾನನ್ನು ಆಂಬ್ಯುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಹೈದರಾಬಾದ್‌ನ ದಿಲ್‌ಸುಖ್‌ನಗರ ನಿವಾಸಿಯಾದ ರೇವತಿ ಅವರು ಪತಿ ಭಾಸ್ಕರ್ ಮತ್ತು ಮಗು ಶ್ರೀತೇಜಾ ಜೊತೆಗೆ ಆರ್‌ಟಿಸಿ ಕ್ರಾಸ್ ರೋಡ್‌ನಲ್ಲಿರುವ ಸಂಧ್ಯಾ ಥಿಯೇಟರ್‌ಗೆ ಬಂದಿದ್ದರು. ರಾತ್ರಿ 10.30 ರ ಸುಮಾರಿಗೆ ಕುಟುಂಬದೊಂದಿಗೆ ಥಿಯೇಟರ್‌ನಿಂದ ಹೊರಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.
