ಸ್ಮಗ್ಲರ್ ಪಾತ್ರದಲ್ಲಿ ವಿಜೃಂಭಿಸಿದ ನಟನಿಗೆ ರಾಷ್ಟ್ರಪ್ರಶಸ್ತಿ, ಜೈಭೀಮ್‌ಗೆ ಸಿಗಲೇ ಇಲ್ಲ ಸೂಕ್ತ ಮನ್ನಣೆ; ಖೇದ ವ್ಯಕ್ತಪಡಿಸಿದ ಸಚಿವೆ
ಸೂರ್ಯ ಅಭಿನಯದ ಜೈ ಭೀಮ್‌ನಂತಹ ವಿಮರ್ಶಕರಿಂದ ಮೆಚ್ಚುಗೆ ಪಡೆದಂತ ಸಿನಿಮಾಗಳಿಗೆ ಯಾವುದೇ ಪ್ರಶಸ್ತಿ ಸಿಗುವುದಿಲ್ಲ. ಆದರೆ ಕಳ್ಳಸಾಗಾಣಿಕೆಯನ್ನೇ ಕೇಂದ್ರವಾಗಿಟ್ಟುಕೊಂಡ ಸಿನಿಮಾದ ನಾಯಕನಿಗೆ ರಾಷ್ಟ್ರ ಪ್ರಶಸ್ತಿ ಬಂದಿದೆ ಎಂದು ತೆಲಂಗಾಣ ಸಚಿವೆ ಸೀತಕ್ಕ ಟೀಕಿಸಿದ್ದಾರೆ.
ಇತ್ತೀಚಿನ ದಿನದಲ್ಲಿ ಸುದ್ದಿಯಲ್ಲಿರುವ ಮತ್ತು ಟ್ರೆಂಡ್ ಆಗಿರುವ ಸಿನಿಮಾ ಎಂದರೆ ಅದು 'ಪುಷ್ಪ 2'. ಈ ಸಿನಿಮಾದಲ್ಲಿ ಪುಷ್ಪರಾಜ್ ರಕ್ತ ಚಂದನದ ಕಳ್ಳ ಸಾಗಾಣಿಕೆ ಮಾಡಿ ಹಣ ಮಾಡುತ್ತಾನೆ. ಇದೇ ರೀತಿ ಕಥಾ ಹಂದರ ಹೊಂದಿರುವ ಸಿನಿಮಾ ಇದು. ಪುಷ್ಪ 1, ಪುಷ್ಪ 2, ಪುಷ್ಪ 3 ಹೀಗೆ ಸಾಲಾಗಿ ಇದೇ ಸಿನಿಮಾ ಜನರ ಮುಂದೆ ಬರಲು ರೆಡಿಯಾಗಿದೆ. ಈಗಾಗಲೇ ಪುಷ್ಪ 2 ಕೂಡ ರಿಲೀಸ್ ಆಗಿದೆ. ಈ ಕುರಿತು ತೆಲಂಗಾಣ ಸಚಿವೆ ಸೀತಕ್ಕ ಮಾತನಾಡಿದ್ದಾರೆ. ಸೂರ್ಯ ಅಭಿನಯದ ಜೈ ಭೀಮ್‌ನಂತಹ ವಿಮರ್ಶಕರಿಂದ ಮೆಚ್ಚುಗೆ ಪಡೆದಂತ ಸಿನಿಮಾಗಳಿಗೆ ಯಾವುದೇ ಪ್ರಶಸ್ತಿ ಸಿಗುವುದಿಲ್ಲ. ಆದರೆ ಈ ರೀತಿ ಕಳ್ಳಸಾಗಾಣಿಕೆಯನ್ನೇ ಕೇಂದ್ರವಾಗಿಟ್ಟುಕೊಂಡ ಸಿನಿಮಾದ ನಾಯಕನಿಗೆ ರಾಷ್ಟ್ರ ಪ್ರಶಸ್ತಿ ಬಂದಿದೆ ಎಂದು ಟೀಕಿಸಿದ್ದಾರೆ.
ಮುಳುಗು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಾ. ಈ ಸಿನಿಮಾವನ್ನು ನೋಡಲು ಹೋಗಿ ಕಾಲ್ತುಳಿತ ಆದ ಬಗ್ಗೆ ಮಾತನಾಡಿದರು. ಸಮಾಜದ ಮೇಲೆ ಉತ್ತಮ ಪ್ರಭಾವ ಬೀರುವಂತ ಸಿನಿಮಾಗಳನ್ನು ಕಡೆಗಣಿಸಲಾಗುತ್ತಿದೆ. ಈ ರೀತಿ ಕಳ್ಳಸಾಗಾಣಿಕೆ, ಸ್ಮಗ್ಲರ್ ಪಾತ್ರಗಳಿಗೆ ರಾಷ್ಟ್ರ ಪ್ರಶಸ್ತಿ ದೊರೆಯುತ್ತಿದೆ ಎಂದು ಹೇಳಿದ್ದಾರೆ.
ನಟರು, ನಿರ್ದೇಶಕರು ಮತ್ತು ನಿರ್ಮಾಪಕರು ಸಮಾಜಕ್ಕೆ ಉತ್ತಮ ಸಿನಿಮಾಗಳನ್ನು ನೀಡಬೇಕು. ಸಿನಿಮಾದಲ್ಲಿ ಮೌಲ್ಯ ಇರಬೇಕು ಎಂದಿದ್ದಾರೆ. ಪುಷ್ಪಾ ಚಿತ್ರಕ್ಕಾಗಿ ನಟ ಅಲ್ಲು ಅರ್ಜುನ್ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಜೈ ಭೀಮ್ ಎಂಬುದು ಸೂರ್ಯ ಅಭಿನಯದ ತಮಿಳು ಚಲನಚಿತ್ರವಾಗಿದ್ದು, ಅಲ್ಲಿ ಅವರು ಹಿಂದುಳಿದ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಹೋರಾಡುವ ವಕೀಲರಾಗಿ ಅಭಿನಯಿಸಿದ್ದಾರೆ.
ಜೈ ಭೀಮ್ ಸಿನಿಮಾ
ಜೈ ಭೀಮ್ ಸಿನಿಮಾ ಈಗಲೂ ನಿಮಗೆ ಅಮೆಜಾನ್ ಪ್ರೈಂನಲ್ಲಿ ನೋಡಲು ಲಭ್ಯವಿದೆ. ಈ ಸಿನಿಮಾದಲ್ಲಿ ನಾಯಕ ನಟನಾಗಿ ಸೂರ್ಯ ಅಭಿನಯಿಸಿದ್ದಾರೆ. ಟಿ.ಜೆ. ಜ್ಞಾನವೇಲ್ ಈ ಸಿನಿಮಾ ನಿರ್ದೇಶಿಸಿದ್ದಾರೆ.
ಪಾತ್ರವರ್ಗ: ಸೂರ್ಯ, ಪ್ರಕಾಶ್ ರಾಜ್, ರಾವ್ ರಮೇಶ್, ರಜಿಶಾ ವಿಜಯನ್, ಮಣಿಕಂದನ್ ಮತ್ತು ಲೀಜೋಮೋಲ್ ಜೋಸ್