ಕನ್ನಡ ಸುದ್ದಿ  /  ಮನರಂಜನೆ  /  3 ಸಾವಿರ ರೂನಲ್ಲಿ ಗೌತಮ್‌ಗೆ ಪಾರ್ಟಿ ನೀಡ್ತಾರಂತೆ ಭೂಮಿಕಾ; ಅಪ್ಪಿ-ಪಾರ್ಥ ಜತೆಗಿರುವ ದೃಶ್ಯ ಅಶ್ವಿನಿ ಕಣ್ಣಿಗೆ ಬಿತ್ತು- ಅಮೃತಧಾರೆ ಸ್ಟೋರಿ

3 ಸಾವಿರ ರೂನಲ್ಲಿ ಗೌತಮ್‌ಗೆ ಪಾರ್ಟಿ ನೀಡ್ತಾರಂತೆ ಭೂಮಿಕಾ; ಅಪ್ಪಿ-ಪಾರ್ಥ ಜತೆಗಿರುವ ದೃಶ್ಯ ಅಶ್ವಿನಿ ಕಣ್ಣಿಗೆ ಬಿತ್ತು- ಅಮೃತಧಾರೆ ಸ್ಟೋರಿ

Amruthadhaare serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ನಿನ್ನೆಯ ಸಂಚಿಕೆಯಲ್ಲಿ ಸಾಮಾನ್ಯ ವಿದ್ಯಮಾನಗಳು ನಡೆದಿವೆ. ಅರುಣ್‌ ಮತ್ತು ಅಶ್ವಿನಿ ನಡುವೆ ಅಸಹನೆಯ ಮಾತುಗಳು, ಶಕುಂತಲಾ ಟೀಮ್‌ನ ಟೆನ್ಷನ್‌, ಅಪ್ಪಿ-ಪಾರ್ಥ ಲವ್‌ ಸ್ಟೋರಿ ನಡುವೆ ಭೂಮಿಕಾರಿಗೆ ಮೊದಲ ವೇತನ ಬಂದಿದೆ.

ಅಮೃತಧಾರೆ ಸ್ಟೋರಿ
ಅಮೃತಧಾರೆ ಸ್ಟೋರಿ

Amruthadhaare serial Yesterday Episode:ಶಕುಂತಲಾದೇವಿ ಮತ್ತು ಟೀಮ್‌ ಮೀಟಿಂಗ್‌ ಮಾಡುತ್ತಿದೆ. "ನಾವು ಅಂದುಕೊಂಡಂತೆ ಅವಳು ಇಲ್ಲ. ನಮ್ಮನ್ನು ಭೂಮಿಕಾ ಕಂಟ್ರೋಲ್‌ ಮಾಡ್ತಾಳಂತೆ. ಅವಳು ಮನೆ ಯುಜಮಾನಿಯಂತೆ. ಇಷ್ಟು ದಿನ ನನ್ನ ಹಿಡಿತದಲ್ಲಿದ್ದ. ಈಗ ಹೆಂಡ್ತಿ ಸೆರಗು ಹಿಡಿದುಕೊಂಡು ಓಡಾಡ್ತ ಇದ್ದಾನೆ" ಎಂದು ಶಕುಂತಲಾದೇವಿ ಹೇಳುತ್ತಾರೆ. ಅಶ್ವಿನಿ, ಜೈದೇವ್‌, ಮನೆಹಾಳ ಮಾವ ಅವರ ಮಾತುಗಳಿಗೆ ಹೂಗುಟ್ಟುತ್ತಿದ್ದಾರೆ. "ನಿಮ್ಮಲ್ಲೆರನ್ನೂ ಯಾವ ಕೊರತೆ ಇಲ್ಲದೆ ಬೆಳೆಸಿದೆ. ಈಗ ಮಿಡಲ್‌ ಕ್ಲಾಸ್‌ನವಳ ಬಳಿ ಪ್ರತಿ ರೂಪಾಯಿಗೂ ಕೇಳಬೇಕು" ಎನ್ನುತ್ತಾರೆ. "ಇನ್ನು ಮುಂದೆ ನಿಮಗೆ ಹಣ ಬೇಕಿದ್ದರೆ ನನ್ನಲ್ಲಿ ಕೇಳಿ, ನಾನು ವ್ಯವಸ್ಥೆ ಮಾಡ್ತಿನಿ" ಎನ್ನುತ್ತಾರೆ ಭೂಮಿಕಾ.

ಅಪೇಕ್ಷಾ-ಪಾರ್ಥ ಲವ್‌ ಸ್ಟೋರಿ

ಅಪೇಕ್ಷಾಳನ್ನು ಬೈಕ್‌ನಲ್ಲಿ ಪಾರ್ಥ ಪಿಕ್‌ ಮಾಡ್ತಾನೆ. ಒಂದಿಷ್ಟು ಲವ್‌ ಮಾತುಗಳು ನಡೆಯುತ್ತವೆ. ಮನೆಯಲ್ಲಿ ಹಣ ಬೇಕಾದರೆ ಕೇಳಬೇಕಾದ ವಿಷಯ ಹೇಳುತ್ತಾನೆ. ನಾನೂ ಕೆಲಸ ಹುಡುಕಬೇಕು ಎನ್ನುತ್ತಾನೆ. ಅಕ್ಕ ಒಳ್ಳೆ ಶಾಕ್‌ ಟ್ರೀಟ್‌ಮೆಂಟ್‌ ಕೊಟ್ಟಿದ್ದಾಳೆ ಎನ್ನುತ್ತಾಳೆ ಅಪೇಕ್ಷಾ. ಒಳ್ಳೆ ಕೆಲಸಕ್ಕೆ ಸೇರಿ, ಫಸ್ಟ್‌ ಸಂಬಳದೊಂದಿಗೆ ಬಂದು ನನ್ನ ಅಪ್ಪನಲ್ಲಿ ಹೆಣ್ಣು ಕೇಳಿ ಎನ್ನುತ್ತಾಳೆ.

ಮಲ್ಲಿ ಗೌತಮ್‌ ಅವರನ್ನು ಭೇಟಿಯಾಗುತ್ತಾಳೆ. ಗೌತಮ್‌ಗೆ ಪಾಯಸ ನೀಡುತ್ತಾಳೆ. ಎಲ್ಲರನ್ನೂ ಸುತ್ತ ಕುಳ್ಳಿರಿಸಿ ಚೆನ್ನಾಗಿ ಮಾತನಾಡಿದ್ರಲ್ವ ತುಂಬಾ ಚೆನ್ನಾಗಿತ್ತು. ನಮ್ಮ ಊರಲ್ಲಿ ಊರ ಗೌಡರು ಮಾತನಾಡಿದಂತೆ ಇತ್ತು. ವಿಷ್ಣುವರ್ಧನ್‌ ಮಾತನಾಡಿದ ಹಾಗೆ ಇತ್ತು. ಎಲ್ಲರನ್ನೂ ಎಷ್ಟು ಚೆನ್ನಾಗಿ ನೋಡಿಕೊಳ್ತಿರ. ಪುಟ್ಟ ಮಗುವಿನ ಮನಸ್ಸು ನಿಮ್ಮದ್ದು ಎಂದು ಮಲ್ಲಿ ಹೇಳುತ್ತಾಳೆ. "ಅಬ್ಬಬ್ಬ ಎಷ್ಟು ಚೆನ್ನಾಗಿ ಮಾತನಾಡ್ತಾಳೆ. ನಿಮ್ಮದೇನಾದರೂ ಕೈವಾಡ ಇದೆಯಾ" ಎಂದು ಭೂಮಿಕಾಳ ಬಳಿ ಕೇಳುತ್ತಾರೆ ಗೌತಮ್‌. ಇಲ್ಲ ಇಲ್ಲ ಎನ್ನುತ್ತಾರೆ. "ಚೆನ್ನಾಗಿ ಮಾತನಾಡ್ತಿಯಾ" ಎಂದು ಮಲ್ಲಿನ ಹೊಗಳುತ್ತಾರೆ. "ಇನ್ನು ಸ್ವಲ್ಪ ಟ್ರೈನಿಂಗ್‌ ಕೊಟ್ಟು ನಿಮ್ಮ ಕೋಚಿಂಗ್‌ ಸೆಂಟರ್‌ಗೆ ಕರೆದುಕೊಂಡು ಹೋಗಿ" ಎಂದು ಭೂಮಿಕಾಳ ಕಾಲು ಎಳೆಯುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಅಶ್ವಿನಿ ಗಂಡ ಅರುಣ್‌ ಕೋಪದಲ್ಲಿದ್ದಾನೆ. ಅಶ್ವಿನಿ ಸಮಧಾನ ಹೇಳುತ್ತಾಳೆ. "ನಾನು ಈ ಮನೆಯ ಅಳಿಯ. ನನಗೆ ಎಷ್ಟು ಇನ್‌ಸಲ್ಟ್‌ ಆಯ್ತು. ಒಂದು ನಿಮಿಷವೂ ಇಲ್ಲಿ ಇರಲು ನನಗೆ ಇಷ್ಟವಿಲ್ಲ. ಇದನ್ನೆಲ್ಲ ಸಹಿಸಿಕೊಂಡು ಇರಲು ಆಗದು. ಅವರು ಕೊಡುವ ಜುಜುಬಿ ಹಣಕ್ಕೆ ಲೆಕ್ಕ ನೀಡಬೇಕಾ" ಎನ್ನುತ್ತಾನೆ. ಇನ್ನು ಇಲ್ಲೇ ಇದ್ರೆ ಚೀಪ್‌ ಆಗಿ ಹೋಗ್ತಿನಿ ಎಂದು ಹೊರಡಲು ಮುಂದಾಗುತ್ತಾನೆ. ಒಟ್ಟಾರೆ ಹಣ ಕಸಿದುಕೊಳ್ಳಲು ಈತನ ಸ್ವಾರ್ಥ ಮುಂದುವರೆಯುತ್ತದೆ.

ಮಂದಾಕಿನಿ ಮತ್ತು ಸದಾಶಿವ ಮನೆಯಲ್ಲಿ ಅಪ್ಪಿ ಬಗ್ಗೆ ಮಾತನಾಡುತ್ತ ಇರುತ್ತಾರೆ. ದೊಡ್ಡ ಮಾಡೆಲ್‌ ಆಗಿ ಮಗಳು ಬೆಳೀತಾ ಇದ್ದಾಳೆ ಎಂದು ಖುಷಿಪಡುತ್ತಾರೆ. ಮಕ್ಕಳು ಒಂದು ದಡ ಸೇರಿದ್ರೆ ಖುಷಿಯಾಗುತ್ತದೆ. ನಮ್ಮ ಮಕ್ಕಳು ಚೆನ್ನಾಗಿರಬೇಕು ಎಂದು ಮಾತನಾಡುತ್ತಾರೆ.

ಭೂಮಿಕಾಳ ಮೊದಲ ತಿಂಗಳ ವೇತನ

ಭೂಮಿಕಾ ಮನೆಯಲ್ಲಿ ಖುಷಿಯಲ್ಲಿದ್ದಾರೆ. ಗೌತಮ್‌ ಬರುತ್ತಾರೆ. ತಿಂಗಳ ಸಂಬಳವನ್ನು ಗೌತಮ್‌ ಕೈಗೆ ಕೊಡುತ್ತಾರೆ. ಅದರಲ್ಲಿ ಎಷ್ಟಿದೆ ಎಂದು ಲೆಕ್ಕ ಮಾಡಲು ತಿಳಿಸುತ್ತಾಳೆ. ಅಯ್ಯೋ 30 ಸಾವಿರ ರೂಪಾಯಿ ಇದೆ. ಏನ್‌ ಮಾಡ್ಲಿ ಎಂದು ಗೌತಮ್‌ ತಮಾಷೆ ಮಾಡುತ್ತಾನೆ. ಈ ಬಾರಿ ಕ್ಲಾಸ್‌ಗೆ ಹೋಗೋದಕ್ಕಿಂತ ಬಂಕ್‌ ಹೊಡೆದದ್ದೇ ಜಾಸ್ತಿ, ಹಾಗೇ ಸಂಬಳ ಕಡಿಮೆ ಬಂದಿದೆ ಎನ್ನುತ್ತಾಳೆ. ಒಟ್ಟಾರೆ ಗಂಡನ ಕೈಗೆ ಹಣ ಕೊಟ್ಟು ಖುಷಿ ಪಡುತ್ತಾರೆ ಭೂಮಿಕಾ. ಮದುವೆಯಾದ ಖುಷಿಗೆ ನಿಮಗೆ ನಾಳೆ ಪಾರ್ಟಿ ಕೊಡ್ತಿನಿ ಎಂದು 3 ಸಾವಿರ ರೂಪಾಯಿ ತೆಗೆದುಕೊಳ್ಳುತ್ತಾಳೆ. ನಾಳೆ ನೀವು ಮಿಡಲ್‌ ಕ್ಲಾಸ್‌ ರೀತಿ ಕನ್ವರ್ಟ್‌ ಆಗಬೇಕು ಎನ್ನುತ್ತಾಳೆ. ಹೀಗಾಗಿ, ಮುಂದಿನ ಸಂಚಿಕೆಯಲ್ಲಿ ಗೌತಮ್‌ಗೆ ಮರೆಯದ ಪಾರ್ಟಿ ನೀಡಲು ರೆಡಿಯಾಗುತ್ತಾಳೆ. ಮೂರು ಸಾವಿರ ರೂಪಾಯಿಯಲ್ಲಿ ಏನು ಪಾರ್ಟಿ ಕೊಡ್ತಾರೆ ಎಂದು ಗೌತಮ್‌ ಆಲೋಚಿಸುತ್ತಾನೆ.

ಅಪೇಕ್ಷಾ ಮತ್ತು ಪಾರ್ಥ ಐಸ್‌ಕ್ರೀಮ್‌ ತಿನ್ನುತ್ತಾ ಮಾತನಾಡುತ್ತಾ ಇರುತ್ತಾರೆ. ಬೇಗ ಬಂದು ಮನೆಯಲ್ಲಿ ಮದುವೆ ವಿಷ್ಯ ಮಾತನಾಡಿ ಎನ್ನುತ್ತಾಳೆ ಅಪ್ಪಿ. ನಾನು ಒಂದು ಕೆಲಸ ಪಡೆದುಕೊಂಡು ಮನೆಗೆ ಬರುವೆ ಎನ್ನುತ್ತಾನೆ. ಇವರಿಬ್ಬರು ಪ್ರೀತಿಯಿಂದ ಮಾತನಾಡುತ್ತ ಇರುವ ದೃಶ್ಯ ಅಲ್ಲೇ ಪಕ್ಕದಲ್ಲಿದ್ದ ಅಶ್ವಿನಿ ಕಣ್ಣಿಗೆ ಬೀಳುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)