ಅಶ್ವಿನಿ ಪತಿಗೆ ಬಡ್ಡಿರಹಿತ ಸಾಲ, ಭೂಮಿಕಾ ಯುಜಮಾನಿಕೆಗೆ ಶಕುಂತಲಾ ಟೀಮ್ ತತ್ತರ, ಫ್ಯಾಷನ್ ಶೋನಲ್ಲಿ ಸೋತ ಮಹಿಮಾ- ಅಮೃತಧಾರೆ ಸೀರಿಯಲ್ ಕಥೆ
Amruthadhaare serial Yesterday Episode: ಅಮೃತಧಾರೆ ಸೀರಿಯಲ್‌ನ ನಿನ್ನೆಯ ಸಂಚಿಕೆಯಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿವೆ. ಭೂಮಿಕಾ ಲೀಡರ್‌ಶಿಪ್‌ಗೆ ಗೌತಮ್ ಬೆಂಬಲ ದೊರಕಿದೆ. ಇದೇ ಸಮಯದಲ್ಲಿ ಅಶ್ವಿನಿ ಪತಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ಅಶ್ವಿನಿಗೂ ಹಣದ ಮಹತ್ವವನ್ನೂ ತಿಳಿಸಿದ್ದಾರೆ.
Amruthadhaare serial Yesterday Episode: ಅಜ್ಜಿ ಹೇಳಿದ ಬುದ್ಧಿ ಮಾತುಗಳು ಗೌತಮ್ ಮೇಲೆ ಪರಿಣಾಮ ಬೀರುತ್ತವೆ. ಇನ್ಮೆಲೆ ನೀವು ಹೇಳಿದ ಹಾಗೆ ಇರುವೆ ಎಂದು ಗೌತಮ್ ಅಜ್ಜಮ್ಮನಿಗೆ ಭರವಸೆ ನೀಡುತ್ತಾರೆ. ಮನೆಯಲ್ಲಿ ಗೌತಮ್ ಇರುವಾಗ ಅಲ್ಲಿಗೆ ಆನಂದ್ ಮತ್ತು ಅಪರ್ಣಾ ಆಗಮಿಸುತ್ತಾರೆ. ಒಂದಿಷ್ಟು ಎಂದಿನ ಮಾತುಗಳು, ಕಾಲೆಳೆಯುವಿಕೆ ಇರುತ್ತದೆ. ಆನಂದ್ ಹೇಳಿದಂತೆ ಭೂಮಿಕಾಗೆ ಸಾರಿ ಕೇಳಿ ಎಲ್ಲಾ ಪರಿಸ್ಥಿತಿ ತಣ್ಣಗಾಗಿರುವ ವಿಚಾರ ಮಾತನಾಡುತ್ತಾರೆ. ಮಲ್ಲಿ ಮತ್ತು ಭೂಮಿಕಾ ಮಾತನಾಡುತ್ತ ಇರುತ್ತಾರೆ. ರಾತ್ರಿ ಪೇಮೆಂಟ್ ಮಾಡಲು ಹೋದಾಗ ಕಾರ್ಡ್ ವರ್ಕ್ ಆಗದ ಕಥೆ ಹೇಳುತ್ತಾಳೆ. ನಾನೇ ಕಾರ್ಡ್ ಪ್ರೀಡ್ಜ್ ಮಾಡಿಸಿದೆ ಎನ್ನುತ್ತಾಳೆ ಭೂಮಿಕಾ. ಭೂಮಿಕಾ ಹೋಗುವಾಗ ಮಲ್ಲಿಗೆ ಹಣ ಕೊಟ್ಟಿರೋದು ಜೈದೇವ್‌ಗೆ ನೆರವಾಗುತ್ತದೆ. 60 ಸಾವಿರ ರೂಪಾಯಿಗೂ ಹೆಚ್ಚು ಒಂದು ರಾತ್ರಿಗೆ ಖರ್ಚಾಯ್ತು ಎಂದು ಮಲ್ಲಿ ಬೇಸರ ವ್ಯಕ್ತಪಡಿಸುತ್ತಾಳೆ. ಒಂದಿಷ್ಟು ಹಣಕ್ಲಾಸು ಮಾತುಕತೆ ಇರುತ್ತದೆ. "ಇನ್ನು ಎಲ್ಲರ ಬಳಿಯೂ ಲೆಕ್ಕ ಕೇಳ್ತಿನಿ. ದುಡ್ಡಿನ ಬೆಲೆ ಗೊತ್ತಿಲ್ಲದೆ ಇರುವವರಿಗೆ ಶಿಸ್ತು ಕಲಿಸಬೇಕಿದೆ" ಎಂದು ಭೂಮಿಕಾ ಹೇಳುತ್ತಾಳೆ.
ಶಕುಂತಲಾ ಆಕ್ರೋಶದಲ್ಲಿದ್ದಾರೆ. ಗೌತಮ್ ಎಂದು ಕರೆಯುತ್ತ ಶಕುಂತಲಾ ಬರುತ್ತಾರೆ. ಗೌತಮ್ ಸಿಗುತ್ತಾರೆ. "ಆನಂದ್ ಕಾರ್ಡ್ ಫ್ರೀಡ್ಜ್ ಮಾಡಿಸಿದ್ದಾರೆ ಎಂದು ಬ್ಯಾಂಕ್‌ನವರು ಹೇಳಿದ್ದಾರೆ. ಭೂಮಿಕಾ ಹೀಗೆ ಮಾಡಲು ಹೇಳಿರಬಹುದು. ಭೂಮಿಕಾಳಿಗೆ ಸ್ವಲ್ಪ ಹೇಳು. ಹೊರಗೆ ಹೋದಾಗ ಎಷ್ಟು ಇನ್‌ಸಲ್ಟ್ ಆಗುತ್ತದೆ" ಎಂದು ಶಕುಂತಲಾ ಹೇಳುತ್ತಾರೆ. "ತುಂಬಾ ಕಷ್ಟ ಆಗುತ್ತಿದೆ ಅಳಿಮಯ್ಯ" ಎಂದು ಮನೆಹಾಳ ಮಾವನೂ ಹೇಳುತ್ತಾರೆ. "ನಿನಗೆ ಇದಕ್ಕೆ ಏನಾದರೂ ಮಾಡಬೇಕು. ಮನೆಯ ವಾತಾವರಣ ಹಾಳಾಗುತ್ತದೆ. ಮನೆ ಎಂದಮೇಲೆ ಎಲ್ಲರೂ ಒಗ್ಗಟ್ಟಾಗಿರಬೇಕು" ಎಂದೆಲ್ಲ ಶಕುಂತಲಾ ಹೇಳುತ್ತಾಳೆ. "ಏನು ಎಂದು ನಾನು ವಿಚಾರಿಸ್ತಿನಿ. ಭೂಮಿಕಾಳ ಬಳಿ ಮಾತನಾಡ್ತಿನಿ" ಎಂದು ಹೇಳಿ ಗೌತಮ್ ಹೋಗುತ್ತಾನೆ. "ನೋಡ್ತ ಇರು ಇವತ್ತು ಇವರಿಬ್ಬರ ನಡುವೆ ಹೇಗೆ ಬೆಂಕಿ ಉರಿಯುತ್ತೆ" ಎಂದು ಶಕುಂತಲಾ ಹೇಳುತ್ತಾರೆ. ಈ ಬೆಂಕಿಯಲ್ಲಿ ಚಳಿ ಕಾಯಿಸೋಣ ಎಂದು ಶಕುಂತಲಾ ಸಹೋದರ ಹೇಳುತ್ತಾನೆ.
ಭೂಮಿಕಾ, ಆನಂದ್, ಅಪರ್ಣಾ ಮಾತನಾಡುತ್ತ ಇರುತ್ತಾರೆ. 'ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ' ಎಂಬ ವರಕವಿಯ ಮಾತನ್ನು ನೆನಪಿಸಿಕೊಳ್ಳುವ ಸಂದರ್ಭದಲ್ಲಿ ಹಾಲ್‌ನಲ್ಲಿ ಎಲ್ಲರೂ ಸೇರಿದ್ದಾರೆ. ನಿಮ್ಮನ್ನು ಕರೆಯುತ್ತಿದ್ದಾರೆ ಎಂದು ಮನೆಯ ಕೆಲಸದವರು ಕರೆಯುತ್ತಾರೆ. ಭೂಮಿಕಾಗೆ ಆತಂಕವಾಗುತ್ತದೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಮನೆಯ ಹಾಲ್‌ನಲ್ಲಿ ಎಲ್ಲರೂ ಕುಳಿತಿದ್ದಾರೆ. ಗೌತಮ್ ಮಾತನಾಡುತ್ತಾನೆ. "ನಾನು ಮನೆಯ ಬಗ್ಗೆ ಯೋಚನೆ ಮಾಡಿದ್ದೇ ಕಡಿಮೆ. ಅಜ್ಜಿ, ಶಕುಂತಲಾ ಚೆನ್ನಾಗಿ ಮ್ಯಾನೇಜ್ ಮಾಡ್ತಾ ಇದ್ರು. ಆ ಜಾಣ್ಮೆ ಅವರಿಬ್ಬರಿಗೂ ಇದೆ. ಈಗ ಅದೇ ಬುದ್ಧಿವಂತಿಕೆ ಭೂಮಿಕಾಗೆ ಇದೆ. ಅದಕ್ಕೆ ಅವರಿಗೆ ಮನೆಯ ಮ್ಯಾನೇಜ್‌ಮೆಂಟ್ ನೀಡಿದೆ. ಅವರು ಸುಪ್ರೀಂ ಅಲ್ಲ. ಡಿಕ್ಟೇಟರ್ ಶಿಪ್ ಅಲ್ಲ" ಎಂದೆಲ್ಲ ಹೇಳುವಾಗ ಶಕುಂತಲಾ ಮತ್ತು ಇತರರಿಗೆ ಖುಷಿಯಾಗುತ್ತದೆ. "ಯಾರೂ ಹೆಚ್ಚು ಯಾರು ಕಡಿಮೆ ಇಲ್ಲ. ಒಂದು ಅಂಡರ್‌ಸ್ಟ್ಯಾಂಡಿಂಗ್ ಇರಬೇಕು. ಒಬ್ಬರನ್ನು ಒಬ್ಬರು ಗೌರವಿಸಬೇಕು. ಎಲ್ಲರಿಗೂ ಜವಾಬ್ದಾರಿ ಇರುತ್ತದೆ. ಅದನ್ನು ನಾವು ಅರ್ಥ ಮಾಡಿಕೊಂಡರೆ ಒಳ್ಳೆಯದು" ಎಂದೆಲ್ಲ ಗೌತಮ್ ಹೇಳುತ್ತಾರೆ. "ಮನೆ ಚೆನ್ನಾಗಿರಬೇಕು ಅದು ನನ್ನ ಆಸೆ. ಈಗ ನಾವು ಭೂಮಿಕಾಗೆ ಮನೆ ಜವಾಬ್ದಾರಿ ನೀಡಿದ್ದೇವೆ ಎಂದಾಗ ಒಂದಿಷ್ಟು ರೂಲ್ಸ್ ಫಾಲೋ ಮಾಡಬೇಕು. ನಿಮಗೆ ಇನ್ನು ಏನೇ ಬೇಕಾದರೂ ಭೂಮಿಕಾಗೆ ಒಂದು ಮಾತು ಕೇಳಿ" ಎಂದಾಗ ಎಲ್ಲರಿಗೂ ಅಚ್ಚರಿಯಾಗುತ್ತದೆ. "ಏನು ಯಾಕೆ ಎಂದು ಹೇಳಬೇಡಿ. ಎಷ್ಟು ಅಂತ ಹೇಳಿ. ಒಂದು ಅಕೌಂಟೆಬಿಲಿಟಿ ಇರಲಿ. ನಾಳೆ ಭೂಮಿಕಾ ನನಗೆ ಲೆಕ್ಕ ಕೊಡಬೇಕಾಗುತ್ತದೆ. ಅವರು ಲೆಕ್ಕ ಕೊಡಬೇಕಾದರೆ ನೀವು ಲೆಕ್ಕ ಕೊಡಬೇಕಾಗುತ್ತದೆ" ಎಂದು ಗೌತಮ್ ಹೇಳಿದಾಗ ಎಲ್ಲರ ತಲೆ ಮೇಲೆ ಚಪ್ಪಡಿ ಬಿದ್ದಂತೆ ಆಗುತ್ತದೆ. "ಭಾರೀ ಸಂಗ್ರಮ ಆಗುತ್ತದೆ ಅಂದುಕೊಂಡರೆ ಹೊಂದಾಣಿಕೆ ಆಗಿದೆ" ಎಂದುಕೊಳ್ಳುತ್ತಾರೆ. ಕಾರ್ಡ್ ಎಲ್ಲಾ ಅನ್‌ಬ್ಲಾಕ್ ಮಾಡಲು ತಿಳಿಸುತ್ತಾರೆ.
ಮಂದಾಕಿನಿ, ಮಹಿಮಾ, ಜೀವನ್ ಮಾತನಾಡುತ್ತ ಇರುತ್ತಾರೆ. ದೋಸೆಗೆ ಮಾವಿನ ಹಣ್ಣಿನ ಸೀಕರಣೆ ಇರಬೇಕಿತ್ತು ಎಂದು ಜೀವನ್ ಹೇಳುತ್ತಾರೆ. ಫ್ಯಾಷನ್ ಶೋನಲ್ಲಿ ಗೆದ್ಯಾ ಎಂದು ಜೀವನ್ ಕೇಳಿದಾಗ "ಇಲ್ಲ ನಾನು ಈ ಬಾರಿ ಪ್ರಿಪೇರ್ ಆಗಿಲ್ಲ. ಮನೆಯ ಕಡೆಗೆ ಗಮನ ನೀಡಿದೆ. ನನಗೆ ಇದು ಖುಷಿ ನೀಡಿದೆ" ಎಂದು ಮಹಿಮಾ ಹೇಳುತ್ತಾಳೆ. ಮನೆ ಕಡೆ ಗಮನ ಕೊಟ್ಲು ಅಂದ್ರೆ ಜೀವನ್ ನಿನ್ನ ಅಮ್ಮನಿಗೆ ಪೂರ್ತಿ ಹುಷಾರಿರಲಿಲ್ಲ. ಅವಳು ಅಲ್ಲಿ ಸೋತ್ಲು, ಇಲ್ಲಿ ಗೆದ್ಲು ಎಂದು ಹೇಳುತ್ತಾರೆ.
ಗೌತಮ್ ಅಶ್ವಿನಿ ಪತಿಗೆ ಹಣದ ಚೆಕ್ ನೀಡುತ್ತಾರೆ. ಎಲ್ಲರೂ ಥ್ಯಾಂಕ್ಸ್ ಹೇಳುತ್ತಾರೆ. "ಇದನ್ನು ಹಾಗೇ ಕೊಡ್ತಾ ಇಲ್ಲ. ಒಂದು ಕಂಡಿಷನ್ ಮೇಲೆ ಕೊಡ್ತಾ ಇದ್ದೇನೆ. ಈ ಹಣವನ್ನ ನೀವು ಬಿಸ್ನೆಸ್‌ಗೆ ಯೂಸ್ ಮಾಡಿಕೊಳ್ಳಿ. ಬಿಸ್ನೆಸ್ ಚೆನ್ನಾಗಿ ಆದಾಗ ಈ ದುಡ್ಡನ್ನ ನನಗೆ ವಾಪಸ್ ನೀಡಬೇಕು" ಎಂದಾಗ ಅಶ್ವಿನಿ, ಅರುಣ್ ಮುಖ ಒಂಥರ ಆಗುತ್ತದೆ. ಹಣವನ್ನು ಮಿಸ್ ಯೂಸ್ ಮಾಡೋ ಅರುಣ್ ಯೋಜನೆ ಉಲ್ಟಾ ಆಗಿದೆ. ಭೂಮಿಕಾಳ ಮುಖದಲ್ಲಿ ನಗು ಬರುತ್ತದೆ. ಇಂಟ್ರೆಸ್ಟ್ ಫ್ರೀ ಲೋನ್, ನಾನು ಹಾಗೆ ಹಣ ಕೊಟ್ಟರೆ ಅರುಣ್ ಸ್ವಾಭಿಮಾನಕ್ಕೆ ಪೆಟ್ಟಾಗುತ್ತದೆ. ಹಾಗೆಯೇ ಹಣ ನೀಡಿದರೆ ಆ ದುಡ್ಡಿಗೆ ಬೆಲೆ ಇರೋದಿಲ್ಲ. ತೆಗೆದುಕೊಂಡವರಿಗೂ ಬೆಲೆ ಇರುವುದಿಲ್ಲ ಎಂದು ಗೌತಮ್ ಹೇಳಿದಾಗ ಅರುಣ್ ಮನಸ್ಸಲ್ಲೇ ಕುದಿಯುತ್ತಾನೆ. "ನಿಮಗೆ ಪ್ರಾಬ್ಲಂ ಇದೆ ಎಂದು ನನಗೆ ಗೊತ್ತಾಗಿರುವುದೇ ಭೂಮಿಕಾ ಅವರಿಂದ" ಎಂದಾಗ ಇನ್ನಷ್ಟು ಅಚ್ಚರಿಯಾಗುತ್ತದೆ. "ಯಾವಾಗಲೂ ನಿಮಗೆ ಹಣ ನೀಡಲು ಆಗುವುದಿಲ್ಲ. ಈಗಾಗಲೇ ಅರ್ಧ ಆಯಸ್ಸು ಮುಗಿದಿದೆ" ಎಂದು ಗೌತಮ್ ಹೇಳಿದಾಗ ಭೂಮಿಕಾ "ಯಾಕೆ ಹಾಗೆಲ್ಲ ಹೇಳುವಿರಿ" ಎನ್ನುತ್ತಾಳೆ. "ಆದಷ್ಟು ಬೇಗ ನಿಮ್ಮ ಬಿಸ್ನೆಸ್ ಉತ್ತಮವಾಗಲಿ. ಆದಷ್ಟು ಬೇಗ ನನ್ನ ಲೋನ್ ತೀರಿಸುವಂತೆ ಆಗಲಿ" ಎಂದು ಗೌತಮ್ ಹೇಳುತ್ತಾರೆ. "ಏನು ಅಶು ಇದು. ಇಷ್ಟು ದೊಡ್ಡ ಮನೆಗೆ ಅಳಿಯ ಆಗಿ ಬಂದ್ರೆ ಸಾವಿರಾರು ಕೋಟಿ ನೋಡಬಹುದು ಅಂದುಕೊಂಡಿದ್ದೆ. ಆದ್ರೆ ಇಲ್ಲಿ ನಿನ್ದು ಅಂತ ಏನೂ ಇಲ್ವ" ಎಂದು ಅರುಣ್ ಕೇಳುತ್ತಾನೆ. ಕೋಪದಿಂದ ಅಶ್ವಿನಿ ಅಲ್ಲಿಂದ ಹೋಗುತ್ತಾಳೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)