ಟಿಆರ್‌ಪಿಯಲ್ಲಿ ಗೂಳಿಯಂತೆ ನುಗ್ಗಿದ ಅಮೃತಧಾರೆ, ಅಣ್ಣಯ್ಯನ ಓಟವೂ ಸಣ್ಣದೇನಲ್ಲ; ರೇಸ್‌ನಿಂದ ಹಿಂದೆ ಸರಿದ ಲಕ್ಷ್ಮೀ ನಿವಾಸ ಧಾರಾವಾಹಿ
Kannada Serial TRP: ಕನ್ನಡದ ಕಿರುತೆರೆಯಲ್ಲಿ 53ನೇ ವಾರದ ಟಿಆರ್‌ಪಿ ರೇಟಿಂಗ್ ಹೊರಬಿದ್ದಿದೆ. ಈ ಸಲ ಘಟಾನುಘಟಿ ಧಾರಾವಾಹಿಗಳೇ ರೇಸ್‌ನಿಂದ ಹಿಂದೆ ಸರಿದಿವೆ. ಅಗ್ರಸ್ಥಾನದಲ್ಲಿ ಇರುತ್ತಿದ್ದ ಲಕ್ಷ್ಮೀ ನಿವಾಸ ಸೀರಿಯಲ್ ಕುಸಿತ ಕಂಡರೆ, ಅಮೃತಧಾರೆ ಪುಟಿದೆದ್ದಿದೆ. ಬಿಗ್ ಬಾಸ್ ಹೇಗಿದೆ, ಸರಿಗಮಪ ಟಿಆರ್‌ಪಿ ಎಷ್ಟಿದೆ? ಇಲ್ಲಿದೆ ವಿವರ.
Kannada Serial TRP: ಕನ್ನಡ ಕಿರುತೆರೆಯಲ್ಲಿ ಕಳೆದ ವಾರ ಟಿಆರ್‌ಪಿ ವಿಚಾರದಲ್ಲಿ ಒಂದಷ್ಟು ಹೊಸ ಹೊಸ ದಾಖಲೆಗಳು ಸೃಷ್ಟಿಯಾಗಿವೆ. ಜತೆಗೆ ರಿಯಾಲಿಟಿ ಶೋನಲ್ಲಿಯೂ ಅಚ್ಚರಿಯ ರೀತಿಯಲ್ಲಿ ನಂಬರ್ ಏರಿಕೆ ಕಂಡಿದೆ. ಬಿಗ್‌ಬಾಸ್‌ಗೆ ಹೋಲಿಕೆ ಮಾಡಿದರೆ, ಸರಿಗಮಪ ಶೋ ವೀಕ್ಷಕರ ಸಂಖ್ಯೆಯೇ ಅಧಿಕ. ವಾರಾಂತ್ಯದ ಕಿಚ್ಚನ ಏಪಿಸೋಡ್‌ಗಿಂತಲೂ, ಸರಿಗಮಪ ಸಿಂಗಿಂಗ್ ಶೋ ನೋಡುವವರೇ ಹೆಚ್ಚಾಗಿದ್ದಾರೆ. ಹಾಗಾದರೆ ಈ ಶೋಗಳು ಪಡೆದ ಟಿಆರ್‌ಪಿ ಎಷ್ಟು, 53ನೇ ವಾರದಲ್ಲಿ ಯಾವ ಧಾರಾವಾಹಿ ನಂಬರ್ 1? ಇಲ್ಲಿದೆ ರೇಟಿಂಗ್ಸ್ ಕುರಿತ ಮಾಹಿತಿ.
ಕನ್ನಡ ಕಿರುತೆರೆಯ ಟಿಆರ್‌ಪಿ ಲೆಕ್ಕಾಚಾರದಲ್ಲಿ ಅಚ್ಚರಿಯ ನಂಬರ್ ಹೊರಬಿದ್ದಿದೆ. ಯಾರೂ ಊಹೆ ಮಾಡದ ರೀತಿಯಲ್ಲಿ, ಅಮೃತಧಾರೆ ಸೀರಿಯಲ್ ಈ ಸಲ ಟಾಪ್ ಸ್ಥಾನಕ್ಕೆ ಬಂದು ನಿಂತಿದೆ. ಬರೋಬ್ಬರಿ 9.8 ಟಿಆರ್‌ಪಿ ಪಡೆದು, ಮೊದಲ ಸ್ಥಾನಕ್ಕೆ ಬಂದು ಕೂತಿದೆ. ಗೌತಮ್ ದಿವಾನ್ ಅಮ್ಮನ ಎಂಟ್ರಿಯಿಂದ ಅಮೃತಧಾರೆ ಸೀರಿಯಲ್ ಕುತೂಹಲ ಕೆರಳಿಸಿತ್ತು. ಆ ಹಿನ್ನೆಲೆಯಲ್ಲಿ ಈಗ ದೊಡ್ಡ ಟಿಆರ್‌ಪಿಯನ್ನೇ ಗಳಿಸಿಕೊಂಡಿದೆ. ಇತ್ತ ಜೀ ಕನ್ನಡದ ಮತ್ತೊಂದು ಸೀರಿಯಲ್ ಅಣ್ಣಯ್ಯ ಸಹ ಒಳ್ಳೆ ಟಿಆರ್ಪಿ ಪಡೆದು 2 ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಅಣ್ಣಯ್ಯನಿಗೆ ಬಂಪರ್
8.6 ಟಿಆರ್‌ಪಿ ಮೂಲಕ ಅಣ್ಣಯ್ಯ ಧಾರಾವಾಹಿ ಎರಡನೇ ಸ್ಥಾನಕ್ಕೆ ಬಂದಿದೆ. ಲಕ್ಷ್ಮೀ ನಿವಾಸ ಸೀರಿಯಲ್ ಅನ್ನೂ ಹಿಂದಿಕ್ಕಿದ್ದಾನೆ ಅಣ್ಣಯ್ಯ. ಅದೇ ರೀತಿ ಈಗಾಗಲೇ ಮೊದಲ ಸ್ಥಾನದಲ್ಲಿಯೇ ಮುಂದುವರಿಯುತ್ತ ಬಂದಿದ್ದ, ಪುಟ್ಟಕ್ಕನ ಮಕ್ಕಳು ಸೀರಿಯಲ್ ಹಿಂದಿಕ್ಕಿದ್ದ ಲಕ್ಷ್ಮೀ ನಿವಾಸ, ಇದೀಗ ಟಿಆರ್‌ಪಿಯಲ್ಲಿ ಕೊಂಚ ಮಂಕಾದಂತಿದೆ. ಮೊದಲ ಮತ್ತು ಎರಡನೇ ಸ್ಥಾನ ಕಳೆದುಕೊಂಡು, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಂದರೆ, 8.1 ಟಿಆರ್‌ಪಿ ಪಡೆದಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಗೆ ಎಷ್ಟನೇ ಸ್ಥಾನ
ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಧಾರಾವಾಹಿ 7.5 ಟಿಆರ್‌ಪಿ ರೇಟಿಂಗ್ ಪಡೆದುಕೊಂಡು, ನಾಲ್ಕನೇ ಸ್ಥಾನದಲ್ಲಿದ್ದರೆ, ಶ್ರಾವಣಿ ಸುಬ್ರಮಣ್ಯ ಸೀರಿಯಲ್ 6.9 ರೇಟಿಂಗ್ ಪಡೆದು ಐದನೇ ಸ್ಥಾನದಲ್ಲಿದೆ. ಇನ್ನು ಕಲರ್ಸ್ ಕನ್ನಡದ ನಾಲ್ಕು ಸೀರಿಯಲ್‌ಗಳು ಸಾಲುಗಟ್ಟಿ ಐದನೇ ಸ್ಥಾನದ ನಂತರ ಬಂದು ನಿಂತಿವೆ. ಭಾಗ್ಯಲಕ್ಷ್ಮೀ ಧಾರಾವಾಹಿ 53ನೇ ವಾರದ ಟಿಆರ್‌ಪಿ ರೇಟಿಂಗ್‌ನಲ್ಲಿ 6.5 ರೇಟಿಂಗ್ ಪಡೆದು ಆರನೇ ಸ್ಥಾನದಲ್ಲಿದ್ದರೆ, ಕಳೆದ ತಿಂಗಳು ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದಿದ್ದ ಲಕ್ಷ್ಮೀ ಬಾರಮ್ಮಇದೀಗ 5.8 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ.
10ನೇ ಸ್ಥಾನದಲ್ಲಿ ಸೀತಾ ರಾಮ
ಇನ್ನು ಕಲರ್ಸ್ ಕನ್ನಡದಲ್ಲಿ ಕಳೆದ ಎರಡು ವಾರಗಳ ಹಿಂದಷ್ಟೇ ಪ್ರಸಾರ ಆರಂಭಿಸಿದ, ನೂರು ಜನ್ಮಕೂ ಸೀರಿಯಲ್ ವೀಕ್ಷಕರಿಗೆ ಇಷ್ಟವಾಗುತ್ತಿದೆ. 5.5 ಟಿಆರ್‌ಪಿ ಮೂಲಕ ಎಂಟನೇ ಸ್ಥಾನದಲ್ಲಿದೆ. ಅದೇ ರೀತಿ ನಿನಗಾಗಿ ಸೀರಿಯಲ್ ಸಹ 5.5 ನಂಬರ್ ಪಡೆದು ಎಂಟನೇ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿವೆ. ಕಲರ್ಸ್‌ನ ಇನ್ನೊಂದು ಸೀರಿಯಲ್ ರಾಮಾಚಾರಿ 5.4 ಟಿಆರ್‌ಪಿಯೊಂದಿಗೆ 9ನೇ ಸ್ಥಾನದಲ್ಲಿದ್ದರೆ, ಜೀ ಕನ್ನಡದ ಸೀತಾ ರಾಮ 5.3 ಟಿಆರ್‌ಪಿಯೊಂದಿಗೆ 10ನೇ ಸ್ಥಾನದಲ್ಲಿದೆ.
ಬಿಗ್ ಬಾಸ್ Vs ಸರಿಗಮಪ
ಇನ್ನು ಡಿಸೆಂಬರ್‌ನ ಕೊನೇ ವಾರದ ಬಿಗ್‌ಬಾಸ್‌ನ ಟಿಆರ್‌ಪಿ ಲೆಕ್ಕಾಚಾರ ನೋಡಿದರೆ, ಸರಿಗಮಪ ಶೋಗೆ ಹೋಲಿಕೆ ಮಾಡಿದರೆ, ಜೀ ಕನ್ನಡದ ಹಾಡಿನ ಕಾರ್ಯಕ್ರಮಕ್ಕೆ ಹೆಚ್ಚು ಜನ ಮರುಳಾದಂತಿದೆ. ಬಿಗ್ ಬಾಸ್ ಸೀರಿಯಲ್ ವಾರದ ಐದು ದಿನ ಅಂದರೆ ಸೋಮವಾರದಿಂದ ಶುಕ್ರವಾರದ ವರೆಗೆ 8.6 ಟಿಆರ್‌ಪಿ ಸಿಕ್ಕರೆ, ಶನಿವಾರ ಮತ್ತು ಭಾನುವಾರದ ಕಿಚ್ಚನ ಸಂಚಿಕೆಗಳು ಬ್ಲಾಕ್ ಬಸ್ಟರ್ ಆಗಿವೆ. ಶನಿವಾರ 9.8, ಭಾನುವಾರ 10.4 ರೇಟಿಂಗ್ ಪಡೆದಿದೆ ಬಿಗ್ ಬಾಸ್. ಅದೇ ರೀತಿ ಸರಿಗಮಪ ಶೋ ನೋಡಿದರೆ, 13.0 ಟಿಆರ್‌ಪಿಯೊಂದಿಗೆ ನಾನ್ ಫಿಕ್ಷನ್‌ನಲ್ಲಿ ಅಗ್ರಸ್ಥಾನದಲ್ಲಿ ನಿಂತಿದೆ.