Amruthadhaare: ವಿಲ್‌ ಪತ್ರ ಅಡಗಿಸಿಟ್ಟ ಜೈದೇವ್‌, ಕಂಪನಿ ಕೈತಪ್ಪಿ ಹೋಗುವ ದುಃಖದಲ್ಲಿ ಗೌತಮ್‌; ಮತ್ತೊಂದು ಟ್ವಿಸ್ಟ್‌ ಇದೆ ಎಂದ ವೀಕ್ಷಕ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ವಿಲ್‌ ಪತ್ರ ಅಡಗಿಸಿಟ್ಟ ಜೈದೇವ್‌, ಕಂಪನಿ ಕೈತಪ್ಪಿ ಹೋಗುವ ದುಃಖದಲ್ಲಿ ಗೌತಮ್‌; ಮತ್ತೊಂದು ಟ್ವಿಸ್ಟ್‌ ಇದೆ ಎಂದ ವೀಕ್ಷಕ

Amruthadhaare: ವಿಲ್‌ ಪತ್ರ ಅಡಗಿಸಿಟ್ಟ ಜೈದೇವ್‌, ಕಂಪನಿ ಕೈತಪ್ಪಿ ಹೋಗುವ ದುಃಖದಲ್ಲಿ ಗೌತಮ್‌; ಮತ್ತೊಂದು ಟ್ವಿಸ್ಟ್‌ ಇದೆ ಎಂದ ವೀಕ್ಷಕ

Amruthadhaare Kannada Serial today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಫೆಬ್ರವರಿ 13ರ ಸಂಚಿಕೆಯಲ್ಲಿ ಕೆಲವೊಂದು ಆತಂಕದ ವಿದ್ಯಮಾನಗಳು ನಡೆದಿವೆ. ಜೈದೇವ್‌, ಶಕುಂತಲಾ, ಭೂಪತಿ ಕುತಂತ್ರದಿಂದ ಗೌತಮ್‌ ಕಂಪನಿಗೆ ಸಂಬಂಧಪಟ್ಟ ಲೀಗಲ್‌ ವಿಲ್‌ ಕಾಣೆಯಾಗಿದೆ. ಮತ್ತೊಂದು ಟ್ವಿಸ್ಟ್‌ನತ್ತ ಸೀರಿಯಲ್‌ ಮುಖ ಮಾಡಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ.

Amruthadhaare: ವಿಲ್‌ ಪತ್ರ ಅಡಗಿಸಿಟ್ಟ ಜೈದೇವ್‌,ಕಂಪನಿ ಕೈತಪ್ಪಿ ಹೋಗುವ ದುಃಖದಲ್ಲಿ ಗೌತಮ್‌
Amruthadhaare: ವಿಲ್‌ ಪತ್ರ ಅಡಗಿಸಿಟ್ಟ ಜೈದೇವ್‌,ಕಂಪನಿ ಕೈತಪ್ಪಿ ಹೋಗುವ ದುಃಖದಲ್ಲಿ ಗೌತಮ್‌

Amruthadhaare Kannada Serial today (Feb 13): ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಬರುವ ವೇಳೆಗೆ ಶಕುಂತಲಾದೇವಿ ವಿಲ್‌ ಅನ್ನು ಅಡಗಿಸಿಡುತ್ತಾರೆ. ಗೌತಮ್‌ ಬಂದಾಗ ವಿಲ್‌ ಇಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ತನ್ನ ಮಲತಾಯಿ ಎಂದು ನೋಡದೆ ಕೋಪದಿಂದ ಗೌತಮ್‌ ಬಯ್ಯುತ್ತಾನೆ. "ನಿಮ್ಮಲ್ಲಿ ಸೇಫ್‌ ಆಗಿ ಇರುತ್ತದೆ ಎಂದು ನಾನು ವಿಲ್‌ ಇಟ್ಟಿದ್ದೇನೆ ಅಲ್ವಾ. ಅದನ್ನು ಕಳೆದುಕೊಂಡಿದ್ದೀರಿ. ಸ್ವಲ್ಪನೂ ಜವಾಬ್ದಾರಿ ಬೇಡ್ವ ಅಮ್ಮಾ" ಎಂದು ಅಬ್ಬರಿಸುತ್ತಾನೆ. ಶಕುಂತಲಾದೇವಿ ಮತ್ತು ಲಕ್ಷ್ಮಿಕಾಂತ್‌ ನಾಟಕ ಮುಂದುವರೆಸುತ್ತಾರೆ. ಶಕುಂತಲಾದೇವಿ ಎದೆ ನೋವಾದಂತೆ ನಾಟಕವಾಡುತ್ತಾಳೆ. "ಸಮಾಧಾನ ಮಾಡಿಕೊಳ್ಳಿ" ಎಂದು ಹೇಳಿ ಗೌತಮ್‌ ಅಲ್ಲಿಂದ ಹೋಗುತ್ತಾನೆ.

ಮಹಿಮಾ ಭೂಮಿಕಾಗೆ ಕಾಲ್‌ ಮಾಡುತ್ತಾಳೆ. ಅಣ್ಣ ನನ್ನ ಕಾಲ್‌ ತೆಗೆದಿಲ್ಲ ಎನ್ನುತ್ತಾಳೆ. ಆಫೀಸ್‌ ವಿಷಯದಲ್ಲಿ ಟೆನ್ಷನ್‌ನಲ್ಲಿದ್ದಾರೆ ಎಂದು ಭೂಮಿಕಾ ಹೇಳಿದಾಗ ಏನು ವಿಷ್ಯ ಎಂದು ಕೇಳುತ್ತಾಳೆ. ಭೂಮಿಕಾ ಎಲ್ಲಾ ಹೇಳುತ್ತಾಳೆ. ಇದರ ಹಿಂದೆ ಇರುವುದು ರಾಜೇಂದ್ರ ಭೂಪತಿ ಎಂದು ಹೇಳುತ್ತಾಳೆ. "ಆ ಭೂಪತಿ ಇಷ್ಟೊಂದು ಡೇಂಜರಾ" ಎಂದು ಮಹಿಮಾ ಅಚ್ಚರಿ ವ್ಯಕ್ತಪಡಿಸುತ್ತಾಳೆ. ಫೋನ್‌ ಇಟ್ಟ ಬಳಿಕ ಮಂದಾಕಿನಿ ಮಾತನಾಡುತ್ತಾರೆ. "ಸಮಸ್ಯೆ ಸಾವಿರ ಇದ್ದರೂ ಅವರು ಗೆದ್ದು ಬರುತ್ತಾರೆ ನಮ್ಮ ಅಳಿಯಂದಿರು" ಎಂದು ಮಂದಾಕಿನಿ ಹೇಳುತ್ತಾರೆ.

ಇನ್ನೊಂದೆಡೆ ಜೈದೇವ್‌ ವಿಲ್‌ ಪತ್ರವನ್ನು ಭೂಪತಿಗೆ ನೀಡುತ್ತಾನೆ. "ಗುರುವಿಗೆ ತಿರುಮಂತ್ರ ಅನ್ನೋ ರೀತಿ ನನಗೂ ಹಾಗೇ ಮಾಡಬೇಡ" ಎಂದು ಭೂಪತಿ ಹೇಳುತ್ತಾನೆ. "ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕಬಾಬ್‌ ಮಾಡ್ತಾರ" ಎಂದು ಜೈದೇವ್‌ ಹೇಳುತ್ತಾನೆ. "ವಿಲ್‌ ಎಲ್ಲಿದೆ" ಎಂದು ಭೂಪತಿ ಕೇಳಿದಾಗ ಜೈದೇವ್‌ "ಅದು ಮನೆಯಲ್ಲಿ ಇದೆ, ಅದು ಮನೆಯಲ್ಲೇ ಇರಲಿ" ಎಂದು ಜೈದೇವ್‌ ಹೇಳುತ್ತಾನೆ. "ಅದನ್ನು ನನ್ನ ಕೈಗೆ ಕೊಡು" ಎಂದು ಭೂಪತಿ ಹೇಳುತ್ತಾನೆ. ಜೈದೇವ್‌ ಇಲ್ಲಿ ಜಾಣತನ ಉಪಯೋಗಿಸಿದ್ದಾನೆ. "ಅವನಲ್ಲಿ ವಿಲ್‌ ಇಲ್ಲ ಎಂದು ತಿಳಿದು ಆಲ್‌ರೆಡಿ ಕುಗ್ಗಿ ಹೋಗಿದ್ದಾನೆ. ಹೀಗಾಗಿ ವಿಲ್‌ ತೋರಿಸಬೇಕಿಲ್ಲ" ಎಂದು ಜೈದೇವ್‌ ಹೇಳುತ್ತಾನೆ. "ಅವನ ಆ ವಿಲ್‌ಪವರ್‌ ಕಡಿಮೆಯಾಗಿದೆ, ಈ ವಿಲ್‌ ಅಗತ್ಯವಿಲ್ಲ. ಈ ವಿಲ್‌ ನನ್ನ ಹತ್ರ ಸೇಫ್‌ ಆಗಿದೆ. ನಾಳೆ ದಿನ ಯಾಮಾರಿ ಅದು ಕೊಟ್ಟದು ನಾನೇ ಎಂದು ಗೊತ್ತಾದರೆ ಪ್ರಾಬ್ಲಂ ಅಲ್ವ" ಎಂದು ಜೈದೇವ್‌ ಹೇಳುತ್ತಾನೆ. ಭೂಪತಿ ಯೋಚನೆಗೆ ಬೀಳುತ್ತಾನೆ. ಜೈದೇವ್‌ ಜತೆ ಡೀಲ್‌ ಸುಲಭ ಅಲ್ಲ ಎನ್ನುವುದು ಅವನಿಗೆ ಅರ್ಥವಾಗಿದೆ. "ಬೆಣ್ಣೆ ಫ್ಯಾಕ್ಟರಿ ಓನರ್‌ ನಾನು, ನನಗೆ ಬೆಣ್ಣೆ ಹಚ್ಚಿಬಿಟ್ಯಲ್ಲ" ಎಂದು ಭೂಪತಿ ಹೇಳುತ್ತಾನೆ.

ಭಾಗ್ಯಮ್ಮನ ಮುಂದೆ ದುಃಖ ತೋಡಿಕೊಂಡ ಗೌತಮ್‌

ಗೌತಮ್‌ಗೆ ಬೇಜಾರಾಗಿದೆ. ಅಮ್ಮನ ಮುಂದೆ ನೋವು ತೋಡಿಕೊಳ್ಳುತ್ತಾನೆ. ಭಾಗ್ಯಮ್ಮನ ಮುಂದೆ ಮಾತನಾಡುತ್ತಾನೆ. "ನಾನು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದೇನೆ" ಎಂದು ಹೇಳುತ್ತಾನೆ. ಆ ಸಮಯದಲ್ಲಿ ಭೂಮಿಕಾ ಮತ್ತು ಸುಧಾ ಬರುತ್ತಾರೆ. "ವಿಲ್‌ ಸಿಕ್ಕಿಲ್ಲದೆ ಇದ್ದರೆ ತೊಂದರೆ ಅಲ್ವಾ" ಎಂದು ಭೂಮಿಕಾ ಕೇಳುತ್ತಾರೆ. "ಅದು ನನ್ನ ಅಪ್ಪ ಬರೆದ ವಿಲ್‌. ಎಲ್ಲಾ ಆಸ್ತಿ ಅಮ್ಮನಿಗೆ ಸೇರಬೇಕು, ಷೇರು ಹಂಚಿಕೆ ಬಗ್ಗೆ ಎಲ್ಲಾ ಆ ವಿಲ್‌ನಲ್ಲಿ ಬರೆದಿತ್ತು. ಇವತ್ತು ಫ್ರೂವ್‌ ಮಾಡ್ತಿನಿ ಅಂತ ಚಾಲೆಂಜ್‌ ಮಾಡಿದ್ದೆ. ಅವರು ಕೇಳುವ ಪ್ರಶ್ನೆಗಳಿಗೆ ಏನು ಅಂತ ಉತ್ತರ ನೀಡಲಿ" ಎಂದು ಗೌತಮ್‌ ಹೇಳುತ್ತಾರೆ. "ಅಮ್ಮ ಮಾತನಾಡುವ ಸ್ಥಿತಿಯಲ್ಲಿದ್ದರೆ ಲೀಗಲ್‌ ಆಗಿ ಒಂದು ಹೋಲ್ಡ್‌ ಇರೋದು" ಎಂದು ಗೌತಮ್‌ ಹೇಳುತ್ತಾರೆ. "ಸರಿ ಲೇಟ್‌ ಆಯ್ತು ನಾನು ಆಫೀಸ್‌ಗೆ ಹೋಗ್ತಿನಿ" ಎಂದು ಗೌತಮ್‌ ಹೊರಡುತ್ತಾನೆ. "ಅದೃಷ್ಟ ನಮ್ಮ ಜತೆ ಇರದೆ ಇರಬಹುದು, ಆದರೆ, ದೇವರು ಇದ್ದಾನೆ. ನಿಮಗೆ ಸೊನ್ನೆಯನ್ನು ಕೋಟಿ ಮಾಡುವ ಶಕ್ತಿ ಇದೆ" ಎಂದು ಭೂಮಿಕಾ ಭರವಸೆಯ ಮಾತುಗಳನ್ನಾಡುತ್ತಾರೆ. "ಥ್ಯಾಂಕ್ಸ್‌ ಭೂಮಿಕಾ, ದೇವರ ಮೇಲೆ ಭಾರ ಹಾಕ್ತಿನಿ" ಎಂದು ಹೇಳುತ್ತಾರೆ ಗೌತಮ್‌.

ಇನ್ನೊಂದೆಡೆ ಜೈದೇವ್‌ ದಿಯಾಳ ಮನೆಗೆ ಬರುತ್ತಾನೆ. ಖುಷಿಯಿಂದ ಮಾತನಾಡುತ್ತಾನೆ. ಮುಂದಿನ ದಿನಗಳ ಕುರಿತು ಭರವಸೆಯ ಮಾತನಾಡುತ್ತಾನೆ. "ಮುಂದೆ ಹಬ್ಬ ಮಾಡೋಣ" ಎನ್ನುತ್ತಾನೆ. ಮತ್ತೊಂದೆಡೆ ಆನಂದ್‌ ಬೇಸರದಲ್ಲಿದ್ದಾನೆ. "ಗೆಳೆಯನ ಕನಸಿನ ಕಂಪನಿ ಕೈತಪ್ಪಿ ಹೋಗಲಿದೆ" ಎಂದು ಬೇಜಾರಲ್ಲಿ ಅಪರ್ಣಳ ಬಳಿ ಮಾತನಾಡುತ್ತಾನೆ. ಸೀರಿಯಲ್‌ ಮುಂದುವರೆಯುತ್ತದೆ. ಇನ್ನೇನಾದರೂ ಅದ್ಭುತ, ಟ್ವಿಸ್ಟ್‌ ನಡೆಯುವ ನಿರೀಕ್ಷೆಯಲ್ಲಿ ವೀಕ್ಷಕರಿದ್ದಾರೆ. "ಜೈದೇವ್‌ ಮಾಡಿರುವ ಯಾವ ಕೆಲಸವೂ ಯಶಸ್ಸು ಆಗದು" "ಭಾಗ್ಯಮ್ಮಳಿಗೆ ನೆನಪು ಬರಬಹುದು,  ಅಮೃತಧಾರೆ ಧಾರಾವಾಹಿಯಲ್ಲಿ ಟ್ವಿಸ್ಟ್‌ ಕಾದಿದೆ" ಎಂದು ಸೀರಿಯಲ್‌ ವೀಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner