Amruthadhaare: ಗೌತಮ್‌ ಮಾತಿನಿಂದ ನೊಂದು ಮನೆಬಿಟ್ಟು ತವರುಮನೆಗೆ ಬಂದ ಭೂಮಿಕಾ; ಅಮೃತಧಾರೆಯಲ್ಲಿ ಹೊಸ ಡ್ರಾಮಾ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಗೌತಮ್‌ ಮಾತಿನಿಂದ ನೊಂದು ಮನೆಬಿಟ್ಟು ತವರುಮನೆಗೆ ಬಂದ ಭೂಮಿಕಾ; ಅಮೃತಧಾರೆಯಲ್ಲಿ ಹೊಸ ಡ್ರಾಮಾ

Amruthadhaare: ಗೌತಮ್‌ ಮಾತಿನಿಂದ ನೊಂದು ಮನೆಬಿಟ್ಟು ತವರುಮನೆಗೆ ಬಂದ ಭೂಮಿಕಾ; ಅಮೃತಧಾರೆಯಲ್ಲಿ ಹೊಸ ಡ್ರಾಮಾ

Amruthadhaare Kannada Serial today Episode: ಜೀ ಕನ್ನಡ ವಾಹಿನಿಯ ಅಮೃತಧಾರೆಯಲ್ಲಿ ಹೊಸದೊಂದು ಡ್ರಾಮಾ ಆರಂಭವಾಗಿದೆ. ಮಹಿಮಾ ಮತ್ತು ಜೀವನ್‌ ಸಂಸಾರ ಸರಿಮಾಡಲು ಭೂಮಿಕಾ ಮತ್ತು ಗೌತಮ್‌ ಹೊಸ ನಾಟಕ ಮಾಡುತ್ತಿದ್ದಾರೆ.

Amruthadhaare: ಗೌತಮ್‌ ಮಾತಿನಿಂದ ನೊಂದು ಮನೆಬಿಟ್ಟು ತವರುಮನೆಗೆ ಬಂದ ಭೂಮಿಕಾ
Amruthadhaare: ಗೌತಮ್‌ ಮಾತಿನಿಂದ ನೊಂದು ಮನೆಬಿಟ್ಟು ತವರುಮನೆಗೆ ಬಂದ ಭೂಮಿಕಾ

ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆಯಲ್ಲಿ ಶಕುಂತಲಾದೇವಿ ಮತ್ತು ಲಕ್ಷ್ಮಿಕಾಂತ ಮಾತನಾಡುತ್ತಾರೆ. ಮಹಿಮಾ ನಾಲ್ಕು ದಿನ ಇದ್ದು ಹೋಗಲು ಬಂದವಳು ಅಲ್ಲ, ಇಲ್ಲೇ ಇರಲು ಬಂದವಳು ಎಂಬ ವಿಷಯ ಅವರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಅವಳು ಇಲ್ಲೇ ಇದ್ದರೆ ನಮಗೆ ಪ್ರಾಬ್ಲಂ ಎಂದು ಅವರು ಮಾತನಾಡಿಕೊಳ್ಳುತ್ತಿದ್ದಾರೆ. ಭಾಗ್ಯಮ್ಮನ ಟೆನ್ಷನ್‌ ನಡುವೆ ಈ ಮಹಿಮಾ ಬೇರೆ ಎಂದು ಶಕುಂತಲಾದೇವಿ ಟೆನ್ಷನ್‌ ಮಾಡಿಕೊಳ್ಳುತ್ತಿದ್ದಾರೆ.

ಮಹಿಮಾಳ ಬಳಿಗೆ ಗೌತಮ್‌ ಮತ್ತು ಭೂಮಿಕಾ ಬರುತ್ತಾರೆ. "ಲೈಫ್‌ ನಡೀತಾ ಇದೆ ಎಂದು ನನಗೆ ಅನಿಸ್ತಾ ಇಲ್ಲ. ನಿನ್ನ ಮನಸ್ಸು ಹೇಗಿದೆ ಎಂದು ನನಗೆ ಅರ್ಥವಾಗುತ್ತಿದೆ. ಸಮ್‌ಥಿಂಗ್‌ ಈಸ್‌ ರಾಂಗ್‌ ವಿತ್‌ ಯು" ಎಂದು ಗೌತಮ್‌ ಕೇಳುತ್ತಾರೆ. ಮಹಿಮಾ ತನ್ನ ಕಥೆ ಹೇಳುತ್ತಾಳೆ. "ನಾನು ದುಡಿದು ತಂದಿರುವುದರಲ್ಲಿ ಉಂಡುಕೊಂಡು ತಿಂದುಕೊಂಡು ಶೋಕಿ ಮಾಡಿಕೊಂಡು ಆರಾಮವಾಗಿದ್ದೀಯ. ಅದೇನೋ ಬಿಸ್ನೆಸ್‌ ಮಾಡ್ತಾ ಇದ್ದಿಯಲ್ವ. ಅದು ಆರಕ್ಕೆ ಏರಲ್ಲ, ಮೂರಕ್ಕೆ ಇಳಿಯೋದಿಲ್ಲ" ಎಂದೆಲ್ಲ ಜೀವನ್‌ ಹೇಳಿದ ಮಾತುಗಳನ್ನು ನೆನಪಿಸಿಕೊಂಡು ಮಹಿಮಾ ಹೇಳಿ ಗೌತಮ್‌ನನ್ನು ತಬ್ಬಿಕೊಳ್ಳುತ್ತಾಳೆ. ಗೌತಮ್‌ ತನ್ನ ತಂಗಿಯನ್ನು ಸಮಧಾನ ಪಡಿಸುತ್ತಾನೆ.

ನಾನು ಅಲ್ಲಿಗೆ ಹೋಗೋದಿಲ್ಲ ಎಂದ ಮಹಿಮಾ

"ಜೀವನ್‌ ಈಗ ಮೊದಲಿನಂತೆ ಇಲ್ಲ. ತುಂಬಾ ಕೆಟ್ಟದ್ದಾಗಿ ವರ್ತಿಸುತ್ತಾನೆ. ಯಾರು ಮಾತನ್ನೂ ಕೇಳೋದಿಲ್ಲ. ಅವನು ಮಾಡುವುದು ತಪ್ಪು ಎಂದು ಹೇಳಿದರೂ ಕೇಳಿಸುವ ಪರಿಸ್ಥಿತಿಯಲ್ಲಿ ಇಲ್ಲ. ಸದಾ ಹಣದ ಬಗ್ಗೆ ಮಾತನಾಡುತ್ತಾನೆ. ನಾನು ಪ್ರೀತಿಸಿದ ಜೀವ ಅವನಲ್ಲ. ತುಂಬಾ ಬದಲಾಗಿದ್ದಾನೆ. ಜೀವ ಮೊದಲಿನಂತೆ ಇಲ್ಲ. ಜೀವ ನನ್ನ ಬಗ್ಗೆ ತುಂಬಾ ಚೀಪ್‌ ಆಗಿ ಮಾತನಾಡಿಬಿಟ್ಟ. ನಿನ್ನ ನನ್ನ ಜತೆಯಲ್ಲಿ ಇದ್ದು ನನ್ನ ಹಂಗಿನಲ್ಲಿ ಇದ್ದೀನಿ ಎಂದು ಹೇಳಿದ. ನಾನು ದುಡಿದು ತರ್ತಿನಿ ನೀನು ಕೂತು ತಿಂದು ಆರಾಮವಾಗಿದ್ದೀಯ. ಭೂಪತಿಯ ಸಹವಾಸ ಮಾಡಬೇಡ ಎಂದು ಹೇಳಿದರೂ ಆತ ಕೇಳುವುದಿಲ್ಲ. ನಾನು ಅಲ್ಲಿಗೆ ಹೋಗೋದಿಲ್ಲ" ಎಂದು ಮಹಿಮಾ ಹೇಳುತ್ತಾಳೆ. "ಸಂಬಂಧ ಅಂದಮೇಲೆ ಒಂದು ಮಾತು ಬರುತ್ತದೆ ಹೋಗುತ್ತದೆ" ಎಂದು ಭೂಮಿಕಾ ಹೇಳಿದರೂ ಮಹಿಮಾ ಕೇಳುವುದಿಲ್ಲ. ನಾನು ಅಲ್ಲಿಗೆ ಹೋಗೋದಿಲ್ಲ ನನ್ನ ಬಲವಂತ ಮಾಡಬೇಡಿ ಎಂದು ಹೇಳುತ್ತಾಳೆ.

ಭೂಮಿಕಾ-ಗೌತಮ್‌ ನಡುವೆ ಜಗಳ

ಇನ್ನೊಂದೆಡೆ ಕೋಪದಿಂದ ಗೌತಮ್‌ ಇದ್ದಾರೆ. ಭೂಮಿಕಾ ಸಮಧಾನ ಮಾಡಲು ಯತ್ನಿಸುತ್ತಾಳೆ. "ಯಾವುದನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳದೆ ನಿರ್ಧಾರ ಕೈಗೊಳ್ಳಬಾರದು. ನಾವು ಒಂದು ಕಡೆ ನೋಡಬಾರದು. ಇನ್ನೊಂದು ಕಡೆಯೂ ನೋಡಬೇಕು. ಸತ್ಯಕ್ಕೆ ಎರಡು ಮುಖ ಇರುತ್ತದೆ. ಒಂದು ನಿಜವಾದ ಸತ್ಯ. ಇನ್ನೊಂದು ನಾವು ಸತ್ಯ ಅಂದುಕೊಂಡಿರುವ ಸತ್ಯ" ಎಂದು ಹೇಳುತ್ತಾಳೆ. "ಅವನು ಮುಂಚಿನ ಜೀವನ್‌ ಅಲ್ಲ. ಅವನ ಸರ್ಕಲ್‌ ಬದಲಾಗಿದೆ" ಎಂದು ಗೌತಮ್‌ ಹೇಳುತ್ತಾರೆ. "ನನ್ನ ತಂಗಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡ್ತಾನೆ. ಏನು ಅಂದುಕೊಂಡಿದ್ದಾನೆ ಅವನು" ಎಂದೆಲ್ಲ ಗೌತಮ್‌ ಕೋಪದಿಂದ ಮಾತನಾಡುತ್ತಾರೆ. ಇವರಿಬ್ಬರ ವಾದವಿವಾದಗಳನ್ನು ದೂರದಿಂದ ಮಹಿಮಾ ಕೇಳಿಸಿಕೊಳ್ಳುತ್ತಿದ್ದಾಳೆ. "ನನ್ನ ತಂಗಿ ವಿಚಾರಕ್ಕೆ ಬಂದರೆ ನಾನು ಸುಮ್ಮನಿರುವುದಿಲ್ಲ. ನಿಮ್ಮದು ಎಷ್ಟು ಇದೆಯೋ ಅಷ್ಟು ನೋಡಿಕೊಳ್ಳಿ" ಎಂದು ಗೌತಮ್‌ ಭೂಮಿಕಾಳಿಗೆ ಹೇಳುತ್ತಾನೆ. ಭೂಮಿಕಾ ಏನೋ ಯೋಚಿಸುತ್ತಾಳೆ.

ಭೂಮಿಕಾ ಲಗೇಜ್‌ ಹಿಡಿದುಕೊಂಡು ಮನೆಯಿಂದ ಹೊರಡುತ್ತಾಳೆ. ಮಹಿಮಾ ಆತಂಕದಿಂದ ನೋಡುತ್ತಿದ್ದಾಳೆ. ಅತ್ತಿಗೆ ಎಂದೂ ಕರೆದರೂ ಕೇಳಿಸದೆ ಹೋಗುತ್ತಾಳೆ. ಇನ್ನೊಂದೆಡೆ ಮಂದಾಕಿನಿ ಮತ್ತು ಸದಾಶಿವ ಟೆನ್ಷನ್‌ನಲ್ಲಿದ್ದಾರೆ. ಇನ್ನೊಂದೆಡೆ ಆ ಮನೆ ಮುಂದೆ ಭೂಮಿಕಾ ಬಂದಿದ್ದಾಳೆ. ಬೆಲ್‌ ಮಾಡಿದ್ರೆ ಅಪ್ಪ ಅಮ್ಮನಿಗೆ ಎಚ್ಚರ ಆಗುತ್ತದೆ. ಜೀವನ್‌ನ ಎಬ್ಬಿಸ್ತಿನಿ ಎಂದು ಯೋಚಿಸಿ ಆತನಿಗೆ ಕಾಲ್‌ ಮಾಡುತ್ತಾಳೆ. "ಅಕ್ಕ ಇಷ್ಟು ಹೊತ್ತಲ್ಲಿ ಯಾಕೆ ಕಾಲ್‌ ಮಾಡಿದ್ದಾಳೆ. ಮಹಿ ಅಲ್ಲಿ ಏನು ಅವಾಂತರ ಮಾಡಿದ್ದಾಳೋ" ಎಂದು ಯೋಚಿಸಿ ಕಾಲ್‌ ರಿಸೀವ್‌ ಮಾಡುತ್ತಾನೆ. "ಮೊದಲು ನಿನ್ನ ಮನೆಯ ಬಾಗಿಲು ತೆಗಿ" ಎನ್ನುತ್ತಾಳೆ. ಬಾಗಿಲು ತೆಗೆಯುತ್ತಾನೆ. ಲಗೇಜ್‌ ಸಮೇತ ಮನೆಗೆ ಬಂದಿರುವುದನ್ನು ನೋಡಿ ಅಚ್ಚರಿಯಾಗುತ್ತದೆ. "ಅಕ್ಕ ಅದು ಏನಾಯ್ತು ಅಂದರೆ" ಎಂದು ಹೇಳಿದರೂ ಕೇಳದೆ ಭೂಮಿಕಾ ಮನೆಗೆ ಪ್ರವೇಶಿಸುತ್ತಾಳೆ.

ರಾತ್ರಿ ಗೌತಮ್‌ಗೆ ನಿದ್ದೆ ಬರೋದಿಲ್ಲ. ಭೂಮಿಕಾಗೆ ಕಾಲ್‌ ಮಾಡುತ್ತಾರೆ. "ಸೇಫ್‌ ಆಗಿ ರೀಚ್‌ ಆದ್ರ. ಅತ್ತೆ ಮಾವ ಏನು ಹೇಳಿಲ್ವ" ಎಂದು ಕೇಳುತ್ತಾನೆ. ಈ ಮೂಲಕ ಇದು ಇವರಿಬ್ಬರು ಸೇರಿ ಮಾಡಿರುವ ಪ್ಲ್ಯಾನ್‌ ಎಂದು ತಿಳಿಯುತ್ತದೆ. "ಆಮೇಲೆ, ನಾನು ಮನೆಯಲ್ಲಿ ಇಲ್ಲದೆ ಇರುವಾಗ ನಿಮಗೆ ಎಷ್ಟು ಕಷ್ಟ ಆಗುತ್ತದೆ ಎಂದು ಸೀನ್‌ ಕ್ರಿಯೇಟ್‌ ಮಾಡಿ. ನಾನು ಇಲ್ಲಿ ಜೀವನ್‌ ಮುಂದೆ ಅದೇ ಸೀನ್‌ ಮಾಡ್ತಿನಿ" ಎಂದು ಭೂಮಿಕಾ ಹೇಳುತ್ತಾರೆ. "ಸ್ಕ್ರಿನ್‌ಪ್ಲೇ ಟೈಟಾಗಿರಬೇಕು, ಡೈಲಾಗ್ಸ್‌ ಎಲ್ಲಾ ಶಾರ್ಪ್‌ ಆಗಿರಬೇಕು" ಎಂದು ಗೌತಮ್‌ ಹೇಳುತ್ತಾರೆ. ಇಬ್ಬರೂ ನಗುತ್ತಾರೆ.

Whats_app_banner