Amruthadhare Serial: ಭಾಗ್ಯಮ್ಮಳಿಗೆ ಮಗಳ ಗುರುತು ಸಿಗ್ತು, ಸೊಸೆ, ಮೊಮ್ಮಗಳನ್ನು ನೋಡಿ ಖುಷಿ ಪಟ್ರು; ಗೌತಮ್‌ನ ನೋಡುವ ತವಕದಲ್ಲಿ ಅಮ್ಮ
Amruthadhaare Serial Today Episode : ಅಮೃತಧಾರೆ ಧಾರಾವಾಹಿಯಲ್ಲಿ ಭಾಗ್ಯಮ್ಮನಿಗೆ ಹಳೆಯ ನೆನಪುಗಳು ಮರುಕಳಿಸಿವೆ. ಒಬ್ಬರನೊಬ್ಬರನ್ನು ನೋಡಿ ಗುರುತು ಹಿಡಿಯುತ್ತಿದ್ದಾಳೆ. ಇದೇ ಮನೆಯಲ್ಲಿ ತನ್ನ ಮಗ ಗುಂಡು ಇದ್ದಾನೆ ಎನ್ನುವುದೂ ತಿಳಿದುಕೊಂಡಿದ್ದಾಳೆ. ಆದರೆ, ಈ ವಿಷಯ ಶಕುಂತಲಾದೇವಿ ಗ್ಯಾಂಗ್‌ಗೆ ಗೊತ್ತಾದರೆ ಮುಂದೆ ಏನಾಗಬಹುದು?

Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಭಾಗ್ಯಮ್ಮನಿಗೆ ನೆನಪುಗಳು ಮರುಕಳಿಸಿವೆ. ಶಕುಂತಲಾದೇವಿ ಗ್ಯಾಂಗ್ ಅನ್ನು ಹೆಡೆಮುರಿಕಟ್ಟಲು ಭಾಗ್ಯಮ್ಮಳೇ ಬೆಸ್ಟ್ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯು ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಸಾಕಷ್ಟು ವಿಷಯಗಳು ಬೆಳಕಿಗೆ ಬಂದಿವೆ. ತನ್ನ ಮಗಳನ್ನು ನೋಡಿ ಭಾಗ್ಯಮ್ಮ ಕಣ್ಣೀರಾಗಿದ್ದಾಳೆ. ತನಗೊಬ್ಬಳು ಮೊಮ್ಮಗಳು ಇರುವುದನ್ನು ಕೇಳಿ ಖುಷಿಪಟ್ಟಿದ್ದಾಳೆ. ಇದೇ ಮನೆಯಲ್ಲಿ ಮಗ ಗುಂಡು ಕೂಡ ಇದ್ದಾನೆ ಎಂದು ಕೇಳಿ ಪುಳಕಿತಗೊಂಡಿದ್ದಾಳೆ.
ಇದೆಲ್ಲ ಆಗಿರುವುದು ಗೌತಮ್ ಹಚ್ಚಿರುವ ಪಟಾಕಿಯಿಂದ. ಕ್ರಿಕೆಟ್ ಮ್ಯಾಚ್ ನೋಡುತ್ತ ಗೌತಮ್ ಖುಷಿಯಾಗಿದ್ದಾರೆ. ಮ್ಯಾಚ್ ಗೆದ್ದ ಖುಷಿಗೆ ಏನಾದರೂ ಮಾಡಬೇಕು ಎಂದೆನಿಸಿದೆ. ಸ್ಟಾಕ್‌ನಲ್ಲಿರುವ ಪಟಾಕಿಯನ್ನು ತೆಗೆದುಕೊಂಡು ಹಚ್ಚಿದ್ದಾರೆ. ಪಟಾಕಿ ಡಮ್‌ಡುಂ ಎಂದು ಸಿಡಿದಿದೆ. ಈ ಸದ್ದಿಗೆ ಕೋಣೆಯಲ್ಲಿ ಮಲಗಿದ್ದ ಭಾಗ್ಯಮ್ಮಳಿಗೆ ಎಚ್ಚರವಾಗಿದೆ. ಆಕೆ ಬೆಚ್ಚಿ ಬಿದ್ದಿದ್ದಾರೆ. ಭಾಗ್ಯಮ್ಮನ ತಲೆಯಲ್ಲಿ ಹಳೆಯ ನೆನಪುಗಳು ಮರುಕಳಿಸಿವೆ. ಯಾಕೆ ನಾನು ಮಾತನಾಡುತ್ತಿಲ್ಲ. ನಾನು ಎಲ್ಲಿದ್ದೇನೆ ಎಂದು ಭಾಗ್ಯಮ್ಮ ಕನವರಿಸಿದ್ದಾರೆ.
ಇದೀಗ ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಇನ್ನಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಸುಧಾ ಭಾಗ್ಯಮ್ಮನಿಗೆ ಊಟ ನೀಡಲು ಬಂದಿದ್ದಾಳೆ. ಪಕ್ಕದಲ್ಲಿ ಮೊಮ್ಮಗಳು ಕುಳಿತಿದ್ದಾಳೆ. ಆಕೆ ಈಕೆಯನ್ನು ಅಜ್ಜಿ ಎಂದು ಕರೆದಿದ್ದಾಳೆ. ಹೋ, ನನಗೆ ಮೊಮ್ಮಗಳು ಇದ್ದಾಳೆ ಎಂದು ಮನಸ್ಸಿನಲ್ಲಿ ಭಾಗ್ಯಮ್ಮ ಖುಷಿಪಟ್ಟಿದ್ದಾರೆ. ಅದೇ ಸಮಯದಲ್ಲಿ ಬಂದ ಸುಧಾಳನ್ನು ಭಾಗ್ಯಮ್ಮ ಕುತೂಹಲದಿಂದ ನೋಡಿದ್ದಾರೆ. ಅಮ್ಮ ಎಂದಿನಂತೆ ಇಲ್ಲ ಎನ್ನುವುದನ್ನು ಸುಧಾ ಗುರುತಿಸಿದ್ದಾಳೆ.
ಅಮ್ಮ ನಿನಗೆ ಏನಾಗಿದೆ. ನಿನ್ನೆ ಎದ್ದು ಎಲ್ಲಿಗೆ ಹೋಗಿದ್ದೆ. ಈ ವಿಚಾರ ಅಣ್ಣ ಮತ್ತು ಅತ್ತಿಗೆಗೆ ಗೊತ್ತಾದರೆ ನನಗೆ ಬಯ್ಯುತ್ತಾರೆ ಎಂದು ಸುಧಾ ಹೇಳಿದಾಗ "ಹೋ, ನನ್ನ ಮಗ ಗುಂಡ ಇಲ್ಲಿದ್ದಾನೆ. ಅವನನ್ನು ನೋಡಬೇಕು" ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದಾರೆ. ಗೌತಮ್ ಸಣ್ಣವನಾಗಿದ್ದಾಗ ತಂಗಿಯನ್ನು ಬೆನ್ನಮೇಲೆ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ಹಳೆಯ ನೆನಪುಗಳು ಬಂದಿವೆ. ಅಲ್ಲಿಗೆ ಬಂದ ಅಪೇಕ್ಷಾ ಕೂಡ ಭಾಗ್ಯಮ್ಮನಲ್ಲಿ ಆಗಿರುವ ಬದಲಾವಣೆಗಳನ್ನು ಗುರುತಿಸಿದ್ದಾಳೆ. ಒಟ್ಟಾರೆ ಗೌತಮ್ ಹಚ್ಚಿರುವ ಪಟಾಕಿ ಮತ್ತು ಶಕುಂತಲಾದೇವಿ ಕರೆಂಟ್ ಶಾಕ್ ಹೊಡೆಸಲು ಮಾಡಿರುವ ಪ್ರಯತ್ನ ಭಾಗ್ಯಮ್ಮನಿಗೆ ವರದಾನವಾಗಿದೆ.
ಭಾಗ್ಯಮ್ಮನ ಕಥೆ: ಗೌತಮ್ ತನ್ನ ತಂಗಿ ಮತ್ತು ತಾಯಿಯನ್ನು ಬಹಳಷ್ಟು ಸಮಯದಿಂದ ಹುಡುಕುತ್ತಿದ್ದರು. ಇವರಿಬ್ಬರನ್ನು ಹುಡುಕಲು ಪ್ರೈವೇಟ್ ಏಜೆನ್ಸಿಯ ನೆರವು ಪಡೆದಿದ್ದರು. ಪೊಲೀಸರ ನೆರವೂ ಪಡೆದಿದ್ದರು. ಆದರೆ, ಇವರ ಸುಳಿವು ಸಿಕ್ಕಿರಲಿಲ್ಲ. ಆದರೆ, ಅಚಾನಕ್ಕಾಗಿ ಇವರಿಬ್ಬರು ಪತ್ತೆಯಾಗಿದ್ದರು. ಭಾಗ್ಯಮ್ಮ ಮತ್ತು ಸುಧಾಳನ್ನು ಸಾಯಿಸುವ ಜೈದೇವ್ ಯತ್ನ ವಿಫಲವಾಗಿತ್ತು. ಭೂಪತಿಯ ಕಿತಾಪತಿಯಿಂದಾಗಿ ಇವರಿಬ್ಬರು ಇದೇ ಮನೆಗೆ ಆಗಮಿಸಿದ್ದರು. ತಾವು ಸಾಯಿಸಲು ಯತ್ನಿಸುತ್ತಿದ್ದ ವ್ಯಕ್ತಿಗಳು ಮನೆಗೆ ಬಂದಾಗ ಶಂಕುತಲಾ ಗ್ಯಾಂಗ್ ಭಯಪಟ್ಟಿತ್ತು. ಆದರೆ, ಭಾಗ್ಯಮ್ಮನಿಗೆ ಯಾವುದೇ ನೆನಪು ಇಲ್ಲ ಎಂದು ತಿಳಿದು ನಿರಾಳವಾಗಿದ್ದರು. ಭಾಗ್ಯಮ್ಮ ಮತ್ತು ಸುಧಾಳನ್ನು ಶಕುಂತಲಾದೇವಿಯೇ ಸಾಯಿಸಲು ಹಳೆಯ ಜಮಾನದಲ್ಲಿ ಯತ್ನಿಸಿದ್ದರು. ಆದರೆ, ಇವರಿಬ್ಬರು ಬದುಕಿ ಉಳಿದಿದ್ದರು. ಇವರಿಬ್ಬರು ಸತ್ತಿದ್ದಾರೆ ಎಂದು ತಿಳಿದು ನಿರಾಳವಾಗಿದ್ದರು. ಆದರೆ, ಇವರು ಬದುಕಿಬಂದಿರುವುದು ಶಕುಂತಲಾಗ್ಯಾಂಗ್‌ಗೆ ನುಂಗಲಾಗದ ತುತ್ತಾಗಿತ್ತು. ಭಾಗ್ಯಮ್ಮನಿಗೆ ನೆನಪು ವಾಪಸ್ ಬಂದಿರುವುದು ಶಕುಂತಲಾ ದೇವಿಗೆ ಗೊತ್ತಾದರೆ ಆಕೆ ಬೆಚ್ಚಿ ಬೀಳುವುದು ಖಂಡಿತಾ. ಲಕ್ಕಿ ಲಕ್ಷ್ಮಿಕಾಂತ್ ಅಂತೂ ಅದುರಿ ಬೀಳುವುದು ಗ್ಯಾರಂಟಿ.
ಧಾರಾವಾಹಿ ಹೆಸರು: ಅಮೃತಧಾರೆ.
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ವರ್ಷ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).

ವಿಭಾಗ