Amruthadhaare Serial: ಮನೆತನಕ್ಕಿಂತ ಮನುಷ್ಯತ್ವ ದೊಡ್ಡದ್ದು ಎಂದ ಅಜ್ಜಮ್ಮ; ಅಮೃತಧಾರೆ ಧಾರಾವಾಹಿಯಲ್ಲಿ ಸಡಗರವೋ ಸಡಗರ
Amruthadhaare Serial Today Episode: ಗೌತಮ್ ಭೂಮಿಕಾಳಿಗೆ ತಾಳಿ ಕಟ್ಟಿದ್ದಾನೆ. ನನಗೆ ಈ ವಿಷಯ ಮೊದಲೇ ಗೊತ್ತಿತ್ತು ಎಂದು ಮಧುರಾ ಹೇಳುತ್ತಾರೆ. ಈ ಸಂದರ್ಭದಲ್ಲಿ ಗೌತಮ್ ಅನೇಕ ಉತ್ತಮ ವಿಚಾರಗಳನ್ನು ಮಾತನಾಡುತ್ತಾರೆ. ಇದನ್ನು ಕೇಳಿ ಅಜ್ಜಮ್ಮ "ಮನೆತನಕ್ಕಿಂತ ಮನುಷ್ಯತ್ವ ದೊಡ್ಡದ್ದು ಎಂದು ತೋರಿಸಿಕೊಟ್ಟೆ" ಎಂದು ಹೊಗಳುತ್ತಾರೆ.

Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಮಧುರಾ ಮಾಡಿದ ನಾಟಕ ಎಲ್ಲರನ್ನು ಅಚ್ಚರಿಗೆ ದೂಡಿದೆ. ವಿಶೇಷವಾಗಿ ಶತ್ರುಪಡೆಗಳು ಆತಂಕಗೊಂಡರೆ, ಗೌತಮ್ ಆಪ್ತರು ಖುಷಿಪಟ್ಟಿದ್ದಾರೆ. "ಮಗು ಆಗೋದಿಲ್ಲ ಎಂದು ಎರಡನೇ ಮದುವೆ ಮಾಡುವುದು ಎಷ್ಟು ಸರಿ. ಹೆಣ್ಣಿನಲ್ಲಿ ಸಮಸ್ಯೆ ಇದೆ ಎಂದು ಗಂಡಿಗೆ ಎರಡನೇ ಮದುವೆ ಮಾಡ್ತಿರಿ. ಅದೇ ರೀತಿ ಗಂಡಿಗೆ ಸಮಸ್ಯೆ ಇದ್ದರೆ ಸೊಸೆಗೆ ಎರಡನೇ ಮದುವೆ ಮಾಡ್ತೀರಾ?" ಎಂದು ಗೌತಮ್ ಪ್ರಶ್ನಿಸುತ್ತಾರೆ. ಅದಕ್ಕೆ ಶಕುಂತಲಾದೇವಿ, "ಅದೆಲ್ಲ ಸರಿ, ಆದರೆ, ಹಸಮಣೆ ತನಕ ಬಂದ ಮಧುರಾಳ ಕಥೆ ಏನು. ಆಕೆಗೆ ನೀನು ಯಾಕೆ ಈ ರೀತಿ ಮೋಸ ಮಾಡಿದೆ" ಎಂದು ಶಕುಂತಲಾದೇವಿ ಹೇಳುತ್ತಾರೆ. ಅವರಿಗೆ ಮಧುರಾಳ ಜತೆ ಗೌತಮ್‌ನ ಮದುವೆ ಮಾಡಿಸಲು ಇದು ಕೊನೆಯ ಅಸ್ತ್ರ.
ಈ ಸಮಯದಲ್ಲಿ ಮಧುರಾ ಹಸೆಮಣೆಯಿಂದ ಎದ್ದು ಬರುತ್ತಾಳೆ. "ಕ್ಷಮಿಸಿ, ನನಗೆ ಇದರಿಂದ ಏನೂ ಬೇಸರವಿಲ್ಲ. ಏಕೆಂದರೆ, ಇದು ನಾನು ಮತ್ತು ಗೌತಮ್ ಮೊದಲೇ ಮಾತನಾಡಿಕೊಂಡಂತೆ ನಡೆದ ಮದುವೆ. ಕೊನೆಕ್ಷಣದಲ್ಲಿ ಹೀಗೆಯೇ ಆಗಬೇಕೆಂದು ನಾವು ನಿರ್ಧರಿಸಿದೆವು. ಅವತ್ತು ನನ್ನನ್ನು ಭೇಟಿಯಾಗಲು ಗೌತಮ್ ಬಂದಾಗ ನನಗೆ ಅವರು ಎಲ್ಲಾ ಹೇಳಿದ್ದಾರೆ. ಭೂಮಿಕಾ ಇಲ್ಲದೆ ನನಗೆ ಬದುಕಲು ಆಗದು ಎಂದಿದ್ದರು. ನನ್ನಿಂದ ಈ ನಾಟಕದ ಪಾತ್ರದಾರಿಯಾಗಲು ಕೇಳಿಕೊಂಡರು. ನಾನು ಸಂತೋಷದಿಂ ಒಪ್ಪಿಕೊಂಡೆ. ನಾನು ರಿಜೆಕ್ಟ್ ಮಾಡಿದ್ದರೆ ಇದು ಬೇರೆಯೇ ಆಗುತ್ತಿತ್ತು. ಬೇರೆ ಹೆಣ್ಣು ಹುಡುಕುತ್ತ ಇದ್ದರು. ಹೀಗಾಗಿ, ನಾನು ಇದರ ಭಾಗವಾಗಲು, ಗೌತಮ್ ಮತ್ತು ಭೂಮಿಕಾ ಮತ್ತೆ ಒಂದಾಗಿಸಲು ಒಪ್ಪಿಕೊಂಡೆ" ಎಂದು ಮಧುರಾ ಹೇಳಿದಾಗ ಶಕುಂತಲಾದೇವಿ ಮುಖ ಇಂಗು ತಿಂದ ಮಂಗನಂತೆ ಆಗುತ್ತದೆ. ಒಟ್ಟಾರೆ, ಅವರೆಲ್ಲರ ಪ್ಲ್ಯಾನ್ ಪ್ಲಾಪ್ ಆಗಿದೆ.
ಇಲ್ಲಿ ಮಧುರಾ ಅತ್ತೆ ಕೂಡ ಇದ್ದಾರೆ. ಅವರಲ್ಲಿ ಗೌತಮ್ ಸಾರಿ ಕೇಳುತ್ತಾನೆ. "ಕ್ಷಮಿಸಿ" ಎನ್ನುತ್ತಾನೆ. "ಹಾಗೇನಿಲ್ಲ ಗೌತಮ್, ನನಗೆ ನನ್ನ ಮಗಳು ಮೊದಲೇ ಎಲ್ಲಾ ಹೇಳಿದ್ದಳು. ಹೀಗಾಗಿ ನನಗೆ ಇದು ಅಚ್ಚರಿ, ಆಘಾತದ ವಿಷಯವಲ್ಲ" ಎಂದು ಹೇಳುತ್ತಾರೆ. ಈ ಮೂಲಕ ಗೌತಮ್ ಟೀಮ್ ಗೆದ್ದಿದೆ. ಈ ಸಂದರ್ಭದಲ್ಲಿ ಅಜ್ಜಿ ಹೆಚ್ಚು ಖುಷಿಪಟ್ಟಿದ್ದಾರೆ. "ಮನೆತನಕ್ಕಿಂತ ಮನುಷ್ಯತ್ವ ದೊಡ್ಡದ್ದು, ನೀನದನ್ನು ಪ್ರೂವ್ ಮಾಡಿದೆ ಎಂದು ಅಜ್ಜಿ ಹೇಳುತ್ತಾರೆ.
"ಈ ವಿಷಯದಲ್ಲಿ ನಮ್ಮೆಲ್ಲರ ಕಣ್ಣು ತೆರೆಸಿಬಿಟ್ಟೆ ಕಣೋ" ಎಂದು ಅಜ್ಜಿ ಹೇಳುತ್ತಾರೆ. "ವಯಸ್ಸಿನಲ್ಲಿ ಚಿಕ್ಕವನಾದರೂ ಎಲ್ಲರೂ ನಿನಗೆ ಕೈ ಮುಗಿಯುವಂತೆ ಮಾಡಿದೆ. ತುಂಬಾ ಎತ್ತರದ ವ್ಯಕ್ತಿತ್ವ ನಿನ್ನದು. ನೀನು ನಮ್ಮ ವಂಶದಲ್ಲಿ ಹುಟ್ಟಿದೆಯಲ್ವ ಅದೇ ಹೆಮ್ಮೆ ಕಣೋ. ತುಂಬಾ ಒಳ್ಳೆ ಕೆಲಸ ಮಾಡಿದೆ" ಎಂದು ಅಜ್ಜಮ್ಮ ಗುಣಗಾನ ಮುಂದುವರೆಸುತ್ತಾರೆ. "ನೀನು ಭೂಮಿಕಾಳನ್ನು ಎಷ್ಟು ಪ್ರೀತಿಸ್ತಿ ಅಂತ ಇಡೀ ಜಗತ್ತಿಗೆ ಇವತ್ತು ಸಾಬೀತಾಯಿತು. ಪರಿಶುದ್ಧ ಪ್ರೀತಿಗೆ, ಗಂಡ ಹೆಂಡತಿ ಹೇಗೆ ಇರಬೇಕು ಎನ್ನುವುದಕ್ಕೆ ನೀನೇ ಉದಾಹರಣೆ" ಎಂದು ಅಜ್ಜಮ್ಮ ಹೇಳುತ್ತಾರೆ. "ಹೌದು ಅಜ್ಜಿ" ಎಂದು ಆನಂದ್ ಹೇಳುತ್ತಾರೆ. ಬಳಿಕ ಆನಂದ್ ತನ್ನ ಗೆಳೆಯನ ಗುಣಗಾನ ಮಾಡುತ್ತಾನೆ.
ಧಾರಾವಾಹಿ ಹೆಸರು: ಅಮೃತಧಾರೆ.
ಎಪಿಸೋಡ್: ಮಾರ್ಚ್ 13, 2025
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ವರ್ಷ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).ಧಾರಾವಾಹಿ ಹೆಸರು: ಅಮೃತಧಾರೆ.

ವಿಭಾಗ