ಸುಧಾಳ ಕುರಿತು ಗೌತಮ್‌ಗೆ ಶುರುವಾಯ್ತು ಅನುಮಾನ; ಶಕುಂತಲಾ, ಲಕ್ಷ್ಮಿಕಾಂತ್‌ ಮಾತು ಕೇಳಿಸಿಕೊಂಡ ಜೈದೇವ್‌- ಅಮೃತಧಾರೆ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಸುಧಾಳ ಕುರಿತು ಗೌತಮ್‌ಗೆ ಶುರುವಾಯ್ತು ಅನುಮಾನ; ಶಕುಂತಲಾ, ಲಕ್ಷ್ಮಿಕಾಂತ್‌ ಮಾತು ಕೇಳಿಸಿಕೊಂಡ ಜೈದೇವ್‌- ಅಮೃತಧಾರೆ ಧಾರಾವಾಹಿ

ಸುಧಾಳ ಕುರಿತು ಗೌತಮ್‌ಗೆ ಶುರುವಾಯ್ತು ಅನುಮಾನ; ಶಕುಂತಲಾ, ಲಕ್ಷ್ಮಿಕಾಂತ್‌ ಮಾತು ಕೇಳಿಸಿಕೊಂಡ ಜೈದೇವ್‌- ಅಮೃತಧಾರೆ ಧಾರಾವಾಹಿ

Amruthadhaare serial today episode: ಅಮೃತಧಾರೆಯಲ್ಲಿ ಸುಧಾಳ ಬಗ್ಗೆ ಗೌತಮ್‌ಗೆ ಅನುಮಾನ ಬಂದಿದೆ. ಆಕೆ ವಾಪಸ್‌ ಬಂದ ಬಳಿಕ ಅನುಮಾನ ನಿವಾರಣೆಯಾಗಿದೆ. ಇದೇ ಸಮಯದಲ್ಲಿ ಜೈದೇವ್‌ಗೆ ತನ್ನ ತಾಯಿ ಮತ್ತು ಮಾವ ಏನೋ ದೊಡ್ಡ ಪ್ಲ್ಯಾನ್‌ ಮಾಡುತ್ತಿದ್ದಾರೆ ಎಂಬ ಅನುಮಾನ ಬಂದಿದೆ.

ಶಕುಂತಲಾ, ಲಕ್ಷ್ಮಿಕಾಂತ್‌ ಮಾತು ಕೇಳಿಸಿಕೊಂಡ ಜೈದೇವ್‌- ಅಮೃತಧಾರೆ ಧಾರಾವಾಹಿ
ಶಕುಂತಲಾ, ಲಕ್ಷ್ಮಿಕಾಂತ್‌ ಮಾತು ಕೇಳಿಸಿಕೊಂಡ ಜೈದೇವ್‌- ಅಮೃತಧಾರೆ ಧಾರಾವಾಹಿ

Amruthadhaare serial today episode: ಶಕುಂತಲಾದೇವಿ ಮತ್ತು ಲಕ್ಷ್ಮಿಕಾಂತ್‌ ಮಾತನಾಡುತ್ತಿದ್ದಾರೆ. "ಅವಳು ಅದೇ ಸ್ಥಳಕ್ಕೆ ಬರಬಹುದು. ಅಲ್ಲೆ ಹುಡುಕಿಸು. ಅಲ್ಲೇ ಸುತ್ತಮುತ್ತಾ ಬಂದೇ ಬರುತ್ತಾಳೆ" ಎಂದು ಹೇಳುತ್ತಾರೆ. ಇದೇ ಸಮಯದಲ್ಲಿ ಸುಧಾ ತನ್ನ ತಾಯಿಯನ್ನು ಕರೆದುಕೊಂಡು ಮನೆಗೆ ಬರುತ್ತಾಳೆ. "ಹೊರಗಡೆ ಯಾಕೆ ಹೋದೆ ಅಮ್ಮ, ನಿನಗೆ ಹೆಚ್ಚು ಕಮ್ಮಿ ಆದ್ರೆ ಏನು ಗತಿ" ಎಂದೆಲ್ಲ ಸುಧಾ ತನ್ನ ಅಮ್ಮನ ಮುಂದೆ ಬೇಸರ ವ್ಯಕ್ತಪಡಿಸುತ್ತಾಳೆ. ಯಾಕೆ ಹೀಗೆ ಮಾಡಿದೆ, ಇದೇ ಕೊನೆ, ಇನ್ನು ನನ್ನನ್ನು ಬಿಟ್ಟು ಎಲ್ಲೂ ಹೋಗಬಾರದು ಎಂದು ಸುಧಾ ಹೇಳುತ್ತಾಳೆ. "ನನ್ನದೇ ತಪ್ಪು ಅಜ್ಜಿನ ಬಿಟ್ಟು ಹೋಗಬಾರದಿತ್ತು" ಎಂದು ಮೊಮ್ಮಗಳು ಹೇಳುತ್ತಾಳೆ. "ಇಲ್ಲ, ನೀನು ವಯಸ್ಸಿಗೆ ಮೀರಿದ ಕೆಲಸ ಮಾಡಿದ್ದೀಯ" ಎಂದು ಸುಧಾ ಹೇಳುತ್ತಾಳೆ. ಬಳಿಕ ತನ್ನ ತಾಯಿಗೆ ಊಟ ತಿನ್ನಿಸುತ್ತಾಳೆ. ಎಂದಿನಂತೆ ಗುಂಡೂ ಗುಂಡೂ ಕನವರಿಸುತ್ತಾ ಇರುತ್ತಾಳೆ.

ಅಪೇಕ್ಷಾ ಮತ್ತು ಪಾರ್ಥ ಮಾತನಾಡುತ್ತ ಇದ್ದಾರೆ. "ನೋಡಿ ಸುಧಾ ಕಾಣಿಸ್ತಾ ಇಲ್ಲ, ನಾನು ಹೇಳಿದಂತೆ ಆಯ್ತು" ಎಂದು ಅಪೇಕ್ಷಾ ಖುಷಿಪಡುತ್ತಾಳೆ. ಪಾರ್ಥ ಹೇಳಿದ ಮಾತನ್ನು ಅವಳು ಕೇಳುವುದಿಲ್ಲ. "ಅಪೇಕ್ಷಾ ಪ್ಲೀಸ್‌, ಅತ್ತಿಗೆ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ, ನಿನಗಿಂತ ಚೆನ್ನಾಗಿ ಅವರ ಬಗ್ಗೆ ನನಗೆ ಗೊತ್ತು" ಎಂದು ಹೇಳುತ್ತಾನೆ. ಎಂದಿನಂತೆ ಕೋಪ ಮಾಡಿಕೊಂಡು ಹೋಗುತ್ತಾಳೆ.

ಆನಂದ್‌ಗೆ ಗೌತಮ್‌ ಕಾಲ್‌ ಮಾಡುತ್ತಾನೆ. "ಸುಧಾ ಅನ್ನೋ ಕೆಲಸದವಳು ಎಷ್ಟು ದಿನದ ಪರಿಚಯ" ಎಂದು ಕೇಳುತ್ತಾನೆ. "ನನಗೆ ಯಾಕೋ ಅನುಮಾನ ಬರುತ್ತದೆ" ಎಂದು ಗೌತಮ್‌ಕೇಳುತ್ತಾನೆ. "ಅನುಮಾನ ಪಡುವಂತಹ ಹುಡುಗಿ ಅವಳು ಅಲ್ಲ. ದುಡುಕಿ ಏನೂ ನಿರ್ಧಾರ ತೆಗೆದುಕೊಳ್ಳಬೇಡ. ನೀನು ಹೇಳಿದಂತೆ ಬರದೇ ಇದ್ದರೆ ಆಮೇಲೆ ನೋಡೋಣ" ಎಂದು ಸಮಾಧಾನ ಹೇಳುತ್ತಾನೆ.

ಶಕುಂತಲಾ, ಲಕ್ಷ್ಮಿಕಾಂತ್‌ ಮಾತು ಕೇಳಿಸಿಕೊಂಡ ಜೈದೇವ್‌

ಶಕುಂತಲಾದೇವಿ ಕೋಪದಲ್ಲಿದ್ದಾರೆ. "ಈಗ ಅವಳು ಬದುಕಿದ್ದಾಳೆ ಅನ್ನೋ ಸತ್ಯ ಅರಗಿಸಿಕೊಳ್ಳಲಾಗುತ್ತಿಲ್ಲ. ಅವಳನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದರೆ ಅವಳು ಇಲ್ಲೇ ಇದ್ದಾಳೆ. ನೀನು ಹೇಳುವಂತೆ ಅವಳು ಭಿಕ್ಷೆ ಬೇಡುವವಳಾದರೆ ಅವಳು ಸಿಕ್ಕಿಯೇ ಸಿಕ್ಕುತ್ತದೆ" ಎಂದು ಶಕುಂತಲಾದೇವಿ ಹೇಳುತ್ತಾರೆ. "ನಮ್ಮ ಕಣ್ಣಿಗೆ ಬಿದ್ದ ರೀತಿ ಗೌತಮ್‌ ಕಣ್ಣಿಗೆ ಬಿದ್ದರೆ ಏನು ಗತಿ" ಎಂದು ಲಕ್ಷ್ಮಿಕಾಂತ್‌ ಅನುಮಾನ ವ್ಯಕ್ತಪಡಿಸುತ್ತಾನೆ. "ನನ್ನ ಮಕ್ಕಳಿಗೆ ಈ ವಿಷಯ ಗೊತ್ತಾದರೆ ತುಂಬಾ ಕಷ್ಟವಾಗುತ್ತದೆ" ಎಂದು ಶಕುಂತಲಾದೇವಿ ಹೇಳಿದಾಗ ದೂರದಲ್ಲಿ ಜೈದೇವ್‌ ಅನುಮಾನದಿಂದ ನೋಡುತ್ತಾ ಇರುತ್ತಾನೆ. ಆದರೆ, ಯಾರ ಬಗ್ಗೆ ಇವರು ಮಾತನಾಡುತ್ತಿದ್ದಾರೆ ಎಂದು ಇವನಿಗೆ ಗೊತ್ತಾಗುವುದಿಲ್ಲ. ಯಾರ ಬಗ್ಗೆ ಇವರು ಮಾತನಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲೇಬೇಕು ಎಂದುಕೊಳ್ಳುತ್ತಾನೆ.

ಎಲ್ಲೋ ಹೋದ ಸುಧಾ ಬಂದಿದ್ದಾಳೆ. ಗೌತಮ್‌ ಜೋರಾಗಿ ಬಯ್ಯುತ್ತಾನೆ. "ನನ್ನ ಮಗಳು ನೀರಿಗೆ ತರಲು ಹೊರಗೆ ಹೋದಾಗ ಅಮ್ಮ ಹೊರಗೆ ಹೋಗಿದ್ದಾಳೆ. ಎಲ್ಲಾ ಕಡೆ ಹುಡುಕಿದರೂ ಅವರಿಗೆ ಸಿಗಲಿಲ್ಲ ಅಂದಾಗ ನಾನು ಓಡಿ ಹೋದೆ. ಅವರು ಚಿಕ್ಕಮಕ್ಕಳ ರೀತಿ. ನಾನು ಕೆಲಸಕ್ಕೆ ಹೋಗುವಾಗ ಬೀಗ ಹಾಕಿಕೊಂಡು ಹೋಗುತ್ತೇನೆ" ಎಂದು ಹೇಳುತ್ತಾಳೆ. ಈ ಮೂಲಕ ಗೌತಮ್‌ ಮನದಲ್ಲಿ ಮೂಡಿರುವ ಆತಂಕ ಕಡಿಮೆಯಾಗುತ್ತದೆ.

ಲಕ್ಷಿಕಾಂತ್‌ ಹೊದಿಕೆ ಹೊದ್ದು ಯೋಚನೆ ಮಾಡುತ್ತ ಇದ್ದಾನೆ. ಆಗ ಅಲ್ಲಿಗೆ ಜೈದೇವ್‌ ಬರುತ್ತಾನೆ. ಮಾವ ಒಂದಿಷ್ಟು ಸುಳ್ಳು ಹೇಳುತ್ತಾನೆ. "ನನಗೆ ಎಲ್ಲಾ ಗೊತ್ತು, ಎಲ್ಲಾ ನಾಟಕ ನನಗೆ ಗೊತ್ತು. ನೀನು ಮಾಮ್ಸ್‌ ಇಬ್ಬರು ಸ್ಕೆಚ್‌ ಹಾಕುವ ವಿಷಯ ನನಗೆ ಗೊತ್ತಾಗಿದೆ" ಎಂದು ಹೇಳುತ್ತಾನೆ ಜೈದೇವ್‌. ಆದರೆ, ಲಕ್ಷ್ಮಿಕಾಂತ್‌ ಏನೂ ಹೇಳುವುದಿಲ್ಲ. ಸೀರಿಯಲ್‌ ಮುಂದುವರೆದಿದೆ.

ಧಾರಾವಾಹಿ ಹೆಸರು: ಅಮೃತಧಾರೆ.

ಎಪಿಸೋಡ್‌: ನವೆಂಬರ್‌ 29, 2024

ಯಾವ ಚಾನೆಲ್‌: ಜೀ ಕನ್ನಡ

ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

Whats_app_banner