Amruthadhaare Serial: ಸುಧಾ ಬಂದಿರೋದು ಮನೆ ಕೆಲಸಕ್ಕಲ್ಲ, ರಹಸ್ಯ ಕಾರ್ಯಾಚರಣೆಗೆ; ಗೌತಮ್ ತಾಯಿ, ತಂಗಿ ಸತ್ತಿಲ್ಲ ಎಂದ ಧನ್ಯ
Amruthadhaare serial October 24: ಜೀ ಕನ್ನಡ ವಾಹಿನಿಯ ಅಮೃತಧಾರೆಯಲ್ಲಿ ಪ್ರಮುಖ ಘಟನೆಗಳು ನಡೆದಿಲ್ಲ. ಆದರೆ, ಆನಂದ್ ಮನೆಗೆ ಬಂದಿರುವ ಸುಧಾಳ ಕಥೆಯೊಂದು ಗೊತ್ತಾಗಿದೆ. ಆಕೆ ಯಾವುದೋ ರಹಸ್ಯ ಕಾರ್ಯಾಚರಣೆಗಾಗಿ ಬಂದಿದ್ದಾಳೆ. ಇನ್ನೊಂದೆಡೆ ಧನ್ಯಳನ್ನು ಲಾಕ್ ಮಾಡಲು ಶಕುಂತಲಾದೇವಿ ಪ್ಲ್ಯಾನ್ ಮಾಡಿದ್ದಾರೆ.
Amruthadhaare serial October 24: ಮಲ್ಲಿ ಖುಷಿಯಲ್ಲಿದ್ದಾಳೆ. ಜೈದೇವ್ ಪಾರ್ಟಿಯಲ್ಲಿ ಕುಡಿಯದೆ ಇರುವುದು ಆಕೆಗೆ ಖುಷಿಯಾಗಿದೆ. ಆತ ಒಳ್ಳೆಯತನದ ನಾಟಕ ವರ್ಕ್ ಔಟ್ ಆಗಿದೆ. ಈತನ ಪ್ರೀತಿಯ ಮಾತಿಗೆ ಆಕೆ ಕರಗಿದ್ದಾಳೆ. ನನ್ನ ಹಳೆಯ ಗೆಳತಿಯನ್ನು ಆನಂದ್ ಬ್ರೋಗೆ ಹೇಳಿ ದೂರ ಕಳುಹಿಸಿದ್ದೇನೆ ಎಂದು ಹೇಳುತ್ತಾನೆ. "ನನಗೆ ನೀನೇ ಎಲ್ಲಾ ಮಲ್ಲಿ" ಎಂದು ಹೇಳುತ್ತಾನೆ. "ನಾನು ಇಷ್ಟು ದಿನ ಈ ದಿನಕ್ಕಾಗಿಯೇ ಕಾದೆ ರೀ" ಎಂದು ಮಲ್ಲಿ ಹೇಳುತ್ತಾಳೆ. ಇನ್ನೊಂದೆಡೆ ಆನಂದ್ ಮನೆಗೆ ಓಡೋಡಿ ಕೆಲಸದವಳು ಬರುತ್ತಾಳೆ. ಸುಧಾ ಮನೆಯವರಿಗೆಲ್ಲ ಇಷ್ಟವಾಗಿದ್ದಾಳೆ. ಆಕೆ ಮಾಡಿಕೊಟ್ಟ ಕಾಫಿ ಕುಡಿದು ಎಂದಿನಂತೆ "ಸುಧಾ, ಸೂಪರ್ ಆಗಿದೆ" ಎನ್ನುತ್ತಾರೆ ಆನಂದ್. ಆಕೆ ಮನೆಯಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾಳೆ. ಆನಂದ್ ಮಕ್ಕಳನ್ನು ಸ್ಕೂಲ್‌ಗೆ ರೆಡಿ ಮಾಡಿಸುವ ಕೆಲಸವನ್ನೂ ಮಾಡುತ್ತಾಳೆ. ಧನ್ಯಳನ್ನು ಭೇಟಿಯಾಗಲು ಶಕುಂತಲಾದೇವಿ ಪ್ಲ್ಯಾನ್ ಮಾಡುತ್ತಾರೆ. ಅವಳನ್ನು ಅಲ್ಲೇ ಲಾಕ್ ಮಾಡುವ ಯೋಜನೆ ಅವರದ್ದು. ಈ ಕುರಿತು ರಮಾಕಾಂತ್ ಜೊತೆ ಚರ್ಚಿಸುತ್ತಾರೆ. ಅಪರ್ಣಾ ಎದ್ದಾಗ ಸುಧಾ ಎಲ್ಲಾ ಕೆಲಸ ಮಾಡಿ ಮುಗಿಸಿದ್ದಾಳೆ. ಅಪರ್ಣಾ ಖುಷಿಯಾಗುತ್ತಾಳೆ.
ಗೌತಮ್ ಎದ್ದೇಳುತ್ತಾರೆ. ಎಣ್ಣೆ ಪವರ್‌ನಿಂದ ತಲೆ ಎತ್ತಲು ಸಾಧ್ಯವಾಗುತ್ತಿಲ್ಲ. "ರಾತ್ರಿ ಎಲ್ಲ ಸ್ವರ್ಗ ತೋರಿಸುತ್ತೆ, ಬೆಳಗ್ಗೆ ನರಕ ತೋರಿಸುತ್ತೆ" ಎಂದು ಎಣ್ಣೆಯ ಬಗ್ಗೆ ಗೌತಮ್ ವ್ಯಾಖ್ಯಾನ ಮಾಡುತ್ತಾರೆ. ಭೂಮಿಕಾ ಕೊಟ್ಟ ಕಾಫಿ ಕುಡಿದು ರಿಲಾಕ್ಸ್ ಆಗುತ್ತಾರೆ. "ರಾತ್ರಿ ಪಾರ್ಟಿಯಲ್ಲಿ ಕುಳಿತದ್ದು ಮಾತ್ರ ನೆನಪಿದೆ" ಎನ್ನುತ್ತಾರೆ. "ರಾತ್ರಿ ಏನಾದರೂ ಯಡವಟ್ಟು ಮಾಡಿದ್ದೀನ" ಎಂದು ಕೇಳುತ್ತಾರೆ. "ನೀವು ಕುಡಿದ ಮೇಲೂ ಜಂಟಲ್‌ಮೆನ್, ರಾತ್ರಿ ಹೆಚ್ಚು ಮಾತು ಆಡಿಲ್ಲ" ಎಂದು ಸುಳ್ಳು ಹೇಳ್ತಾರೆ ಭೂಮಿಕಾ. ಇದಾದ ಬಳಿಕ ಒಂದಿಷ್ಟು ವೇದಾಂತದ ಮಾತುಗಳನ್ನು ಆಡುತ್ತಾರೆ. "ರಾತ್ರಿದು ಇನ್ನೂ ಇಳಿದಿಲ್ಲ ಅನಿಸುತ್ತೆ" ಎಂದು ಭೂಮಿಕಾ ನಗುತ್ತಾರೆ. ಆಮೇಲೆ ಭೂಮಿಕಾ ಡೈರಿ ಬರೆಯುತ್ತಾರೆ. ನಗುತ್ತಾ ಬರೆಯುವುದನ್ನು ನೋಡಿ ನಿನ್ನೆ ರಾತ್ರಿ ಏನೋ ಆಗಿದೆ ಎಂದು ಗೌತಮ್ ಅಂದುಕೊಳ್ಳುತ್ತಾರೆ.
ಸುಧಾಳಿಗೆ ಯಾರದ್ದೋ ಕಾಲ್ ಬರುತ್ತದೆ. ಆ ಕಡೆಯಿಂದ "ಹೇಳಿದ ಕೆಲಸ ಏನಾಯ್ತು?" ಎಂದು ಕೇಳುತ್ತಾರೆ. "ನೀವು ಹೇಳಿದ ಹಾಗೇ ಕೇಳ್ತಾ ಇದ್ದೀನಿ. ಈ ಮನೆಗೆ ಬಂದು ಸೇರ್ಕೊಂಡಿದ್ದೀನಿ" ಎಂದು ಸುಧಾ ಹೇಳುತ್ತಾಳೆ. ಈ ಮೂಲಕ ಸುಧಾ ಇಲ್ಲಿಗೆ ಬಂದಿರುವುದು ಉದ್ದೇಶಪೂರ್ವಕ ಎಂದಾಯ್ತು. ಆಕೆಯೇ ಅಪರ್ಣ ಪಕ್ಕ ರಸ್ತೆಯಲ್ಲಿ ನಿಂತದ್ದು. ಗಾಡಿ ಬಂದಾಗ ಎಳೆದು ಹಾಕಿದ್ದು ಎಲ್ಲವೂ ಪೂರ್ವ ಯೋಜಿತ. "ನಿನಗೆ ಕೆಲಸ ಇರೋದು ಈ ಮನೆಯಲ್ಲಿ ಅಲ್ಲ. ನಾನು ಹೇಳಿದ್ದು ನೆನಪಿದೆ ತಾನೇ" ಎಂದು ಆ ಕಡೆಯ ಧ್ವನಿ ತಿಳಿಸುತ್ತದೆ. "ಎಲ್ಲವೂ ನಾನು ಅಂದುಕೊಂಡಂತೆ ನಡೆಯಬೇಕು. ಇಲ್ಲಾಂದ್ರೆ" ಎಂಬ ಬೆದರಿಕೆಯ ಧ್ವನಿ ಕೇಳುತ್ತದೆ. ಒಟ್ಟಾರೆ, ಸುಧಾಳನ್ನು ಯಾರೋ ಸೂತ್ರದ ಕೈಗೊಂಬೆ ಮಾಡಿಕೊಂಡಿದ್ದಾರೆ.
ಆನಂದ್‌ಗೆ ಆಫೀಸ್‌ಗೆ ಡಬ್ಬಾ ರೆಡಿ ಮಾಡಿದ್ದಾರೆ ಸುಧಾ. ನಾನು ಆಫೀಸ್‌ಗೆ ಹೋಗಲ್ಲ ಇವತ್ತು, ಅಪರ್ಣಾಳನ್ನು ನೋಡಿಕೊಳ್ತಿನಿ ಎಂದು ಹೇಳಿದರೂ ಆಕೆ ಬಿಡೋದಿಲ್ಲ. ಹೀಗಾಗಿ, ಅನಿವಾರ್ಯವಾಗಿ ಆನಂದ್ ಆಫೀಸ್‌ಗೆ ಹೊರಡುತ್ತಾರೆ. ಇನ್ನೊಂದೆಡೆ ಮಾನ್ಯ ಬರಲು ಶಕುಂತಲಾದೇವಿ ಮತ್ತು ಸಹೋದರ ಕಾಯುತ್ತಿದ್ದಾರೆ. ಧನ್ಯ ಬರ್ತಾಳ ಎನ್ನುವುದನ್ನು ಕಾದುನೋಡಬೇಕಿದೆ. ಇಷ್ಟರಲ್ಲಿ ಸೀರಿಯಲ್ ನಾಳೆಗೆ ಮುಂದುವರೆದಿದೆ
ಅಮೃತಧಾರೆ ಮುಂದಿನ ಎಪಿಸೋಡ್‌ನಲ್ಲಿ ಗೌತಮ್ ತಾಯಿ ಮತ್ತು ತಂಗಿ ಸತ್ತಿಲ್ಲ ಎಂಬ ಕಠೋರ ಸತ್ಯವನ್ನು ಧನ್ಯ ಹೇಳುತ್ತಾಳೆ. ಈ ಮಾತು ಕೇಳಿ ಶಕುಂತಲಾದೇವಿ ಆಘಾತಗೊಂಡಿದ್ದಾರೆ.
ಅಮೃತಧಾರೆ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳು
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).
ವಿಭಾಗ