Amruthadhaare Serial: ರೌಡಿ ಗ್ಯಾಂಗ್‌ನಿಂದ ತಪ್ಪಿಸಿಕೊಂಡು ಓಡುತ್ತಿದ್ದಾಳೆ ಧನ್ಯ; ತಲೆಮೇಲೆ ಕೈಹೊತ್ರು ಶಕುಂತಲಾ, ಮನೆಹಾಳ ಮಾವ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare Serial: ರೌಡಿ ಗ್ಯಾಂಗ್‌ನಿಂದ ತಪ್ಪಿಸಿಕೊಂಡು ಓಡುತ್ತಿದ್ದಾಳೆ ಧನ್ಯ; ತಲೆಮೇಲೆ ಕೈಹೊತ್ರು ಶಕುಂತಲಾ, ಮನೆಹಾಳ ಮಾವ

Amruthadhaare Serial: ರೌಡಿ ಗ್ಯಾಂಗ್‌ನಿಂದ ತಪ್ಪಿಸಿಕೊಂಡು ಓಡುತ್ತಿದ್ದಾಳೆ ಧನ್ಯ; ತಲೆಮೇಲೆ ಕೈಹೊತ್ರು ಶಕುಂತಲಾ, ಮನೆಹಾಳ ಮಾವ

Amruthadhaare Serial: ಗೌತಮ್‌ ತಾಯಿ ಮತ್ತು ತಂಗಿ ಬದುಕಿರುವಂತಹ ಸತ್ಯವನ್ನು ಶಕುಂತಲಾದೇವಿ ಬಳಿ ಧನ್ಯ ಹೇಳುತ್ತಾಳೆ. ಈ ಸಮಯದಲ್ಲಿ ಧನ್ಯಳನ್ನು ರೌಡಿಗಳು ಹಿಡಿಯುತ್ತಾರೆ. ಆ ರೌಡಿಗಳಿಂದ ಪಾರಾಗುವಂತಹ ಸವಾಲು ಧನ್ಯಳಿಗೆ ಎದುರಾಗಿದೆ.

Amruthadhaare Serial: ರೌಡಿ ಗ್ಯಾಂಗ್‌ ಹಿಡಿತದಲ್ಲಿರುವ ಧನ್ಯಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ
Amruthadhaare Serial: ರೌಡಿ ಗ್ಯಾಂಗ್‌ ಹಿಡಿತದಲ್ಲಿರುವ ಧನ್ಯಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ

Amruthadhaare Serial: ಝೀ ಕನ್ನಡ ವಾಹಿನಿ ಅಮೃತಧಾರೆ ಧಾರಾವಾಹಿಯ ಅಕ್ಟೋಬರ್‌ 28ರ ಸಂಚಿಕೆಯ ಕಥೆ ಇಲ್ಲಿದೆ. ಧನ್ಯಳಿಗೆ ಶಕುಂತಲಾದೇವಿ ಮತ್ತು ರಮಾಕಾಂತ್‌ ಕಾಯುತ್ತಿದ್ದಾರೆ. ಸುತ್ತಲೂ ಯಾರಿಗೂ ಕಾಣದಂತೆ ರೌಡಿಗಳು ಅಡಗಿದ್ದಾರೆ. "ಧನ್ಯ ಬರಲಿ, ನಾನು ಏನೆಂದು ಇವತ್ತು ತೋರಿಸುವೆ" ಎಂದು ಶಕುಂತಲಾದೇವಿ ಹೇಳುತ್ತಾರೆ. ಧನ್ಯ ಇನ್ನೂ ಯಾಕೆ ಬರಲಿಲ್ಲ ಎಂದು ಟೆನ್ಷನ್‌ನಲ್ಲಿ ಕಾಯುತ್ತಿದ್ದಾರೆ. ಆ ಸಮಯದಲ್ಲಿ ಧನ್ಯಳ ಆಗಮನವಾಗುತ್ತದೆ. ಆದರೆ, ಬಂದವಳು ಧನ್ಯ ಅಲ್ಲ. ಬೇರೆಯವಳು ಸ್ಥಳ ಪರೀಕ್ಷೆಗೆ ಬಂದಿರುತ್ತಾಳೆ. ಇಲ್ಲಿ ಎಲ್ಲವೂ ಕ್ಲಿಯರ್‌ ಎಂದೆನಿಸಿದಾಗ ಆಕೆ ಹೋಗುತ್ತಾಳೆ. ಧನ್ಯ ಬರುತ್ತಾಳೆ. ಒಂದಿಷ್ಟು ಮಾತಿನ ಬಳಿಕ ವಿಚಾರಕ್ಕೆ ಬರುತ್ತಾರೆ.

"ನಿನ್ನ ಅಕ್ಕನಿಗೆ ಗತಿ ಇರಲಿಲ್ಲ. ಅವಳಿಗೆ ಆಗ ಕೆಲಸ ಕೊಟ್ಟು ಸಾಕಿದ್ದು ನಾನು. ಅವಳು ನನ್ನ ವಿರುದ್ಧವೇ ನಿಂತಳು. ಅವಳು ನನ್ನನೇ ಹೆಲ್ಪ್‌ಲೆಸ್‌ ಮಾಡಿದಳು. ನನ್ನ ವೀಕ್‌ನೆಸ್‌ ನೋಡಿಕೊಂಡು ಗೌತಮ್‌ಗೆ ಹತ್ತಿರವಾಗಲು ನೋಡಿದಳು" ಎಂದು ಶಕುಂತಲಾದೇವಿ ಹೇಳುತ್ತಾರೆ. "ಕಥೆ ತುಂಬಾ ಚೆನ್ನಾಗಿದೆ. ಅಸಲಿ ಕಥೆ ಏನು ಎಂದು ನನಗೆ ಗೊತ್ತು. ಅಕ್ಕಾ ನನಗೆ ಎಲ್ಲಾ ಹೇಳಿದ್ದಾಳೆ. ನೀವು ಏನೂ... ಗೌತಮ್‌ ಏನೂ... ನಿಮ್ಮ ಯೋಗ್ಯತೆ ಏನೂ ಎಂದು ಗೊತ್ತಿದೆ. ನೀವು ಮಾಡಿರೋದು ಎಲ್ಲಾ ಗೊತ್ತು. ಎಲ್ಲಾನೂ... " ಎಂದು ಧನ್ಯ ಹೇಳುತ್ತಾಳೆ.

"ಪಾಪಾ ಗೌತಮ್‌ ತುಂಬಾ ಒಳ್ಳೆಯವರು. ಎಲ್ಲವನ್ನೂ ನಿಮ್ಮ ಸ್ವಾರ್ಥಕ್ಕಾಗಿ ಮಾಡ್ತಾ ಇದ್ದೀರಿ. ಅದು ಅಕ್ಕನಿಗೆ ಗೊತ್ತಾಯ್ತು. ಅಕ್ಕನ ಹೆಸರಿಗೆ ಮಸಿ ಬಳಿದಿರಿ. ಯಾವ ತಪ್ಪು ಮಾಡದ ಅಕ್ಕನನ್ನು ಹೊರಗೆ ದಬ್ಬಿದ್ದೀರಿ. ಅಮ್ಮನ ಸ್ಥಾನದಲ್ಲಿ ನಿಂತು ಗೌತಮ್‌ಗೆ ಸ್ಲೋ ಪಾಯಿಸನ್‌ ಆಗಿದ್ದೀರಿ. ಎಲ್ಲರನ್ನೂ ಇರುವೆ ಸಾಯಿಸದಂತೆ ಮುಗಿಸಿಬಿಡ್ತೀರಿ. ನನಗೆ ಎಲ್ಲವೂ ಗೊತ್ತಾಗಿದೆ. ಗೊತ್ತಾದ ಮೇಲೆ ಸುಮ್ಮನೆ ಇರ್ತಿನಿ ಅಂದುಕೊಂಡಿದ್ದೀರ. ನೀವು ಅಂದುಕೊಂಡಂತೆ ಗೌತಮ್‌ ತಾಯಿ ಮತ್ತು ತಂಗಿ ಸತ್ತಿಲ್ಲ. ಅವರಿನ್ನೂ ಬದುಕೇ ಇದ್ದಾರೆ" ಎಂದು ಧನ್ಯ ಹೇಳಿದಾಗ ಇಬ್ಬರೂ ಗಡಗಡ ನಡುಗುತ್ತಾರೆ.

"ಏನೂ ಹೇಳ್ತಾ ಇದ್ದೀಯಾ. ಸಿಸ್ಟರ್‌ ಇವಳನ್ನು ನಂಬಬೇಡಿ" ಎಂದು ರಮಾಕಾಂತ್‌ ಹೇಳುತ್ತಾರೆ. "ನಾನ್ಯಾಕೆ ಸುಳ್ಳು ಹೇಳಲಿ, ನನಗೆ ಗೊತ್ತಿರೋ ಸತ್ಯ ನಿಮಗೂ ಗೊತ್ತಾಗಲಿ, ಅರ್ಜೆಂಟಲಿ ಅರ್ಧಂಬರ್ಧ ಕೆಲಸ ಮಾಡಿದ್ದೀರಿ ಅಂಕಲ್‌, ಆಯಸ್ಸು ಗಟ್ಟಿಯಾಗಿದ್ರೆ ಏನೂ ಮಾಡೋಕ್ಕೆ ಆಗೋಲ್ಲ. ಅವರಿಬ್ಬರೂ ಬದುಕಿದ್ದಾರೆ" ಎಂದು ಧನ್ಯ ಹೇಳುತ್ತಾಳೆ. "ಅವಳು ಎಲ್ಲಿ" ಎಂದು ಕೇಳುತ್ತಾರೆ. ಅದಕ್ಕೆ "ಎಲ್ಲವನ್ನೂ ಈಗಲೇ ಹೇಳಿದರೆ ನೀವು ನನ್ನನ್ನು ಬಿಡ್ತಿರಾ. ಇನ್‌ಸ್ಟಾಲ್‌ಮೆಂಟ್‌ನಲ್ಲಿ ಹೇಳುವೆ. ನಾನು ಹೇಳಿದಂತೆ ಕೇಳಿದರೆ ಮಾತ್ರ ಎಲ್ಲಾ ಹೇಳುವೆ" ಎಂದು ಧನ್ಯ ಹೇಳುತ್ತಾಳೆ.

ಏನೂ ನೀನು ಹೇಳಿದ್ದನ್ನು ನಾನು ಕೇಳಬೇಕಾ? ನಾವು ಏನು ಅಂತ ತೋರಿಸುವೆ ಎಂದು ರಮಾಕಾಂತ ವಿಸಿಲ್‌ ಹೊಡೆದಾಗ ರೌಡಿಗಳು ಬರುತ್ತಾರೆ. ಧನ್ಯಳಿಗೆ ಆತಂಕವಾಗುತ್ತದೆ. ಭಯದಿಂದ ಸುತ್ತ ನೋಡುತ್ತಾಳೆ. "ಹಿಡ್ಕೋಳ್ರೋ ಇವಳನ್ನ" ಎಂದಾಗ ರೌಡಿಗಳು ಆಕೆಯನ್ನು ಹಿಡಿಯುತ್ತಾರೆ. "ನಿನಗೆ ಆಟ ಆಡಲು ಗೊತ್ತ, ನಮಗೆ ಎಲ್ಲವೂ ಗೊತ್ತು" ಎಂದು ಶಕುಂತಲಾದೇವಿ ಹೇಳುತ್ತಾರೆ. "ಅದೇನೋ ಸಾಕ್ಷಿ ಇದೆ ಅಂತ ಹೇಳಿದ್ಯಲ್ಲ" ಎನ್ನುತ್ತಾರೆ ಶಕುಂತಲಾ. ನಾನು ಸತ್ರೂ ಹೇಳೋದಿಲ್ಲ ಎನ್ನುತ್ತಾಳೆ ಧನ್ಯ. ಬಳಿಕ ರೌಡಿಗಳು ಅವಳನ್ನು ಹಿಡಿದುಕೊಂಡು ಅಲ್ಲಿಂದ ಹೋಗುತ್ತಾರೆ. ಆಗ ಧನ್ಯ ಜೋರಾಗಿ ಕೈ ಕೊಡವಿಕೊಂಡು ರೌಡಿಗಳಿಂದ ಬಿಡಿಸಿಕೊಂಡು ಓಡುತ್ತಾಳೆ. ರೌಡಿಗಳು ಅಟ್ಟಿಸಿಕೊಂಡು ಹೋಗುತ್ತಾರೆ. ಶಕುಂತಲಾ ಮತ್ತು ರಮಾಕಾಂತ್‌ ತಲೆ ಮೇಲೆ ಕೈ ಹೊತ್ತುಕೊಳ್ಳುತ್ತಾರೆ.

ಇನ್ನೊಂದೆಡೆ ಗೌತಮ್‌ ಮನೆಯಲ್ಲಿ ಕುಳಿತಿದ್ದಾರೆ. ನಾನು ರಜೆ ಹಾಕಿದ್ದೇನೆ ಎಂದಿದ್ದಾರೆ. "ಒಂದು ಕಡೆ ಪಾರ್ಥ ಮತ್ತೊಂದು ಕಡೆ ಜೈದೇವ್‌ ಇದ್ದಾರೆ. ನನಗೀಗ ನಿಶ್ಚಿಂತೆ" ಎಂದು ಗೌತಮ್‌ ಹೇಳುತ್ತಾರೆ. "ನನ್ನ ಕಣ್ಣ ಮುಂದೆ ಬೆಳೆದ ತಮ್ಮಂದಿರು ಬೆಳೆಯುವುದನ್ನು ನೋಡಲು ಖುಷಿಯಾಗುತ್ತದೆ" ಎಂದು ಹೇಳುತ್ತಾರೆ. ಭೂಮಿಕಾಗೂ ಖುಷಿಯಾಗುತ್ತದೆ. "ಇವತ್ತು ಏನೂ ಕೆಲಸ ಇಲ್ಲ. ಓತ್ಲಾ ಹೊಡೆಯೊದು. ಹೆಂಡ್ತಿ ಜತೆ ಕಾಲ ಕಳೆಯೋದು" ಎಂದು ಗೌತಮ್‌ ಹೇಳಿದಾಗ ಭೂಮಿಕಾ ನಗುತ್ತಾರೆ. ರಜಾ ಸಮಯವನ್ನು ಇಬ್ಬರೂ ಮಾತನಾಡುತ್ತ ಕಾಲ ಕಳೆಯುತ್ತಾರೆ. ಒಬ್ಬರಿಗೊಬ್ಬರು ಹಣ್ಣು ತಿನ್ನಿಸುತ್ತಾ ಪ್ರೀತಿಯಲ್ಲಿ ಮುಳುಗುತ್ತಾರೆ. ಆ ಸಮಯದಲ್ಲಿ ಅಪೇಕ್ಷಾ ಬರುತ್ತಾಳೆ. "ದೀಪಾವಳಿಗೆ ಒಂದು ಪಾರ್ಟಿ ಮಾಡೋಣ್ವ" ಎಂದು ಅಪೇಕ್ಷಾ ಹೇಳುತ್ತಾಳೆ. "ಒಳ್ಳೆಯದು, ಅಪೇಕ್ಷಾ ಆದರೆ, ದೀಪಾವಳಿ ಸಮಯದಲ್ಲಿ ಪಾರ್ಟಿ ಯಾಕೆ, ಸಂಪ್ರದಾಯ ಪ್ರಕಾರ ಮಾಡಿದರೆ ಒಳ್ಳೆಯದು" ಎಂದು ಭೂಮಿಕಾ ಹೇಳುತ್ತಾಳೆ. ಗೌತಮ್‌ ಬಳಿ ನಿಮ್ಮ ಅಭಿಪ್ರಾಯವೇನು ಎಂದು ಕೇಳುತ್ತಾಳೆ. "ಭೂಮಿಕಾ ಹೇಳಿದ್ದರಲ್ಲಿ ಪಾಯಿಂಟ್‌ ಇದೆ. ಇನ್ನೂ ನಿನ್ನ ಮನೆಯವರಿಗೆ ನಮ್ಮ ಮೇಲೆ ಕೋಪ ಕಡಿಮೆಯಾಗಿಲ್ಲ. ಎಲ್ಲವೂ ಸರಿಯಾದ ಮೇಲೆ ಒಟ್ಟಿಗೆ ಸೇರಿ ಹಬ್ಬ ಮಾಡೋಣ" ಎಂದು ಗೌತಮ್‌ ಹೇಳುತ್ತಾರೆ. "ಈ ಮನೆಯಲ್ಲಿ ಹೆಸರಿಗಷ್ಟೇ ನಾನು ಸೊಸೆ" ಎಂದು ಅಪೇಕ್ಷಾ ಮನಸ್ಸಲ್ಲಿ ಕೋಪಗೊಳ್ಳುತ್ತಾಳೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

Whats_app_banner