Amruthadhaare: ಭಾಗ್ಯಮ್ಮ-ಗೌತಮ್‌ ಭೇಟಿ ತಪ್ಪಿಸಿದ ಶಕುಂತಲಾ; ಭೂಪತಿಯ ಸಹವಾಸ ಬಿಟ್ಟ ಸುಧಾ, ಮತ್ತೆ ದಾರಿ ತಪ್ಪಿದ ಜೈದೇವ್‌ - ಅಮೃತಧಾರೆ ಕಥೆ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಭಾಗ್ಯಮ್ಮ-ಗೌತಮ್‌ ಭೇಟಿ ತಪ್ಪಿಸಿದ ಶಕುಂತಲಾ; ಭೂಪತಿಯ ಸಹವಾಸ ಬಿಟ್ಟ ಸುಧಾ, ಮತ್ತೆ ದಾರಿ ತಪ್ಪಿದ ಜೈದೇವ್‌ - ಅಮೃತಧಾರೆ ಕಥೆ

Amruthadhaare: ಭಾಗ್ಯಮ್ಮ-ಗೌತಮ್‌ ಭೇಟಿ ತಪ್ಪಿಸಿದ ಶಕುಂತಲಾ; ಭೂಪತಿಯ ಸಹವಾಸ ಬಿಟ್ಟ ಸುಧಾ, ಮತ್ತೆ ದಾರಿ ತಪ್ಪಿದ ಜೈದೇವ್‌ - ಅಮೃತಧಾರೆ ಕಥೆ

Amruthadhaare serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ (ಡಿಸೆಂಬರ್‌ 27) ಸಂಚಿಕೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಭಾಗ್ಯಮ್ಮ-ಗೌತಮ್‌ ಭೇಟಿಯನ್ನು ಶಕುಂತಲಾ ತಪ್ಪಿಸಿದ್ದಾರೆ. ಜೈದೇವ್‌ ಮತ್ತು ರಾಜೇಂದ್ರ ಭೂಪತಿ ಒಂದಾಗಿದ್ದಾರೆ. ಇದೇ ಸಮಯದಲ್ಲಿ ಭೂಪತಿಗೆ ಸಹಾಯ ಮಾಡೋಲ್ಲ ಎಂದು ಸುಧಾ ಖಡಾಖಂಡಿತವಾಗಿ ಹೇಳಿದ್ದಾಳೆ.

Amruthadhaare: ಭಾಗ್ಯಮ್ಮ-ಗೌತಮ್‌ ಭೇಟಿ ತಪ್ಪಿಸಿದ ಶಕುಂತಲಾ, ಭೂಪತಿ ಸಹವಾಸ ಬಿಟ್ಟ ಸುಧಾ
Amruthadhaare: ಭಾಗ್ಯಮ್ಮ-ಗೌತಮ್‌ ಭೇಟಿ ತಪ್ಪಿಸಿದ ಶಕುಂತಲಾ, ಭೂಪತಿ ಸಹವಾಸ ಬಿಟ್ಟ ಸುಧಾ

Amruthadhaare serial Today Episode: ಭೂಪತಿ ಮನೆಯಲ್ಲಿ ಸುಧಾ ಇದ್ದಾಳೆ. ಆಕೆ ಫೈಲ್‌ ತಂದುಕೊಟ್ಟಿರುವುದಕ್ಕೆ ಆತನಿಗೆ ಖುಷಿಯಾಗುತ್ತದೆ. "ನಾನು ತಪ್ಪು ಮಾಡುತ್ತಿದ್ದೇನೆ. ನನಗೆ ಇದು ಇಷ್ಟವಿಲ್ಲ. ಗೌತಮ್‌ ತುಂಬಾ ಒಳ್ಳೆಯವರು" ಎಂದು ಸುಧಾ ಹೇಳುತ್ತಾಳೆ. "ಈಗ ಬೇಕಿರುವುದು ದುಡ್ಡು. ಒಳ್ಳೆಯತನ ಹೊಟ್ಟೆ ತುಂಬಿಸುವುದಿಲ್ಲ. ನಿನ್ನ ಅಮ್ಮನ ಆಪರೇಷನ್‌ಗೆ ದುಡ್ಡು ಬೇಕು. ನಿನಗೆ ಇದು ಅನಿವಾರ್ಯ. ನಿನ್ನ ನಿಯತ್ತು ಕೆಲಸ ಮಾಡುವುದಿಲ್ಲ. ದುಡ್ಡೇ ನಿನ್ನ ಅಮ್ಮನನ್ನು ಉಳಿಸುವುದು" ಎಂದು ಭೂಪತಿ ಹೇಳುತ್ತಾರೆ. ಇದಾದ ಬಳಿಕ ಒಂದು ಕಂತೆ ಹಣ ನೀಡುತ್ತಾರೆ. ಸುಧಾಳಿಗೆ ಇಕ್ಕಟ್ಟಿನ ಪರಿಸ್ಥಿತಿ. "ನಿಮ್ಮ ದುಡ್ಡು ನನಗೆ ಬೇಕಾಗಿಲ್ಲ. ದಮ್ಮಯ್ಯ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ಇಂತಹ ಕೆಲಸ ನನ್ನಿಂದ ಮಾಡಲು ಸಾಧ್ಯವಿಲ್ಲ" ಎಂದು ಸುಧಾ ಹೇಳುತ್ತಾಳೆ. "ಏನು ಹೇಳ್ತಾ ಇದ್ದೀಯಾ" ಎಂದು ಭೂಪತಿ ಅಚ್ಚರಿ ವ್ಯಕ್ತಪಡಿಸುತ್ತಾರೆ. "ನನಗೆ ಆ ಮನೆಯವರ ಗುಣ ಇಷ್ಟವಾಗಿದೆ. ಇಷ್ಟು ದಿನ ನಿಮ್ಮ ಋಣಕ್ಕಾಗಿ ಈ ಕೆಲಸ ಮಾಡುತ್ತಿದ್ದೆ. ಆದರೆ, ಇನ್ನು ಮುಂದೆ ನನಗೆ ಈ ಕೆಲಸ ಮಾಡಲು ಸಾಧ್ಯವಿಲ್ಲ. ದಯವಿಟ್ಟು ಬಿಟ್ಟುಬಿಡಿ" ಎಂದು ಸುಧಾ ಹೇಳುತ್ತಾಳೆ. "ಹೇಗೋ ಇವಳನ್ನು ಬ್ಲ್ಯಾಕ್‌ಮೇಲ್‌ ಮಾಡಿಕೊಂಡಿದ್ದೆ. ತಪ್ಪಿ ಹೋಯ್ತು ಅವಕಾಶ" ಎಂದು ಭೂಪತಿ ಬೇಸರದಲ್ಲಿ ಯೋಚಿಸುತ್ತಾನೆ.

ಭೂಮಿಕಾ ಮತ್ತು ಸುಧಾಳ ಮಗಳು ಆಡುತ್ತಿದ್ದಾರೆ. ಆಗ ಗೌತಮ್‌ ಬರುತ್ತಾರೆ. ಆಮೇಲೆ ಅವರಿಬ್ಬರು ಪುಟ್ಟಿನ ಕ್ವಾಟ್ರಸ್‌ಗೆ ಬಿಟ್ಟುಬರಲು ಹೋಗುತ್ತಾರೆ. ಇನ್ನೊಂದೆಡೆ ಮಲ್ಲಿ ಚಿಂತೆಯಲ್ಲಿದ್ದಾಳೆ. ಅಲ್ಲಿಗೆ ಜೈದೇವ್‌ ಬರುತ್ತಾನೆ. "ಈ ಮನೆಯಲ್ಲಿ ಏನು ಆಗುತ್ತಿದೆ. ಪಾಪದ ಸುಧಾಳ ಮೇಲೆ ಅನುಮಾನ ಪಟ್ರಲ್ಲ" ಎಂದು ಮಲ್ಲಿ ಬೇಸರದಿಂದ ಹೇಳುತ್ತಾಳೆ. ತನ್ನದೇ ಶೈಲಿಯಲ್ಲಿ ಜೈದೇವ್‌ ತೇಪೆ ಹಾಕುತ್ತಾನೆ. "ಸುಧಾ ಮನೆಯಲ್ಲಿ ನಮ್ಮಲ್ಲಿ ಒಬ್ಬರಾಗಿದ್ದಾರೆ. ಇದೆಲ್ಲ ಹೇಗೆ ಸಾಧ್ಯ. ಅವರ ಮೇಲೆ ಯಾಕೆ ಆರೋಪ ಹೊರಿಸಿಬಿಟ್ರು. ಇದೇ ಬೇಸರದಿಂದ ಅವರು ಮನೆ ಬಿಟ್ಟು ಹೋದ್ರೆ ಏನು ಗತಿ" ಎಂದು ಮಲ್ಲಿ ಹೇಳ್ತಾಳೆ. ಅದೇ ಸಮಯದಲ್ಲಿ ಜೈದೇವ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬರುತ್ತದೆ.

ಮತ್ತೆ ದಾರಿ ತಪ್ಪಿದ ಜೈದೇವ್‌

"ನಮಸ್ಕಾರ, ನಾನು ನಿನ್ನ ಅಣ್ಣನಿಗೆ ಬೇಡವಾದವನು. ನಿಮಗೆ ಬೇಡವಾದವನು" ಎಂದು ಆ ಕಡೆಯಿಂದ ಭೂಪತಿ ಹೇಳುತ್ತಾನೆ. "ಸ್ವಲ್ಪ ಮಾತನಾಡಲು ಇತ್ತು. ಬನ್ನಿ" ಎನ್ನುತ್ತಾನೆ ಭೂಪತಿ. "ನಮ್ಮನ್ನೆಲ್ಲ ಕೊಲ್ಲಲು ಯತ್ನಿಸಿದ ನಿನ್ನ ಮನೆಗೆ ಯಾಕೆ ಬರಲಿ" ಎಂದು ಜೈದೇವ್‌ ಹೇಳುತ್ತಾನೆ. "ಬಂದ್ರೆ ನಿನಗೆ ಒಳ್ಳೆಯದು. ನನ್ನ ದಾರಿ, ನಿಮ್ಮ ದಾರಿ ಎರಡೂ ಒಂದೇ" ಎಂದೆಲ್ಲ ಭೂಪತಿ ಹೇಳುತ್ತಾನೆ. ಜೈದೇವ್‌ಗೆ ಅರ್ಥವಾಗುತ್ತದೆ. "ಆಫರ್‌ ಇಂಟ್ರೆಸ್ಟಿಂಗ್‌ ಆಗಿದೆಯಲ್ವ. ಏನು ಮಾಡ್ಲಿ" ಎಂದು ಯೋಚಿಸುತ್ತಾನೆ. "ನಮ್ಮ ಮನೆಗೆ ಬಂದು ಬಿಡಿ. ಲೊಕೆಷನ್‌ ಕಳುಹಿಸ್ತಿನಿ" ಎಂದು ಭೂಪತಿ ಹೇಳಿದಾಗ ಜೈದೇವ್‌ ಒಪ್ಪುತ್ತಾನೆ.

ಭಾಗ್ಯಮ್ಮ-ಗೌತಮ್‌ ಭೇಟಿ ತಪ್ಪಿಸಿದ ಶಕುಂತಲಾ

ಗೌತಮ್‌ ಮತ್ತು ಭೂಮಿಕಾ ಇಬ್ಬರೂ ಸುಧಾಳ ಮನೆಗೆ ಬರುತ್ತಾರೆ. ಬ್ಯಾಗ್‌ನಿಂದ ಕೀ ತೆಗೆಯಲು ನೋಡುತ್ತಾರೆ. ಆಗ ದೂರದಲ್ಲಿ ಶಕುಂತಲಾ ಇದನ್ನು ನೋಡುತ್ತಾರೆ. ಗೌತಮ್‌ ತನ್ನ ತಾಯಿಯನ್ನು ನೋಡಿಬಿಟ್ಟರೆ ಏನು ಗತಿ ಎಂದು ಆತಂಕಪಡುತ್ತಾಳೆ. ಗೌತಮ್‌ ಬಳಿಗೆ ಬಂದು "ನೀನು ಏನು, ನಿನ್ನ ಸ್ಟೇಟಸ್‌ ಏನು, ಇಂತಹ ಜಾಗಕ್ಕೆ ನೀನು ಬರಬಾರದು. ಕೆಲಸದವರನ್ನು ತುಂಬಾ ಹಚ್ಚಿಕೊಂಡ್ರೆ ತಲೆ ಮೇಲೆ ಕುಳಿತುಕೊಳ್ಳುತ್ತಾರೆ. ನಾಳೆ ಏನಾದ್ರೂ ರೂಮರ್‌ ಶುರವಾದ್ರೆ ಏನ್‌ ಮಾಡ್ತಿಯಾ. ನಿನಗೆ ಏನೂ ಅರ್ಥ ಆಗೋದಿಲ್ಲ" ಎಂದು ಹೇಳಿ ಕರೆದುಕೊಂಡು ಹೋಗುತ್ತಾರೆ ಶಕುಂತಲಾ. ಈ ಮೂಲಕ ತಾಯಿ ಮತ್ತು ಮಗನ ಭೇಟಿ ತಪ್ಪುತ್ತದೆ.

ಇನ್ನೊಂದೆಡೆ ಜೈದೇವ್‌ ನೇರವಾಗಿ ರಾಜೇಂದ್ರ ಭೂಪತಿ ಮನೆಗೆ ಬರುತ್ತಾನೆ. "ಬರಲು ಹೇಳಿದ್ರಿ, ಏನು ವಿಷಯ" ಎಂದು ಕೇಳುತ್ತಾನೆ. "ಮನೆಯ ತನಕ ಬಂದಿದ್ದೀ. ಕೈ ಕೊಡಲು ಏನು" ಎಂದು ಷೇಕ್‌ಹ್ಯಾಂಡ್‌ ಮಾಡ್ತಾರೆ ಭೂಪತಿ. "ನಿನಗೆ ನಿನ್ನ ಅಣ್ಣನ ಸೀಟ್‌ ಮೇಲೆ ಕಣ್ಣಿದೆ ಎಂದು ಗೊತ್ತಾಯ್ತು. ಹೊಡೆದ್ರೆ ಆನೆಯನ್ನೇ ಹೊಡೆಯಬೇಕು ಎಂದುಕೊಂಡವನು ನೀನು" ಎಂದು ರಾಜೇಂದ್ರ ಭೂಪತಿ ಹೇಳಿದಾಗ ಜೈದೇವ್‌ಗೆ ವಿಷಯ ಅರ್ಥವಾಗುತ್ತದೆ. "ನಿನಗೆ ನಾನು ಸಪೋರ್ಟ್‌ ಮಾಡ್ತಿನಿ" ಎಂದು ರಾಜೇಂದ್ರ ಭೂಪತಿ ಹೇಳುತ್ತಾನೆ. ಇಬ್ಬರು ಮತ್ತೆ ಷೇಕ್‌ ಹ್ಯಾಂಡ್‌ ಮಾಡಿ ಹಗ್‌ ಮಾಡುತ್ತಾರೆ. ಜೈದೇವ್‌ ಆಫೀಸ್‌ನಿಂದ ಕಾಲ್‌ ಬರುತ್ತದೆ. ಆ ಪ್ರಾಜೆಕ್ಟ್‌ ನಮಗೆ ಆಗಲಿಲ್ಲ ಎಂದು ಆ ಕಡೆಯಿಂದ ಹೇಳುತ್ತಾರೆ. "ನೋಡಿದ್ಯ, ನನ್ನ ಕೈ ಎಷ್ಟು ಉದ್ದ ಇದೆ" ಎಂದು ಭೂಪತಿ ಹೇಳಿದಾಗ ಜೈದೇವ್‌ಗೆ ಇವನು ಸಾಮಾನ್ಯ ವ್ಯಕ್ತಿಯಲ್ಲ ಎಂದು ಗೊತ್ತಾಗುತ್ತದೆ. ಈ ಮೂಲಕ ಎರಡು ವಿಲನ್‌ಗಳು ಒಂದಾಗಿದ್ದಾರೆ. ಸೀರಿಯಲ್‌ ಮುಂದುವರೆದಿದೆ.

ಧಾರಾವಾಹಿ ಹೆಸರು: ಅಮೃತಧಾರೆ.

ಎಪಿಸೋಡ್‌: ಡಿಸೆಂಬರ್‌ 27, 2024

ಯಾವ ಚಾನೆಲ್‌: ಜೀ ಕನ್ನಡ

ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

Whats_app_banner