Amruthadhaare Serial: ಗೌತಮ್ ದಿವಾನ್‌ನ ಭೇಟಿಯಾದ ಶರತ್, ಭಾಗ್ಯಮ್ಮಳ ಬಗ್ಗೆ ತಿಳಿದ ಇನ್ನೊಬ್ಬರು ಯಾರು? ಅಮೃತಧಾರೆ ಧಾರಾವಾಹಿ
Amruthadhaare serial today episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಶನಿವಾರದ ಸಂಚಿಕೆಯಲ್ಲಿ ಪ್ರಮುಖ ಘಟನೆಗಳೇನೂ ನಡೆದಿಲ್ಲ. ಆದರೆ, ಶರತ್ ಎಂಬ ವ್ಯಕ್ತಿ ಗೌತಮ್‌ನನ್ನು ಭೇಟಿಯಾಗುತ್ತಾರೆ. ಇದೇ ಸಮಯದಲ್ಲಿ ಭಾಗ್ಯಮ್ಮಳಿಗೆ ಗೊತ್ತಿರುವ ಇನ್ನೊಬ್ಬರು ವ್ಯಕ್ತಿಯನ್ನು ಸುಧಾ ನೆನಪಿಸಲು ಯತ್ನಿಸುತ್ತಾರೆ.

Amruthadhaare serial today episode: ಅತ್ತೆ ಭಾಗ್ಯಮ್ಮನ ಬಗ್ಗೆ ಯಾರಲ್ಲಿ ವಿಚಾರಿಸಿದರೆ ತಿಳಿಯಬಹುದು? ಅವರ ಬಗ್ಗೆ ತಿಳಿದವರು ಯಾರಿದ್ದಾರೆ? ಎಂದು ಭೂಮಿಕಾ ಕೇಳಿದಾಗ "ಒಬ್ಬರು ಇದ್ದಾರೆ" ಎಂದು ಸುಧಾ ಹೇಳುತ್ತಾರೆ. "ಅಮ್ಮ ಅವಾಗವಾಗ ಇಬ್ಬರ ಹೆಸರು ಹೇಳುತ್ತಾ ಇದ್ರು. ಒಬ್ಬರು ಗುಂಡು. ಇನ್ನೊಬ್ಬರು.. ನನಗೆ ಆ ಹೆಸರು ಈಗ ನೆನಪಾಗ್ತಾ ಇಲ್ಲ ಅತ್ತಿಗೆ" ಎನ್ನುತ್ತಾರೆ. ಇದಾದ ಬಳಿಕ ಭೂಮಿಕಾ ಅತ್ತೆ ಜತೆ ಮಾತನಾಡುತ್ತಾಳೆ. ಗೌತಮ್ ಬಗ್ಗೆ ಭಾಗ್ಯಮ್ಮಳ ಬಳಿ ಹೇಳುತ್ತಾ ಇದ್ದಾಗ ಭಾಗ್ಯಮ್ಮ ಕಣ್ಣರಳಿಸುತ್ತಾರೆ. ಆದಷ್ಟು ಬೇಗ ಗುಣ ಆಗ್ತೀರಿ ಎಂದು ಭೂಮಿಕಾ ಭರವಸೆ ನೀಡುತ್ತಾರೆ.
ಅಪೇಕ್ಷಾ ವರ್ತನೆ ಬಗ್ಗೆ ಸದಾಶಿವ ಬೇಸರ
ಇನ್ನೊಂದೆಡೆ ಸದಾಶಿವ ಬೇಸರದಲ್ಲಿ ಮಂದಾಕಿನಿ ಜತೆ ಮಾತನಾಡುತ್ತಾರೆ. "ಶ್ರೀಮಂತಿಕೆ ಇವಳನ್ನು ಹೀಗೆ ಬದಲಾಯಿಸಿತ. ಈಕೆಗೆ ಸಂಸ್ಕಾರ ಕಲಿಸಿಕೊಟ್ಟಿದ್ದೇವೆ. ಹಣ ಇರಲಿಲ್ಲ ನಿಜ. ಮಗಳು ಹೀಗೆ ಮಾಡಿದ್ದಾಳೆ ಅಂದರೆ ಅದು ನಮ್ಮ ಸೋಲು. ಕಿರಿ ಮಗಳು ಎಂದು ಹಿಡಿಪ್ರೀತಿ ಜಾಸ್ತಿ ತೋರಿಸಿದ್ದೇವೆ. ಅವಳು ಎಂತಹ ಬಹುಮಾನ ಕೊಟ್ಟಳು. ಈ ರೀತಿ ಆಗ್ತಾಳೆ ಎಂದು ಕನಸು ಮನಸ್ಸಲ್ಲಿಯೂ ಅಂದುಕೊಂಡಿರಲಿಲ್ಲ. ನಾವು ಬೆಳೆಸಿದ ಮಕ್ಕಳು ನಮ್ಮ ಕಣ್ಣ ಮುಂದೆಯೇ ದಾರಿ ತಪ್ಪಿದರೆ ಹೆತ್ತವರಿಗೆ ಆಗುವ ಸಂಕಷ್ಟ ಹೇಳಲಾಗದು" ಎಂದು ಸದಾಶಿವ ಬೇಸರದಲ್ಲಿ ಮಾತನಾಡುತ್ತಾರೆ. ಮಂದಾಕಿನಿ ಸಮಧಾನ ಮಾಡಲು ಯತ್ನಿಸುತ್ತಾರೆ.
ಶರತ್ ಆಗಮನ
ಗೌತಮ್ ದಿವಾನ್‌ನನ್ನು ಶರತ್ ಎಂಬವರು ಭೇಟಿಯಾಗುತ್ತಾರೆ. ಆತನನ್ನು ನೋಡಿ ತುಂಬಾ ಖುಷಿಪಡುತ್ತಾರೆ ಗೌತಮ್. "ಹೆಣ್ಣು ಮಕ್ಕಳಿಗಾಗಿ ಒಂದು ಪ್ರಾಜೆಕ್ಟ್ ಮಾಡಬೇಕು ಎಂದುಕೊಂಡಿದ್ದೇನೆ. ಇದು ನನ್ನ ಅಂಬಿಕಾಳಿಗೆ ಮಾಡುವ ಯೋಜನೆ. ಅವಳು ಇಲ್ಲ ಅಂದ್ರೂ ನನಗೆ ಅವಳಿಗಾಗಿ ಈ ಪ್ರಾಜೆಕ್ಟ್ ಮಾಡುತ್ತೇನೆ. ಈ ಪ್ರಾಜೆಕ್ಟ್ ಮೇಲೆ ಒಮ್ಮೆ ಕಣ್ಣಾಡಿಸಿ. ನನಗೆ ನನ್ನ ಮಗಳು ದೂರವಾದ ಬೇಸರವಿದೆ" ಎಂದೆಲ್ಲ ಶರತ್ ಹೇಳುತ್ತಾಳೆ. "ನನ್ನ ಬದುಕಿನಲ್ಲಿ ಈಗ ಎಲ್ಲವೂ ಸಿಕ್ಕಿದೆ. ನಿನ್ನ ಬದುಕಿನಲ್ಲಿ ಎಲ್ಲವೂ ವಾಪಸ್ ಬರುತ್ತದೆ" ಎಂದು ಶರತ್ ಹೇಳುತ್ತಾರೆ.
ಶಕುಂತಲಾ ದೇವಿ ಮತ್ತು ಲಕ್ಷ್ಮಿಕಾಂತ್ ಮಾತನಾಡುವಾಗ ಅಜ್ಜಮ್ಮ ಬರುತ್ತಾರೆ. "ನಿನ್ನ ಮಗಳು ಅಳಿಯ ಎಷ್ಟು ಚಂದದ ಮನೆ ಕಟ್ಟಿದ್ದಾರೆ. ನೀನು ಅಲ್ಲಿಗೆ ಬಂದು ಅವರಿಗೆ ಆಶೀರ್ವಾದ ಮಾಡಬೇಕಿತ್ತು" ಎಂದು ಅಜ್ಜಮ್ಮ ಹೇಳುತ್ತಾರೆ. ಶಕುಂತಲಾದೇವಿ ಏನೋ ಸಬೂಬು ಹೇಳುತ್ತಾಳೆ. "ಮಗಳಿಗಿಂತ ನಿನಗೆ ಫ್ರೆಂಡ್ ಮಗಳೇ ನಿನಗೆ ಹೆಚ್ಚಾಯ್ತ" ಎಂದು ಅಜ್ಜಮ್ಮ ಬಯ್ಯುತ್ತಾರೆ.
ಇನ್ನೊಂದೆಡೆ ಅಪೇಕ್ಷಾಳ ಮುಂದೆ ಭೂಮಿಕಾ ಮಾತನಾಡುತ್ತಾಳೆ. "ಕುಡಿದು ಅಭ್ಯಾಸ ಇದೆಯಾ, ನೀನು ನನಗೆ ಇಷ್ಟೆಲ್ಲ ಹೇಳ್ತಾ ಇದ್ಯಾ" ಎಂದು ಅಪೇಕ್ಷಾ ಹೇಳುತ್ತಾಳೆ. ಅಪೇಕ್ಷಾಗೆ ಬುದ್ದಿ ಹೇಳಲು ಬಂದ ಭೂಮಿಕಾಳಿಗೆ ಉಲ್ಟಾ ಮಾತನಾಡುತ್ತಾಳೆ. ಇದಾದ ಬಳಿಕ ಆನಂದ್ ಮತ್ತು ಅಪರ್ಣಾ ಜ್ಯೂಸ್‌ನಲ್ಲಿ ಮಿಕ್ಸ್ ಮಾಡಿಕೊಟ್ಟ ಕಥೆ ಹೇಳುತ್ತಾರೆ ಭೂಮಿಕಾ. "ನೀನು ಇದನ್ನೆಲ್ಲ ಮಾಡಬಹುದಂತೆ, ನಾನು ಮಾಡಿದ್ರೆ ದೊಡ್ಡ ವಿಷಯ" ಎಂದು ಅಪೇಕ್ಷಾ ಮಾತನಾಡುತ್ತಾಳೆ. "ಅದಕ್ಕೂ ಇದಕ್ಕೂ ತುಂಬಾ ವ್ಯತ್ಯಾಸ ಇದೆ. ನಾನು ಕುಡಿದು ಗಲಾಟೆ ಎಲ್ಲಾ ಮಾಡಿಲ್ಲ" ಎಂದು ಭೂಮಿಕಾ ಜೋರಾಗಿಯೇ ಹೇಳುತ್ತಾರೆ. ಹೀಗೆ, ಶನಿವಾರದ ಅಮೃತಧಾರೆ ಸೀರಿಯಲ್‌ನಲ್ಲಿ ಒಂದಿಷ್ಟು ಬೆಳವಣಿಗೆಗಳು ನಡೆದು ಮುಂದಿನ ಸಂಚಿಕೆಗೆ ಮುಂದುವರೆಯುತ್ತದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ). ಮಹಿಮಾ (ಹೊಸ ನಟಿ): ಇಶಿತಾ.

ವಿಭಾಗ