Amruthadhaare Serial: ಇನ್‌ಸ್ಪೆಕ್ಟರ್ ಮೇಲೆ ಕೈ ಮಾಡಿದ ಅಪೇಕ್ಷಾ ಜೈಲು ಪಾಲಾಗುತ್ತಾಳ? ಭೂಮಿಕಾ ಮನವಿಗೂ ಒಪ್ಪದ ಪೊಲೀಸ್
ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಅಪೇಕ್ಷಾ ಕುಡಿದು ಮಾಡಿದ ರಂಪಾಟವೇ ಪ್ರಮುಖ ಹೈಲೈಟ್. ಪರೋಕ್ಷವಾಗಿ ಶಕುಂತಲಾದೇವಿ ನೀಡಿದ ಸೂಚನೆಯಂತೆ ಅಪೇಕ್ಷಾ ಕುಡಿದಿದ್ದಾಳೆ. ಬಳಿಕ ಏನಾಯಿತು ಎಂದು ನೋಡೋಣ.

ಅಮೃತಧಾರೆ ಧಾರಾವಾಹಿಯ ಜನವರಿ 22ರ ಸಂಚಿಕೆಯಲ್ಲಿ ಅಪೇಕ್ಷಾ ಕಾರಿನಲ್ಲಿ ಕುಡಿಯುತ್ತಿದ್ದಾಳೆ. ಆಕೆಗೆ ವಿನಾ ಕಾರಣ ತನ್ನ ತವರಿನ ಮೇಲೆ ಕೋಪ. ಕೋಪಕ್ಕೆ ಸರಿಯಾದ ಕಾರಣವೂ ಇಲ್ಲ. ಜೀವನ್ ಕೊಟ್ಟ ಸಾರಿ ಚೀಪ್ ಆಗಿದೆ ಎನ್ನುವುದು ಆಕೆಯ ವರಾತ. ಇದಕ್ಕಾಗಿ ತವರು ಮನೆಯಲ್ಲಿ ನಡೆಯುತ್ತಿದ್ದ ಗೃಹಪ್ರವೇಶದ ಪೂಜೆಯಿಂದ ಅರ್ಧಕ್ಕೆ ಎದ್ದು ಬಂದಿದ್ದಾಳೆ. ಇದೇ ಸಮಯದಲ್ಲಿ ಶಕುಂತಲಾದೇವಿಯೂ ನೀನು ಉಳಿದವರಂತೆ ಕೋಪದಲ್ಲಿ ಕುಡಿಯಬೇಡ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಕುಡಿಯುವ ಐಡಿಯಾ ನೀಡಿದ್ದಾಳೆ. "ಅವಳು ಎಂತಹ ಕ್ರ್ಯಾಕ್ ಎಂದು ನನಗೆ ಗೊತ್ತು, ಅವಳು ಕುಡಿಯುತ್ತಾಳೆ. ಮುಂದೆ ದೊಡ್ಡ ಸೀನ್ ಇದೆ" ಎಂದು ಶಕುಂತಲಾ ದೇವಿ ತನ್ನ ಸಹೋದರನಿಗೆ ಹೇಳುತ್ತಾಳೆ.
ಕಾರಿನಲ್ಲಿ ವೋಡ್ಕಾ ಫುಲ್ ಬಾಟಲ್ ಹಿಡಿದುಕೊಂಡು ಅಪೇಕ್ಷಾ ಕುಡಿಯುತ್ತಿದ್ದಾಳೆ. ಡ್ರಿಂಕ್ ಆಂಡ್ ಡ್ರೈವ್ ತಪ್ಪು ಎಂದು ಗೊತ್ತಿದ್ದರೂ ಅಮಲಿನಲ್ಲಿ ಇರುತ್ತಾಳೆ. ಕುಡಿಯುತ್ತ ಕಾರು ಡ್ರೈವಿಂಗ್ ಮಾಡುತ್ತ ಹೋಗುತ್ತಿದ್ದಾಳೆ. ಒಂದು ಕಡೆ ಪೊಲೀಸರು ಚೆಕ್ಕಿಂಗ್ ಮಾಡುತ್ತಿದ್ದಾರೆ. ಈಕೆಯ ಕಾರು ಬಂದಾಗ ಕಾರನ್ನು ನಿಲ್ಲಿಸಿದ್ದಾರೆ. ಆಕೆ ಕಷ್ಟಪಟ್ಟು ಕಾರನ್ನು ನಿಲ್ಲಿಸಿದ್ದಾಳೆ. ಡಾಕ್ಯುಮೆಂಟ್ಸ್ ಕೇಳಿದಾಗ ಪ್ರಜ್ಞೆಯಿಲ್ಲದೆ ಕಾರಿನಿಂದ ಇಳಿದು ಏನೇನೋ ಮಾತನಾಡಿದ್ದಾಳೆ.
"ಡಾಕ್ಯುಮಂಟ್ಸ್ ಕೊಡಿ" ಎಂದು ಕೇಳಿದಾಗ "ಏನು ಡಾಕ್ಯುಮೆಂಟ್ಸ್, ನಾನ್ಯಾರು ಗೊತ್ತಾ?" ಎಂದೆಲ್ಲ ಮಾತನಾಡುತ್ತಾಳೆ. ಆಗ ಅಲ್ಲಿಗೆ ಲೇಡಿ ಪೊಲೀಸ್ ಬರುತ್ತಾರೆ. "ಕುಡಿದು ಡ್ರೈವಿಂಗ್ ಮಾಡಬಾರದು ಎಂದು ಗೊತ್ತಿಲ್ವ" ಎಂದೆಲ್ಲ ಪೊಲೀಸ್ ಹೇಳಿದಾಗ ಅಪೇಕ್ಷಾ ಏನೇನೋ ಮಾತನಾಡುತ್ತಾಳೆ. "ಆಟೋದಲ್ಲಿ ಹೋಗಿ" ಎಂದು ಪೊಲೀಸರು ಹೇಳಿದಾಗ "ನಾನ್ಯಾರು ಗೊತ್ತ" ಎಂದೆಲ್ಲ ಮಾತನಾಡುತ್ತಾಳೆ. ನಾನ್ಯಾರು ಎಂದು ತೋರಿಸ್ತಿನಿ ಎಂದು ಶಕುಂತಲಾದೇವಿಗೆ ಕಾಲ್ ಮಾಡುತ್ತಾಳೆ. "ದುಡ್ಡು ಕೊಟ್ಟರೆ ಬಿಡಬಹುದು" ಎಂದು ಶಕುಂತಲಾ ಹೇಳಿದಾಗ ಕಾರಿನಿಂದ ಕಂತೆ ಹಣ ತೆಗೆದು ಪೊಲೀಸ್ ಮೇಲೆ ಬಿಸಾಕುತ್ತಾಳೆ. ಈ ದೃಶ್ಯಗಳನ್ನು ಪೊಲೀಸರು ರೆಕಾರ್ಡ್ ಮಾಡುತ್ತ ಇರುತ್ತಾರೆ.
"ಮೆರಿಟ್‌ನಲ್ಲಿ ಓದಿ ಬಂದಿರುವ ಪೊಲೀಸ್ ನಾನು. ನನಗೆ ಲಂಚ ನೀಡ್ತಿಯಾ. ನಾಳೆ ಕೋರ್ಟ್‌ನಲ್ಲಿ ಬಂದು ಕಾರ್ ಬಿಡಿಸಿಕೊಂಡು ಹೋಗು" ಎಂದು ಪೊಲೀಸ್ ಕೋಪದಿಂದ ಹೇಳಿದಾಗ ಅಪೇಕ್ಷಾ ಪೋಲೀಸರ ಮೇಲೆ ಕೈ ಮಾಡುತ್ತಾಳೆ. ಪೊಲೀಸರು ಕೋಪದಿಂದ ಆಕೆಯನ್ನು ಎಳೆದುಕೊಂಡು ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ. "ಅವರ ಮನೆಯ ಮರ್ಯಾದೆ ಹೋಗುತ್ತೆ ಎಂದುಕೊಂಡರೆ ನಮ್ಮ ಮನೆಯ ಮರ್ಯಾದೆ ಹೋಗುವಂತೆ ಇದೆ" ಎಂದು ಶಕುಂತಲಾದೇವಿ ಯೋಚಿಸುತ್ತಾರೆ. ಪೊಲೀಸರು ಅಪೇಕ್ಷಾಳನ್ನು ಕಂಬಿಯ ಹಿಂದೆ ಹಾಕುತ್ತಾರೆ.
ಇನ್ನೊಂದೆಡೆ ಎಲ್ಲರೂ ಗೃಹಪ್ರವೇಶ ಮುಗಿದ ಸಂಭ್ರಮದಲ್ಲಿದ್ದಾರೆ. ಈ ಸಮಯದಲ್ಲಿ ಮುಂದಾಕಿನಿಗೆ ಕರೆ ಮಾಡಿ ಶಕುಂತಲಾ ವಿಷಯ ತಿಳಿಸುತ್ತಾರೆ. ಮುಂದಾಕಿನಿ ಆತಂಕದಿಂದ ಸದಾಶಿವರಿಗೆ ತಿಳಿಸುತ್ತಾರೆ. ಸದಾಶಿವ ತಾನೇ ಪೊಲೀಸ್ ಸ್ಟೇಷನ್‌ಗೆ ಹೋಗುತ್ತೇನೆ ಎನ್ನುತ್ತಾರೆ. ಸದಾಶಿವ ಹೊರಗೆ ಹೋಗುವಾಗ ಭೂಮಿಕಾಗೆ ಅನುಮಾನ ಬರುತ್ತದೆ. ಏನೆಂದು ಹೊರಗೆ ಬಂದು ಕೇಳುತ್ತಾಳೆ. ಬಳಿಕ ತಾನೇ ಪೊಲೀಸ್ ಸ್ಟೇಷನ್‌ಗೆ ಹೋಗುವುದಾಗಿ ತಿಳಿಸುತ್ತಾಳೆ.
ಪೊಲೀಸ್ ಸ್ಟೇಷನ್‌ಗೆ ಹೋಗುತ್ತಾಳೆ. "ಚಿಕ್ಕ ಹುಡುಗಿ ಗೊತ್ತಿಲ್ಲದೆ ತಪ್ಪು ಮಾಡಿದ್ದಾಳೆ" ಎಂದು ಭೂಮಿಕಾ ಕೇಳುತ್ತಾಳೆ. "ಈಕೆ ಏನು ಮಾಡಿದ್ದಾಳೆ ಗೊತ್ತ, ನೀವು ಕಾಡಿಬೇಡಿ ಏನು ಮಾಡಿದರೂ ಅಷ್ಟೇ ಇವಳನ್ನು ಮಾತ್ರ ಜೈಲು ಪಾಲು ಮಾಡದೆ ಬಿಡುವುದಿಲ್ಲ ನಾನು" ಎಂದು ಲೇಡಿ ಇನ್‌ಸ್ಪೆಕ್ಟರ್ ಕೋಪದಿಂದ ಅಬ್ಬರಿಸುತ್ತಾರೆ. ಸೀರಿಯಲ್ ಮುಂದುವರೆಯುತ್ತದೆ. ಮುಂದಿನ ಎಪಿಸೋಡ್‌ನಲ್ಲಿ ಈಕೆ ಮೇಸ್ಟ್ರು ಸದಾಶಿವನ ಮಗಳು ಎಂದು ಪೊಲೀಸ್ ತಿಳಿಯುತ್ತದೆ. ಪೊಲೀಸರು ಕೂಡ ಅದೇ ಫಂಕ್ಷನ್‌ಗೆ ಹೋಗುವವರು ಇರುತ್ತಾರೆ. ಮೇಸ್ಟ್ರು ಮಗಳು ಎಂದು ಈಕೆಯನ್ನು ಬಿಡುಗಡೆ ಮಾಡುತ್ತಾರೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).

ವಿಭಾಗ