ಅಮೃತಧಾರೆ ಧಾರಾವಾಹಿ: ಗೌತಮ್ ದಿವಾನ್‌ಗೆ 'ಕರ್ನಾಟಕದ ಹೆಮ್ಮೆ' ಪ್ರಶಸ್ತಿ; ಸೃಜನ್ ಜತೆ ಒರಟಾಗಿ ನಡೆದುಕೊಂಡ ಸುಧಾ
ಅಮೃತಧಾರೆ ಧಾರಾವಾಹಿ: ಏಪ್ರಿಲ್ 15ರ ಸಂಚಿಕೆಯಲ್ಲಿ ಒಂದಿಷ್ಟು ಬೆಳವಣಿಗೆಗಳು ನಡೆದಿವೆ. ಗೌತಮ್ ದಿವಾನ್‌ಗೆ ಕರ್ನಾಟಕದ ಹೆಮ್ಮೆ ಎಂಬ ಪ್ರತಿಷ್ಠಿತ ಪ್ರಶಸ್ತಿ ದೊರಕಿರುವ ವಿಚಾರ ಎಲ್ಲರಿಗೂ ತಿಳಿಯುತ್ತದೆ. ಇದೇ ಸಮಯದಲ್ಲಿ ಮೈಕ್ ವಿಚಾರದಲ್ಲಿ ಭೂಮಿಕಾಗೆ ಸೃಜನ್ ಸಹಾಯ ಮಾಡುತ್ತಾನೆ. ಸೃಜನ್ ಜತೆ ಸುಧಾ ಒರಟಾಗಿ ನಡೆದುಕೊಳ್ಳುತ್ತಾಳೆ.

ಅಮೃತಧಾರೆ ಧಾರಾವಾಹಿ ಏಪ್ರಿಲ್ 15ರ ಸಂಚಿಕೆ: ಗೌತಮ್ ಮತ್ತು ಭೂಮಿಕಾ ಔಟಿಂಗ್ ಹೋಗಿದ್ದಾರೆ. ಬೈಕ್‌ನಲ್ಲಿ ಜಾಲಿ ರೈಡ್ ಮಾಡಿದ್ದಾರೆ. ಹೋಟೆಲ್‌ನಲ್ಲಿ ಕುಳಿತು ಇವರಿಬ್ಬರು ಮಾತನಾಡುತ್ತಿದ್ದಾರೆ. ಹುಟ್ಟಲ್ಲಿರುವ ಮಗುವಿನ ಕುರಿತು ಇಬ್ಬರೂ ಮುಕ್ತವಾಗಿ ಮಾತನಾಡುತ್ತಾರೆ. ಒಬ್ಬರನೊಬ್ಬರು ಹೊಗಳುತ್ತ ಇದ್ದಾರೆ. ಇಬ್ಬರೂ ಲವರ್ಸ್ ರೀತಿ ಎಂಜಾಯ್ ಮಾಡುತ್ತಿದ್ದಾರೆ. ಜ್ಯೂಸ್ ಅನ್ನೇ ಐಸ್‌ಕ್ರೀಮ್ ಎಂದುಕೊಂಡು ಕುಡಿಯುತ್ತಿದ್ದಾರೆ. ಇದೇ ಸಮಯದಲ್ಲಿ ಗೌತಮ್‌ಗೆ ಆಫೀಸ್‌ನಿಂದ ಕರೆ ಬರುತ್ತದೆ. ಅವರು ಆ ಕಡೆ ಹೋಗುವಾಗ ಭೂಮಿಕಾಗೆ ಮಾತಿನ ಮಲ್ಲ ಸೃಜನ್ ಕರೆ ಮಾಡುತ್ತಾನೆ. "ಆ ಸರದಲ್ಲಿ ಮೈಕ್ ಇಟ್ಟಿರುವುದನ್ನು ಸುಲಭವಾಗಿ ಕಂಡುಹಿಡಿಯಬಹುದು. ರೆಡ್‌ಹ್ಯಾಂಡ್ ಆಗಿ ಕಂಡುಹಿಡಿಯಬಹುದು" ಎಂದು ಹೇಳುತ್ತಾನೆ.
ಹೀಗೆ, ಇವರಿಬ್ಬರು ಹೊರಗೆ ಹೋಗಿ ಮತ್ತೆ ಮನೆಗೆ ವಾಪಸ್ ಬಂದಿದ್ದಾರೆ. ಆಗ ಆನಂದ್ ಬರುತ್ತಾನೆ. "ಒಂದೇ ಸಮಯದಲ್ಲಿ ಚಾನೆಲ್‌ನವರು ಪ್ರಶ್ನಿಸ್ತಾ ಇದ್ದಾರೆ" ಎಂದು ಆನಂದ್ ಹೇಳುತ್ತಾನೆ. "ಚಾನೆಲ್‌ನವರು ಯಾಕೆ ಕಾಲ್ ಮಾಡ್ತಾರೆ" ಎಂದು ಭೂಮಿಕಾ ಕೇಳುತ್ತಾರೆ. "ಕರ್ನಾಟಕದ ಹೆಮ್ಮೆ ಎಂಬ ಪ್ರಶಸ್ತಿಯನ್ನು ಗೌತಮ್‌ಗೆ ನೀಡಿದ್ದಾರೆ" ಎಂದು ಆನಂದ್ ಹೇಳುತ್ತಾರೆ. ಎಲ್ಲರೂ ಖುಷಿಪಡುತ್ತಾರೆ.
ಶಕುಂತಲಾದೇವಿ ಟೆನ್ಷನ್‌ನಲ್ಲಿದ್ದಾರೆ. ಒಂದು ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಕ್ಲಬ್‌ನಲ್ಲಿ ಅವರು ಹಣ ಕಳೆದುಕೊಂಡಿದ್ದಾರೆ. "ಕಳೆದುಕೊಳ್ಳುವಾಗ ಇಲ್ಲದ ಹಿಂಜರಿಕೆ ಹೀಗ್ಯಾಕೆ" ಎಂದು ಲಕ್ಕಿ ಹೇಳುತ್ತಾನೆ. "ಒಂದು ಕೋಟಿ ಕಳೆದುಕೊಂಡಿದ್ದೇನೆ. ಅದು ಪಡೆಯುವುದು ದೊಡ್ಡ ವಿಷಯವಲ್ಲ. ಆದರೆ, ಚೆಕ್‌ನಲ್ಲಿ ಹಣ ಪಡೆಯುವುದು ಕಷ್ಟ" ಎಂದು ಶಕುಂತಲಾದೇವಿ ಹೇಳುತ್ತಾರೆ. ಆಗ ಅಲ್ಲಿಗೆ ಗೌತಮ್ ಬರುತ್ತಾರೆ. ಕಂಗ್ರಾಟ್ಸ್ ಹೇಳುತ್ತಾರೆ. "ಇನ್ನೊಂದು ವಿಷಯ ಗೌತಮ್. ಒಂದೆರಡು ಚೆಕ್‌ಗೆ ನೀನು ಸಹಿ ಹಾಕಿ ಕೊಡಬೇಕಿತ್ತು" ಎಂದು ಕೇಳುತ್ತಾರೆ. ಗೌತಮ್ ಚೆಕ್ ಸಹಿ ಹಾಕಿಕೊಡುತ್ತಾರೆ. ಈ ಬಾರಿ ಹಣ ನಾನು ತೆಗೆದುಕೊಳ್ಳುವುದು ಬೇರೆ ಕಾರಣ. ನಾನು ಒಂದಿಷ್ಟು ಅನಾಥಶ್ರಮಗಳಿಗೆ ಡೊನೆಷನ್ ನೀಡುತ್ತಿದ್ದೇನೆ. ಭಾಗ್ಯಮ್ಮನಿಗೆ ಹುಷಾರಾಗಲಿ ಎಂದು ಹಣ ನೀಡುತ್ತಿದ್ದೇನೆ ಎಂದು ಸುಳ್ಳು ಹೇಳುತ್ತಾಳೆ. "ಒಳ್ಳೆ ಕೆಲಸ ಮಾಡ್ತಾ ಇದ್ದೀರಿ" ಎಂದು ಗೌತಮ್ ಹೇಳುತ್ತಾನೆ. ಒಟ್ಟಾರೆ ಸೆಂಟಿಮೆಂಟ್ ಎಂಬ ಕಾರ್ಡ್ ಮೂಲಕ ಶಕುಂತಲಾದೇವಿ ಹಣ ಪಡೆಯುತ್ತಾರೆ.
ಭೂಮಿಕಾ ಮತ್ತು ಸೃಜನ್ ಭೇಟಿಯಾಗುತ್ತಾರೆ. ಈ ಸಿಕ್ರೇಟ್ ಮೈಕ್ ಅನ್ನೋದು ಕಾಮನ್ ಜನರಿಗೆ ಸಿಗೋಲ್ಲ. ಇದನ್ನು ಟ್ರ್ಯಾಕ್ ಮಾಡಲು ಒಂದು ಮೆಕ್ಯಾನಿಸಂ ಇರುತ್ತದೆ. ಈ ಮೈಕ್‌ಗಳಿಗೆ ಒಂದು ಸೀರಿಯಲ್ ನಂಬರ್ ಇರುತ್ತದೆ. ಅದರ ಮೂಲಕ ಈ ಮೈಕ್ ಖರೀದಿಸಿದವರನ್ನು ಟ್ರ್ಯಾಕ್ ಮಾಡಬಹುದು. ನನ್ನ ಗೆಳೆಯನೊಬ್ಬ ಮೈಕ್ ಕಂಪನಿಯಲ್ಲಿ ಇದ್ದಾನೆ. ಅವನ ಮೂಲಕ ಈ ಮಾಹಿತಿ ಪಡೆಯಬಹುದು ಎಂದು ಸೃಜನ್ ಹೇಳುತ್ತಾನೆ. "ನಾಳೆ ನಾನೂ ಬರ್ತಿನಿ. ಅಲ್ಲಿಗೆ ಹೋಗೋಣ" ಎಂದು ಭೂಮಿಕಾ ಹೇಳುತ್ತಾರೆ.
ಇದನ್ನೂ ಓದಿ: Amruthadhaare: ಸೃಜನ್ ಜತೆ ಭೂಮಿಕಾ ಪತ್ತೆದಾರಿಕೆಗೆ ಹೊರಟ್ರು; ಶಕುಂತಲಾದೇವಿ ಈ ಬಾರಿ ಸಿಕ್ಕಿ ಬೀಳ್ತಾರ? ಅಮೃತಧಾರೆ ಧಾರಾವಾಹಿ ಕಥೆ
ಇದಾದ ಬಳಿಕ ಸೃಜನ್ ಮಗು ಪುಟ್ಟಿಯಲ್ಲಿ ಮಾತನಾಡುತ್ತಾನೆ. ಲಚ್ಚಿ ಕೂಡ ಸಾಕಷ್ಟು ಮಾತನಾಡುತ್ತಾಳೆ. ಆಗ ಅಲ್ಲಿಗೆ ಸುಧಾ ಬರುತ್ತಾಳೆ. "ಯಾರೆಲ್ಲ ಹೇಳಿ ಕೊಡೋದು ಬೇಡ" ಎಂದು ಸುಧಾ ಹೇಳುತ್ತಾಳೆ. "ಅಮ್ಮನಿಗೆ ಓದಲು ಬರೋಲ್ಲ" ಎಂದು ಲಚ್ಚಿ ಹೇಳುತ್ತಾಳೆ. "ಮನೆಯವರ ಮುಂದೆ ಏನೂ ಮಾತನಾಡಬೇಕು. ಹೊರಗಿನವರ ಜತೆ ಏನು ಮಾತನಾಡಬೇಕು ಎಂದು ತಿಳಿಯೋಲ್ವ" ಎಂದು ಸುಧಾ ಬಯ್ಯುತ್ತಾಳೆ. ಹೀಗೆ ಸೃಜನ್ ಜತೆ ಒರಟಾಗಿ ನಡೆದುಕೊಳ್ಳುತ್ತಾಳೆ.
ಧಾರಾವಾಹಿ ಹೆಸರು: ಅಮೃತಧಾರೆ.
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ವರ್ಷ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).

ವಿಭಾಗ