Amruthadhaare: ಗೌತಮ್ ಪಕ್ಕದಲ್ಲಿ ಮಲಗದೆ ಭೂಮಿಕಾ ಚಡಪಡಿಕೆ, ಅಮೃತಧಾರೆ ಧಾರಾವಾಹಿಯಲ್ಲಿ ಮಿಡ್‌ನೈಟ್ ಕನವರಿಕೆಗಳು
Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ (ಜನವರಿ 15) ಮಹತ್ವದ ಬೆಳವಣಿಗೆಯೇನೂ ನಡೆದಿಲ್ಲ. ಆದರೆ, ಗೌತಮ್ ಪಕ್ಕ ಲಚ್ಚಿ ಮಲಗಿರುವುದರಿಂದ ಭೂಮಿಕಾ ನಿದ್ದೆ ಇಲ್ಲದೆ ರಾತ್ರಿ ಕಳೆದಿದ್ದಾರೆ. ಇದೇ ಸಮಯದಲ್ಲಿ ಮಲ್ಲಿಗೆ ಜೈದೇವ್ ಬಗ್ಗೆ ಅನುಮಾನ ಹೆಚ್ಚಾಗಿದೆ.

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ- ಜನವರಿ 15ರ ಸಂಚಿಕೆ: ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿಯನ್ನು ನೋಡಿದಾಗ ಭಾಗ್ಯಮ್ಮ ಭಯಪಡುತ್ತಾರೆ. "ನೋಡು ಗೌತಮ್ ನನ್ನನ್ನು ನೋಡಿ ಭಯ ಪಡ್ತಾ ಇದ್ದಾರೆ. ಅಂತಹದ್ದು ಏನು ಮಾಡಿದ್ದೇನೆ" ಎಂದು ಶಕುಂತಲಾದೇವಿ ನಾಟಕವಾಡುತ್ತಾರೆ. "ಅವರು ಯಾರು ಗೊತ್ತ, ನನ್ನನ್ನು ತಾಯಿ ತರಹ ನೋಡಿಕೊಂಡಿದ್ದಾರೆ" ಎಂದು ಗೌತಮ್ ಹೇಳುತ್ತಾರೆ. ಹೀಗೆ ಗೌತಮ್ ಒಂದಿಷ್ಟು ಮಾತುಗಳನ್ನು ಆಡುತ್ತಾರೆ. ಭಾಗ್ಯಮ್ಮನ ದಿಗಿಲು ಕಡಿಮೆಯಾಗುವುದಿಲ್ಲ.
ಇದೇ ಸಮಯದಲ್ಲಿ ಲಚ್ಚಿ ಹಠ ಮಾಡುತ್ತಿದ್ದಾಳೆ. ನಾನು ಮಾಮನ ಜತೆ ಮಲಗ್ತಿನಿ ಎಂದು ಹಠ ಮಾಡುತ್ತಾಳೆ. ಸುಧಾ ಎಷ್ಟು ಹೇಳಿದರೂ ಆಕೆ ಕೇಳುವುದಿಲ್ಲ. "ಅದು ಮಾಮನ ರೂಂ, ಅಲ್ಲಿ ಮಾಮ ಮತ್ತು ಅತ್ತೆ ಮಾತ್ರ ಮಲಗಬೇಕು" ಎಂದು ಸುಧಾ ಹೇಳುತ್ತಾಳೆ. ಆ ಸಮಯದಲ್ಲಿ ಗೌತಮ್ ಬರುತ್ತಾರೆ. "ನಾನು ನಿಮ್ಮ ಜತೆ ಮಲಗಿಕೊಳ್ತಿನಿ ಅಂದ್ರೆ ಕೇಳುವುದಿಲ್ಲ" ಎಂದು ಲಚ್ಚಿ ದೂರು ಹೇಳುತ್ತಾಳೆ. ಇದೇ ಸಮಯದಲ್ಲಿ ಪಾರ್ಥನು ಬರುತ್ತಾನೆ. ಲಚ್ಚಿ ಜತೆ ಒಂದಿಷ್ಟು ಮಾತನಾಡುತ್ತಾನೆ. ಅದೇ ಖುಷಿಯಲ್ಲಿ ಅಪೇಕ್ಷಾ ಬಳಿಗೆ ಬರುತ್ತಾನೆ. ಆದರೆ, ಅವಳು ಸ್ಪೆಷಲ್ ಫೀಲಿಂಗ್ ತೋರಿಸುವುದಿಲ್ಲ. "ಅಪೇಕ್ಷಾ, ನಮಗೂ ಒಂದು ಮಗು ಆದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ" ಎಂದು ಪಾರ್ಥ ಹೇಳುತ್ತಾನೆ. "ಅದಕ್ಕೆ ಇನ್ನೂ ಟೈಮ್ ಇದೆ, ಇಷ್ಟು ಬೇಗ ಬೇಡ" ಎಂದು ಅಪೇಕ್ಷಾ ಹೇಳುತ್ತಾಳೆ. "ಸದ್ಯಕ್ಕೆ ನನಗೆ ಮಕ್ಕಳು ಮರಿ ಏನೂ ಬೇಡ, ನನ್ನ ಸೌಂದರ್ಯ ಕಾಪಾಡಿಕೊಳ್ಳಬೇಕು" ಎನ್ನುತ್ತಾಳೆ.
ಆನಂದ್ ಖುಷಿಯಾಗಿದ್ದಾನೆ. ಗೌತಮ್ ಶಾಲೆಗೆ ಕೊಟ್ಟ ಉಡುಗೊರೆಗಳನ್ನು ಯೋಚಿಸುತ್ತಾನೆ. ಗೆಳೆಯ ತನ್ನ ತಂಗಿ ಮಗುನಾ ಇಷ್ಟು ಪ್ರೀತಿಸ್ತಾನೆ, ಇವನಿಗೆ ಮಗು ಆಗಿಬಿಟ್ರೆ ಹೇಗಿರುತ್ತದೆ ಎಂದು ಆನಂದ್ ಹೇಳಿದಾಗ ಅಪರ್ಣ ಕೂಡ ಹೌದೆನ್ನುತ್ತಾಳೆ. ಗೌತಮ್‌ಗೂ ಮಗು ಆಗಬೇಕಿತ್ತು ಎಂದು ಇವರಿಬ್ಬರು ಮಾತನಾಡುವಾಗ ಆನಂದ್ ಮಗ ನಿದ್ದೆಯಿಂದ ಕಣ್ಣು ತೆರೆದರು "ಮಗು ಹೇಗೆ ಆಗುತ್ತಪ್ಪ?" ಎಂದು ಕೇಳುತ್ತಾನೆ.
ಭೂಮಿಕಾ ನಿದ್ದೆ ಮಾಡಲು ಕೊಠಡಿಗೆ ಬಂದಾಗ ಮುನಿಸಿಕೊಳ್ಳುತ್ತಾಳೆ. ಗೌತಮ್ ಮೇಲೆ ಕೈಯಿಟ್ಟು ಲಚ್ಚಿ ಮಲಗಿದ್ದಾಳೆ. ತುಂಬಾ ಬೇಸರವಾಗುತ್ತದೆ ಭೂಮಿಕಾಳಿಗೆ. ಟೆಡ್ಡಿಬೇರ್ ಮೇಲೆ ಕೈ ಇಡದೆ ಮಲಗಿದ್ರೆ ನಿದ್ದೆ ಬರೋದಿಲ್ಲ ಇವರಿಗೆ. ಲಚ್ಚಿಯನ್ನು ಈ ಕಡೆ ಮಲಗಿಸಿ ಗೌತಮ್ ಪಕ್ಕ ಮಲಗುತ್ತಾಳೆ. ಆ ಸಮಯದಲ್ಲಿ ಗೌತಮ್‌ಗೆ ಎಚ್ಚರವಾಗುತ್ತದೆ. ಮಗುನಾ ಯಾಕೆ ಆ ಕಡೆ ಮಲಗಿಸಿದ್ರಿ ಎಂದು ಮತ್ತೆ ಗೌತಮ್ ಮಗುವನ್ನು ತನ್ನ ಜತೆ ಮಲಗಿಸಿಕೊಳ್ಳುತ್ತಾನೆ. ಭೂಮಿಕಾ ಬೇಸರ ಹೆಚ್ಚಾಗುತ್ತದೆ.
ಜೈದೇವ್ ಜತೆ ಮಲ್ಲಿ ಮಾತನಾಡುತ್ತಿದ್ದಾಳೆ. ಜೈದೇವ್ ಕುರಿತು ಆಕೆಗೆ ಅನುಮಾನ ಬಂದಿದೆ. ಎಲ್ಲಿ ಹೋಗಿದ್ರಿ ಎಂದು ಮಲ್ಲಿ ಕೇಳಿದಾಗ "ಅಪಾರ್ಟ್‌ಮೆಂಟ್ ಕೆಲಸ ಇತ್ತು, ರಾತ್ರಿ ಅಲ್ಲಿಯೇ ಇದ್ದೆ" ಎನ್ನುತ್ತಾನೆ. "ಪಾರ್ಥ ಬಾವ ನೀವು ಅಲ್ಲಿಗೆ ಹೋಗಿಲ್ಲ ಅಂತ ಹೇಳಿದ್ರು" ಎಂದು ಹೇಳುತ್ತಾಳೆ. ಹೇಗೋ ಮಾತಲ್ಲಿ ಜೈದೇವ್ ತೇಪೆ ಹಚ್ಚುತ್ತಾನೆ. ಜೈದೇವ್ ಇಲ್ಲದೆ ಇರುವಾಗ ಆತನ ಕೋಟ್‌ನಲ್ಲಿರುವ ಸೆಂಟ್‌ನ ಸ್ಮೆಲ್ ನೋಡಿ ಮಲ್ಲಿಗೆ ಅನುಮಾನ ಹೆಚ್ಚಾಗುತ್ತದೆ. ಮನೆಯಲ್ಲಿರುವ ಸೆಂಟ್‌ನ ಸ್ಮೆಲ್‌ಗೂ ಆತನ ಬಟ್ಟೆಯ ಮೇಲಿನ ಸೆಂಟ್ ಸ್ಮೆಲ್ ಬೇರೆ ಬೇರೆ ಇರುತ್ತದೆ. ಆಕೆಯ ಅನುಮಾನ ಹೆಚ್ಚುತ್ತದೆ. ಸೀರಿಯಲ್ ಮುಂದುವರೆಯುತ್ತದೆ.
ಧಾರಾವಾಹಿ ಹೆಸರು: ಅಮೃತಧಾರೆ.
ಎಪಿಸೋಡ್: ಜನವರಿ 15, 2024
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).

ವಿಭಾಗ