ಲಕ್ಕಿ ಲಕ್ಷ್ಮಿಕಾಂತ್‌ ಹೇಳಿದ ಬ್ರೇಕಿಂಗ್‌ ನ್ಯೂಸ್‌ಗೆ ಶಕುಂತಲಾ ದೇವಿ ಫುಲ್‌ ಖುಷ್‌, ಅಮೃತಧಾರೆ ಧಾರಾವಾಹಿಯಲ್ಲಿ ಮುಂದುವರೆದ ನಾಟಕ
ಕನ್ನಡ ಸುದ್ದಿ  /  ಮನರಂಜನೆ  /  ಲಕ್ಕಿ ಲಕ್ಷ್ಮಿಕಾಂತ್‌ ಹೇಳಿದ ಬ್ರೇಕಿಂಗ್‌ ನ್ಯೂಸ್‌ಗೆ ಶಕುಂತಲಾ ದೇವಿ ಫುಲ್‌ ಖುಷ್‌, ಅಮೃತಧಾರೆ ಧಾರಾವಾಹಿಯಲ್ಲಿ ಮುಂದುವರೆದ ನಾಟಕ

ಲಕ್ಕಿ ಲಕ್ಷ್ಮಿಕಾಂತ್‌ ಹೇಳಿದ ಬ್ರೇಕಿಂಗ್‌ ನ್ಯೂಸ್‌ಗೆ ಶಕುಂತಲಾ ದೇವಿ ಫುಲ್‌ ಖುಷ್‌, ಅಮೃತಧಾರೆ ಧಾರಾವಾಹಿಯಲ್ಲಿ ಮುಂದುವರೆದ ನಾಟಕ

Amruthadhaare serial yesterday episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಗೌತಮ್‌ ಮತ್ತು ಭೂಮಿಕಾ ತಮ್ಮ ನಾಟಕ ಮುಂದುವರೆಸಿದ್ದಾರೆ. ಇದೇ ಸಮಯದಲ್ಲಿ ಭೂಮಿಕಾ ಮನೆ ಬಿಟ್ಟು ಹೋದ ಕಥೆ ಕೇಳಿ ಶಕುಂತಲಾದೇವಿ ಖುಷಿಪಟ್ಟಿದ್ದಾರೆ.

ಲಕ್ಕಿ ಲಕ್ಷ್ಮಿಕಾಂತ್‌ ಹೇಳಿದ ಬ್ರೇಕಿಂಗ್‌ ನ್ಯೂಸ್‌ಗೆ ಶಕುಂತಲಾ ದೇವಿ ಫುಲ್‌ ಖುಷ್‌
ಲಕ್ಕಿ ಲಕ್ಷ್ಮಿಕಾಂತ್‌ ಹೇಳಿದ ಬ್ರೇಕಿಂಗ್‌ ನ್ಯೂಸ್‌ಗೆ ಶಕುಂತಲಾ ದೇವಿ ಫುಲ್‌ ಖುಷ್‌

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಜೀವನ್‌ನ ಮನೆಯಲ್ಲಿದ್ದಾಳೆ. ಇಲ್ಲಿ ಗೌತಮ್‌ಗೆ ಭೂಮಿಕಾ ಇಲ್ಲದೆ ನಿದ್ದೆ ಬರ್ತಾ ಇಲ್ಲ. ಭೂಮಿಕಾಗೂ ಗೌತಮ್‌ ಗೊರಕೆ ಸದ್ದಿಲ್ಲದೆ ನಿದ್ದೆ ಬರ್ತಾ ಇಲ್ಲ. ಹೇಗೋ ಅರೆ ನಿದ್ದೆಯಲ್ಲಿ ಸಮಯ ಕಳೆಯುತ್ತಾರೆ. ಬೆಳಗ್ಗೆ ಎದ್ದಾಗ "ಏಕೆ ಇನ್ನೂ ಭೂಮಿಕಾ ಕಾಫಿ ತಂದು ಎಬ್ಬಿಸಿಲ್ಲ" ಎಂದು ಯೋಚಿಸುತ್ತಾರೆ. ಆಮೇಲೆ ಭೂಮಿಕಾ ಇಲ್ಲದೆ ಇರುವುದು ನೆನಪಾಗುತ್ತದೆ. ಒಟ್ಟಾರೆ, ಗೌತಮ್‌ಗೆ ಭೂಮಿಕಾ ಇಲ್ಲದೆ ಕೈಕಾಲೇ ಆಡುತ್ತಿಲ್ಲ.

ಸದಾಶಿವ ಮನೆಯಲ್ಲಿ ಮಂದಾಕಿನಿ ಜತೆ ಮಾತನಾಡುತ್ತ ಇದ್ದಾರೆ. ನಾನು ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಬರ್ತಿನಿ ಎನ್ನುತ್ತಾರೆ. ಆಗ ಅವರಿಗೆ ಸೋಫಾದ ಮೇಲೆ ಮಲಗಿರುವ ಜೀವ ಕಾಣಿಸುತ್ತಾರೆ. ಅರೇ ಇದೇನಿದು ಇವನು ಇಲ್ಲಿ ಮಲಗಿದ್ದಾನೆ ಎಂದುಕೊಳ್ಳುತ್ತಾರೆ. "ಹೆಂಡತಿ ಜತೆ ಜಗಳವಾಡಿ ತವರಿಗೆ ಕಳುಹಿಸಿ ಈಗ ಇಲ್ಲಿ ಮಲಗಿದ್ದಾನೆ" ಎನ್ನುತ್ತಾರೆ. ಮಂದಾಕಿನಿ ಜೀವನ ಎಬ್ಬಿಸುತ್ತಾರೆ. ಆಗ ಭೂಮಿಕಾ ಕೂಡ ಬರುತ್ತಾರೆ. "ಅಕ್ಕ ಮನೆ ಬಿಟ್ಟು ಬಂದಿದ್ದಾಳೆ" ಎಂದು ಜೀವ ಹೇಳುತ್ತಾನೆ. "ಮಹಿಮಾ ಚಿಕ್ಕ ಹುಡುಗಿ, ನೀನು ಯಾಕೆ ಹೀಗೆ ಮಾಡಿದೆ" ಎಂದು ಮಂದಾಕಿನಿ ಕೇಳುತ್ತಾರೆ. "ನಾನು ಗೌತಮ್‌ ಏಕೆ ಮದುವೆಯಾದ್ವಿ. ನನ್ನ ತಮ್ಮ ಅವರ ತಂಗಿ ಒಂದಾಗಿ ಚೆನ್ನಾಗಿ ಇರಲಿ ಎಂದು. ಆದರೆ, ಈಗ ಇವರಿಬ್ಬರು ಬೇರೆಬೇರೆಯಾಗಿದ್ದಾರೆ. ನಾನು ಯಾಕೆ ಅಲ್ಲಿ ಇರಲಿ" ಎಂದು ಭೂಮಿಕಾ ಕೇಳುತ್ತಾರೆ. ಒಂದಿಷ್ಟು ಮಾತು ನಡೆಯುತ್ತದೆ. "ನಾನು ಮನೆ ಮಕ್ಕಳು ಯೋಚನೆ ಇಲ್ಲದೆ ಬಿಂದಾಸ್‌ ಆಗಿರ್ತಿನಿ" ಎಂದು ಭೂಮಿಕಾ ಹೇಳುತ್ತಾಳೆ.

ಇನ್ನೊಂದೆಡೆ ಗೌತಮ್‌ ಅಜ್ಜಿ ಬಳಿಗೆ ಬರುತ್ತಾರೆ. ಭೂಮಿಕಾ ಎಲ್ಲಿ ಹೋದ್ರು ಎಂದು ಕೇಳುತ್ತಾನೆ. ಅದಕ್ಕೆ ಅಲ್ಲಿದ್ದ ಮಹಿಮಾ "ಅವರು ನಿನ್ನೆ ಕೋಪದಿಂದ ಮನೆ ಬಿಟ್ಟು ಹೋದ್ರು" ಎನ್ನುತ್ತಾಳೆ. "ಕೋಪದಲ್ಲಿ ಏನೋ ಮಾತು ಹೇಳಿದೆ, ಅದಕ್ಕೆ ಮನೆಬಿಟ್ಟು ಹೋಗೋದ" ಎನ್ನುತ್ತಾರೆ ಗೌತಮ್‌. "ಏನೋ ಗುಂಡು, ನೀನು ಭೂಮಿಕಾ ಜಗಳ ಮಾಡಿಕೊಂಡ್ರೇನೋ" ಎಂದು ಅಜ್ಜಮ್ಮ ಕೇಳುತ್ತಾರೆ. "ಹೂಂ ಅಜ್ಜಿ, ಈ ಮಹಿಮಾ ಮತ್ತು ಜೀವ ವಿಷಯಕ್ಕೆ" ಎಂದು ಗೌತಮ್‌ ಹೇಳುತ್ತಾರೆ. "ನಮ್ಮ ಕಾರಣದಿಂದ ಇವರಿಬ್ಬರ ನಡುವೆ ಜಗಳ ಆಯ್ತಲ್ಲ" ಎಂದು ಮಹಿಮಾ ಯೋಚಿಸುತ್ತಾಳೆ. ಗೌತಮ್‌ ನಾಟಕ ಮುಂದುವರೆಸುತ್ತಾರೆ. "ನಾನು ಹೇಳ್ತಾ ಇದ್ದೀನಿ. ಭೂಮಿಕಾಗೆ ಕಾಲ್‌ ಮಾಡು" ಎಂದು ಅಜ್ಜಮ್ಮ ಹೇಳುತ್ತಾರೆ. ಗೌತಮ್‌ ಕರೆ ಮಾಡಿದಾಗ ಭೂಮಿಕಾ ಫೋನ್‌ ಎತ್ತುವುದಿಲ್ಲ. "ನಿಮಗೆಲ್ಲ ಹೆಂಡ್ತಿ ಬೆಲೆ ಎಲ್ಲಿ ಗೊತ್ತಾಗುತ್ತದೆ. ಅನುಭವಿಸಿದಾಗ್ಲೇ ಗೊತ್ತಾಗುವುದು" ಎಂದು ಅಜ್ಜಮ್ಮ ಕ್ಲಾಸ್‌ ತೆಗೆದುಕೊಳ್ಳುತ್ತಾರೆ.

ಶಕುಂತಲಾ ದೇವಿ ಫುಲ್‌ ಖುಷ್‌

ಲಕ್ಷ್ಮಿಕಾಂತ ಬ್ರೇಕಿಂಗ್‌ ನ್ಯೂಸ್‌ ಹೇಳುತ್ತಾನೆ. "ಭೂಮಿಕಾ ಮನೆ ಬಿಟ್ಟು ಹೋಗಿದ್ದಾಳೆ" ಎಂಬ ಸುದ್ದಿ ಕೇಳಿ ಶಕುಂತಲಾದೇವಿ ಖುಷಿಪಡುತ್ತಾರೆ. ಪಾರ್ಥ ಮತ್ತು ಅಪೇಕ್ಷಾ ಕೂಡ ಇದೇ ವಿಷಯ ಮಾತನಾಡುತ್ತಾರೆ. ಎಂದಿನಂತೆ ಅಪೇಕ್ಷಾಳ ವಿಚಿತ್ರ ವರ್ತನೆ ಮುಂದುವರೆಯುತ್ತದೆ. ಹೀಗೆ, ನಿನ್ನೆಯ ಸಂಚಿಕೆಯಲ್ಲಿ ಮಹತ್ವದ ಬೆಳವಣಿಗೆಗಳು ಇಲ್ಲದೆ ಸೀರಿಯಲ್‌ ಮುಂದುವರೆದಿದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ). ಮಹಿಮಾ (ಹೊಸ ನಟಿ): ಇಶಿತಾ.

Whats_app_banner