Amruthadhaare: ಮಹಿಮಾ, ಸದಾಶಿವ, ಮಂದಾಕಿನಿ ಬುದ್ಧಿ ಮಾತು ಕೇಳ್ತಾನ ಜೀವನ್? ಅಮೃತಧಾರೆಯಲ್ಲಿ ಮುಗಿಯದ ಭೂಪತಿ ಕಿತಾಪತಿ
Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಭೂಮಿಕಾಳಿಗೆ ಶಕುಂತಲಾದೇವಿಯ ಗಾಯದ ಕುರಿತು ಅನುಮಾನ ಬರುತ್ತದೆ. ಇದೇ ಸಮಯದಲ್ಲಿ ಭೂಪತಿಯು ಜೀವನ್‌ನ ಇನ್ನೆರಡು ಪ್ರಾಜೆಕ್ಟ್‌ಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಜೀವನ್‌ಗೆ ಮಹಿಮಾ, ಸದಾಶಿವ, ಮಂದಾಕಿನಿ ಬುದ್ಧಿ ಮಾತು ಹೇಳುತ್ತಾರೆ.

Amruthadhaare serial Yesterday Episode: ಗೌತಮ್ ಎಲ್ಲರನ್ನೂ ಕರೆದು ಮಾತನಾಡುತ್ತಿದ್ದಾರೆ. ನಿನ್ನೆ ಅಟ್ಯಾಕ್ ಆಯ್ತು, ಅದಕ್ಕೆ ನೀವು ಎಲ್ಲರೂ ಸೇಫ್ ಆಗಿದ್ದೀರ ಎಂದು ಕೇಳಲು ಕರೆದೆ ಎನ್ನುತ್ತಾರೆ. ಸಿಸಿಟಿವಿ ನೋಡೋಣ ಎಂದರೆ ಹಾರ್ಡ್‌ಡಿಸ್ಕ್ ಕೂಡ ತೆಗೆದುಕೊಂಡು ಹೋಗಿದ್ದಾರೆ ಎಂದು ಗೌತಮ್ ಹೇಳುತ್ತಾರೆ. ಈ ಸಮಯದಲ್ಲಿ ಶಕುಂತಲಾದೇವಿಯ ಗಾಯವು ಭೂಮಿಕಾಗೆ ಅನುಮಾನ ಹುಟ್ಟಿಸುತ್ತದೆ. ಬಳಿಕ ಲಕ್ಕಿ ಲಕ್ಷ್ಮಿಕಾಂತ್ ಶಕುಂತಲಾದೇವಿಯನ್ನು ಕರೆದುಕೊಂಡು ಹೋಗುತ್ತಾರೆ. ಯಾಕೋ ಭೂಮಿಕಾಗೆ ಅನುಮಾನ ಬರುತ್ತದೆ. ನೇರ ಶಕುಂತಲಾದೇವಿಯ ಬಳಿಗೆ ಬರುತ್ತಾರೆ. ಈಕೆಯ ಕೈ ಬ್ಯಾಂಡೇಜ್ ನೋಡಿ ಭೂಮಿಕಾಗೆ ಅನುಮಾನ ಬರುತ್ತದೆ. ಶಕುಂತಲಾ ಮಾಡುತ್ತಿರುವ ನಾಟಕವಾಗಿರಬಹುದೇ ಎಂಬ ಅನುಮಾನ ಆಕೆಗೆ ಬಂದಿದೆ.
ಶಕುಂತಲಾದೇವಿ ಗಾಯದ ಕುರಿತು ಭೂಮಿಕಾಳಿಗೆ ಅನುಮಾನ
"ಅತ್ತೆ ಇದೆಲ್ಲ ಹೇಗಾಯ್ತು?" ಎಂದು ಭೂಮಿಕಾ ಕೇಳುತ್ತಾಳೆ. "ಸಿಸ್ಟರ್ ಬಂಡವಾಳ ಎಲ್ಲಾ ಹೊರಗೆ ತೆಗೆಯುವಂತೆ ಕಾಣಿಸ್ತಿದೆ" ಎಂದು ಲಕ್ಷ್ಮಿಕಾಂತ್‌ಗೆ ಭಯದಲ್ಲಿ ಯೋಚಿಸುತ್ತಾನೆ. "ಆಗಲೇ ಹೇಳಿದೆ ಅಲ್ವ, ಆಟೋ ಬಂತು ಗುದ್ದಿತ್ತು, ಲೈಟ್ ಕಂಬಕ್ಕೆ ಹೊಡೆದುಕೊಂಡೆ ಅಂತ" ಎಂದು ಶಕುಂತಲಾ ವಿವರಿಸುತ್ತಾರೆ. "ಆಟೋ ಹಿಂದೆಯಿಂದ ಬಂದು ಗುದ್ದಿತ್ತು. ನೀವು ಮುಂದೆ ಕರೆಂಟ್ ಕಂಬಕ್ಕೆ ಹೊಡೆದಿರು. ಗಾಯ ತಲೆಯ ಎದುರಿಗೆ ಆಗಬೇಕಿತ್ತು ಅಲ್ವ. ಹಿಂದಕ್ಕೆ ಹೇಗೆ ಆಯ್ತು?ʼ ಎಂದು ಭೂಮಿಕಾ ಪ್ರಶ್ನಿಸುತ್ತಾರೆ. "ಅದು ನಾನು ಮುಂದೆ ಬೀಳುವುದನ್ನು ತಪ್ಪಿಸಲು ಹಿಂದೆ ವಾಲಿದೆ ಆಗ ಹಿಂದಕ್ಕೆ ಬಿದ್ದು ತಲೆಗೆ ಪೆಟ್ಟು ಬಿತ್ತು" ಎಂದು ಹೇಳುತ್ತಾರೆ ಶಕುಂತಲಾ. "ಹಾಗದರೆ ಕೈಗೆ ಹೇಗೆ ಗಾಯವಾಯ್ತು?" ಈ ಪ್ರಶ್ನೆಗೆ ಸುಳ್ಳು ಹೇಳಲಾಗದೆ ತಡಬಡಿಸುತ್ತಾರೆ. "ಅಯ್ಯ ನಾನು ಇಲ್ಲಿ ನೋವು ಅನುಭವಿಸ್ತಾ ಇದ್ದೇನೆ, ಈ ಪ್ರಶ್ನೆ ಎಲ್ಲಾ ಈಗ ಬೇಕಾ?" ಎಂದು ಭೂಮಿಕಾರನ್ನು ಸಾಗಹಾಕಲು ಯತ್ನಿಸುತ್ತಾರೆ. ಅನುಮಾನದ ಮುಖದಿಂದಲೇ ಭೂಮಿಕಾ ಅಲ್ಲಿಂದ ಹೋಗುತ್ತಾರೆ. "ನಾವು ಸ್ವಲ್ಪ ಹುಷಾರಾಗಿರಬೇಕು" ಎಂದು ಶಕುಂತಲಾದೇವಿ ಹೇಳುತ್ತಾರೆ.
ಮುಗಿಯದ ಭೂಪತಿ ಕಿತಾಪತಿ
ಜೀವ ಖುಷಿಯಲ್ಲಿದ್ದಾನೆ. ತನ್ನ ಅಪ್ಪ ಮತ್ತು ಅಮ್ಮನಲ್ಲಿ ಮಾತನಾಡುತ್ತ ಇದ್ದಾನೆ. "ಸಕ್ಸಸ್ ಅನ್ನು ಎಂಜಾಯ್ ಮಾಡುತ್ತಿದ್ದೇನೆ. ದುಡ್ಡು ಮಾಡೋದು ನಶೆ ರೀತಿ" ಎಂದು ಜೀವ ಮಾತನಾಡುತ್ತಾನೆ. ಮಹಿಮಾಳಿಗೆ ಇದು ಇಷ್ಟವಾಗುವುದಿಲ್ಲ. ದುಡ್ಡಿನ ಮದದ ಕುರಿತು ಈತ ಮಾತನಾಡುವುದು ಸದಾಶಿವ, ಮಂದಾಕಿನಿಗೂ ಇಷ್ಟವಾಗುವುದಿಲ್ಲ.
"ನಾನು ಹೈದರಾಬಾದ್ ಮತ್ತು ಚೆನ್ನೈನಲ್ಲಿ ಬ್ರ್ಯಾಂಚ್ ಓಪನ್ ಮಾಡಬೇಕೆಂದುಕೊಂಡಿದ್ದೆ. ಅದಕ್ಕೆ ಇನ್ವೆಸ್ಟರ್ಸ್ ಸಿಕ್ಕಿದ್ದಾರೆ" ಎಂದು ಹೇಳುತ್ತಾನೆ. ಈ ಸುದ್ದಿ ಕೇಳಿ ಎಲ್ಲರಿಗೂ ಖುಷಿಯಾಗುತ್ತಾರೆ. "ಇನ್ವೆಸ್ಟರ್ಸ್ ಯಾರು" ಎಂದು ಕೇಳಿದಾಗ "ರಾಜೇಂದ್ರ ಭೂಪತಿ ಸರ್" ಎನ್ನುತ್ತಾನೆ. "ಹಾಗಾದ್ರೆ ಅವರ ಬಗ್ಗೆ ಸ್ವಲ್ಪ ಕೇರ್‌ಫುಲ್ ಆಗಿರು" ಎಂದು ಮಹಿಮಾ ಎಚ್ಚರಿಸುತ್ತಾಳೆ. "ಹೂಡಿಕೆದಾರರು ಸಿಕ್ಕಿದ್ದಾರೆ ಎಂದು ರನ್ನಿಂಗ್ ರೇಸ್ ಮಾಡಬೇಡ. ಬಿಸ್ನೆಸ್‌ನಲ್ಲಿ ಅಗ್ರೆಸಿವ್ ಬೇಕು, ಆದರೆ, ಅತಿಯಾಗುವುದು ಬೇಡ" ಮಹಿಮಾ ಹೇಳುತ್ತಾಳೆ. "ನೀನು ಎಷ್ಟು ಬಾರಿ ದುಡಿ, ಮಹಿಮಾ ಹೇಳುವುದು ಸರಿ. ಈಗಿನ ಕಾಲದಲ್ಲಿ ಯಾರಿಗೂ ಪ್ರಯೋಜನವಿಲ್ಲದೆ ಹೂಡಿಕೆ ಮಾಡೋದಿಲ್ಲ. ಯಾಕೋ ಡೌಟ್ ಬರುತ್ತಾ ಇದೆ" ಎಂದು ಮಂದಾಕಿನಿ ಹೇಳುತ್ತಾರೆ. "ಹೌದು ಜೀವ, ನಿಮ್ಮ ಅಮ್ಮ, ಮಹಿಮಾ ಹೇಳುವುದು ಸರಿ ಇದೆ. ಏನೂ ಮಾಡುವುದಿದ್ದರೂ ಸಾವಿರ ಸಲ ಯೋಚಿಸಿ ಹೆಜ್ಜೆ ಇಡು" ಎಂದು ಸದಾಶಿವ ಎಚ್ಚರಿಸುತ್ತಾರೆ. ಜೀವ ಯೋಚಿಸುತ್ತಾನೆ. ಆದರೆ, ಆತನಿಗೆ ಹಣದ ಹುಚ್ಚು ಹಿಡಿದಿದೆ, ಆತ ಯಾರ ಮಾತು ಕೇಳುವ ಸ್ಥಿತಿಯಲ್ಲಿ ಇಲ್ಲ. ಅಮೃತಧಾರೆ ಸೀರಿಯಲ್ ಮುಂದುವರೆದಿದೆ.

ವಿಭಾಗ