Amruthadhaare: ಸೃಜನ್‌ಗೆ ಗೌತಮ್‌ ಕಂಪನಿಯಲ್ಲಿ ಕೆಲಸ ಸಿಗ್ತು, ಮಾತಿನ ಮಲ್ಲನಿಗೆ ರಹಸ್ಯ ಟಾಸ್ಕ್‌ ನೀಡಿದ ಭೂಮಿಕಾ; ಅಮೃತಧಾರೆ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಸೃಜನ್‌ಗೆ ಗೌತಮ್‌ ಕಂಪನಿಯಲ್ಲಿ ಕೆಲಸ ಸಿಗ್ತು, ಮಾತಿನ ಮಲ್ಲನಿಗೆ ರಹಸ್ಯ ಟಾಸ್ಕ್‌ ನೀಡಿದ ಭೂಮಿಕಾ; ಅಮೃತಧಾರೆ ಧಾರಾವಾಹಿ

Amruthadhaare: ಸೃಜನ್‌ಗೆ ಗೌತಮ್‌ ಕಂಪನಿಯಲ್ಲಿ ಕೆಲಸ ಸಿಗ್ತು, ಮಾತಿನ ಮಲ್ಲನಿಗೆ ರಹಸ್ಯ ಟಾಸ್ಕ್‌ ನೀಡಿದ ಭೂಮಿಕಾ; ಅಮೃತಧಾರೆ ಧಾರಾವಾಹಿ

Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ (ಮಾರ್ಚ್‌ 27) ಸಂಚಿಕೆಯಲ್ಲಿ ಸರ ಮತ್ತು ಮೈಕ್‌ ವಿಚಾರವನ್ನು ಭೂಮಿಕಾ ಗೌತಮ್‌ಗೆ ಹೇಳಿದ್ದಾಳೆ. ಇನೊಂದೆಡೆ ಕ್ಯಾಬ್‌ ಚಾಲಕ ಸೃಜನ್‌ಗೆ ದಿವಾನ್‌ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದಾಳೆ. ಆತನಿಗೆ ರಹಸ್ಯ ಟಾಸ್ಕ್‌ ನೀಡಿದ್ದಾರೆ ಭೂಮಿಕಾ.

Amruthadhaare: ಸೃಜನ್‌ಗೆ ಗೌತಮ್‌ ಕಂಪನಿಯಲ್ಲಿ ಕೆಲಸ ಸಿಗ್ತು, ಮಾತಿನ ಮಲ್ಲನಿಗೆ ರಹಸ್ಯ ಟಾಸ್ಕ್‌ ನೀಡಿದ ಭೂಮಿಕಾ; ಅಮೃತಧಾರೆ ಧಾರಾವಾಹಿ
Amruthadhaare: ಸೃಜನ್‌ಗೆ ಗೌತಮ್‌ ಕಂಪನಿಯಲ್ಲಿ ಕೆಲಸ ಸಿಗ್ತು, ಮಾತಿನ ಮಲ್ಲನಿಗೆ ರಹಸ್ಯ ಟಾಸ್ಕ್‌ ನೀಡಿದ ಭೂಮಿಕಾ; ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಅನೇಕ ಘಟನೆಗಳು ನಡೆದಿವೆ. ಮಧ್ಯರಾತ್ರಿ ಭೂಮಿಕಾ ಭಯದಿಂದ ಎದ್ದಿದ್ದಾಳೆ. ಗೌತಮ್‌ ಕೂಡ ಗಾಬರಿಯಿಂದ ಎದ್ದಿದ್ದಾರೆ. ಏನು ವಿಷಯ ಎಂದು ಗೌತಮ್‌ ಕೇಳುತ್ತಾರೆ. ಇವರಲ್ಲಿ ಹೇಳೋದ ಬೇಡ್ವ ಎಂದು ಯೋಚಿಸುತ್ತಾಳೆ. ಇನ್ನೊಂದೆಡೆ ಮಲ್ಲಿ ಮತ್ತು ಜೈದೇವ್‌ ಮಾತನಾಡುತ್ತಿದ್ದಾರೆ. ವಿಶೇಷವಾಗಿ ಗಂಡನ ಮಲ್ಲಿ ವಿಚಾರಿಸಿಕೊಳ್ಳುತ್ತಿದ್ದಾಳೆ. "ಆಕರ್ಷಣೆಗಳು ಜಾಸ್ತಿ. ಕೆನೆ ಹಾಲಿಗೆ ಯಾರು ಹುಳಿ ಹಿಂಡ್ತಾರೋ ಗೊತ್ತಿಲ್ಲ" ಎಂದೆಲ್ಲ ಮಲ್ಲಿ ಒಗಟಾಗಿ ಮಾತನಾಡುತ್ತಾಳೆ. ಮತ್ತೊಂದೆಡೆ ಸದಾಶಿವನ ಮುಂದೆ ಮಗ ಬಂದಿದ್ದಾನೆ. ವಿಶೇಷವಾಗಿ ಕುಡಿದು ಬಂದಿದ್ದಾನೆ. ಆತನಿಗೆ ಕೋಪ ಇದೆ. ಭೂಪತಿಗೆ ಅಪ್ಪ ಕಾಲ್‌ ಮಾಡಿದ್ದು ಆತನಿಗೆ ಇಷ್ಟವಾಗಿಲ್ಲ. ಕುಡಿದು ಬಂದು ಯದ್ವಾತದ್ವಾ ಮಾತನಾಡುತ್ತಾನೆ.

ಸದಾಶಿವನಿಗೆ ಜೀವನ್‌ ಮಾರುತ್ತರ

"ನೋಡಿದಿಯಮ್ಮ ಹೇಗೆ ಮಾತನಾಡ್ತಾನೆ. ಸರಿಯಾಗಿ ನಿಂತುಕೊಳ್ಳಲಾಗುತ್ತಿಲ್ಲ ಇವನಿಗೆ. ಇವನು ನನ್ನ ಮಗನಾ? ನಾನು ಸಾಕಿ ಬೆಳೆದ ಮಗನಾ ಇವನು. ಇವನನ್ನು ಹೀಗೆ ನೋಡುವುದಕ್ಕಿಂತ ನಾವು ಮೊದಲು ಹೇಗೆ ಇದ್ವಿಯೋ, ಹಾಗೆ ಇದ್ದರೆ ಚೆನ್ನಾಗಿತ್ತು" ಎಂದು ಸದಾಶಿವ ಹೇಳುತ್ತಾರೆ. "ಅಪ್ಪಾ. ನಿಮ್ಮ ಕ್ಲಾಸ್‌ ಅನ್ನು ಸ್ಕೂಲ್‌ನಲ್ಲಿ ಇಟ್ಟುಕೊಳ್ಳಿ. ನಾನು ದೊಡ್ಡವನಾಗಿದ್ದೇನೆ" ಎಂದು ಜೀವ ಹೇಳುತ್ತಾನೆ. "ಅಪ್ಪಾ, ನೀವು ತುಂಬಾ ತುಂಬಾ ಒಳ್ಳೆಯವರು. ನಾನೂ ಒಳ್ಳೆಯವನೇ. ನೀವು ಅಂದುಕೊಂಡಷ್ಟು ಕೆಟ್ಟವನ್ನಲ್ಲ. ನಾನು ಸರಿಯಿಲ್ಲ ಎಂದು ಲೇಬಲ್‌ ಹಚ್ಚೋಕ್ಕೆ ಬರಬೇಡಿ. ನೋಡಪ್ಪ, ನಾನಿನ್ನ ಮಗನೇ ಆಗಿರಬಹುದು. ಆದರೆ, ನಿನ್ನ ರೀತಿ ನಾನು ಬದುಕಬೇಕು. ಅಪ್ಪ ಎಂಬ ರೆಸ್ಪೆಕ್ಟ್‌ನಿಂದ ಹೇಳ್ತಾ ಇದ್ದೇನೆ" ಎಂದು ತಾನು ಹೇಳಬೇಕಾದ್ದನ್ನು ಹೇಳಿ ಹೋಗುತ್ತಾನೆ. "ನನಗೆ ಬುದ್ಧಿ ಹೇಳುವಷ್ಟು ದೊಡ್ಡವನಾದ" ಎಂದು ಸದಾಶಿವ ದುಃಖಪಡುತ್ತಾರೆ.

ಶಕುಂತಲಾದೇವಿಗೆ ಶುರುವಾಗಿದೆ ಆತಂಕ

ಶಕುಂತಲಾದೇವಿ ಮತ್ತು ಲಕ್ಕಿ ಲಕ್ಷಿಕಾಂತ್‌ ಮಾತನಾಡುತ್ತಾರೆ. "ಸೊಸೆ, ಸರದಲ್ಲಿ ಇರುವ ಮೈಕ್‌ನ ಕುರಿತು ಗೌತಮ್‌ನಲ್ಲಿ ಹೇಳದೆ ಇರ್ತಾಳ. ಅವಳು ಅದರ ಬಗ್ಗೆಯೇ ಯೋಚಿಸುತ್ತಾಳೆ. ಖಂಡಿತಾ ಹೇಳುತ್ತಾಳೆ. ಅವಳು ಬಾಯಿಬಿಟ್ಟರೆ ಗೌತಮ್‌ ಕಡೆಯಿಂದ ಎನ್‌ಕ್ವಯರಿ ಶುರುವಾಗಬಹುದು" ಎಂದು ಲಕ್ಷ್ಮಿಕಾಂತ್‌ ಹೇಳುತ್ತಾನೆ. "ಇದಕ್ಕೆಲ್ಲ ಫುಲ್‌ಸ್ಟಾಪ್‌ ಇಡಲೇಬೇಕು. ಯಾವುದೇ ಕಾರಣಕ್ಕೂ ಲೈಟಾಗಿ ತೆಗೆದುಕೊಳ್ಳಬಾರದು. ಈ ಭೂಮಿಕಾ‌ ಮೈಕ್‌ ಬಗ್ಗೆ ತಿಳಿದರೆ ಧನ್ಯ, ಮಾನ್ಯಳ ಬಗ್ಗೆಯೂ ಅವಳಿಗೆ ಗೊತ್ತಾಗಬಹುದು. ಅವಳನ್ನು ಮುಗಿಸಬೇಕು" ಎಂದು ಶಕುಂತಲಾದೇವಿ ಹೇಳುತ್ತಾರೆ. "ಇದರ ಆಳ ತುಂಬಾ ದೊಡ್ಡದಾಗಿದೆ. ಮನೆಯವರಿಗೆ ತೊಂದರೆಯಾಗುತ್ತದೆ ಎಂದು ಗೌತಮ್‌ಗೆ ಗೊತ್ತಾದರೆ ಅವನು ದೊಡ್ಡಮಟ್ಟದಲ್ಲಿ ತನಿಖೆ ಮಾಡುತ್ತಾನೆ. ನಾವು ಎಲ್ಲಾ ಕಡೆಯಲ್ಲೂ ಟ್ರ್ಯಾಕ್‌ ಆಗ್ತಿವಿ" ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಸರದಲ್ಲಿದ್ದ ಮೈಕ್‌ ವಿಚಾರ ಗೌತಮ್‌ಗೆ ಗೊತ್ತಾಯ್ತು

"ಆಕ್ಸಿಡೆಂಟ್‌ ವಿಷಯ ಮುಚ್ಚಿಡುವುದು ಒಳ್ಳೆಯದು. ಗೌತಮ್‌ ಟೆನ್ಷನ್‌ ಆಗ್ತಾರೆ" ಎಂದು ಭೂಮಿಕಾ ಯೋಚಿಸುತ್ತಾರೆ. "ಹೇಳಿ ಏನಾಯಿತು" ಎಂದು ಗೌತಮ್‌ ಕೇಳುತ್ತಾರೆ. "ಅತ್ತೆ ಕೊಟ್ಟ ಸರದಲ್ಲಿ ಮೈಕ್‌ ಇತ್ತು" ಎಂದು ಹೇಳುತ್ತಾಳೆ. "ನನಗೆ ಯಾಕೆ ಹೇಳಿಲ್ಲ. ದೊಡ್ಡ ವಿಷಯ ಇದು" ಎನ್ನುತ್ತಾರೆ. "ಸರದಲ್ಲಿ ಮೈಕ್‌ ಇಟ್ಟುಕೊಂಡಿದ್ದಾರೆ ಎಂದರೆ ಯಾರೋ ತುಂಬಾ ಪ್ಲ್ಯಾನ್‌ ಆಗಿ ಮಾಡಿದ್ದಾರೆ. ಎಚ್ಚರಿಕೆಯಿಂದ ಇರಬೇಕು" ಎಂದು ಗೌತಮ್‌ ಹೇಳುತ್ತಾರೆ. ಆದರೆ, ಭೂಮಿಕಾ ಆಕ್ಸಿಡೆಂಟ್‌ ವಿಚಾರ ಹೇಳುವುದಿಲ್ಲ. "ಗೌತಮ್‌ ಅವರೇ, ಡ್ರೈವರ್‌ಗೆ ಕೆಲಸ ಸಿಗ್ತಾ, ಇಂಟರ್‌ವ್ಯೂ ಮಾಡಿದ್ರ?" ಎಂದು ಕೇಳುತ್ತಾಳೆ. "ಆನಂದ್‌ ಇಂಟರ್‌ವ್ಯೂ ಮಾಡಿದ್ದಾನೆ. ಆತನಿಗೆ ಕೆಲಸ ಸಿಕ್ಕಿದೆ" ಎಂದು ಹೇಳುತ್ತಾರೆ.

ಕ್ಯಾಬ್‌ ಚಾಲಕ ಸೃಜನ್‌ಗೆ ಟಾಸ್ಕ್‌ ನೀಡಿದ ಭೂಮಿಕಾ

ಮರುದಿನ ಆ ಕ್ಯಾಬ್‌ ಚಾಲಕ ಮಾತಿನ ಮಲ್ಲ ಮನೆಗೆ ಬಂದಿದ್ದಾನೆ. ಸ್ವೀಟ್‌ ತಂದಿದ್ದಾನೆ. "ನೀವು ಗ್ರೇಟ್‌ ಮೇಡಂ. ನನಗೆ ಕೆಲಸ ಕೊಡಿಸಿದ್ರಿ. ಹೆಚ್ಚು ಕಮ್ಮಿ ನನಗೆ ದೇವರೇ ಆಗಿಬಿಟ್ರಿ" ಎಂದು ಹೊಗಳುತ್ತಾ ಥ್ಯಾಂಕ್ಸ್‌ ಹೇಳುತ್ತಾನೆ. ಅಂದಹಾಗೆ ಆ ಚಾಲಕನ ಹೆಸರು ಸೃಜನ್‌. ಇನ್ಮುಂದೆ ಸೃಜನ್‌ ಎಂದೇ ಬರೆಯೋಣ. "ನಿಮ್ಮನ್ನು ಮನೆಗೆ ಬಿಡಲು ಬಂದೆ. ನನ್ನ ಲೈಫ್‌ ಚೇಂಜ್‌ ಆಯಿತು" ಎಂದೆಲ್ಲ ಹೇಳುತ್ತಾನೆ ಸೃಜನ್‌. "ನೀವು ಏನು ಹೇಳಿದ್ರೂ ಮಾಡ್ತಿನಿ" ಎಂದು ಹೇಳುತ್ತಾನೆ. "ನನಗೆ ಒಂದು ಉಪಕಾರ ಮಾಡಿ. ಮುಂದಿನ ಬಾರಿ ಆ ಗೂಂಡಾಗಳು ಕಂಡರೆ ಒಂದು ಫೋಟೋ ತೆಗೆದು ನನಗೆ ಕಳುಹಿಸಿ" ಎನ್ನುತ್ತಾರೆ ಭೂಮಿಕಾ. "ಸರಿ ಮೇಡಂ, ಒಂದು ಕಿಮಿ ದೂರದಲ್ಲಿ ಇದ್ದರೂ ಕಂಡುಹಿಡಿತೀನಿ" ಎನ್ನುತ್ತಾನೆ. "ನಮ್ಮ ಸುತ್ತಮುತ್ತ ಏನಾದರೂ ಅನ್‌ಯೂಸ್‌ವಲ್‌ ಕಂಡರೆ ನನಗೆ ಇನ್‌ಫಾರ್ಮ್‌ ಮಾಡಿ" ಎಂದು ಕೇಳುತ್ತಾಳೆ. "ನಾನು ನಿಮ್ಮ ಮೆಚ್ಚಿನ ಬಂಟ, ಇನ್ನು ನೀವು ಆರಾಮವಾಗಿರಿ" ಎಂದು ಸೃಜನ್‌ ಭರವಸೆ ನೀಡುತ್ತಾನೆ.

ದಿಯಾಳನ್ನು ಮದುವೆಯಾಗಲು ಒಪ್ಪಿದ ಜೈದೇವ್‌

ಇನ್ನೊಂದೆಡೆ ದಿಯಾ ಮತ್ತು ಜೈದೇವ್‌ ಇದ್ದಾರೆ. ದಿಯಾ ಬೇಸರದಲ್ಲಿ ಮಾತನಾಡುತ್ತಾಳೆ. "ನಾನು ಗರ್ಲ್‌ ಫ್ರೆಂಡ್‌ ಆಗಲು ಬೇಕು. ಹೆಂಡತಿಯಾಗಲು ಬೇಡ ಅಲ್ವಾ" ಎಂದು ದಿಯಾ ಹೇಳುತ್ತಾಳೆ. ಒಟ್ಟಾರೆ ಮದುವೆಗೆ ಸಾಕಷ್ಟು ಒತ್ತಾಯ ಮಾಡುತ್ತಾಳೆ. ಕೊನೆಗೆ ಮದುವೆಯಾಗಲು ಒಪ್ಪುತ್ತಾನೆ. "ಮದುವೆ ಯಾವಾಗ ಅಂತ ನಾನು ಯೋಚನೆ ಮಾಡಿ ಹೇಳುವೆ. ನೀನು ರೆಡಿಯಾಗಿರು" ಎಂದು ಹೇಳುತ್ತಾನೆ. ಈ ಮೂಲಕ ಇವರಿಬ್ಬರು ಸದ್ಯದಲ್ಲಿಯೇ ಮದುವೆಯಾಗುವ ಸೂಚನೆ ದೊರಕಿದೆ. ಇನ್ನೊಂದೆಡೆ ಭಾಗ್ಯಮ್ಮನಿಗೆ ಏನೋ ಆಗುತ್ತದೆ. ಸುಧಾ ಆತಂಕದಿಂದ ಕರೆಯುತ್ತಾಳೆ. ಅತ್ತಿಗೆ ಬನ್ನಿ ಎನ್ನುತ್ತಾಳೆ. ಆಗ ಅಲ್ಲಿ ಅಪೇಕ್ಷಾ ಇರುತ್ತಾಳೆ. ಅವಳು ಓಡೋಡಿ ಬರುತ್ತಾಳೆ. ಭಾಗ್ಯಮ್ಮ ಅಪೇಕ್ಷಾನ ನೋಡಿ ಕಪಾಳಕ್ಕೆ ಒಂದು ಹೊಡೆಯುತ್ತಾಳೆ. ಅಪ್ಪಿಗೆ ಕಪೋಲಮೋಕ್ಷವಾಗುತ್ತದೆ. ಅಮೃತಧಾರೆ ಧಾರಾವಾಹಿ ಮುಂದುವರೆದಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner