Amruthadhaare: ಇನ್ನೊಂದು ಸಲ ಅಣ್ಣಾ ಎಂದು ಕರೆಯಬೇಡ..! ಗೌತಮ್ ಅಣ್ಣನ ಘರ್ಜನೆಗೆ ಸುಧಾ ತತ್ತರ; ಕೌತುಕ ಹೆಚ್ಚಿಸಿದ ಅಮೃತಧಾರೆ ಸೀರಿಯಲ್
Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ (ಡಿಸೆಂಬರ್ 30) ಕೆಲವು ಮಹತ್ವದ ಘಟನೆಗಳು ನಡೆದಿವೆ. ಸುಧಾ ಈ ಮನೆಗೆ ಮೋಸ ಮಾಡಿದ್ದಾಳೆ ಎಂದು ತಿಳಿದ ಗೌತಮ್ ಕೋಪಗೊಂಡಿದ್ದಾನೆ. ಮನೆಯಿಂದ ಸುಧಾಳನ್ನು ಹೊರಹಾಕಿದ್ದಾನೆ. ಇದೇ ಸಮಯದಲ್ಲಿ ಭೂಮಿಕಾಳಿಗೆ ನಡೆದ ಘಟನೆಯ ಕುರಿತು ಸುಧಾ ಮಾಹಿತಿ ನೀಡಿದ್ದಾಳೆ.
ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ (ಡಿಸೆಂಬರ್ 30) ಕೆಲವು ಮಹತ್ವದ ಘಟನೆಗಳು ನಡೆದಿವೆ. ಮಗಳ ಶಾಲೆಯತ್ತ ಹೋಗುತ್ತೇನೆ ಎಂದು ಹೇಳಿ ಸುಧಾ ಭೂಪತಿಯ ಮನೆಗೆ ಹೋಗಿರುತ್ತಾಳೆ. ಅಲ್ಲಿಗೆ ಹೋಗಲೇಬಾರದು ಎಂದುಕೊಂಡವಳನ್ನು ಭೂಪತಿ ಮೋಸದಿಂದ ಕರೆದಿರುತ್ತಾನೆ. ಅಲ್ಲಿ ಜೈದೇವ್ ಅಡಗಿರುತ್ತಾನೆ. ಈಕೆಯ ಕೈಗೆ ಭೂಪತಿ ಹಣ ನೀಡಿರುವುದನ್ನು ಜೈದೇವ್ ರೆಕಾರ್ಡ್ ಮಾಡಿಟ್ಟುಕೊಂಡಿರುತ್ತಾನೆ. ಆಕೆ ಹಣ ವಾಪಸ್ ನೀಡಿರುತ್ತಾಳೆ. ಸುಧಾ ಮನೆಗೆ ವಾಪಸ್ ಬಂದ ಬಳಿಕ ಭೂಮಿಕಾಳ ಜತೆ ಮಾತನಾಡುತ್ತಾಳೆ. ತುಲಾಭಾರ ಮಾಡಲು ಎಷ್ಟು ಹಣ ಬೇಕಾಗುತ್ತದೆ ಎಂದು ಸುಧಾ ಕೇಳುತ್ತಾಳೆ. ಅಮ್ಮನ ಆರೋಗ್ಯ ಸರಿಯಾಗಬೇಕಾದರೆ ತುಲಾಭಾರ ಮಾಡಿಸಬೇಕೆಂದು ಯಾರೋ ಹೇಳಿದ್ರು ಎಂದು ಹೇಳುತ್ತಾಳೆ. "ಅದಕ್ಕೆ ಹೆಚ್ಚು ಹಣ ಬೇಕಾಗುತ್ತದೆ" ಎಂದು ಭೂಮಿಕಾ ಹೇಳುತ್ತಾಳೆ. "ನೀನು ಸಂಕಲ್ಪ ಮಾಡಿಕೋ, ಎಲ್ಲವೂ ತನ್ನಿಂದ ತಾನೇ ಆಗುತ್ತದೆ ಎಂದು ಆ ಸಾಧು ಹೇಳಿದ್ರು" ಎಂದು ಸುಧಾ ಹೇಳುತ್ತಾಳೆ. ಈ ಮೂಲಕ ಮುಂದೆ ನಡೆಯಲಿರುವ ಕಥೆಯ ಸುಳಿವು ಈ ಸೀರಿಯಲ್‌ನಲ್ಲಿ ಈಗಲೇ ದೊರಕಿದೆ. "ನಾಳೆ ಅನ್ನೋದು ನಮಗೆ ಯಾರಿಗೂ ಗೊತ್ತಿಲ್ಲ. ಏನಾದರೂ ಅಚ್ಚರಿ ಕಾಯುತ್ತಿರಬಹುದು. ಆಗುತ್ತೆ ಎಂದುಕೊಳ್ಳಿ. ಒಳ್ಳೆಯದೇ ಆಗುತ್ತದೆ" ಎಂದು ಭೂಮಿಕಾ ಸಕಾರಾತ್ಮಕ ಮಾತುಗಳನ್ನು ಆಡುತ್ತಾರೆ. ಏನಾದರೂ ಕೆಲಸ ಹೇಳಿ ಅತ್ತಿಗೆ ಎಂದು ಸುಧಾ ಹೇಳುತ್ತಾಳೆ. ಅದಕ್ಕೆ ಭೂಮಿಕಾ ಇದು ಗೌತಮ್ ತಾಯಿಯ ಫೋಟೋ ಸ್ವಲ್ಪ ಒರೆಸಿ ಮೇಲೆ ಇಡಿ ಎನ್ನುತ್ತಾಳೆ. ಬಟ್ಟೆ ತರಲು ಸುಧಾ ಹೋಗುತ್ತಾಳೆ. ಆಗ ಮಲ್ಲಿ ಕರೆದಳು ಎಂದು ಭೂಮಿಕಾ ಹೊರಹೋಗುತ್ತಾರೆ.
ಶಕುಂತಲಾದೇವಿ ತನ್ನ ಸಹೋದರನ ಜತೆ ಖುಷಿಯಿಂದ ಮಾತನಾಡುತ್ತಾಳೆ. "ಸುಧಾಳನ್ನು ಆಚೆಗೆ ಕಳುಹಿಸಲು ಒಳ್ಳೆಯ ಅಸ್ತ್ರ ಸಿಗ್ತು. ಇದು ಗೌತಮ್‌ಗೆ ಗೊತ್ತಾದಾಗ ಆತನ ಕೋಪ ಹೇಗಿರುತ್ತದೆ ಎಂದು ನೋಡೋಣ. ಆ ಫೋಟೋ, ವಿಡಿಯೋ ಗೌತಮ್‌ಗೆ ಫಾರ್ವಾರ್ಡ್ ಮಾಡಲು ಹೇಳು" ಎಂದು ಶಕುಂತಲಾ ಹೇಳುತ್ತಾಳೆ.
ಸುಧಾ ಆ ಫೋಟೋ ಒರೆಸಲು ಕೈಗೆತ್ತುಕೊಳ್ಳುತ್ತಾಳೆ. ಅಲ್ಲಿ ತನ್ನ ತಾಯಿಯ ಫೋಟೋ ಕಾಣಿಸುತ್ತದೆ. ಅಚ್ಚರಿಯಾಗುತ್ತದೆ. ಅಮ್ಮ "ಗುಂಡೂ ಗುಂಡೂ" ಎಂದು ಕನವರಿಸಿದ್ದು ನೆನಪಾಗುತ್ತದೆ. "ನಿನಗೆ ಒಳ್ಳೆಯದಾಗುತ್ತದೆ, ಕಳೆದುಕೊಂಡವರು ಹುಡುಕಿಕೊಂಡು ಬರುತ್ತಾರೆ" ಎಂದು ಯಾರೋ ಭವಿಷ್ಯ ಹೇಳಿದ್ದು ನೆನಪಾಗುತ್ತದೆ. "ಗೌತಮ್ ಅಣ್ಣ ನನ್ನ ಅಣ್ಣಾ" ಎಂದು ಖುಷಿಪಡುತ್ತಾಳೆ. ಖುಷಿಯಿಂದ ಕುಪ್ಪಳಿಸುತ್ತಾಳೆ. "ಅಮ್ಮ ಇಲ್ಲ ಅಂತ ತಿಥಿ ಯಾಕೆ ಮಾಡಿದ್ರು. ಅಣ್ಣನಿಗೆ ಈಗಲೇ ಹೇಳುತ್ತೇನೆ. ಅದಕ್ಕಿಂತ ಮೊದಲೇ ಅಮ್ಮನಿಗೆ ಈ ವಿಷಯ ಹೇಳುತ್ತೇನೆ" ಎಂದು ಸುಧಾ ಕನವರಿಸುತ್ತಾಳೆ. ಇದಾದ ಬಳಿಕ ಅಮ್ಮನ ಮುಂದೆ ಖುಷಿಯಿಂದ ಮಾತನಾಡುತ್ತಾಳೆ. "ಅಮ್ಮ ನಾವೀಗ ನಮ್ಮ ಮನೆಯಲ್ಲೇ ಇದ್ದೇವೆ. ನಾವು ಅನಾಥರಲ್ಲ" ಎಂದು ಖುಷಿಯಿಂದ ಹೇಳುತ್ತಾಳೆ. ಹೀಗೆ ಅಮ್ಮನ ಮುಂದೆ ಸಾಕಷ್ಟು ಮಾತನಾಡುತ್ತಾಳೆ.
ಇನ್ನೊಂದೆಡೆ ಜೈದೇವ್‌ನ ಕಾಲ್ ಗೌತಮ್‌ಗೆ ಬರುತ್ತದೆ. ಆನಂದ್ ಕೂಡ ಜತೆಗಿರುತ್ತಾನೆ. "ನಮಗೆ ದ್ರೋಹ ಮಾಡಿದವರು ಯಾರು ಎಂದು ಕಂಡುಹಿಡಿಯಲು ಒಂದಿಷ್ಟು ಜನರಿಗೆ ಹೇಳಿದ್ದೆ. ಅವರು ಅದನ್ನು ಕಂಡುಹಿಡಿದಿದ್ದಾರೆ. ನೀನು ಬಾ" ಎಂದು ಹೇಳುತ್ತಾನೆ. "ಯಾರದು" ಎಂದು ಕೇಳುತ್ತಾನೆ. "ನಾನು ಯಾರು ಎಂದು ಹೇಳುವೆ. ಅದನ್ನು ನಂಬಲು ನಿನಗೆ ಕಷ್ಟವಾಗಬಹುದು. ಫೋಟೋ ಕಳುಹಿಸುವೆ" ಎಂದು ಹೇಳಿ ಫೋಟೋ ಕಳುಹಿಸುತ್ತಾನೆ. ಸುಧಾ ಮತ್ತು ಭೂಪತಿಯ ಫೋಟೋ ಕಳುಹಿಸುತ್ತಾನೆ. ಗೌತಮ್‌ಗೆ ಆಘಾತವಾಗುತ್ತದೆ. "ಸರಿ ಜಯ್, ನಾನು ಮನೆಗೆ ಬರ್ತಿನಿ, ನೀನೂ ಬಂದುಬಿಡು" ಎಂದು ಗೌತಮ್ ಹೇಳುತ್ತಾರೆ. "ನಮ್ಮವರೇ ಇದನ್ನು ಮಾಡಿರ್ತಾರೆ ಅನ್ನೋದು ಸತ್ಯ ಆನಂದ್. ನನಗೆ ನಂಬಲಾಗುತ್ತಿಲ್ಲ" ಎಂದು ಗೌತಮ್ ಆನಂದ್‌ಗೆ ವಿಷಯ ಹೇಳುತ್ತಾನೆ.
ಗೌತಮ್ ಅಣ್ಣನ ಘರ್ಜನೆಗೆ ಸುಧಾ ತತ್ತರ
ಈ ವಿಚಾರ ಗೊತ್ತಿಲ್ಲದೆ ಸುಧಾ ಮನೆಯಲ್ಲಿ ಖುಷಿ ಇದ್ದಾಳೆ. ಗೌತಮ್ ಬಂದಾಗ ಎಲ್ಲಾ ಹೇಳಬೇಕು ಎಂದುಕೊಳ್ಳುತ್ತಾಳೆ. ಗೌತಮ್ ಬರುತ್ತಾರೆ. ಅಣ್ಣಾ ಎಂದು ಕರೆಯುತ್ತಾಳೆ. "ನಿಂತ್ಕೊ ಅಲ್ಲೇ" ಎಂದು ಗೌತಮ್ ಅಬ್ಬರಿಸುತ್ತಾರೆ. "ಇನ್ನೊಂದು ಸಾರಿ ಆ ಪದ ನಿನ್ನ ಬಾಯಿಯಿಂದ ಬರಬಾರದು. ಅಣ್ಣಾ ಎನ್ನಬಾರದು. ಆ ಪದ ಕೇಳಿದ್ರೆ ಮೈ ಎಲ್ಲಾ ಉರಿಯುತ್ತದೆ. ಯಾಕೆ ಇಲ್ಲಿಗೆ ಬಂದಿದ್ದೀಯಾ. ನಮ್ಮನ್ನೆಲ್ಲ ಹಾಳು ಮಾಡಬೇಕು ಎಂದು ಬಂದಿದ್ಯ" ಎಂದು ಗೌತಮ್ ಮಾತು ಕೇಳಿ ಸುಧಾ ತತ್ತರಿಸುತ್ತಾಳೆ. ಎಲ್ಲರೂ ಸೇರುತ್ತಾರೆ. "ನನಗೆ ನಿನ್ನ ಬಂಡವಾಳ ಎಲ್ಲಾ ಗೊತ್ತಾಯ್ತು. ನಿನ್ನನ್ನು ಎಷ್ಟು ನಂಬಿದ್ವಿ" ಎಂದೆಲ್ಲ ಸಾಕಷ್ಟು ಬಯ್ಯುತ್ತಾರೆ. ಇದಾದ ಬಳಿಕ ಪ್ರೂಫ್ ತೋರಿಸುತ್ತಾರೆ. ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಶಕುಂತಲಾ ಕೋಪದಿಂದ ಒಂದೇಟು ಹಾಕುತ್ತಾಳೆ. ಅವರ ನಾಟಕ ಗೆದ್ದಿದೆ. ಇನ್ನೊಂದೆಡೆ ಭಾಗ್ಯಮ್ಮ ಎದ್ದು ತಡವರಿಸುತ್ತಾಳೆ. ಸುಧಾಳ ಕುರಿತು ಎಲ್ಲರೂ ಬಾಯಿಗೆ ಬಂದಂತೆ ಮಾತನಾಡುತ್ತಾರೆ. "ಇನ್ನೇನೂ ಹೇಳಬೇಡ, ಹೋಗು ಇಲ್ಲಿಂದ‘ ಎಂದು ಗೌತಮ್ ಕೋಪದಲ್ಲಿ ಹೇಳುತ್ತಾರೆ. ‘ಅದನ್ನು ಮಾಡಲು ಬೇರೆ ಕಾರಣ ಇದೆ. ಹೇಳಲು ಅವಕಾಶ ಕೊಡಿ. ದಯವಿಟ್ಟು ಒಂದು ಅವಕಾಶ ಮಾಡಿಕೊಡಿ" ಎಂದು ಹೇಳುತ್ತಾಳೆ. "ಸುಮ್ಮನೆ ಹೋಗು, ಇಲ್ಲಾಂದ್ರೆ ಪೊಲೀಸರನ್ನು ಕರೆಸಬೇಕಾಗುತ್ತದೆ" ಎಂದು ಅಜ್ಜಮ್ಮ ಹೇಳುತ್ತಾರೆ. "ಅಣ್ಣಾ ನಿನ್ನಲ್ಲಿ ಇನ್ನೊಂದು ವಿಷಯ ಹೇಳೋದು ಇದೆ" ಎಂದಾಗ ಶಕುಂತಲಾಗೆ ಇವಳು ಬಾಯಿ ಬಿಡಬಹುದು ಎಂದು ಆಕೆಯ ತೋಳು ಹಿಡಿದು ಹೊರದಬ್ಬುತ್ತಾಳೆ. ಭೂಮಿಕಾಗೆ ಏನು ಮಾಡುವುದೆಂದು ತೋಚುವುದಿಲ್ಲ. ಈಕೆಯನ್ನು ಮನೆಯಿಂದ ಹೊರಹಾಕುವುದನ್ನು ಭಾಗ್ಯಮ್ಮ ನೋಡುತ್ತಾಳೆ.
ಎಲ್ಲರೂ ಮನೆಯ ಒಳಗೆ ಹೋಗುತ್ತಾರೆ. ಭೂಮಿಕಾ ಹೋಗುವುದಿಲ್ಲ. ಯಾಕೆ ಹೀಗೆ ಮಾಡಿದ್ರಿ ಎಂದು ಕೇಳುತ್ತಾಳೆ. "ನಾನು ಬೇಕುಬೇಕಂತ ಮಾಡಿಲ್ಲ. ನಾನು ನನ್ನ ಅಮ್ಮನಿಗೆ, ಮಗಳಿಗಾಗಿ ಮಾಡಿದೆ" ಎಂದು ಎಲ್ಲಾ ವಿಚಾರ ಹೇಳುತ್ತಾಳೆ. "ನಾನು ತುಂಬಾ ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡೆ. ಏನು ಮಾಡಬೇಕೆಂದು ಗೊತ್ತಾಗಲಿಲ್ಲ" ಎಂದು ಭೂಮಿಕಾಳಿಗೆ ಎಲ್ಲಾ ವಿಷಯ ಹೇಳುತ್ತಾಳೆ. ನಾನು ಇನ್ನೊಂದು ವಿಚಾರ ಹೇಳಬೇಕು ಎಂದು ಸುಧಾ ಹೇಳಿದಾಗ "ಅಜ್ಜಿ ನಿಂತ್ಕೋ ಹೋಗಬೇಡ" ಎಂದು ಮಗಳ ಧ್ವನಿ ಕೇಳುತ್ತದೆ. ಸುಧಾ ಮತ್ತು ಭೂಮಿಕಾ ಇಬ್ಬರೂ ಅಲ್ಲಿಗೆ ಓಡುತ್ತಾರೆ. ಸೀರಿಯಲ್ ಮುಂದುವರೆಯುತ್ತದೆ.
ಧಾರಾವಾಹಿ ಹೆಸರು: ಅಮೃತಧಾರೆ.
ಎಪಿಸೋಡ್: ಡಿಸೆಂಬರ್ 30, 2024
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).
ವಿಭಾಗ