Amruthadhaare: ಪುಟ್ಟಿ ಜತೆ ಆಟದ ನೆಪದಲ್ಲಿ ಭೂಮಿಕಾ- ಗೌತಮ್ ಚೆಲ್ಲಾಟ; ಭಾಗ್ಯಮ್ಮನ ಭಯವೇ ಶಕುಂತಲಾಗೆ ದಿಗಿಲು
Amruthadhaare serial Yesterday Episode: ಅಮ್ಮ ಮತ್ತು ಮಗನ ಮಮತೆ, ವೈರಿಗಳ ಆತಂಕದ ಕ್ಷಣಗಳಿಗೆ ಎಂದಿನಂತೆ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆ (ಜನವರಿ 10) ಸಾಕ್ಷಿಯಾಗಿದೆ. ಶಕುಂತಲಾ ದೇವಿಯನ್ನು ಕಂಡಾಗ ಭಾಗ್ಯಮ್ಮ ಭಯಪಡುತ್ತಾರೆ. ಇದು ಯಾರಿಗಾದರೂ ಅನುಮಾನ ಹುಟ್ಟಿಸುವುದೇ?
![Amruthadhaare: ಪುಟ್ಟಿ ಜತೆ ಆಟದ ನೆಪದಲ್ಲಿ ಭೂಮಿಕಾ- ಗೌತಮ್ ಚೆಲ್ಲಾಟ Amruthadhaare: ಪುಟ್ಟಿ ಜತೆ ಆಟದ ನೆಪದಲ್ಲಿ ಭೂಮಿಕಾ- ಗೌತಮ್ ಚೆಲ್ಲಾಟ](https://images.hindustantimes.com/kannada/img/2025/01/11/550x309/Amruthadhaare_serial_Yester_1736572895909_1736572901801.png)
ಅಮ್ಮ ಮತ್ತು ಮಗನ ಮಮತೆ, ವೈರಿಗಳ ಆತಂಕದ ಕ್ಷಣಗಳಿಗೆ ಎಂದಿನಂತೆ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆ (ಜನವರಿ 10) ಸಾಕ್ಷಿಯಾಗಿದೆ. ಎಲ್ಲರೂ ಕುಟುಂಬ ಸಮೇತ ಕೂತು ಊಟ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಗೌತಮ್ ಕೈಯಾರೆ ಅಮ್ಮನಿಗೆ ತಿಂಡಿ ತಿನ್ನಿಸಿದ್ದಾನೆ. ಇದನ್ನು ನೋಡಿ ಭೂಮಿಕಾ ಮತ್ತು ಇತರರು ಖುಷಿ ಪಟ್ಟಿದ್ದಾರೆ. ಈ ಸಮಯದಲ್ಲಿ ಅಲ್ಲಿಗೆ ಶಕುಂತಲಾದೇವಿ ಮತ್ತು ಇತರರು ಆಗಮಿದ್ದಾರೆ. "ಗೌತಮ್ ನನಗೆ ಒಮ್ಮೆಯೂ ಹೀಗೆ ತಿನ್ನಿಸಿಲ್ಲ" ಎಂದು ಶಕುಂತಲಾ ತಮಾಷೆ ಮಾಡುತ್ತಾರೆ. ಯಾವುದೋ ಕಾರಣಕ್ಕೆ ಹಿಂದೆ ತಿರುಗಿದ ಭಾಗ್ಯಮ್ಮನಿಗೆ ಶಕುಂತಲಾದೇವಿಯನ್ನು ನೋಡಿ ಭಯವಾಗಿದೆ. ಆಕೆಯ ಭಯ ನೋಡಿ ಎಲ್ಲರಿಗೂ ಆತಂಕವಾಗಿದೆ. ಭೂಮಿಕಾಗೆ ಇದು ಸಂದೇಹ ಉಂಟು ಮಾಡಿರುವುದೇ? ಅಸ್ಪಷ್ಟವಾಗಿದೆ. ತನ್ನನ್ನು ಭಾಗ್ಯಮ್ಮ ಗುರುತು ಹಿಡಿಯುತ್ತಿದ್ದಾಳೆ ಎನ್ನುವುದು ಶಕುಂತಲಾದೇವಿಗೆ ಆತಂಕ ತಂದಿದೆ.
ಇನ್ನೊಂದೆ ಅಪೇಕ್ಷಾ ಮುನಿಸಿನಿಂದ ಕುಳಿತಿದ್ದಾಳೆ. ಆಕೆ ತಿಂಡಿಗೆ ಬಂದಿಲ್ಲ. ಪಾರ್ಥನೇ ಪ್ರೀತಿಯಿಂದ ತಿಂಡಿ ತಂದು ಆಕೆಗೆ ನೀಡಿದ್ದಾನೆ. ಆಕೆ ತಿನ್ನಲು ಒಪ್ಪುವುದಿಲ್ಲ. "ನನಗೆ ಎಲ್ಲರ ಮುಂದೆಯೂ ಅವಮಾನವಾಗಿದೆ. ಅಷ್ಟು ಜನರ ಮುಂದೆ ನಾನು ಹೇಗೆ ಮುಖ ತೋರಿಸಲಿ" ಎಂದು ಹೇಳುತ್ತಾಳೆ. "ನೀವು ಬಾರದೆ ಇದ್ದರೂ ಪರವಾಗಿಲ್ಲ. ಊಟ ತಿಂಡಿ ತಿನ್ನದೇ ಇರಬೇಡಿ" ಎಂದು ಮನವೋಲಿಸುತ್ತಾನೆ. ಈತನ ಪ್ರೀತಿಗೆ ಕರಗಿ ತಿನ್ನಲು ಒಪ್ಪುತ್ತಾಳೆ.
ಭಾಗ್ಯಮ್ಮ ಭಯದಲ್ಲಿ ಇದ್ದಾಳೆ. ಸುಧಾ ಅವಳನ್ನು ಸಮಾಧಾನ ಮಾಡಿಸುತ್ತಿದ್ದಾರೆ. "ಏನಾಗುತ್ತಿದೆ ಅಮ್ಮ, ಯಾಕೆ ಭಯವಾಗುತ್ತಿದೆ. ಇಲ್ಲಿ ಮನೆ ಹೊಂದಿಕೆ ಆಗ್ತಾ ಇಲ್ವ. ಅಣ್ಣಾ ನಿನಗೆ ಡಾಕ್ಟರ್ ಕರೆಸ್ತಾರೆ. ಆದಷ್ಟು ಬೇಗ ನೀನು ಹುಷಾರಾಗ್ತಿ. ನೀನು ಮುಂಚಿನ ತರಹ ಆಗಬೇಕು" ಎಂದು ಸುಧಾ ಹೇಳುತ್ತಾಳೆ. ಆಗ ಅಲ್ಲಿಗೆ ಭೂಮಿಕಾ ಬರುತ್ತಾರೆ. "ಇವರು ಇದೇ ರೀತಿ ಆಗಾಗ ಭಯಪಡುತ್ತಾರೆ ಅಂದ್ಯಲ್ಲ, ಇವರಿಗೆ ಏನು ನೋಡಿದ್ರೆ ಭಯ ಆಗುತ್ತದೆ. ಕತ್ತಲೆ, ನೀರು, ಜನ ನೋಡಿದ್ರೆ ಭಯ ಆಗುತ್ತದೆ. ಇವರಿಗೆ ಯಾವಾಗ ಭಯ ಆಗುತ್ತದೆ?" ಎಂದು ಭೂಮಿಕಾ ಕೇಳುತ್ತಾರೆ. "ನಾನು ಅದನ್ನು ಗಮನಿಸಿಲ್ಲ ಅತ್ತಿಗೆ" ಎನ್ನುತ್ತಾರೆ ಸುಧಾ. "ವಿದೇಶದಿಂದ ಬರುವ ಡಾಕ್ಟರ್ ಎಲ್ಲಾ ಸರಿ ಮಾಡ್ತಾರೆ" ಎಂದು ಭೂಮಿಕಾ ಸಮಾಧಾನ ಹೇಳುತ್ತಾರೆ.
ಗೌತಮ್ ಕೋಣೆಯಲ್ಲಿ ಪುಟ್ಟಿ ಎಲ್ಲಾ ಆಟವಾಡಿ ಹಾಳು ಮಾಡಿ ಇಟ್ಟಿದ್ದಾಳೆ. ಗೌತಮ್ ಬಂದ್ರೆ ಬಯ್ಯಬಹುದು ಎಂದುಕೊಳ್ಳುತ್ತಾರೆ ಭೂಮಿಕಾ. ಅದನ್ನು ಕ್ಲೀನ್ ಮಾಡೋಣ ಎಂದು ಭೂಮಿಕಾ ಯೋಚಿಸುವಾಗ ಗೌತಮ್ ಬರುತ್ತಾರೆ. ಗೌತಮ್ ಮಗು ಜತೆ ಆಡುತ್ತಾರೆ. "ನಾನು ಒಂದು ವಸ್ತು ಆಚೆ ಈಚೆ ಇಟ್ರೆ ಒಸಿಡಿ ಅನ್ತಾ ಇದ್ರಿ. ಈಗ ನೋಡಿದ್ರೆ ಎಲ್ಲಾ ಚೆಲ್ಲಾಪಿಲ್ಲಿ ಮಾಡಿದ್ರಿ" ಎಂದು ಭೂಮಿಕಾ ಕೇಳುತ್ತಾಳೆ. "ಬನ್ರಿ ನೀವೂ ಆಡಿ" ಎಂದು ಗೌತಮ್ ಪಿಲ್ಲೋ ಆಟಕ್ಕೆ ಭೂಮಿಕಾರನ್ನೂ ಸೇರಿಸಿಕೊಳ್ಳುತ್ತಾರೆ. ಪುಟ್ಟಿ ಜತೆ ಇಬ್ಬರೂ ಆಡುತ್ತಾರೆ. ಆಡುವ ಸಮಯದಲ್ಲಿ ಸಿಕ್ಕಿದ್ದೇ ಚಾನ್ಸ್ ಎಂದು ಗೌತಮ್ ಭೂಮಿಕಾಳನ್ನು ಅಪ್ಪಿಕೊಳ್ಳಲು ಮರೆಯುವುದಿಲ್ಲ. "ಇದೇ ಆಟ ಆಡೋಣ, ಚೆನ್ನಾಗಿರುತ್ತದೆ" ಎಂದು ಭೂಮಿಕಾ ಬಳಿ ತುಂಟತನದಿಂದ ಹೇಳುತ್ತಾರೆ. ಹಿನ್ನೆಲೆಯಲ್ಲಿ ಒಲವ ಅಮೃತಧಾರೆ ಮ್ಯೂಸಿಕ್ ಬರುತ್ತದೆ. ಇಂದಿನ ಸಂಚಿಕೆಯಲ್ಲಿ ಪುಟ್ಟಿ ಜತೆ ಆಡಿ ಚೇರ್‌ನಲ್ಲಿ ಮಲಗಿದ್ದ ಗೌತಮ್‌ಗೆ ಭೂಮಿಕಾ ಮುತ್ತು ಕೊಡುವ ಸೀನ್ ಇದೆ. ಇದನ್ನು ಮುಂದಿನ ವಿಡಿಯೋದಲ್ಲಿ ನೋಡಿ.
ಇನ್ನೊಂದೆಡೆ ಶಕುಂತಲಾದೇವಿ ಮತ್ತು ಸಹೋದರ ಮಾತನಾಡುತ್ತಾರೆ. "ಅವಳ ಮೆಮೊರಿಯ ಯಾವುದೋ ಮೂಲೆಯಲ್ಲಿ ನೀನು ಇದ್ದೀಯಾ. ಅದಕ್ಕೆ ಭಯಪಡುತ್ತಾಳೆ. ಅವಳಿಗೆ ಬುದ್ಧಿಮಾಂದ್ಯ ಇದ್ದರೂ ಅವಳು ಭಯಪಡುತ್ತಿದ್ದಾಳೆ" ಎಂದು ಲಕ್ಷ್ಮಿಕಾಂತ್ ಹೇಳುತ್ತಾರೆ. "ನಿನ್ನನ್ನು ನೋಡಿದಾಗ ಅವಳು ಹೀಗೆ ಮಾಡಿದಾಗ ಬೇರೆಯವರಿಗೆ ಡೌಟ್ ಬರೋದಿಲ್ವ" ಎಂದು ಕೇಳುತ್ತಾನೆ. ಇದನ್ನು ಕೇಳಿ ಶಕುಂತಲಾದೇವಿಯ ಭಯ ಹೆಚ್ಚಿಸುತ್ತಾನೆ. "ಏನು ಮಾಡಬೇಕು ಎಂದು ನನಗೆ ತೋಚುತ್ತಿಲ್ಲ" ಎಂದು ಶಕುಂತಲಾದೇವಿ ಹೇಳುತ್ತಾರೆ. "ಅವಳು ಈ ಮನೆಯಲ್ಲಿ ಇದ್ರೆ ತಾನೇ ಪ್ರಾಬ್ಲಂ. ಅವಳಿಗೆ ನನ್ನ ಕಂಡ್ರೆ ಭಯ ಅಲ್ವಾ? ಆ ಭಯವನ್ನು ಇಟ್ಟುಕೊಂಡೇ ಆಟ ಆಡ್ತಿನಿ" ಎನ್ನುತ್ತಾಳೆ.
ಇನ್ನೊಂದೆಡೆ ಗೌತಮ್ ತಾನು ಇಷ್ಟು ವರ್ಷ ಉಳಿಸಿಟ್ಟ ರಾಖಿಯನ್ನು ಸುಧಾಳ ಕೈಗೆ ಕಟ್ಟುತ್ತಾನೆ. ಈ ಮೂಲಕ ಸಹೋದರ ಸಹೋದರಿ ಮತ್ತೆ ಸಿಕ್ಕ ಖುಷಿಯಲ್ಲಿದ್ದಾರೆ. ಸೀರಿಯಲ್ ಮುಂದುವರೆಯುತ್ತದೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)
ವಿಭಾಗ